ಅನಿರೀಕ್ಷಿತ ಧನಲಾಭ, ದಂಪತಿ ನಡುವೆ ಅನಗತ್ಯ ವಾದ ವಿವಾದ; ಧನಸ್ಸು, ಮಕರ, ಕುಂಭ, ಮೀನ ರಾಶಿ ಭವಿಷ್ಯ
19 ಜೂನ್ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (19th June 2024 Daily Horoscope).
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈ ದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ.(19th June 2024 Daily Horoscope).
ಇಂದಿನ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಶುಕ್ಲಪಕ್ಷ-ಬುಧವಾರ
ತಿಥಿ: ತ್ರಯೋದಶಿ ತಿಥಿ ದಿನಪೂರ್ತಿ ಇರುತ್ತದೆ.
ನಕ್ಷತ್ರ: ವಿಶಾಖ ನಕ್ಷತ್ರವು 04.08 ರವರೆಗೂ ಇದ್ದು ನಂತರ ಅನೂರಾಧ ನಕ್ಷತ್ರವು ಆರಂಭವಾಗಲಿದೆ.
ಸೂರ್ಯೋದಯ: ಬೆಳಗ್ಗೆ 05.52
ಸೂರ್ಯಾಸ್ತ: ಸಂಜೆ 06.47
ರಾಹುಕಾಲ: ಮಧ್ಯಾಹ್ನ 12.24 ರಿಂದ 2.01
ರಾಶಿಫಲ
ಧನಸ್ಸು
ಎಲ್ಲರ ಜೊತೆ ಸಂತಸದಿಂದ ದಿನವನ್ನು ಆರಂಭಿಸುವಿರಿ. ಹಣದ ತೊಂದರೆ ಕಂಡು ಬರುವುದಿಲ್ಲ. ಯಾವುದೇ ತೊಂದರೆಗಳು ಎದುರಾಗದಂತೆ ಬುದ್ಧಿವಂತಿಕೆಯಿಂದ ಕಾರ್ಯನಿರ್ವಹಿಸುವಿರಿ. ಕುಟುಂಬದಲ್ಲಿನ ಸದಸ್ಯರಲ್ಲಿಉತ್ತಮ ಪ್ರೀತಿ ವಿಶ್ವಾಸವಿರುತ್ತದೆ. ಸುಖ ಸಂತೋಷದ ಜೀವನ ನಡೆಸುವಿರಿ. ಕುಟುಂಬದ ಹಿರಿಯರನ್ನು ಗೌರವದಿಂದ ಕಾಣುವಿರಿ. ಮಕ್ಕಳ ಜೊತೆ ವಿಶೇಷ ಪ್ರೀತಿ ವಿಶ್ವಾಸ ಇರುತ್ತದೆ. ತಾಳ್ಮೆಯ ಕೊರತೆ ಇರುತ್ತದೆ. ಸರ್ಕಾರಕ್ಕೆ ಸಂಬಂಧಪಟ್ಟ ಕೆಲಸ ಕಾರ್ಯಗಳು ಸುಲಭವಾಗಿ ನೆರವೇರಲಿದೆ. ನಿಮ್ಮ ಮುಂದೆ ವಿರೋಧಿಗಳ ಆಟ ನಡೆಯುವುದಿಲ್ಲ. ನಿಮ್ಮ ವಿರೋಧಿಗಳು ವೈರತ್ವ ಬೆಳೆಸಿಕೊಳ್ಳುವುದರ ಬದಲು ಸ್ನೇಹವನ್ನು ಅರಸಿ ಬರುತ್ತಾರೆ.
ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ತಿಳಿ ಹಸಿರು
ಮಕರ
ಸಂಗಾತಿ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಕೆಲಸ ಕಾರ್ಯಗಳಲ್ಲಿ ಸಮಸ್ಯೆ ಎದುರಾದಾಗ ಕೋಪದಿಂದ ವರ್ತಿಸುವಿರಿ. ನಿಮ್ಮ ನಿರೀಕ್ಷೆಯಂತೆ ದೈನಂದಿನ ಕೆಲಸ ಕಾರ್ಯಗಳನ್ನು ನಡೆಯಲಿವೆ. ಹಣದ ತೊಂದರೆ ಇರುವುದಿಲ್ಲ. ಆತ್ಮೀಯರಿಗೆ ಕಷ್ಟದ ಕಾಲದಲ್ಲಿ ಸಹಾಯ ಮಾಡುವಿರಿ. ಹೊಸ ಕೆಲಸ ಕಾರ್ಯಗಳ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಿ ನಂತರ ಮುಂದುವರೆಯುವಿರಿ. ಸುಖ ಶಾಂತಿಯಿಂದ ಜೀವನ ನಡೆಸುವಿರಿ. ಕುಟುಂಬದಲ್ಲಿ ಪ್ರತಿಯೊಬ್ಬರ ನಡುವೆ ಸಹಮತವಿರುತ್ತದೆ. ಉತ್ತಮ ಆದಾಯವಿರುತ್ತದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಸಂಬಂಧಿಕರಿಂದಲೇ ತೊಂದರೆ ಇರುತ್ತದೆ. ವಂಶದ ಗೌರವವನ್ನು ಕಾಪಾಡುವಂತಹ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳುವಿರಿ.
ಪರಿಹಾರ : ಸಾಧು ಸಂತರ ಆಶೀರ್ವಾದ ಪಡೆದು ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ನಸುಗೆಂಪು ಬಣ್ಣ
ಕುಂಭ
ಸರಿಯಾದ ಯೋಜನೆ ರೂಪಿಸಿ ಕೆಲಸ ಕಾರ್ಯಗಳನ್ನು ಆರಂಭಿಸುವುದಿಲ್ಲ. ಮೊದಲ ಪ್ರಾಶಸ್ತ್ಯವನ್ನು ಸ್ವಂತ ಕೆಲಸಗಳಿಗೆ ನೀಡುವಿರಿ. ಮನರಂಜನಾ ಕಾರ್ಯಕ್ರಮಗಳಿಗೆ ಹಣ ಖರ್ಚು ಮಾಡುವಿರಿ. ನಿಮ್ಮ ಕೋಪದ ಗುಣದಿಂದ ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ. ನೇರ ಮತ್ತು ನಿಷ್ಠುರದ ಮಾತುಗಳು ವಾದ ವಿವಾದಗಳಿಗೆ ಕಾರಣವಾಗಲಿದೆ. ಮಕ್ಕಳ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ವಿವಾಹ ಯೋಗವಿದೆ. ಉತ್ತಮ ಆದಾಯ ವಿರುತ್ತದೆ. ಆಕಸ್ಮಿಕವಾಗಿ ನಡೆಯುವ ಬೇರೆಯವರ ತಪ್ಪನ್ನು ಮನ್ನಿಸುವುದಿಲ್ಲ. ಇದರಿಂದಾಗಿ ಅನೇಕರಿಂದ ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಅನಿರೀಕ್ಷಿತ ಹಣ ಗಳಿಕೆಯಿಂದ ಸಂತೋಷಗೊಳ್ಳುವಿರಿ. ಮಾಡಿದ ತಪ್ಪಿಗೆ ಪಶ್ಚಾತಾಪ ಪಡುವಿರಿ. ವಿರೋಧಿಗಳೂ ಸ್ನೇಹಿತರಾಗುತ್ತಾರೆ. ಸಹೋದ್ಯೋಗಿಗಳು ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗುತ್ತಾರೆ.
ಪರಿಹಾರ : ಬೇವಿನ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸುವುದು.
ಅದೃಷ್ಟದ ಸಂಖ್ಯೆ 11
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ
ಮೀನ
ಕುಟುಂಬದ ಹಿರಿಯರ ಮತ್ತು ಹಿರಿಯ ಅಧಿಕಾರಿಗಳ ಸಹಾಯ ಸಹಕಾರ ನಿಮಗೆ ದೊರೆಯುತ್ತದೆ. ಕುಟುಂಬದಲ್ಲಿರುವ ಹೆಣ್ಣು ಮಕ್ಕಳನ್ನು ವಿಶೇಷ ಪ್ರೀತಿಯಿಂದ ಕಾಣುವಿರಿ. ಅನಿರೀಕ್ಷಿತ ಧನಲಾಭವಿದೆ. ದಂಪತಿ ನಡುವೆ ಅನಗತ್ಯ ವಾದ ವಿವಾದ ಇರುತ್ತವೆ. ಆಡುವ ಮಾತು ಕಡಿಮೆಯಾದರೂ ಅದರಲ್ಲಿ ವಿಶೇಷ ಅರ್ಥ ಕೂಡಿರುತ್ತದೆ. ಸಮಾಜದಲ್ಲಿ ಉತ್ತಮ ಗೌರವ ಗಳಿಸುವಿರಿ. ಇತಿಮಿತಿ ಇಲ್ಲದೆ ಹಣ ಖರ್ಚು ಮಾಡುವಿರಿ. ಬುದ್ಧಿವಂತಿಕೆಯಿಂದ ಉದ್ಯೋಗದಲ್ಲಿ ಪ್ರಮುಖ ಸ್ಥಾನವನ್ನು ಪಡೆಯುವಿರಿ. ಕೌಟುಂಬಿಕ ಜೀವನದಲ್ಲಿ ಸುಖ ಸಂತೋಷ ನೆಲೆಸಿರುತ್ತದೆ. ಮಗನ ಜೊತೆಯಲ್ಲಿ ಅನಾವಶ್ಯಕವಾದ ಚರ್ಚೆಯ ಕಾರಣ ಮನಸ್ತಾಪ ಉಂಟಾಗುತ್ತದೆ.
ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ 2
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ : ಬಿಳಿ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).