Horoscope Today: ವೃತ್ತಿ ಜೀವನದಲ್ಲಿ ಮಹತ್ವದ ತಿರುವು, ಎಲೆಮರೆ ಕಾಯಿಯಂತೆ ಇರುವ ಕಲಾವಿದರಿಗೆ ಉತ್ತಮ ಅವಕಾಶ; ಮೇ 17ರ ರಾಶಿಫಲ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ವೃತ್ತಿ ಜೀವನದಲ್ಲಿ ಮಹತ್ವದ ತಿರುವು, ಎಲೆಮರೆ ಕಾಯಿಯಂತೆ ಇರುವ ಕಲಾವಿದರಿಗೆ ಉತ್ತಮ ಅವಕಾಶ; ಮೇ 17ರ ರಾಶಿಫಲ

Horoscope Today: ವೃತ್ತಿ ಜೀವನದಲ್ಲಿ ಮಹತ್ವದ ತಿರುವು, ಎಲೆಮರೆ ಕಾಯಿಯಂತೆ ಇರುವ ಕಲಾವಿದರಿಗೆ ಉತ್ತಮ ಅವಕಾಶ; ಮೇ 17ರ ರಾಶಿಫಲ

17ಮೇ 2024ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (17th May 2024 Daily Horoscope).

ಮೇ 17ರ ರಾಶಿಫಲ
ಮೇ 17ರ ರಾಶಿಫಲ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈ ದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ.(17th May 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ವೈಶಾಖ ಮಾಸ-ಶುಕ್ಲಪಕ್ಷ-ಶುಕ್ರವಾರ

ತಿಥಿ: ನವಮಿ ಬೆಳಗ್ಗೆ 08.48 ರವರೆಗೂ ಇರುತ್ತದೆ. ಆನಂತರ ದಶಮಿ ಆರಂಭವಾಗುತ್ತದೆ.

ನಕ್ಷತ್ರ: ಪುಬ್ಬ ನಕ್ಷತ್ರವು ರಾತ್ರಿ 09.20 ರವರೆಗೂ ಇದ್ದು ನಂತರ ಉತ್ತರ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 05.54

ಸೂರ್ಯಾಸ್ತ: ಸಂಜೆ 06.37

ರಾಹುಕಾಲ: 10.45 ರಿಂದ 12.20

ರಾಶಿಫಲ

ಧನಸ್ಸು

ನಿಮ್ಮ ಒಳ್ಳೆಯ ಗುಣದಿಂದಲೇ ಸಮಾಜದಲ್ಲಿ ವಿಶೇಷವಾದ ಗೌರವ ಗಳಿಸುವಿರಿ. ತೆಗೆದುಕೊಂದ ತೀರ್ಮಾನಗಳನ್ನು ಅನಾವಶ್ಯಕವಾಗಿ ಬದಲಿಸುವಿರಿ. ಬಂಧು ಬಳಗದಲ್ಲಿ ನಿಮ್ಮ ಮಾತಿಗೆ ಮನ್ನಣೆ ದೊರೆಯುತ್ತದೆ. ಅನ್ಯರಿಗೆ ಅಸಾಧ್ಯವಾಗುವ ಕೆಲಸ ಕಾರ್ಯಗಳು ನಿಮ್ಮ ಹೆಗಲೇರುತ್ತವೆ. ವಿದ್ಯಾರ್ಥಿಗಳು ಕ್ರೀಡಾಮನೋಭಾವನೆಯಿಂದ ಸೋಲು ಗೆಲುವನ್ನು ಸ್ವೀಕರಿಸುತ್ತಾರೆ. ವೃತ್ತಿ ಜೀವನದಲ್ಲಿ ಮಹತ್ವದ ತಿರುವುಗಳು ಉಂಟಾಗಲಿವೆ. ಸಮಾಜಸೇವೆಯಲ್ಲಿ ಆಸಕ್ತಿ ಉಂಟಾಗುತ್ತದೆ. ಹಣದ ಕೊರತೆ ನಿಮ್ಮನ್ನು ಕಾಡುತ್ತದೆ. ಆದಾಯವನ್ನು ಹೆಚ್ಚಿಸಿ ಕೊಳ್ಳಲು ವ್ಯಾಪಾರವೊಂದನ್ನು ಆರಂಭಿಸುವಿರಿ. ಸಾಲದ ವ್ಯವಹಾರದಲ್ಲಿ ವಿವಾದ ಉಂಟಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಕೆಂಪು

ಮಕರ

ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ಯಶಸ್ಸು ಗಳಿಸುವಿರಿ. ಗೆಲುವಿನ ಗುರಿಯಿಂದಲೇ ಜೀವನದಲ್ಲಿ ಮುಂದುವರೆಯುವಿರಿ. ಆಯ್ದ ಕೆಲಸಗಳನ್ನು ಮಾತ್ರ ಮಾಡುವಿರಿ. ಉದ್ಯೋಗದಲ್ಲಿ ನಿರೀಕ್ಷಿತ ಯಶಸ್ಸು ದೊರೆಯಲಿದೆ. ಆರೋಗ್ಯದಲ್ಲಿ ಯಾವುದೇ ತೊಂದರೆ ಎದುರಾಗದು. ಮಾತು ಕಡಿಮೆ ಮಾಡಿದರೆ ಕಷ್ಟದಿಂದ ಪಾರಾಗಬಹುದು. ಮನಸ್ಸು ಒಳ್ಳೆಯದಾದರೂ ದುಡುಕಿನ ಮಾತುಕತೆ ವಿರೋಧಿಗಳನ್ನು ಹೆಚ್ಚಿಸುತ್ತದೆ. ಸುಖಕರ ನಿದ್ದೆ ಮತ್ತು ರುಚಿಕರ ಭೋಜನವನ್ನು ಇಷ್ಟಪಡುವಿರಿ. ಲೋಹಕ್ಕೆ ಸಂಬಂಧಿಸಿದ ವ್ಯಾಪಾರ ವ್ಯವಹಾರದಲ್ಲಿ ಲಾಭವಿರುತ್ತದೆ. ಹಂಚಿ ಹೋದ ಕುಟುಂಬದ ಜಮೀನನ್ನು ಒಂದುಗೂಡಿಸುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ ಇರಲಿ.

ಪರಿಹಾರ : ಬಡ ರೋಗಿಗಳಿಗೆ ಹಣದ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಎಲೆ ಹಸಿರು

ಕುಂಭ

ಮಾತು ಕಡಿಮೆ ಮಾಡಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ವಿನಾ ಕಾರಣ ವಾದ ಮಾಡಲು ಇಷ್ಟ ಪಡುವುದಿಲ್ಲ. ಸಂಬಂಧಿಕರಿಂದ ಅಂತರ ಸಾಧಿಸುವಿರಿ. ನಿಮ್ಮ ಯೋಚನೆ ಮತ್ತು ಯೋಜನೆಯನ್ನು ಅರಿಯಲು ಯಾರಿಂದಲೂ ಸಧ್ಯವಿಲ್ಲ. ಜೀವನದಲ್ಲಿ ಹೊಸ ಆಶಾಭಾವನೆ ಮೂಡುತ್ತದೆ. ಅಭಿನಯ ಅಥವಾ ಇನ್ನಿತರ ಕ್ಷೇತ್ರದಲ್ಲಿ ಇದ್ದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಉದ್ಯೋಗದಲ್ಲಿ ಬೇಸರ ಉಂಟಾಗಿ ಬದಲಾವಣೆಗಾಗಿ ಕಾಯುವಿರಿ. ಹಳೆಯ ವಾಹನವನ್ನು ಮಾರಾಟ ಮಾಡಿ ಹೊಸ ವಾಹನ ಕೊಳ್ಳುವಿರಿ. ಸಂಗಾತಿ ಮತ್ತು ಮಕ್ಕಳ ಜೊತೆ ಯಾತ್ರಾಸ್ಥಳಕ್ಕೆ ಭೇಟಿ ನೀಡುವಿರಿ. ಸಣ್ಣ ಪುಟ್ಟ ವ್ಯಾಪಾರದಲ್ಲಿ ಉತ್ತಮ ಲಾಭವಿದೆ. ಪಾಲುದಾರಿಕೆ ವ್ಯಾಪಾರದಲ್ಲಿ ಆಸಕ್ತಿ ನಂಬಿಕೆ ಇರುವುದಿಲ್ಲ.

ಪರಿಹಾರ : ಬಲಗೈಯಲ್ಲಿ ಬೆಳ್ಳಿಯ ಕೈಖಡಗ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕೆಂಪು

ಮೀನ

ಅತಿ ಮುಖ್ಯವಾದ ಕೆಲಸ ಕಾರ್ಯಗಳನ್ನು ಸಹ ಅರೆ ಮನಸ್ಸಿನಿಂದ ಮಾಡುವಿರಿ. ದುಡುಕಿನ ಕಾರಣ ಕುಟುಂಬದಲ್ಲಿ ಬೇಸರದ ಸನ್ನಿವೇಶವನ್ನು ಎದುರಿಸುವಿರಿ. ಅಸಹಾಯಕ ಪರಿಸ್ಥಿತಿಯಲ್ಲಿ ಸ್ನೇಹಿತರೊಬ್ಬರ ಸಹಾಯ ದೊರೆಯುತ್ತದೆ. ದೂರದ ಸಂಬಂಧಿಗಳ ಜೊತೆಗಿನ ಹಣದ ವ್ಯವಹಾರದಲ್ಲಿ ವೈರತ್ವ ಉಂಟಾಗುತ್ತದೆ. ತಾಯಿಯ ಆರೋಗ್ಯದ ಕಡೆ ಗಮನವಿರಲಿ. ದೂರ ಪ್ರಯಾಣದಿಂದ ದೈಹಿಕವಾಗಿ ಬಳಲುವಿರಿ. ಉದ್ಯೋಗ ಬದಲಾಯಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಹಣದ ತೊಂದರೆ ಎದುರಾದರೂ ಭಯಪಡದೆ ಸಹಾಯವನ್ನು ನಿರೀಕ್ಷಿಸುವಿರಿ. ವಿದ್ಯಾರ್ಥಿಗಳಿಗೆ ಶುಭ ಫಲಗಳು ದೊರೆಯಲಿವೆ. ಆದಾಯ ಹೆಚ್ಚಿಸಿಕೊಳ್ಳಲು ಬಿಡುವಿನ ವೇಳೆ ವೃತ್ತಿಯೊಂದನ್ನು ಆರಂಭಿಸುವಿರಿ.

ಪರಿಹಾರ : ಬೆಳ್ಳಿಯ ಉಂಗುರ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ 7

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ : ಬೂದು ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.