ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಕುಟುಂಬದಿಂದ ದೂರ ಉಳಿದಿದ್ದ ವ್ಯಕ್ತಿಯೊಬ್ಬರು ಮರಳಿ ಬಂದು ಎಲ್ಲರ ಸಂತೋಷಕ್ಕೆ ಕಾರಣರಾಗಲಿದ್ದಾರೆ; ಏ. 20ರ ದಿನ ಭವಿಷ್ಯ

Horoscope Today: ಕುಟುಂಬದಿಂದ ದೂರ ಉಳಿದಿದ್ದ ವ್ಯಕ್ತಿಯೊಬ್ಬರು ಮರಳಿ ಬಂದು ಎಲ್ಲರ ಸಂತೋಷಕ್ಕೆ ಕಾರಣರಾಗಲಿದ್ದಾರೆ; ಏ. 20ರ ದಿನ ಭವಿಷ್ಯ

20 ಏಪ್ರಿಲ್‌ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (20th April 2024 Daily Horoscope).

ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ದಿನ ಭವಿಷ್ಯ
ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ದಿನ ಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (20th April 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ಚೈತ್ರ ಮಾಸ-ಶುಕ್ಲಪಕ್ಷ-ಶನಿವಾರ

ತಿಥಿ : ದ್ವಾದಶಿ ರಾತ್ರಿ 10.26 ರವರೆಗೂ ಇದ್ದು ನಂತರ ತ್ರಯೋದಶಿ ಆರಂಭವಾಗುತ್ತದೆ.

ನಕ್ಷತ್ರ : ಪುಬ್ಬ ನಕ್ಷತ್ರವು 02.10 ರವರೆಗೂ ಇರುತ್ತದೆ ನಂತರ ಉತ್ತರ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 06.04

ಸೂರ್ಯಾಸ್ತ: ಸಂಜೆ 06.32

ರಾಹುಕಾಲ : ಬೆಳಗ್ಗೆ 09.15 ರಿಂದ 10.49

ರಾಶಿಫಲ

ಸಿಂಹ

ಪ್ರತಿಯೊಂದು ಕೆಲಸಗಳಿಗೂ ಹೆಚ್ಚಿನ ಪ್ರಾಶಸ್ತ್ಯ ನೀಡುವಿರಿ. ಹೊಂದಾಣಿಕೆಯ ಗುಣ ಇರುತ್ತದೆ. ಕುಟುಂಬದಲ್ಲಿ ಶಾಂತಿಯ ವಾತಾವರಣ ನೆಲೆಸಿರುತ್ತದೆ. ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಪ್ರಯತ್ನಿಸಿ. ಆತ್ಮೀಯರ ಸಹಾಯದಿಂದ ವಿದೇಶಿ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಸ್ವಂತ ಮನೆ ಅಥವಾ ಭೂಮಿಯನ್ನು ಕೊಳ್ಳುವ ಯೋಚನೆ ಮಾಡುವಿರಿ. ಹಣಕಾಸಿನ ತೊಂದರೆ ಇರುವುದಿಲ್ಲ. ಕುಟುಂಬದ ಸದಸ್ಯರ ಜೊತೆ ಧಾರ್ಮಿಕ ಸ್ಥಳಕ್ಕೆ ತೆರಳುವಿರಿ. ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ಸದಾ ಕ್ರೀಯಾಶೀಲರಾಗಿರುತ್ತಾರೆ. ಜನಸೇವೆಯಲ್ಲಿ ನಿರತರಾಗಿರುವವರಿಗೆ ವಿಶೇಷ ಗೌರವ ಲಭಿಸುತ್ತದೆ. ಅನಿವಾರ್ಯವಾಗಿ ಬಂಧುವೊಬ್ಬರಿಗೆ ಹಣದ ಸಹಾಯ ಮಾಡುವಿರಿ.

ಪರಿಹಾರ : ಕೆಂಪು ಹೂವಿನ ಗಿಡಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ 1

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ : ಹಳದಿ

ಕನ್ಯಾ

ಕುಲ ಕಸುಬಿನಿಂದಾಗಿ ಕುಟುಂಬದ ಆದಾಯ ಹೆಚ್ಚುತ್ತದೆ. ದೈಹಿಕ ವ್ಯಾಯಾಮದಿಂದ ಆರೋಗ್ಯದಲ್ಲಿ ಸ್ಥಿರತೆ ಕಂಡುಬರುತ್ತದೆ. ಸ್ವಂತ ಕೆಲಸ ಕಾರ್ಯಗಳನ್ನು ನಿಗದಿತ ವೇಳೆಯಲ್ಲಿ ಪೂರ್ಣಗೊಳಿಸುವಿರಿ. ಮಕ್ಕಳ ಮಾತಿಗೆ ಮೊದಲ ಪ್ರಾಶಸ್ತ್ಯ ನೀಡುವಿರಿ. ಕುಟುಂಬದಲ್ಲಿ ಹಣಕಾಸಿನ ವಿಚಾರದಲ್ಲಿ ವಿವಾದ ಉಂಟಾಗುತ್ತದೆ. ತಂದೆಯವರ ಸಲಹೆಯಿಂದ ಸಮಸ್ಯೆಯೊಂದು ನಿವಾರಣೆ ಆಗುವುದು. ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ಉದ್ಯೋಗದಲ್ಲಿ ದುಡುಕಿನ ಮಾತುಕತೆ ಬೇಡ. ವಿದ್ಯಾರ್ಥಿಗಳಿಗೆ ಶುಭವಿದೆ. ಗಣ್ಯವ್ಯಕ್ತಿಯೊಬ್ಬರ ಸಹಾಯ ದೊರೆಯುತ್ತದೆ. ತಂದೆಯವರಿಗೆ ಅನಾವಶ್ಯಕ ಖರ್ಚು ವೆಚ್ಚಗಳಿರಲಿವೆ. ಒಲ್ಲದ ಮನಸ್ಸಿನಿಂದ ಕುಟುಂಬದ ಜವಾಬ್ದಾರಿ ಒಪ್ಪಿಕೊಳ್ಳುವಿರಿ.

ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ : ಹಸಿರು

ತುಲಾ

ತಂದೆಯ ಹಣಕಾಸಿನ ನಿರ್ವಹಣೆ ನಿಮ್ಮದಾಗಲಿದೆ. ಉದ್ಯೊಗದಲ್ಲಿ ಹಿರಿಯ ಅಧಿಕಾರಿಗಳ ಜೊತೆಯಲ್ಲಿ ವಾದ ವಿವಾದ ಇರಲಿವೆ. ಆತುರ ಪಡದೆ ಸಹನೆಯಿಂದ ವರ್ತಿಸಿದಲ್ಲಿ ಶುಭಫಲಗಳು ದೊರೆಯಲಿವೆ. ಸಾರಿಗೆ ಸಂಸ್ಥೆಯ ಜವಾಬ್ದಾರಿ ದೊರೆಯುತ್ತದೆ. ಕಷ್ಟಪಟ್ಟು ಮಾಡುವ ಕೆಲಸದಲ್ಲಿ ಆಸಕ್ತಿ ಇರದು. ಯಾರ ತೀರ್ಮಾನವನ್ನೂ ನಂಬುವುದಿಲ್ಲ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಚಾಡಿ ಮಾತನ್ನು ನಂಬದಿರಿ. ಕುಟುಂಬದಲ್ಲಿ ಸಮರ್ಪಣಾ ಮನೋಭಾವನೆ ಇರುತ್ತದೆ. ಭೂ ವಿವಾದದಲ್ಲಿ ಮಾತುಕತೆಯ ಮೂಲಕ ಹಿಡಿತ ಸಾಧಿಸುವಿರಿ. ಸೋದರಿಯ ವಿವಾಹದ ಜವಾಬ್ದಾರಿ ನಿಮ್ಮದಾಗಲಿದೆ. ಸಮಾದಲ್ಲಿ ಉನ್ನತ ಸ್ಥಾನ ಮಾನ ದೊರೆಯುತ್ತದೆ.

ಪರಿಹಾರ : ಕುಟುಂಬದ ಹಿರಿಯರಿಗೆ ಬೆಳ್ಳಿಯ ವಸ್ತುವನ್ನು ಉಡುಗೊರೆಯಾಗಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ನೀಲಿ

ವೃಶ್ಚಿಕ

ಮಕ್ಕಳ ಆರೋಗ್ಯದಲ್ಲಿ ತೊಂದರೆ ಇರಲಿದೆ. ಕುಟುಂಬದ ಭೂವ್ಯವಹಾರದಲ್ಲಿ ಅನಿರೀಕ್ಷಿತ ಲಾಭ ದೊರೆಯಲಿದೆ. ತಂದೆಗೆ ಪರಸ್ಥಳದಲ್ಲಿ ಉದ್ಯೋಗ ದೊರಕುತ್ತದೆ. ಹಣದ ಕೊರತೆ ನೀಗಿಸಲು ಸಣ್ಣ ಬಂಡವಾಳದ ವ್ಯಾಪಾರವನ್ನು ಆರಂಭಿಸುವಿರಿ. ಕಲುಷಿತ ಆಹಾರ ಸೇವನೆಯಿಂದ ಅನಾರೋಗ್ಯ ಬಹಳ ಕಾಡುತ್ತದೆ. ವಿದ್ಯಾರ್ಥಿಗಳು ತಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಪಡೆಯುತ್ತಾರೆ. ತಾಯಿಯವರಿಗೆ ಅನಾರೋಗ್ಯ ಇರುತ್ತದೆ. ನೀರಿನೊಂದಿಗೆ ಚೆಲ್ಲಾಟವಾಡದಿರಿ. ಮಕ್ಕಳ ಜೀವನದಲ್ಲಿ ಪ್ರಮುಖ ಘಟನೆಯೊಂದು ನಡೆಯಲಿದೆ. ಕಲಾವಿದರಿಗೆ ವಿನೂತನ ಅವಕಾಶ ದೊರೆಯಲಿದೆ. ಸಾಲದ ವ್ಯವಹಾರ ಮಾಡದಿರಿ. ಸೋದರನ ಸಹಾಯ ಸಹಕಾರ ದೊರೆಯುತ್ತದೆ. ತಾಯಿಯ ಆಶೀರ್ವಾದದಿಂದ ಯಶಸ್ಸು ಗಳಿಸುವಿರಿ.

ಪರಿಹಾರ : ಜೇನು ಸೇವಿಸಿ ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ನೇರಳೆ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).