ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನ್ಯಾಯಾಲಯದಲ್ಲಿರುವ ಹಳೆಯ ವಿವಾದಕ್ಕೆ ತೆರೆ, ಸಂಗಾತಿ ಸಹಾಯದಿಂದ ಆರ್ಥಿಕ ಸಮಸ್ಯೆಗೆ ಪರಿಹಾರ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಫಲ

ನ್ಯಾಯಾಲಯದಲ್ಲಿರುವ ಹಳೆಯ ವಿವಾದಕ್ಕೆ ತೆರೆ, ಸಂಗಾತಿ ಸಹಾಯದಿಂದ ಆರ್ಥಿಕ ಸಮಸ್ಯೆಗೆ ಪರಿಹಾರ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಫಲ

20 ಜೂನ್‌ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (20th June 2024 Daily Horoscope).

ನ್ಯಾಯಾಲಯದಲ್ಲಿರುವ ಹಳೆಯ ವಿವಾದಕ್ಕೆ ತೆರೆ, ಸಂಗಾತಿ ಸಹಾಯದಿಂದ ಆರ್ಥಿಕ ಸಮಸ್ಯೆಗೆ ಪರಿಹಾರ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಫಲ
ನ್ಯಾಯಾಲಯದಲ್ಲಿರುವ ಹಳೆಯ ವಿವಾದಕ್ಕೆ ತೆರೆ, ಸಂಗಾತಿ ಸಹಾಯದಿಂದ ಆರ್ಥಿಕ ಸಮಸ್ಯೆಗೆ ಪರಿಹಾರ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಫಲ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (20th June 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಶುಕ್ಲಪಕ್ಷ-ಗುರುವಾರ

ತಿಥಿ: ತ್ರಯೋದಶಿ ಬೆಳಗ್ಗೆ 06.13 ರವರೆಗೂ ಇದ್ದು ನಂತರ ಚತುರ್ದಶಿ ತಿಥಿ ಇರುತ್ತದೆ.

ನಕ್ಷತ್ರ : ಅನೂರಾಧ ನಕ್ಷತ್ರವು ಸಂಜೆ 05.22 ರವರೆಗೆ ಇದ್ದು ನಂತರ ಜ್ಯೇಷ್ಠ ನಕ್ಷತ್ರ ಆರಂಭವಾಗಲಿದೆ.

ಸೂರ್ಯೋದಯ: ಬೆಳಗ್ಗೆ05.53

ಸೂರ್ಯಾಸ್ತ: ಸಂಜೆ 06.48

ರಾಹುಕಾಲ: 02.01 ರಿಂದ 03.37

ರಾಶಿಫಲ

ಸಿಂಹ

ಮಂಗಳ ಕಾರ್ಯವೊಂದರ ಹಣಕಾಸು ನಿರ್ವಹಣೆಯ ಜವಾಬ್ದಾರಿ ದೊರೆಯುತ್ತದೆ. ಆಧುನಿಕತೆಯ ಸೋಗಿಗೆ ಮರುಳಾಗುವಿರಿ. ವಂಶದಲ್ಲಿನ ಹಿರಿಯನ ಸ್ಥಾನ ನಿಮ್ಮದಾಗಲಿದೆ. ಉದ್ಯೋಗದಲ್ಲಿ ಅಧಿಕಾರಿಗೆ ಸಮನಾದ ಸ್ಥಾನ ದೊರೆಯುತ್ತದೆ. ನಿಮ್ಮ ಮನಸ್ಸನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಮಕ್ಕಳಿಗೆ ವಿದೇಶಿ ಸಹಭಾಗಿತ್ವದ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ನಿಮ್ಮ ನಿಷ್ಠುರದ ಮಾತುಗಳಿಂದ ವಿವಾದವೊಂದು ಎದುರಾಗುತ್ತದೆ. ರಕ್ತ ದೋಷವುಳ್ಳವರು ಎಚ್ಚರಿಕೆ ವಹಿಸಿ. ಕುಟುಂಬದಲ್ಲಿ ಅಶಾಂತಿ ವಾತಾವರಣ ಇರುತ್ತದೆ. ವಿದ್ಯಾರ್ಥಿಗಳು ತಮ್ಮ ಗುರಿ ತಲುಪುವಲ್ಲಿ ಯಶಸ್ವಿಯಾಗುತ್ತಾರೆ. ಸಮಾಜದ ಲೋಪ ದೋಷಗಳನ್ನು ತಿದ್ದುವ ಪ್ರಯತ್ನ ಮಾಡುವಿರಿ.

ಪರಿಹಾರ : ಮನೆಯ ದೇವರ ಗುಡಿಯಲ್ಲಿ ತುಪ್ಪದ ದೀಪವನ್ನು ಹಚ್ಚಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ :4

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ಕೇಸರಿ

ಕನ್ಯಾ

ನಿಮಗೆ ಉತ್ತಮ ಆರೋಗ್ಯವಿರುತ್ತದೆ. ದಂಪತಿಗಳ ನಡುವೆ ಉತ್ತಮ ಅನುಬಂಧ ಇರುತ್ತದೆ. ಆಲಸ್ಯದಿಂದ ಹೊರ ಬರಲು ಕಿರುಪ್ರವಾಸಕ್ಕೆ ತೆರಳುವಿರಿ. ಏಕಾಗ್ರತೆಯಿಂದ ನಿಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು ಕ್ಷೇಮಕರ. ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಯೋಗದ ಮೊರೆ ಹೋಗುವಿರಿ. ಜೀವನದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಪ್ರೀತಿ ವಿಶ್ವಾಸದಿಂದ ಮಕ್ಕಳ ಮನ ಗೆಲ್ಲುವಿರಿ. ನಿಮ್ಮ ತಪ್ಪನ್ನು ಮರೆಮಾಚಿ ಬೇರೆಯವರ ತಪ್ಪನ್ನು ಟೀಕಿಸುವಿರಿ. ಕೆಲಸಕ್ಕಿಂತಲೂ ಮಾತು ಹೆಚ್ಚಾಗುತ್ತದೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಉತ್ತಮ ಬದಲಾವಣೆಗಳು ಕಂಡು ಬರಲಿವೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ವಿಫಲರಾಗುವಿರಿ.

ಮಧ್ಯಮ ಪರಿಹಾರ : ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ :7

ಅಷ್ಟದ ದಿಕ್ಕು ದಕ್ಷಿಣ

ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ

ತುಲಾ

ಆತುರದಿಂದ ತಪ್ಪು ದಾರಿಯಲ್ಲಿ ನಡೆಯುವಿರಿ. ನ್ಯಾಯಾಲಯದಲ್ಲಿರುವ ಹಳೆಯ ವಿವಾದವೊಂದು ಕೊನೆಗೊಳ್ಳುತ್ತದೆ. ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೆ ಬಡ್ತಿ ದೊರೆಯುತ್ತದೆ. ನಿಮ್ಮ ಕ್ರಿಯಾಶೀಲ ವ್ಯಕ್ತಿತ್ವ ಎಲ್ಲರ ಮನಗೆಲ್ಲುತ್ತದೆ. ಹೊಸ ಅವಕಾಶಗಳನ್ನು ಎದುರು ನೋಡುವಿರಿ. ವ್ಯಾಪಾರ ವ್ಯವಹಾರದಲ್ಲಿ ಬಂದು ಬಳಗದವರ ಸಹಾಯ ಸಹಕಾರ ದೊರೆಯುತ್ತದೆ. ಆತಂಕವಿದ್ದರೂ ವಿಧ್ಯಾಭ್ಯಾಸದಲ್ಲಿ ಸದಾ ಮುಂದಿರುವಿರಿ. ಆತ್ಮೀಯರ ಭೂವಿವಾದವನ್ನು ಮಾತುಕತೆಯ ಮೂಲಕ ಪರಿಹರಿಸುವಿರಿ. ಕವಿಗಳು ಮತ್ತು ಲೇಖಕರಿಗೆ ಉನ್ನತ ಗೌರವ ದೊರೆಯುತ್ತದೆ. ಧಾರ್ಮಿಕ ಯಾತ್ರೆ ಮಾಡುವವರಿಗೆ ಹಣದ ಸಹಾಯ ಮಾಡುವಿರಿ. ಕೈಕಾಲುಗಳಲ್ಲಿ ನೋವಿರುತ್ತದೆ.

ಪರಿಹಾರ : ತಲೆಗೆ ಹಾಲು ಹಚ್ಚಿ ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿರಿ

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ಕೆಂಪು

ವೃಶ್ಚಿಕ

ಸಂಗಾತಿಯ ಸಹಾಯದಿಂದ ಹಣದ ಮುಗ್ಗಟ್ಟು ಕಡಿಮೆ ಆಗಲಿದೆ. ಆರಂಭಿಸಿದ ಕೆಲಸ ಕಾರ್ಯಗಳು ಅಡಚಣೆ ಇಲ್ಲದೆ ನಡೆಯಲಿದೆ. ವಿಶ್ರಾಂತಿ ಪಡೆಯಲು ಸಾಧ್ಯವಾಗುವುದಿಲ್ಲ. ನಿರೀಕ್ಷೆಗೂ ಮೀರಿದ ಖರ್ಚು ಆತಂಕವನ್ನು ಸೃಷ್ಠಿಸುತ್ತದೆ. ಅಜೀರ್ಣದ ತೊಂದರೆ ಇರುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಇರದು. ಮುಂಗೋಪ ಕಡಿಮೆ ಮಾಡಿಕೊಳ್ಳಿ. ವಿದ್ಯಾರ್ಥಿಗಳಿಗೆ ವಿದೇಶಕ್ಕೆ ತೆರಳುವ ಅವಕಾಶ ದೊರೆಯುತ್ತದೆ. ನವ ದಂಪತಿಗಳಿಗೆ ಶುಭಸುದ್ಧಿಯೊಂದು ಬರಲಿದೆ. ಹೊಸ ವ್ಯಾಪಾರ ವಹಿವಾಟನ್ನು ಆರಂಭಿಸಲು ಕಾರ್ಯ ಯೋಜನೆ ರೂಪಿಸುವಿರಿ. ಪಾಲುದಾರಿಕೆಯ ವ್ಯಾಪಾರವಿದ್ದಲ್ಲಿ ಉತ್ತಮ ಲಾಭಾಂಶ ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ದುಡುಕಿನ ನಿರ್ಧಾರ ಬೇಡ.

ಪರಿಹಾರ : ಹಣೆಯಲ್ಲಿ ತಿಲಕ ಧರಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.