ದಿನ ಭವಿಷ್ಯ ಜುಲೈ 18; ಉದ್ಯೋಗದಲ್ಲಿ ಪ್ರಗತಿ, ಆದಾಯದಲ್ಲಿ ಕೊರತೆ, ಮೇಷ, ವೃಷಭ, ಮಿಥುನ, ಕಟಕ ರಾಶಿ ಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದಿನ ಭವಿಷ್ಯ ಜುಲೈ 18; ಉದ್ಯೋಗದಲ್ಲಿ ಪ್ರಗತಿ, ಆದಾಯದಲ್ಲಿ ಕೊರತೆ, ಮೇಷ, ವೃಷಭ, ಮಿಥುನ, ಕಟಕ ರಾಶಿ ಭವಿಷ್ಯ

ದಿನ ಭವಿಷ್ಯ ಜುಲೈ 18; ಉದ್ಯೋಗದಲ್ಲಿ ಪ್ರಗತಿ, ಆದಾಯದಲ್ಲಿ ಕೊರತೆ, ಮೇಷ, ವೃಷಭ, ಮಿಥುನ, ಕಟಕ ರಾಶಿ ಭವಿಷ್ಯ

Daily Horoscope Today July 18; ಪ್ರತಿ ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದು, ಪಾಪ-ಪುಣ್ಯಗಳಿಗನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಅಂದಹಾಗೆ, ಜುಲೈ18ರ ದಿನ ಭವಿಷ್ಯ ಪ್ರಕಾರ, ಕೆಲವರಿಗೆ ಉದ್ಯೋಗ ಸಮಸ್ಯೆ, ಹಣಕಾಸಿನ ಬಿಕ್ಕಟ್ಟು ಇದ್ದರೂ, ಶುಭಫಲವಿದೆ. ಮೇಷ, ವೃಷಭ, ಮಿಥುನ, ಕಟಕ ರಾಶಿ ಫಲ ಹೀಗಿದೆ. (ರಾಶಿಭವಿಷ್ಯ- ಎಚ್‌. ಸತೀಶ್, ಜ್ಯೋತಿಷಿ).

ಮೇಷ, ವೃಷಭ, ಮಿಥುನ ಮತ್ತು ಕಟಕ ದಿನ ಭವಿಷ್ಯ
ಮೇಷ, ವೃಷಭ, ಮಿಥುನ ಮತ್ತು ಕಟಕ ದಿನ ಭವಿಷ್ಯ

Daily Horoscope Today July 18; ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (18th July 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮಋತು, ಆಷಾಡ ಮಾಸ, ಶುಕ್ಲಪಕ್ಷ, ಗುರುವಾರ

ತಿಥಿ : ದ್ವಾದಶಿ ಸಾ. 05.56 ರವರೆಗು ಇರುತ್ತದೆ. ಆನಂತರ ತ್ರಯೋದಶಿ ಆರಂಭವಾಗುತ್ತದೆ.

ನಕ್ಷತ್ರ : ಜ್ಯೇಷ್ಠ ನಕ್ಷತ್ರವು ರಾ. 01.55 ರವರೆಗು ಇದ್ದು ಆನಂತರ ಮೂಲ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ ಬೆ.06.01

ಸೂರ್ಯಾಸ್ತ ಸ.06.49

ರಾಹುಕಾಲ : ಹ. 02.05 ರಿಂದ ಹ. 03.41

ದಿನ ಭವಿಷ್ಯ ಜುಲೈ 18; ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ನಿತ್ಯ ಭವಿಷ್ಯ

ಮೇಷ ರಾಶಿ; ಕುಟುಂಬದಲ್ಲಿ ಬೇರೆಯವರ ಕಾರಣದಿಂದ ವಿವಾದ ಉಂಟಾಗಲಿದೆ. ಅನಾವಶ್ಯಕ ಮಾನಸಿಕ ಒತ್ತಡವಿರುತ್ತದೆ. ಉದ್ಯೋಗದಲ್ಲಿ ಪ್ರಗತಿಪರ ಬದಲಾವಣೆಗಳು ಉಂಟಾಗುತ್ತವೆ. ವಿದ್ಯಾರ್ಥಿಗಳು ಜವಾಬ್ದಾರಿಯನ್ನು ಅರಿತು ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಗಮನ ಹರಿಸುವಿರಿ. ಕೋಪದ ಮಾತುಗಳಿಂದ ದೊಡ್ಡ ವಿವಾದಕ್ಕೆ ಸಿಲುಕುವಿರಿ. ಬುದ್ದಿವಂತಿಕೆಯಿಂದ ನಿಮ್ಮ ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಕಾಣುವಿರಿ. ಮೌನದಿಂದ ಜಗಳ ಕದನಗಳಿಂದ ದೂರ ಉಳಿಯುವಿರಿ. ಆತ್ಮೀಯರಿಂದ ಹಣದ ಸಹಾಯ ದೊರೆಯುತ್ತದೆ. ದಾಂಪತ್ಯದಲ್ಲಿ ಉತ್ತಮ ಹೊಂದಾಣಿಕೆ ಕಂಡು ಬರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಸ್ವಂತ ನಿರ್ಧಾರಗಳಿಗೆ ಬದ್ದರಾಗುವಿರಿ.

ಪರಿಹಾರ : ಇರುವೆಗಳಿಗೆ ಆಹಾರ ಧಾನ್ಯವನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ 10, ಅದೃಷ್ಟದ ದಿಕ್ಕು : ಪಶ್ಚಿಮ, ಅದೃಷ್ಟದ ಬಣ್ಣ : ಆಕಾಶನೀಲಿ ಬಣ್ಣ.

ವೃಷಭ ರಾಶಿ; ಕುಟುಂಬದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಅನಿರೀಕ್ಷಿತ ಖರ್ಚು ವೆಚ್ಚಗಳು ನಿಮ್ಮ ಧೈರ್ಯವನ್ನು ಕಡಿಮೆ ಮಾಡುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ಇರಲಿದೆ. ಉದ್ಯೋಗದಲ್ಲಿ ಯಾವುದೇ ಬದಲಾವಣೆ ಇರದು. ಉದ್ಯೋಗದಲ್ಲಿ ನಿಮಗೆ ಸಂಬಂಧಿಸದ ಜವಾಬ್ದಾರಿಗಳನ್ನು ಒಪ್ಪಿಕೊಳ್ಳುವಿರಿ. ವಿದ್ಯಾರ್ಥಿಗಳು ಏಕಾಗ್ರ ಚಿತ್ತದಿಂದ ಕಲಿಕೆಯಲ್ಲಿ ಅಗ್ರಸ್ಥಾನ ಪಡೆಯುತ್ತಾರೆ. ದಿಢೀರನೆ ಎದುರಾಗುವ ಖರ್ಚು ವೆಚ್ಚಗಳು ಚಿಂತೆಯನ್ನು ಉಂಟುಮಾಡುತ್ತವೆ. ಕುಟುಂಬದ ಹಿರಿಯರ ಸಲಹೆಯನ್ನು ಪಾಲಿಸುವುದು ಒಳ್ಳೆಯದು. ಸಾಲದ ವ್ಯವಹಾರವನ್ನು ಮಾಡದಿರಿ. ಅತಿ ಮುಖ್ಯ ಕೆಲಸವೊಂದು ಮುಂದೂಡಲ್ಪಡುತ್ತದೆ.

ಪರಿಹಾರ : ತಾಯಿಯವರಿಗೆ ಸಿಹಿತಿಂಡಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1, ಅದೃಷ್ಟದ ದಿಕ್ಕು : ಉತ್ತರ, ಅದೃಷ್ಟದ ಬಣ್ಣ: ರಕ್ತದ ಬಣ್ಣ.

ಮಿಥುನ ರಾಶಿ; ಕುಟುಂಬದಲ್ಲಿ ಶಾಂತಿಯುತ ಪರಿಸರ ನೆಲೆಸಿರುತ್ತದೆ. ಉದ್ಯೋಗದಲ್ಲಿನ ಬದಲಾವಣೆಗಳಿಂದ ಯಾವುದೇ ಉಪಯೋಗವಿಲ್ಲ. ಬೇಸರಂದ ಉದ್ಯೋಗವನ್ನು ಬದಲಾಯಿಸುವ ನಿರ್ಣಯಕ್ಕೆ ಬರುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಉತ್ತಮ ಆದಾಯವಿದ್ದರೂ ಹಣವನ್ನು ಉಳಿಸಲಾರಿರಿ. ಮಕ್ಕಳಿಗೆ ಉನ್ನತ ಅದ್ಯಯನ ನಡೆಸುವ ಅವಕಾಶ ದೊರೆಯುತ್ತದೆ. ವಿದ್ಯಾರ್ಥಿಗಳು ಯಾವುದೇ ಸನ್ನಿವೇಶವನ್ನು ತಮಗೆ ಉಪಯೋಗವಾಗುವಂತೆ ಬದಲಾಯಿಸಬಲ್ಲರು. ಅನಾವಶ್ಯಕ ಒತ್ತಡದಿಂದ ಬಳಳುವಿರಿ. ಕುಟುಂಬದಲ್ಲಿ ಮಂಗಳಕಾರ್ಯವೊಂದು ನಡೆಯಲಿದೆ. ಅಧಿಕಾರಿಗಳಾಗಿದ್ದಲ್ಲಿ ಸಹೋದ್ಯೋಗಿಗಳ ಜೊತೆ ನಯವಾಗಿ ವರ್ತಿಸಲು ಪ್ರಯತ್ನಿಸಿ.

ಪರಿಹಾರ : ಪಕ್ಷಿಗಳಿಗೆ ಆಹಾರವನ್ನು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 4, ಅದೃಷ್ಟದ ದಿಕ್ಕು : ಪೂರ್ವ, ಅದೃಷ್ಟದ ಬಣ್ಣ: ಎಲೆಹಸಿರು ಬಣ್ಣ.

ಕಟಕ ರಾಶಿ; ಕುಟುಂಬದ ಕೆಲಸ ಕಾರ್ಯಗಳ ಬಗ್ಗೆ ಹೆಚ್ಚಿನ ಕಾಳಜಿ ತೋರವಿರಿ. ಹೆಚ್ಚಿನ ಜವಾಬ್ದಾರಿಗಳು ನಿಮ್ಮದಾಗಲಿದೆ. ಉದ್ಯೋಗದಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ದುಡುಕುತನದ ನಿರ್ಧಾರವನ್ನು ತೆಗೆದುಕೊಳ್ಳಬೇಡಿರಿ. ವಿದ್ಯಾರ್ಥಿಗಳು ಕಲಿಕೆ ಮತ್ತು ಮನರಂಜನೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳುತ್ತಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಮಕ್ಕಳ ಜೀವನದ ಬಗ್ಗೆ ಹೆಚ್ಚಿನ ಕಾಳಜಿ ತೋರುವಿರಿ. ವಿದೇಶಿ ಸಂಸ್ಥೆಯ ಪಾಲುದಾರಿಕೆಯಲ್ಲಿ ಉತ್ತಮ ಲಾಭ ದೊರೆಯುತ್ತದೆ. ಕುಟುಂಬದ ಸದಸ್ಯರ ಜೊತೆ ವಾದ ವಿವಾದಗಳು ಇರುತ್ತವೆ. ಮನಸ್ಸಿನ ನೆಮ್ಮದಿಗಾಗಿ ಯಾತ್ರಾಸ್ಥಳಕ್ಕೆ ಪ್ರಯಾಣ ಬೆಳೆಸುವಿರಿ. ಉದ್ಯೋಗವನ್ನು ಬದಲಾಯಿಸುವ ಸಾಧ್ಯತೆಗಳಿವೆ. ಕಷ್ಟದಲ್ಲಿ ಇರುವವರ ಬಗ್ಗೆ ಅನುಕಂಪ ತೋರುವಿರಿ.

ಪರಿಹಾರ : ಸಿಹಿಯನ್ನು ತಿಂದು ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ. .

ಅದೃಷ್ಟದ ಸಂಖ್ಯೆ : 11 ಅದೃಷ್ಟದ ದಿಕ್ಕು : ಈಶಾನ್ಯ ಅದೃಷ್ಟದ ಬಣ್ಣ: ಕೇಸರಿ ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು,ಅಧ್ಯಾತ್ಮ,ದಿನ ಭವಿಷ್ಯ, ಗ್ರಹಗಳ ಸಂಚಾರ,ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ,ಹಬ್ಬ,ಸಂಸ್ಕೃತಿ,ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯವಿಭಾಗ ನೋಡಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.