ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಕೈಗೊಂಡ ಕೆಲಸ ಪೂರ್ಣಗೊಳಿಸುವಿರಿ, ವ್ಯವಹಾರದಲ್ಲಿ ಉತ್ತಮ ಆದಾಯ; ಮೇಷ, ವೃಷಭ, ಮಿಥುನ, ಕಟಕ ರಾಶಿ ಫಲ

Horoscope Today: ಕೈಗೊಂಡ ಕೆಲಸ ಪೂರ್ಣಗೊಳಿಸುವಿರಿ, ವ್ಯವಹಾರದಲ್ಲಿ ಉತ್ತಮ ಆದಾಯ; ಮೇಷ, ವೃಷಭ, ಮಿಥುನ, ಕಟಕ ರಾಶಿ ಫಲ

19 ಏಪ್ರಿಲ್ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ, ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (19th May 2024 Daily Horoscope).

ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿ ಫಲಗಳನ್ನು ತಿಳಿಯಿರಿ
ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿ ಫಲಗಳನ್ನು ತಿಳಿಯಿರಿ

ಇಂದಿನ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (19th May 2024 Horoscope)

ಇಂದಿನ ಪಂಚಾಂಗ

ಶ್ರೀಕ್ರೋಧಿನಾಮ ಸಂವತ್ಸರ-ಉತ್ತರಾಯನ-ವಸಂತ ಋತು-ವೈಶಾಖ ಮಾಸ-ಶುಕ್ಲಪಕ್ಷ-ಭಾನುವಾರ

ತಿಥಿ: ಏಕಾದಶಿ ಹ. 12.50 ರವರೆಗೂ ಇರುತ್ತದೆ. ಆನಂತರ ದ್ವಾದಶಿ ಆರಂಭವಾಗುತ್ತದೆ.

ನಕ್ಷತ್ರ: ಹಸ್ತ ನಕ್ಷತ್ರವು ರಾ. 02.31 ರವರೆಗು ಇರುತ್ತದೆ. ಆನಂತರ ಚಿತ್ತೆ ನಕ್ಷತ್ರವು ಆರಂಭವಾಗುತ್ತದೆ.

ಸೂರ್ಯೋದಯ: ಬೆ.05.53

ಸೂರ್ಯಾಸ್ತ: ಸ.06.38

ರಾಹುಕಾಲ: ಸ. 05.05 ರಿಂದ ಸ. 06.41

ಮೇಷ ರಾಶಿ

ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗೂ ಹೆಚ್ಚಿನ ಪ್ರಯತ್ನದ ಅಗತ್ಯತೆ ಇರುತ್ತದೆ. ಮನದಲ್ಲಿ ಅಳುಕಿನ ಭಾವನೆ ಇರುವ ಕಾರಣ ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ ಉಂಟಾಗಲಿದೆ. ಮೊದಲು ನಿಮ್ಮ ಸ್ವಂತ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ. ಸಾಲದ ವಿಚಾರದಲ್ಲಿ ಆತ್ಮೀಯರೊಂದಿಗೆ ಮನಸ್ತಾಪ ಉಂಟಾಗುತ್ತದೆ. ಹಣದ ಕೊರತೆ ಕಂಡುಬರಲಿದೆ. ನೀವು ಇರುವ ಕಡೆ ಸಂತೋಷಕ್ಕೆ ಕೊರತೆ ಇರುವುದಿಲ್ಲ. ಸಂಗಾತಿಯ ಆರೋಗ್ಯದ ವಿಚಾರದಲ್ಲಿ ಮಾನಸಿಕ ಒತ್ತಡ ಇರುತ್ತದೆ. ಆತುರದ ನಿರ್ಧಾರಗಳಿಂದ ಕೆಲಸಕಾರ್ಯಗಳಲ್ಲಿ ಹಿನ್ನೆಡೆ ಉಂಟಾಗುತ್ತದೆ.

ಪರಿಹಾರ: ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 8

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ಹಾಲಿನ ಬಣ್ಣ

ವೃಷಭ ರಾಶಿ

ಆತ್ಮೀಯರ ಸಹಾಯದಿಂದ ಹೊಸ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಹೊಸಬರ ಪರಿಚಯ ಜೀವನಕ್ಕೆ ಹೊಸ ರೂಪವನ್ನು ನೀಡುತ್ತದೆ. ಉದ್ಯೋಗದಲ್ಲಿ ಮಧ್ಯಮ ಗತಿಯ ಪ್ರಗತಿ ಕಂಡುಬರುತ್ತದೆ. ನಿಮಗೆ ಅನುಕೂಲ ನೀಡುವ ವಿಚಾರಗಳಿಗೆ ಪ್ರಥಮ ಆದ್ಯತೆ ನೀಡುವಿರಿ. ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ದಾಂಪತ್ಯ ಜೀವನದ ಮನಸ್ತಾಪವು ದೂರವಾಗಲಿದೆ. ಸಂಗಾತಿಯ ಕೆಲಸ ಕಾರ್ಯಗಳು ಕೆಲವೊಮ್ಮೆ ಬೇಸರ ಹುಟ್ಟಿಸುತ್ತದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ.

ಪರಿಹಾರ: ಸಾಧು ಸಂತರ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 11

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ಹೊಗೆಯ ಬಣ್ಣ

ಮಿಥುನ ರಾಶಿ

ಕೈಗೊಂಡ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಒಳ್ಳೆಯ ಅಭ್ಯಾಸಗಳಿಂದ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಎಲ್ಲರೊಂದಿಗೆ ಸ್ನೇಹ ಪ್ರೀತಿಯಿಂದ ಬೆರೆಯುವಿರಿ. ಆರೋಗ್ಯವು ಸಹಜ ಸ್ಥಿತಿಗೆ ಮರಳುತ್ತದೆ. ಕುಟುಂಬದಲ್ಲಿ ಅನಗತ್ಯ ಖರ್ಚು ವೆಚ್ಚಗಳು ಕಂಡುಬರುತ್ತದೆ. ವಂಶದಲ್ಲಿ ವಿಶೇಷ ಸ್ಥಾನಮಾನ ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ಸಹನೆಯಿಂದ ವರ್ತಿಸುವುದು ಒಳ್ಳೆಯದು. ಮಕ್ಕಳ ಒಡನಾಟ ಮನದಲ್ಲಿನ ನೋವನ್ನು ಮರೆಯುವಂತೆ ಮಾಡುತ್ತದೆ. ದಾಂಪತ್ಯ ಜೀವನದಲ್ಲಿ ಯಾವುದೇ ತೊಡಕು ಕಂಡು ಬರುವುದಿಲ್ಲ.

ಪರಿಹಾರ: ಬೇವಿನ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸುವುದು.

ಅದೃಷ್ಟದ ಸಂಖ್ಯೆ: 2

ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ: ಆಕಾಶನೀಲಿ

ಕಟಕ ರಾಶಿ

ಮನದಲ್ಲಿ ನಿರ್ವಿಕಾರ ಭಾವನೆ ಇರುತ್ತದೆ. ಅಸಹಜವಾದ ಯೋಚನೆಗಳಿಂದ ದೂರವಿದ್ದು ಸಂತಸದಿಂದ ಬಾಳುವಿರಿ. ಮಕ್ಕಳ ಪ್ರೀತಿ ವಿಶ್ವಾಸ ಎಲ್ಲರ ಗಮನ ಸೆಳೆಯುತ್ತದೆ. ಆತ್ಮೀಯೊಂದಿಗೆ ಕಿರು ಪ್ರವಾಸ ಕೈಗೊಳ್ಳುವಿ. ದಿನವಿಡೀ ಬೇರೆಯವರ ಕೆಲಸ ಕಾರ್ಯಗಳಲ್ಲಿ ಸಹಕರಿಸಬೇಕಾಗುತ್ತದೆ. ಸುಲಭವಾಗಿ ಬೇರೆಯವರ ಪ್ರಭಾವಕ್ಕೆ ಮಣಿದು ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಸಂಗಾತಿಯ ಮನದಲ್ಲಿ ಮೂಡುವ ಯೋಚನೆಗಳು ಕಾರ್ಯರೂಪಕ್ಕೆ ಬರಲಿವೆ. ಉದ್ಯೋಗದಲ್ಲಿ ಧನಾತ್ಮಕ ಬದಲಾವಣೆಗಳು ಎದುರಾಗಲಿವೆ.

ಪರಿಹಾರ: ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 9

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ರಕ್ತದ ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)