ಕನ್ನಡ ಸುದ್ದಿ  /  Astrology  /  Horoscope Today Astrology Prediction 1st April 2024 Aries Taurus Gemini Cancer Daily Horoscope Sts

Horoscope Today: ಅನಿರೀಕ್ಷಿತ ಅತಿಥಿಗಳ ಆಗಮನ, ನೀರಿನ ಜೊತೆ ಚೆಲ್ಲಾಟವಾಡದಿರಿ; ಮೇಷದಿಂದ ಕಟಕರಾಶಿವರೆಗಿನ ದಿನಭವಿಷ್ಯ

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ, ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (1st April 2024 Daily Horoscope).

ಏಪ್ರಿಲ್‌ 1ರ ದಿನಭವಿಷ್ಯ ಮೇಷದಿಂದ-ಕಟಕ ರಾಶಿವರೆಗೆ
ಏಪ್ರಿಲ್‌ 1ರ ದಿನಭವಿಷ್ಯ ಮೇಷದಿಂದ-ಕಟಕ ರಾಶಿವರೆಗೆ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (1st April 2024 Daily Horoscope).

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣಪಕ್ಷ, ಸೋಮವಾರ

ತಿಥಿ: ಸಪ್ತಮಿ ಬೆಳಿಗ್ಗೆ 4.22ರವರೆಗೂ ಇರುತ್ತದೆ. ಅನಂತರ ಅಷ್ಟಮಿ ಆರಂಭವಾಗಲಿದೆ.

ನಕ್ಷತ್ರ: ಮೂಲ ನಕ್ಷತ್ರವು ಸಂಜೆ 6.51 ರವರೆಗೂ ಇರುತ್ತದೆ. ಅನಂತರ ಪೂರ್ವಾಷಾಡ ನಕ್ಷತ್ರ ಆರಂಭವಾಗಲಿದೆ.

ಸೂರ್ಯೋದಯ: ಬೆಳಿಗ್ಗೆ 6.17

ಸೂರ್ಯಾಸ್ತ: ಸಂಜೆ 6.31

ರಾಹುಕಾಲ: ಬೆಳಿಗ್ಗೆ 7.30 ರಿಂದ ಬೆಳಿಗ್ಗೆ 9.00

ಮೇಷ

ಕುಟುಂಬದಲ್ಲಿನ ಬದಲಾವಣೆಗಳಿಂದ ಸಂತಸ ಉಂಟಾಗಲಿವೆ. ಶಿಸ್ತಿನಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಹಣಕಾಸಿನ ವಿಚಾರದಲ್ಲಿ ದುಡುಕದೆ ಯೋಚಿಸಿ ಮುಂದುವರೆಯುವಿರಿ. ನಂಬುಗೆಯ ವ್ಯಕ್ತಿಯೊಬ್ಬರಿಂದ ಕೆಲಸ ಕಾರ್ಯದಲ್ಲಿ ಅಡಚಣೆ ಉಂಟಾಗಬಹುದು. ಕುಟುಂಬಕ್ಕೆ ಸಂಬಂಧಿಸಿದ ಭೂವಿವಾದ ದೂರವಾಗಲಿದೆ. ಅತಿಥಿಗಳ ಆಗಮನದಿಂದ ಸಂತಸಗೊಳ್ಳುವಿರಿ. ಸಾಲದ ವ್ಯವಹಾರದಿಂದ ತೊಂದರೆಯಾಗುತ್ತದೆ, ಎಚ್ಚರವಿರಲಿ. ಮಕ್ಕಳ ವಿಚಾರದಲ್ಲಿ ಶುಭವರ್ತಮಾನ ದೊರೆಯಲಿದೆ. ಅನಿರೀಕ್ಷಿತ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿ. ಉದ್ಯೋಗದಲ್ಲಿನ ಬದಲಾವಣೆಗಳು ನಿಮ್ಮ ಪರವಾಗಿರುತ್ತದೆ.

ಪರಿಹಾರ: ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ: 3

ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ ಬಣ್ಣ

ವೃಷಭ

ಭವಿಷ್ಯದ ಯೋಚನೆ ಕಾಡುತ್ತಿರುತ್ತದೆ. ಪಾಲುದಾರಿಕೆಯ ವ್ಯವಹಾರದಲ್ಲಿ ಉತ್ತಮ ಲಾಭಾಂಶ ದೊರೆಯುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಎದುರಾಗದು. ಹಠದ ಗುಣದಿಂದ ಬಂಧು ಬಳಗದವರ ವಿರೋಧ ಎದುರಿಸುವಿರಿ. ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಮುನ್ನಡೆ ಇರುತ್ತದೆ. ಹೊಸ ವ್ಯಾಪಾರವನ್ನು ಆರಂಭಿಸುವ ಯೋಜನೆ ಮುಂದೆ ಹೋಗಲಿದೆ. ಕುಟುಂಬದ ಹಿರಿಯರ ಸಲಹೆಯನ್ನು ಪಾಲಿಸಿದಲ್ಲಿ ಯಾವುದೇ ತೊಂದರೆ ಎದುರಾಗದು. ಸಹನೆಯಿಂದ ವ್ಯವಹರಿಸಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವಂಶದ ಆಸ್ತಿಯ ವಿವಾದ ಕೋರ್ಟಿನ ಮೆಟ್ಟಿಲೇರುತ್ತದೆ. ಒಳ್ಳೆಯ ಕೆಲಸಗಳಿಗೆ ಹಣವನ್ನು ಖರ್ಚು ಮಾಡುವಿರಿ. ಅವಿವಾಹಿತರಿಗೆ ದೂರದ ಸಂಬಂಧಿಯ ಸಹಾಯದಿಂದ ವಿವಾಹ ನಿಶ್ಚಯವಾಗಲಿದೆ.

ಪರಿಹಾರ: ತಲೆಗೆ ಹಾಲ್ಲಿಟ್ಟು ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ: 6

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ಹಾಲಿನ ಬಣ್ಣ

ಮಿಥುನ

ಕುಟುಂಬದ ಸದಸ್ಯರಿಂದ ಹಣಕಾಸಿನ ಸಹಾಯ ದೊರೆಯುತ್ತದೆ. ಒಮ್ಮತದ ನಿರ್ಧಾರ ತೆಗೆದುಕೊಳ್ಳುವ ಕಾರಣ ಶಾಂತಿ ನೆಮ್ಮದಿ ಇರಲಿದೆ. ಉದ್ಯೋಗದ ವಿಚಾರದಲ್ಲಿ ಬೇರೆಯವರನ್ನು ಅವಲಂಬಿಸುವಿರಿ. ಹಣಕಾಸಿನ ವಿಷಯದಲ್ಲಿ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ವಿದ್ಯಾರ್ಥಿಗಳ ಜೀವನದಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡುಬರುತ್ತದೆ. ಸಣ್ಣ ಪ್ರಮಾಣದ ಕೈಗಾರಿಕೆಯನ್ನು ಆರಂಭಿಸುವಿರಿ. ಅವಿವಾಹಿತರಿಗೆ ಸಂಬಂಧಿಕರ ಜೊತೆಯಲ್ಲಿ ವಿವಾಹವಾಗುವ ಸಾಧ್ಯತೆಗಳಿವೆ. ನಿಮ್ಮಲ್ಲಿ ಹುದುಗಿರುವ ಪ್ರತಿಭಾ ಪ್ರದರ್ಶನಕ್ಕೆ ವಿಶೇಷವಾದ ಅವಕಾಶ ಪಡೆಯಲಿದ್ದಾರೆ. ಸಾಲದ ವ್ಯವಹಾರದಲ್ಲಿ ಪಾಲ್ಗೊಳ್ಳದಿರಿ. ಆರೋಗ್ಯದಲ್ಲಿ ಏರಿಳಿತವಿರುತ್ತದೆ. ಅತಿಯಾದ ಯೋಚನೆ ಮಾಡದಿರಿ.

ಪರಿಹಾರ: ಹಣೆಯಲ್ಲಿ ತಿಲಕವನ್ನು ಧರಿಸಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಹೊಗೆಯ ಬಣ್ಣ

ಕಟಕ

ದುಡುಕಿದಲ್ಲಿ ಹಣಕಾಸಿನ ವಿಚಾರದಲ್ಲಿ ತೊಂದರೆ ಎದುರಾಗಲಿದೆ. ಆರೋಗ್ಯದ ವಿಚಾರದಲ್ಲಿ ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ. ನೀರಿನ ಜೊತೆ ಚೆಲ್ಲಾಟವಾಡದಿರಿ. ಉದ್ಯೋಗದಲ್ಲಿ ಉನ್ನತ ಹುದ್ದೆ ದೊರೆಯುತ್ತದೆ. ಕ್ರಮೇಣ ಹಣಕಾಸಿನ ಪರಿಸ್ಥಿತಿಯಲ್ಲಿ ಸ್ಥಿರತೆ ಮೂಡುತ್ತದೆ. ಕುಟುಂಬದಲ್ಲಿ ಮಂಗಳಕಾರ್ಯವೊಂದು ನಡೆಯಲಿದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವ ಅವಕಾಶ ದೊರೆಯುತ್ತದೆ. ವಂಶದ ಆಸ್ತಿಯಲ್ಲಿ ನ್ಯಾಯಯುತ ಪಾಲು ದೊರೆಯುತ್ತದೆ. ಕಲುಷಿತ ಆಹಾರ ಸೇವನೆಯಿಂದ ಅರೋಗ್ಯದ ಸಮಸ್ಯೆ ಎದುರಾಗುತ್ತದೆ. ಸ್ವಂತ ವ್ಯಾಪಾರ ವ್ಯವಹಾರದ ಆರಂಭವನ್ನು ಮುಂದೂಡಬೇಕಾಗಿ ಬರುತ್ತದೆ. ಆತ್ಮೀಯರೇ ಶತ್ರವಿನಂತೆ ವರ್ತಿಸುತ್ತಾರೆ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ: 4

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ಆಕಾಶ ನೀಲಿ ಬಣ್ಣ

 

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).