Horoscope Today: ನಿಮ್ಮ ಮಾತಿನಿಂದ ಸಂಗಾತಿಗೆ ಬೇಸರ, ವೈಭವದ ಜೀವನ; ಸಿಂಹದಿಂದ ವೃಶ್ಚಿಕ ರಾಶಿವರೆಗಿನ ದಿನಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ನಿಮ್ಮ ಮಾತಿನಿಂದ ಸಂಗಾತಿಗೆ ಬೇಸರ, ವೈಭವದ ಜೀವನ; ಸಿಂಹದಿಂದ ವೃಶ್ಚಿಕ ರಾಶಿವರೆಗಿನ ದಿನಭವಿಷ್ಯ

Horoscope Today: ನಿಮ್ಮ ಮಾತಿನಿಂದ ಸಂಗಾತಿಗೆ ಬೇಸರ, ವೈಭವದ ಜೀವನ; ಸಿಂಹದಿಂದ ವೃಶ್ಚಿಕ ರಾಶಿವರೆಗಿನ ದಿನಭವಿಷ್ಯ

ಫೆಬ್ರವರಿ 21, ಬುಧವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (21 February 2024 Daily Horoscope).

ಫೆಬ್ರವರಿ 21ರ ದಿನಭವಿಷ್ಯ
ಫೆಬ್ರವರಿ 21ರ ದಿನಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ( February 21 2024 Daily Horoscope).

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಶುಕ್ಲಪಕ್ಷ, ಬುಧವಾರ

ತಿಥಿ : ದ್ವಾದಶಿ ತಿಥಿಯು ಹಗಲು.12.23 ರವರೆಗು ಇದ್ದು ಆನಂತರ ತ್ರಯೋದಶಿ ಆರಂಭವಾಗುತ್ತದೆ.

ನಕ್ಷತ್ರ : ಪುನರ್ವಸು ನಕ್ಷತ್ರವು ಹ.03.19 ವರೆಗು ಇರುತ್ತದೆ. ಆನಂತರ ಪುಷ್ಯ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆ.06.43

ಸೂರ್ಯಾಸ್ತ: ಸ.06.23

ರಾಹುಕಾಲ : ಮ. 12.00 ರಿಂದ ಮ. 01.30

ರಾಶಿ ಫಲಗಳು

ಸಿಂಹ

ಆತ್ಮವಿಶ್ವಾಸದಿಂದ ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸುವಿರಿ. ಉದ್ಯೋಗದಲ್ಲಿ ಬಡ್ತಿ ದೊರವ ಸೂಚನೆ ಇದೆ. ಎಲ್ಲರನ್ನೂ ಗೌರವಿಸುವ ಗುಣ ನಿಮ್ಮನ್ನು ಜಯದ ಹಾದಿಯಲ್ಲಿ ನಡೆಸುತ್ತದೆ. ಬಳಿ ಇರುವ ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡುವಿರಿ. ಕೈಹಿಡಿದ ಕೆಲಸ ಕಾರ್ಯಗಳು ಪೂರ್ಣಗೊಳ್ಳುವವರೆಗು ವಿಶ್ರಾಂತಿಯನ್ನೂ ಪಡೆಯುವುದಿಲ್ಲ. ಜನಸೇವೆ ಮಾಡುವ ಆಸೆ ಇರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಸಂತೃಪ್ತಿದಾಯಕ ಬೆಳವಣಿಗೆ ಕಂಡುಬರುತ್ತದೆ. ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿಶೇಷವಾದ ಸ್ಥಾನ ಗಳಿಸುತ್ತಾರೆ. ನಿಮ್ಮ ಮಾತಿನಿಂದ ಸಂಗಾತಿಗೆ ಬೇಸರ ಉಂಟಾಗಬಹುದು. ನಿಮ್ಮ ಊಹೆಯಂತೆ ಕೆಲವು ವಿಚಾರಗಳು ಇಂದು ನಿಜವಾಗಲಿವೆ.

ಪರಿಹಾರ : ಸಾಧು ಸಂತರ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ :9

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ

ಕನ್ಯಾ

ಬೇರೆಯವರ ಕೆಲಸ ಕಾರ್ಯಗಳನ್ನು ಟೀಕಿಸುವುದರಲ್ಲಿ ಮಗ್ನರಾಗುವಿರಿ. ನಿಮ್ಮ ಸೋದರನ ವಿವಾಹ ನಡೆಯಲು ಸಹಾಯ ಮಾಡುವಿರಿ. ಕಲಾವಿದರಿಗೆ ಸವಾಲೆನಿಸುವ ಅವಕಾಶಗಳು ದೊರೆಯಲಿವೆ. ವೈಭವಪೂರ್ಣ ಗೃಹಾಲಂಕಾರದ ವಸ್ತುಗಳನ್ನು ಕೊಳ್ಳುವಿರಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯುವುದಿಲ್ಲ. ವ್ಯಾಪಾರ ವ್ಯವಹಾರದಲ್ಲಿ ಸ್ಥಿರವಾದ ಲಾಭವಿರುವುದಿಲ್ಲ. ಭೂ ವಿವಾದವೊಂದನ್ನು ಎದುರಿಸಬೇಕಾಗುತ್ತದೆ. ದುಡುಕಿನಿಂದ ಯಾವುದೇ ತೀರ್ಮಾನ ಕೈಗೊಳ್ಳದಿರಿ. ಕುಟುಂಬದ ವಿವಾದವೊಂದು ಪರಿಹಾರವಾಗುವುದು. ಕುಟುಂಬದ ಹಿರಿಯರಿಗೆ ವಂಶದ ಆಸ್ತಿಯಲ್ಲಿ ಸಮಪಾಲು ದೊರೆಯಲಿದೆ. ಹೆಣ್ಣುಮಕ್ಕಳಿಗೆ ವಿಶೇಷವಾದ ಅನುಕೂಲತೆಗಳಿವೆ. ಬಂಧುವೊಬ್ಬರಿಗೆ ಹಣದ ಸಹಾಯ ಮಾಡುವಿರಿ.

ಪರಿಹಾರ : ಬೇವಿನ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸುವುದು

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಹಳದಿ ಬಣ್ಣ

ತುಲಾ

ಆತ್ಮವಿಶ್ವಾಸದ ಕೊರತೆ ಕಂಡುಬರುತ್ತದೆ. ಕುಟುಂಬಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳು ಆತಂತಕದ ಮಧ್ಯೆ ಯಶಸ್ವಿಯಾಗುತ್ತದೆ. ಬಿಡುವಿನ ಸಮಯದಲ್ಲಿ ಕುಟುಂಬದ ಸದಸ್ಯರ ಜೊತೆಯಲ್ಲಿ ಕಳೆಯುವಿರಿ. ಉದ್ಯೋಗದಲ್ಲಿ ಅನುಕೂಲಕರ ಪರಿಸ್ಥಿತಿಯು ನಿರ್ಮಾಣವಾಗಲಿದೆ. ನಕಾರಾತ್ಮಕ ಸನ್ನಿವೇಶವನ್ನು ನಿಮಗೆ ಅನುಕೂಲವಾಗುವಂತೆ ಪರಿವರ್ತಿಸಿಕೊಳ್ಳ ಬಲ್ಲಿರಿ. ವ್ಯಾಪಾರ ವ್ಯವಹಾರದಲ್ಲಿ ಬುದ್ಧಿವಂತಿಕೆಯ ಮಾತುಕತೆ ಎಲ್ಲರೂ ಸೋಲುವಂತೆ ಮಾಡುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ವಿದ್ಯಾರ್ಥಿಗಳು ಶುಭಫಲಗಳನ್ನು ನಿರೀಕ್ಷಿಸಬಹುದು. ವೈಭವದ ಜೀವನ ನಡೆಸುವಿರಿ. ಕುಟುಂಬದ ಹಣಕಾಸಿನ ವಿವಾದವೊಂದು ಸುಖಾಂತ್ಯಗೊಳ್ಳುತ್ತದೆ. ಪ್ರವಾಸಕ್ಕಾಗಿ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ.

ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಹಸಿರು ಬಣ್ಣ

ವೃಶ್ಚಿಕ

ಕುಟುಂಬದಲ್ಲಿ ಸಂಧಿಗ್ಧ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಮೌನವನ್ನು ತಾಳುವಿರಿ. ಉದ್ಯೋಗದಲ್ಲಿ ನಿರೀಕ್ಷಿತ ಸ್ಥಾನಮಾನ ದೊರೆಯಲಿದೆ. ಮಾರಾಟ ಪ್ರತಿನಿಧಿಗಳಿಗೆ ವೇಶೇಷವಾದ ಆದಾಯ ದೊರೆಯುತ್ತದೆ. ಸೋದರಿಯ ಜೊತೆಯಲ್ಲಿ ಪಾಲುಗಾರಿಕೆ ವ್ಯಾಪಾರವನ್ನು ಆರಂಭಿಸುವ ಯೋಚನೆ ಇರುತ್ತದೆ. ದೀರ್ಘಕಾಲ ಕಾಡುವ ಅನಾರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸದ ಕೊರತೆ ಇರುತ್ತದೆ. ವೃತ್ತಿಜೀವನದಲ್ಲಿ ಅಸೂಯೆ ಪಡುವ ಜನರಿರುತ್ತಾರೆ . ನಿಮ್ಮ ವೃತ್ತಿಯ ಆಂತರಿಕ ರಹಸ್ಯವನ್ನು ಯಾರಿಗೂ ತಿಳಿಸದಿರಿ. ಒತ್ತಡಕ್ಕೆ ಮಣಿದು ವೃತ್ತಿಯನ್ನು ಬದಲಾಯಿಸುವಿರಿ. ಅನಿರೀಕ್ಷಿತ ಧನಾಗಮನವಿದೆ. ಆತ್ಮೀಯರಿಗೆ ಧನಸಹಾಯ ಮಾಡುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಅಕ್ಕಿ ಬೆಳೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ನೀಲಿ ಬಣ್ಣ

----------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.