Horoscope Today: ವಿವಾಹದ ಮಾತುಕತೆ ಯಶಸ್ವಿ, ಕುಟುಂಬದಲ್ಲಿ ಮಕ್ಕಳ ಕಾರಣ ವಾದ ವಿವಾದ; ಮೇ 1 ರ ರಾಶಿಫಲ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ವಿವಾಹದ ಮಾತುಕತೆ ಯಶಸ್ವಿ, ಕುಟುಂಬದಲ್ಲಿ ಮಕ್ಕಳ ಕಾರಣ ವಾದ ವಿವಾದ; ಮೇ 1 ರ ರಾಶಿಫಲ

Horoscope Today: ವಿವಾಹದ ಮಾತುಕತೆ ಯಶಸ್ವಿ, ಕುಟುಂಬದಲ್ಲಿ ಮಕ್ಕಳ ಕಾರಣ ವಾದ ವಿವಾದ; ಮೇ 1 ರ ರಾಶಿಫಲ

1 ಮೇ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (1st May 2024 Daily Horoscope).

ಮೇ 1 ರ ರಾಶಿಫಲ
ಮೇ 1 ರ ರಾಶಿಫಲ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈ ದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ.(1st May 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ಚೈತ್ರ ಮಾಸ-ಕೃಷ್ಣಪಕ್ಷ-ಬುಧವಾರ

ತಿಥಿ : ಅಷ್ಟಮಿ ರಾತ್ರಿ 12.44 ರವರೆಗೂ ಇದ್ದು ಆನಂತರ ನವಮಿ ಆರಂಭವಾಗುತ್ತದೆ.

ನಕ್ಷತ್ರ : ಶ್ರವಣ ನಕ್ಷತ್ರವು ರಾತ್ರಿ 12.17 ರವರೆಗೂ ಇದ್ದು ನಂತರ ಧನಿಷ್ಠ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 05.59

ಸೂರ್ಯಾಸ್ತ: ಸಂಜೆ 06.34

ರಾಹುಕಾಲ: 12.20 ರಿಂದ 01.54

ರಾಶಿಫಲ

ಧನಸ್ಸು

ಆರಂಭಿಸುವ ಕೆಲಸ ಕಾರ್ಯಗಳನ್ನು ಒತ್ತಡದಿಂದಲೇ ಮಾಡಬೇಕಾಗುತ್ತದೆ. ಅದೃಷ್ಟದಲ್ಲಿ ನಂಬಿಕೆ ಇಡದೆ ಸ್ವಂತ ಬುದ್ಧಿಶಕ್ತಿಯನ್ನು ಅವಲಂಬಿಸುವಿರಿ. ಸುಲಭವಾಗಿ ಸೋಲನ್ನು ಒಪ್ಪದೆ ಸತತ ಪ್ರಯತ್ನದಿಂದ ಯಶಸ್ಸು ಗಳಿಸುವಿರಿ. ಹಿರಿಯ ಸಹೋದರರಿಂದ ಹಣದ ಸಹಾಯ ದೊರೆಯುವುದು. ಕುಟುಂಬದಲ್ಲಿ ಮಕ್ಕಳ ಕಾರಣ ವಾದ ವಿವಾದ ಇರುತ್ತದೆ. ಉದ್ಯೋಗದಲ್ಲಿ ಯಾವುದೇ ನಿರೀಕ್ಷಿಸಿದ ಫಲಿತಾಂಶ ಬರದು. ವ್ಯಾಪಾರ ವ್ಯವಹಾರಗಳು ನಿಮ್ಮ ಇಚ್ಛೆಯಂತೆಯೇ ನಡೆಯುತ್ತದೆ. ಸೋದರಿ ಅಥವಾ ಮಗಳಿಗೆ ವಿವಾಹದ ಮಾತುಕತೆ ಯಶಸ್ವಿಯಾಗುತ್ತದೆ. ಕುಟುಂಬದ ಹೆಣ್ಣುಮಕ್ಕಳಿಗೆ ದುಬಾರಿ ಒಡವೆ ವಸ್ತ್ರಗಳನ್ನು ಕೊಡಿಸುವಿರಿ.

ಪರಿಹಾರ : ಬೆಲ್ಲದಿಂದ ಮಾಡಿದ ಆಹಾರವನ್ನು ಸೇವಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಮಣ್ಣಿನ

ಮಕರ

ಕುಟುಂಬದ ಹಿರಿಯರ ಆಸರೆ ನಿಮಗೆ ದೊರೆಯುತ್ತದೆ. ಕೆಲಸ ಕಾರ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುವಿರಿ. ನಿಮ್ಮ ಬಗ್ಗೆ ಕುಟುಬದ ಹಿರಿಯರು ಗಮನ ವಹಿಸುತ್ತಾರೆ. ಕುಟುಂಬದಲ್ಲಿ ಹಣಕಾಸಿನ ವಿಚಾರದಲ್ಲಿ ಬಿಗುವಿನ ವಾತಾವರಣವಿರುತ್ತದೆ. ಅನಿವಾರ್ಯವಾಗಿ ವಾಸವಿರುವ ಮನೆಯನ್ನು ಬದಲಾಯಿಸುವಿರಿ. ಸಮರ್ಪಣಾ ಮನೋಭಾವನೆಯಿಂದ ಉದ್ಯೋಗದಲ್ಲಿ ಉತ್ತಮ ಹೆಸರನ್ನು ಗಳಿಸುವಿರಿ. ಸ್ವಂತ ವ್ಯಾಪಾರ ವ್ಯವಹಾರವು ನಿರೀಕ್ಷಿತ ಮಟ್ಟದಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು ಯಶಸ್ಸಿನತ್ತ ನಡೆಯುತ್ತಾರೆ. ಕೈಲಿರುವ ಹಣವನ್ನು ಸುಲಭವಾಗಿ ಖರ್ಚು ಮಾಡುವುದಿಲ್ಲ. ಆರೋಗ್ಯದ ಬಗ್ಗೆ ಗಮನವಿರಲಿ. ಕೃಷಿ ಭೂಮಿಯನ್ನು ಕೊಳ್ಳುವ ಸಾಧ್ಯತೆ ಇದೆ. ಸಿದ್ಧ ಪುರುಷರನ್ನು ಭೇಟಿ ಮಾಡುವಿರಿ.

ಪರಿಹಾರ : ನೆರೆ ಹೊರೆಯ ಮಕ್ಕಳಿಗೆ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಕೆಂಪು

ಕುಂಭ

ತಪ್ಪು ನಿರ್ಧಾರಗಳಿಂದಾಗಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಲಿದೆ. ಮಾತುಕತೆಯಿಂದ ಬಂಧು ವರ್ಗದವರ ಮನ ಗೆಲ್ಲುವಿರಿ. ಉದ್ಯೋಗದಲ್ಲಿ ಬೇಸರದ ಸನ್ನಿವೇಶ ಎದುರಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಅನುಕೂಲ ದೊರೆಯುತ್ತದೆ. ಆರೋಗ್ಯದಲ್ಲಿ ಯಾವುದೇ ತೊಂದರೆ ಇರದು. ಜೀವನದಲ್ಲಿ ಎದುರಾಗುವ ಸಂಕಷ್ಟವನ್ನು ಧೈರ್ಯದಿಂದ ಎದುರಿಸಿ ಗೆಲ್ಲುವಿರಿ. ವಿದ್ಯಾರ್ಥಿಗಳಿಗೆ ಹಿನ್ನಡೆ ಲಭಿಸದು. ಪಾಲುಗಾರಿಕೆಯ ವ್ಯಾಪಾರ ವ್ಯವಹಾರದಲ್ಲಿ ಕ್ರಮೇಣ ಉತ್ತಮ ಆದಾಯ ದೊರೆಯುತ್ತದೆ. ಕೃಷಿಕರಿಗೆ ಉತ್ತಮ ಹಣ ಗಳಿಕೆ ಇರುತ್ತದೆ. ಧಾರ್ಮಿಕ ಕೇಂದ್ರದ ನಿರ್ವಹಣೆಯ ಜವಾಬ್ದಾರಿ ದೊರೆಯುತ್ತದೆ. ಏಕಾಂಗಿತನವನ್ನು ಇಷ್ಟ ಪಡುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಕಿತ್ತಳೆ

ಮೀನ

ನಿಮ್ಮ ಮಾತನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದು. ಆದರೂ ಮೌನವಾಗಿದ್ದು ಎಲ್ಲವನ್ನೂ ಗೆಲ್ಲುವಿರಿ. ಆದಾಯಕ್ಕೆ ಕೊರತೆ ಇರದು. ಆದರೆ ಸರಿ ಸಮವಾದ ಖರ್ಚು ವೆಚ್ಚಗಳು ಸದಾ ಇರುತ್ತವೆ. ಕುಟುಂಬದಲ್ಲಿ ಸ್ನೇಹಮಯ ವಾತಾವರಣ ಇರಲಿದೆ. ಮಕ್ಕಳಿಗೆ ಅಧಿಕಾರ ಯೋಗ ಪ್ರಾಪ್ತಿ ಇದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಎದುರಾಗದು. ಅಧಿಕಾರಿಯಾಗಿ ಬಡ್ತಿ ಪಡೆಯಬಹುದು. ಸ್ವಂತ ವ್ಯಾಪಾರ ವ್ಯವಹಾರಗಳು ಮಧ್ಯಮ ಮಟ್ಟದಲ್ಲಿ ಲಾಭಗಳಿಸುತ್ತವೆ. ವಿದ್ಯಾರ್ಥಿಗಳು ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ. ಆರೋಗ್ಯದಲ್ಲಿ ಸ್ಥಿರತೆ ಕಾಪಾಡಿ. ನೀಲಿ ಬಣ್ಣದ ಹೂಗಳನ್ನು ಧಾರ್ಮಿಕ ಕೇಂದ್ರಕ್ಕೆ ನೀಡಲಿದ್ದೀರಿ.

ಪರಿಹಾರ : ಇರುವೆಗಳಿಗೆ ಆಹಾರ ಧಾನ್ಯವನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ : ನೀಲಿ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.