ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವಂಶಕ್ಕೆ ಸೇರಿದ ಭೂಮಿಯ ವಿಚಾರದಲ್ಲಿ ವಿವಾದ, ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ; ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

ವಂಶಕ್ಕೆ ಸೇರಿದ ಭೂಮಿಯ ವಿಚಾರದಲ್ಲಿ ವಿವಾದ, ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ; ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

19 ಜೂನ್‌ 2024ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ, ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (19th June 2024 Daily Horoscope).

ವಂಶಕ್ಕೆ ಸೇರಿದ ಭೂಮಿಯ ವಿಚಾರದಲ್ಲಿ ವಿವಾದ, ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ; ಮೇಷ, ವೃಷಭ, ಮಿಥುನ, ಕಟಕ ರಾಶಿಫಲ
ವಂಶಕ್ಕೆ ಸೇರಿದ ಭೂಮಿಯ ವಿಚಾರದಲ್ಲಿ ವಿವಾದ, ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ; ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (19th June 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಶುಕ್ಲಪಕ್ಷ-ಬುಧವಾರ

ತಿಥಿ: ತ್ರಯೋದಶಿ ತಿಥಿ ದಿನಪೂರ್ತಿ ಇರುತ್ತದೆ.

ನಕ್ಷತ್ರ: ವಿಶಾಖ ನಕ್ಷತ್ರವು 04.08 ರವರೆಗೂ ಇದ್ದು ನಂತರ ಅನೂರಾಧ ನಕ್ಷತ್ರವು ಆರಂಭವಾಗಲಿದೆ.

ಸೂರ್ಯೋದಯ: ಬೆಳಗ್ಗೆ 05.52

ಸೂರ್ಯಾಸ್ತ: ಸಂಜೆ 06.47

ರಾಹುಕಾಲ: ಮಧ್ಯಾಹ್ನ 12.24 ರಿಂದ 2.01

ರಾಶಿಫಲ

ಮೇಷ

ಮಾತಿನ ಬಲದಿಂದ ಎದುರಾಗುವ ತೊಂದರೆಯಿಂದ ಪಾರಾಗುವಿರಿ. ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಕಂಡುಬರುತ್ತದೆ. ಸ್ವತಂತ್ರವಾಗಿ ನಿರ್ವಹಿಸುವ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ಗಳಿಸುವಿರಿ. ಅಂದುಕೊಂಡ ಕೆಲಸಗಳು ದೊರೆಯುವ ಕಾರಣ ಆತ್ಮವಿಶ್ವಾಸ ಹೆಚ್ಚುತ್ತದೆ. ಜೀವನದಲ್ಲಿ ಸುಖ ಸಂತೃಪ್ತಿ ತುಂಬಿರುತ್ತದೆ. ನಿತ್ಯ ಜೀವನದಲ್ಲಿ ಯಾವುದೇ ರೀತಿಯ ಬದಲಾವಣೆಗಳು ಕಾಣುವುದಿಲ್ಲ. ದೈಹಿಕ ಅನಾರೋಗ್ಯ, ಮಾನಸಿಕ ಒತ್ತಡವಿರುತ್ತದೆ. ನಿಮ್ಮಲ್ಲಿರುವ ಬುದ್ಧಿಶಕ್ತಿ ಮತ್ತು ಪ್ರತಿಭೆಗೆ ತಕ್ಕಂಥ ಉದ್ಯೋಗ ದೊರೆಯುತ್ತದೆ. ವಂಶಕ್ಕೆ ಸೇರಿದ ಭೂಮಿಯ ವಿಚಾರದಲ್ಲಿ ವಿವಾದವಿರುತ್ತದೆ. ವಿರೋಧಿಗಳನ್ನು ವಿರೋಧಿಸುವ ಬದಲು ಸಹನೆಯಿಂದ ಅವರ ಮನಸ್ಸನ್ನು ಗೆಲ್ಲುವಿರಿ. ಹುಟ್ಟೂರಿನಲ್ಲಿರುವ ದೇವಾಲಯದ ಜೀರ್ಣೋದ್ಧಾರ ಮಾಡುವಿರಿ

ಪರಿಹಾರ : ಕೆಂಪು ಹೂವಿನ ಗಿಡಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಹಸಿರು

ವೃಷಭ

ಕುಟುಂಬದಲ್ಲಿ ಆತಂಕದ ಕ್ಷಣವೊಂದು ಎದುರಾಗಲಿದೆ. ಹಣಕಾಸಿನ ವ್ಯವಹಾರ ಸುಗಮವಾಗಿ ನಡೆಯಲಾರದು. ಆರೋಗ್ಯದ ಸಮಸ್ಯೆ ಬಗೆಹರಿಯುವುದಿಲ್ಲ. ಕುಟುಂಬದ ವಿಚಾರವೊಂದರಲ್ಲಿ ಬಂಧು ಬಳಗದವರ ವಿರೋಧ ಎದುರಿಸಬೇಕಾಗುತ್ತದೆ. ಸಮಾಜದ ಓರೆ ಕೋರೆಗಳನ್ನು ತಿದ್ದುವ ಹವ್ಯಾಸವಿರುತ್ತದೆ. ದಂಪತಿ ನಡುವೆ ಉತ್ತಮ ಸಹಕಾರವಿರುತ್ತದೆ. ಹೊಸದಾಗಿ ಆರಂಭಿಸುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಕುಟುಂಬದ ವಿಚಾರವಾಗಿ ನೆರೆಹೊರೆಯವರೊಂದಿಗೆ ವಿವಾದವಿರುತ್ತದೆ. ಅಪನಂಬಿಕೆಯಿಂದ ನಿಜವಾದ ಸ್ನೇಹಿತರನ್ನು ದೂರ ಮಾಡಿಕೊಳ್ಳುವಿರಿ. ಕ್ರಮೇಣವಾಗಿ ಆರ್ಥಿಕ ಪ್ರಗತಿಯು ಕಂಡುಬರುತ್ತದೆ. ರಕ್ತ ಸಂಬಂಧಿಕರೊಂದಿಗೆ ಉತ್ತಮ ಅನುಬಂಧ ಇರುವುದಿಲ್ಲ. ಮನದಲ್ಲಿ ಒಂದು ರೀತಿಯ ಭಯ ಮನೆ ಮಾಡಿರುತ್ತದೆ.

ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ನೀಲಿ

ಮಿಥುನ

ನಿಮ್ಮದೇ ತಪ್ಪಿನಿಂದ ತೊಂದರೆ ಅನುಭವಿಸುವಿರಿ. ಅಧಿಕವಾದ ಕೆಲಸ ಕಾರ್ಯಗಳ ಕಾರಣ ವಿಶ್ರಾಂತಿ ಇರುವುದಿಲ್ಲ. ಅನಿರೀಕ್ಷಿತ ಧನ ಲಾಭವಿರುತ್ತದೆ. ಯಾರೊಬ್ಬರ ಸಹಾಯವೂ ನಿಮಗೆ ಇರುವುದಿಲ್ಲ ಆದರೆ ಸಂಗಾತಿ ಮತ್ತು ಮಕ್ಕಳ ಸಹಕಾರ ಜೀವನದಲ್ಲಿ ಹೊಸ ಹಾದಿ ತೋರಿಸುತ್ತದೆ. ಶಾಂತಿ ನೆಮ್ಮದಿ ನೆಮ್ಮದಿಯ ಬಾಳ್ವೆ ನಿಮ್ಮದಾಗಿರುತ್ತದೆ. ಶುಭ ಕಾರ್ಯವೊಂದು ನಡೆಯಲಿದೆ. ಉದ್ಯೋಗದಲ್ಲಿ ನಿಮ್ಮ ಸ್ಥಾನಕ್ಕೆ ಚ್ಯುತಿ ಬರಬಹುದು ಶೀತದ ತೊಂದರೆ ಇರುತ್ತದೆ. ಸಮಾಜದಲ್ಲಿ ನಿಮಗಿದ್ದ ಗೌರವ ಹೆಚ್ಚುತ್ತದೆ. ನಿಮ್ಮ ವೈಯುಕ್ತಿಕ ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ ಇರುತ್ತದೆ. ಕರಿದ ಆಹಾರ ಪದಾರ್ಥಗಳಿಂದ ದೂರವಿರುವುದು ಒಳ್ಳೆಯದು.

ಪರಿಹಾರ : ಕುಟುಂಬದ ಹಿರಿಯರಿಗೆ ಬೆಳ್ಳಿ ವಸ್ತುವನ್ನು ಉಡುಗೊರೆಯಾಗಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ನೇರಳೆ

ಕಟಕ

ನಿಮ್ಮ ಮನದಲ್ಲಿರುವ ಆಸೆ ಆಕಾಂಕ್ಷೆಗಳನ್ನು ಯಾರಲ್ಲೂ ಹೇಳಿಕೊಳ್ಳುವುದಿಲ್ಲ. ಆರೋಗ್ಯದ ಬಗ್ಗೆ ಗಮನ ನೀಡುವುದಿಲ್ಲ. ಯಾವುದೇ ಬೇದ ಭಾವ ತೋರದೆ ಎಲ್ಲರಿಗೂ ಸಹಾಯ ಮಾಡುವಿರಿ. ಸಂಬಂಧಿಕರಿಂದ ದೂರ ಇರುವಿರಿ. ಯಾರು ಕಷ್ಟ ಎಂದು ಬಂದರೂ ಕರಗಿ ಸಹಾಯ ಮಾಡುವಿರಿ. ಯಾವುದೇ ಕೆಲಸವಾದರೂ ಹೆಚ್ಚಿನ ಶ್ರದ್ಧೆಯಿಂದ ಪೂರ್ಣಗೊಳಿಸುವಿರಿ. ಸುಖ ಸಂತೋಷದಿಂದ ಬಾಳುವಿರಿ. ಸಮಾಜದ ಗಣ್ಯ ವ್ಯಕ್ತಿಗಳ ಭೇಟಿಯಾಗುತ್ತದೆ. ಸ್ವತಂತ್ರವಾಗಿ ಜೀವನ ನಡೆಸಲು ಇಷ್ಟಪಡುವಿರಿ. ಹಣದ ಕೊರತೆ ಕಂಡು ಬರುತ್ತದೆ. ಹೊಟ್ಟೆಗೆ ಸಂಬಂಧಿಸಿದ ದೋಷದಿಂದ ಬಳಲುವಿರಿ. ಉದ್ಯೋಗದಲ್ಲಿ ಶುಭ ವಾರ್ತೆಯೊಂದು ಕೇಳಿಬರುವುದು.

ಪರಿಹಾರ : ಜೇನು ಸೇವಿಸಿ ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಗುಲಾಬಿ ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.