ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ತಾಯಿಗೆ ಸಂಬಂಧಪಟ್ಟ ಆಸ್ತಿ ವಿವಾದ ಉಂಟಾಗಲಿದೆ, ಸ್ವಾರ್ಥದ ಜನರ ನಡುವೆ ಎಚ್ಚರಿಕೆಯಿಂದಿರಿ; ಜೂ.16ರ ದಿನ ಭವಿಷ್ಯ

ತಾಯಿಗೆ ಸಂಬಂಧಪಟ್ಟ ಆಸ್ತಿ ವಿವಾದ ಉಂಟಾಗಲಿದೆ, ಸ್ವಾರ್ಥದ ಜನರ ನಡುವೆ ಎಚ್ಚರಿಕೆಯಿಂದಿರಿ; ಜೂ.16ರ ದಿನ ಭವಿಷ್ಯ

16 ಜೂನ್‌ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ).

ತಾಯಿಗೆ ಸಂಬಂಧಪಟ್ಟ ಆಸ್ತಿ ವಿವಾದ ಉಂಟಾಗಲಿದೆ, ಸ್ವಾರ್ಥದ ಜನರ ನಡುವೆ ಎಚ್ಚರಿಕೆಯಿಂದಿರಿ; ಜೂ.16ರ ದಿನ ಭವಿಷ್ಯ
ತಾಯಿಗೆ ಸಂಬಂಧಪಟ್ಟ ಆಸ್ತಿ ವಿವಾದ ಉಂಟಾಗಲಿದೆ, ಸ್ವಾರ್ಥದ ಜನರ ನಡುವೆ ಎಚ್ಚರಿಕೆಯಿಂದಿರಿ; ಜೂ.16ರ ದಿನ ಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (16th June 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಶುಕ್ಲಪಕ್ಷ-ಭಾನುವಾರ

ತಿಥಿ: ದಶಮಿ ರಾತ್ರಿ 02.14ರವರೆಗೂ ಇದ್ದು ನಂತರ ಏಕಾದಶಿ ಆರಂಭವಾಗುತ್ತದೆ.

ನಕ್ಷತ್ರ: ಹಸ್ತ ನಕ್ಷತ್ರವು ಬೆಳಗ್ಗೆ 09.55 ರವರೆಗೆ ಇದ್ದು ನಂತರ ಚಿತ್ತೆ ನಕ್ಷತ್ರವು ಆರಂಭವಾಗಲಿದೆ.

ಸೂರ್ಯೋದಯ: ಬೆಳಗ್ಗೆ 05.52

ಸೂರ್ಯಾಸ್ತ: ಸಂಜೆ 06.47

ರಾಹುಕಾಲ: ಸಂಜೆ 05.12 ರಿಂದ 06.49

ರಾಶಿಫಲ

ಸಿಂಹ

ನಿಮ್ಮಲ್ಲಿನ ಚಂಚಲದ ಮನೋಭಾವನೆ ಕೆಲಸ ಕಾರ್ಯದ ಹಿನ್ನಡೆಗೆ ಕಾರಣವಾಗುತ್ತದೆ. ಸಂಗಾತಿಯನ್ನು ಅನಗತ್ಯವಾಗಿ ಅನುಮಾನಿಸುರಿ. ಕುಟುಂಬದಲ್ಲಿ ಅಶಾಂತಿ ಇರುತ್ತದೆ. ತಾಯಿಯ ಜೊತೆಯಲ್ಲಿ ಉತ್ತಮ ಒಡನಾಟ ಇರುವುದಿಲ್ಲ. ಬೇರೊಬ್ಬರ ಮಾತನ್ನು ಕೇಳದೆ ನಿಮ್ಮ ಇಚ್ಛೆಯಂತೆ ನೀವು ನಡೆಯುವಿರಿ. ನೀವೆಷ್ಟೇ ಬುದ್ಧಿವಂತರಾದರು ಅದರ ಸದ್ಬಳಕೆ ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳು ವಿದ್ಯಾರ್ಜನೆಯಲ್ಲಿ ಉನ್ನತ ಮಟ್ಟದ ಸಾಧನೆ ಮಾಡುತ್ತಾರೆ. ನಿಮ್ಮ ಮನೆತನದ ಆಸ್ತಿಯಲ್ಲಿ ವಿವಾದ ಒಂದು ಕಂಡುಬರುತ್ತದೆ ತಾಯಿಯವರ ಹೆಸರಿನಲ್ಲಿರುವ ಸ್ಥಿರಾಸ್ತಿಗೆ ಯಾವುದೇ ತೊಂದರೆ ಇರದು. ಅನಗತ್ಯ ಕಾರಣಗಳಿಂದ ಸೋದರ ಮಾವನ ಜೊತೆ ಮನಸ್ತಾಪ ಉಂಟಾಗುತ್ತದೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ದೀಪದ ಎಣ್ಣೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ :11

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ : ಎಲೆ ಹಸಿರು

ಕನ್ಯಾ

ದೊಡ್ಡ ಮಟ್ಟದ ತೊಂದರೆಯಿಂದ ಪಾರಾಗುವಿರಿ. ಜೀವನದಲ್ಲಿ ಪ್ರಮುಖ ಬದಲಾವಣೆಯೊಂದು ಕಂಡುಬರುತ್ತದೆ. ಮಂಗಳ ಕಾರ್ಯವೊಂದನ್ನು ನಡೆಸಿ ಕೊಡುವಿರಿ. ಗುರು ಹಿರಿಯರಲ್ಲಿ ವಿಶೇಷ ಗೌರವವನ್ನು ತೋರುವಿರಿ. ತಾಯಿಯ ಸಹಾಯ ಸಹಕಾರದಿಂದ ನಿಮ್ಮ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಯಾರನ್ನೂ ಸುಲಭವಾಗಿ ನೀವು ನಂಬುವುದಿಲ್ಲ. ತಾಯಿಗೆ ಸಂಬಂಧಪಟ್ಟ ಆಸ್ತಿ ವಿವಾದದಲ್ಲಿ ಸಿಲುಕುತ್ತದೆ. ಸಂಗಾತಿಯೊಡನೆ ಅನಾವಶ್ಯಕ ಮನಸ್ತಾಪ ಉಂಟಾಗುತ್ತದೆ. ಕುಟುಂಬದ ಹೆಣ್ಣು ಮಕ್ಕಳ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಮಗಳ ವಿವಾಹ ನಿಶ್ಚಯವಾಗುತ್ತದೆ. ಪ್ರಯಾಣದಿಂದ ನಿಮಗೆ ಲಾಭವಾಗಲಿದೆ. ಉತ್ತಮ ಆದಾಯವಿದ್ದರೂ ನಿಮ್ಮ ಖರ್ಚು ವೆಚ್ಚಗಳಿಗೆ ಸರಿದೂಗಲಿದೆ. ಉದ್ಯೋಗದಲ್ಲಿ ನಿಮ್ಮದಲ್ಲದ ತಪ್ಪುಗಳನ್ನು ಸರಿಪಡಿಸಲು ಪ್ರಯತ್ನಿಸುವಿರಿ.

ಪರಿಹಾರ : ತಾಯಿಯ ಆಶೀರ್ವಾದ ಪಡೆದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ: ಕೇಸರಿ ಬಣ್ಣ

ತುಲಾ

ಮಾಡಬೇಕಾದ ಕೆಲಸಗಳು ಬಹಳಷ್ಟು ಇದ್ದರೂ ದೇಹಾಲಸ್ಯವಿರುತ್ತದೆ. ಇದರಿಂದ ಸ್ವಂತ ಕೆಲಸ ಕಾರ್ಯಗಳಿಗೂ ಬೇರೆಯವರನ್ನು ಆಶ್ರಯಿಸಬೇಕಾಗುತ್ತದೆ. ತಾಯಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ನಿಮ್ಮಲ್ಲಿ ಅಳುಕಿನ ಭಾವನೆ ಇರುತ್ತದೆ. ಕುಟುಂಬದ ಕಾರ್ಯಕ್ರಮದಲ್ಲಿ ಭಾಗವಹಿಸಲು ಹುಟ್ಟೂರಿಗೆ ತೆರಳುವಿರಿ. ಬಡವರಿಗೆ ಜನರ ಸಹಾಯದಿಂದ ಆಹಾರದ ವ್ಯವಸ್ಥೆ ಮಾಡುವಿರಿ. ವಿದ್ಯಾರ್ಥಿಗಳು ಆರಂಭದಲ್ಲಿ ವಿದ್ಯಾಭ್ಯಾಸದಲ್ಲಿ ಹಿನ್ನೆಡೆ ಅನುಭವಿಸುತ್ತಾರೆ. ಭೂ ವಿವಾದದ ಕಾರಣ ಆತ್ಮೀಯರು ನಿಮ್ಮಿಂದ ದೂರವಾಗಬಹುದು. ಒಳ್ಳೆಯವರಾದರೂ ದುಡುಕನಿಂದ ಮಾತನಾಡುವಿರಿ. ಕೋಪ ಬಂದಲ್ಲಿ ನಿಮ್ಮ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ.

ಪರಿಹಾರ : ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ

ವೃಶ್ಚಿಕ

ರಕ್ತದ ದೋಷ ಇರುತ್ತದೆ. ನಿಮ್ಮ ಯೋಜನೆಯಂತೆ ಕೆಲಸ ಕಾರ್ಯಗಳು ನಡೆಯಬೇಕೆಂಬ ಹಟ ಇರುತ್ತದೆ. ನಿಮ್ಮೊಂದಿಗೆ ವಾದಿಸಲು ಯಾರಿಗೂ ಸಾಧ್ಯವಾಗುವುದಿಲ್ಲ. ನಿಮ್ಮಿಂದ ಸಹಾಯ ಪಡೆದವರು ನಿಮ್ಮನ್ನು ವಿರೋಧಿಸಿ ಮಾತನಾಡುತ್ತಾರೆ. ಸುಲಭವಾಗಿ ಯಾರಿಗೂ ನಿಮ್ಮ ಮನಸ್ಸನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಬೇರೆಯವರ ಮಾತನ್ನು ನಂಬಿ ತಪ್ಪು ಮಾಡಿ ನಂತರ ಪಶ್ಚಾತಾಪ ಪಡುವಿರಿ. ಉತ್ತಮ ಜ್ಞಾನವಿರುತ್ತದೆ. ಖರ್ಚಿನ ಮೇಲೆ ಹಿಡಿತವಿರದ ಕಾರಣ ಹಣದ ಕೊರತೆ ಉಂಟಾಗುತ್ತದೆ. ನಿಮ್ಮ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ತಮ್ಮ ಸ್ವಾರ್ಥವನ್ನು ಸಾಧಿಸಿಕೊಳ್ಳುವ ಜನರಿರುತ್ತಾರೆ. ಸಮಾಜದಲ್ಲಿ ಜನಪ್ರಿಯ ವ್ಯಕ್ತಿಯಾಗಿ ಬಾಳುವಿರಿ.

ಪರಿಹಾರ : ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಕೆಂಪು ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.