ದಾಂಪತ್ಯ ಜೀವನದಲ್ಲಿ ಬದಲಾವಣೆ ಉಂಟಾಗಲಿದೆ, ಸೋದರರೊಂದಿಗೆ ಪಾಲುದಾರಿಕೆ ವ್ಯಾಪಾರ ಆರಂಭಿಸುವಿರಿ; ಜೂ 21ರ ರಾಶಿಫಲ
21 ಜೂನ್ 2024ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ, ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (21 June 2024 Daily Horoscope).
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (21 June 2024 Daily Horoscope).
ಇಂದಿನ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಶುಕ್ಲಪಕ್ಷ-ಶುಕ್ರವಾರ
ತಿಥಿ : ಚತುರ್ದಶಿ ಬೆಳಗ್ಗೆ 06.32 ರವರೆಗೂ ಇದ್ದು ನಂತರ ಹುಣ್ಣಿಮೆ ಆರಂಭವಾಗುತ್ತದೆ.
ನಕ್ಷತ್ರ : ಜ್ಯೇಷ್ಠ ನಕ್ಷತ್ರವು ಸಂಜೆ 06.08 ರವರೆಗೆ ಇದ್ದು ನಂತರ ಮೂಲ ನಕ್ಷತ್ರ ಆರಂಭವಾಗಲಿದೆ.
ಸೂರ್ಯೋದಯ ಬೆಳಗ್ಗೆ : 05.53
ಸೂರ್ಯಾಸ್ತ: ಸಂಜೆ 06.48
ರಾಹುಕಾಲ: 10.48 ರಿಂದ 12.24
ರಾಶಿಫಲ
ಮೇಷ
ಕುಟುಂಬದ ಒಗ್ಗಟ್ಟನ್ನು ಹಾಳು ಮಾಡಲು ಕೆಲವರು ಪ್ರಯತ್ನಿಸುತ್ತಾರೆ. ನಿಮ್ಮ ಅನುಮತಿ ಇಲ್ಲದೆ ಕುಟುಂಬದಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಆತ್ಮೀಯರಿಂದ ಹಣದ ಸಹಾಯ ದೊರೆಯುತ್ತದೆ. ನಿಮ್ಮ ಮನಸ್ಸಿಗೆ ತೋಚಿದ್ದನ್ನು ಮಾಡುವಿರಿ. ಇದರಿಂದ ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಉಂಟಾಗುತ್ತದೆ. ಹಣಕಾಸಿನ ತೊಂದರೆ ಇರುವುದಿಲ್ಲ. ಅನಾರೋಗ್ಯದ ಕಾರಣ ತೂಕ ಕಡಿಮೆಯಾಗುತ್ತದೆ. ಸೋದರದ ಜೊತೆ ಉತ್ತಮ ಭಾಂದವ್ಯವಿರುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಕಷ್ಟವೆನಿಸಿದರೂ ಹಣ ಉಳಿತಾಯ ಮಾಡುವಿರಿ. ಸಂತೋಷದಿಂದ ಮಕ್ಕಳೊಂದಿಗೆ ವೇಳೆ ಕಳೆಯುವಿರಿ. ನಿಮ್ಮಲ್ಲಿರುವ ವಿಶೇಷ ಬುದ್ಧಿವಂತಿಕೆ ಎಲ್ಲರಲ್ಲೂ ಆಶ್ಚರ್ಯ ಉಂಟು ಮಾಡುತ್ತದೆ. ಆರಂಭಿಸಿದ ಕೆಲಸ ಕಾರ್ಯದಲ್ಲಿ ಯಶಸ್ಸು ಗಳಿಸುವಿರಿ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ.
ಅದೃಷ್ಟದ ಸಂಖ್ಯೆ : 2
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ನೇರಳೆ
ವೃಷಭ
ಆತ್ಮೀಯರ ಕೆಲಸ ಕಾರ್ಯಗಳಲ್ಲಿ ನೆರವಾಗುವಿರಿ. ಯೋಚಿಸದೆ ಇರುವ ವಿಚಾರವನ್ನು ನೇರವಾಗಿ ನುಡಿಯುವಿರಿ. ನಿಮ್ಮ ನೇರ ನಡೆ ನುಡಿಯಿಂದ ಬಿಗುವಿನ ಸನ್ನಿವೇಶ ಎದುರಾಗುತ್ತದೆ. ನಿಮ್ಮ ವಿರೋಧಿಗಳು ಸಹ ನಿಮಗೆ ಸಹಾಯ ಮಾಡುತ್ತಾರೆ. ಕುಟುಂಬದ ಒಟ್ಟಾರೆ ವರಮಾನದಲ್ಲಿ ಪ್ರಗತಿ ಕಂಡುಬರುತ್ತದೆ. ಅಧಿಕಾರಿಗಳಾದಲ್ಲಿ ನಿಮಗೆ ಸಹ ನೌಕರರ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುತ್ತಾರೆ. ಅನಿರೀಕ್ಷಿತ ಧನಲಾಭವಿದೆ. ಸೋದರರು ನಿಮ್ಮೊಂದಿಗೆ ವ್ಯಾಪಾರವೊಂದನ್ನು ಆರಂಭಿಸಲಿದ್ದಾರೆ. ದಂಪತಿಗಳ ನಡುವೆ ಅನಾವಶ್ಯಕ ವಾದ ವಿವಾದ ಎದುರಾಗಲಿದೆ. ಗೃಹಿಣಿಯರು ತಮಗೆ ಇಷ್ಟವಾದ ಒಡವೆ ವಸ್ತ್ರಗಳನ್ನು ಕೊಳ್ಳುತ್ತಾರೆ.
ಪರಿಹಾರ : ಧಾರ್ಮಿಕ ಕೇಂದ್ರಗಳಿಗೆ ಹಾಲು ಮೊಸರು ನೀಡಿ ದಿನದ ಕೆಲಸ ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 5
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ಗುಲಾಬಿ ಬಣ್ಣ
ಮಿಥುನ
ಹಣದ ಕೊರತೆ ಉಂಟಾಗುವುದಿಲ್ಲ. ಚಿಕ್ಕ ಮಕ್ಕಳ ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತದೆ. ಅನಾವಶ್ಯಕವಾಗಿ ಮಾತನಾಡುವುದನ್ನು ಇಷ್ಟಪಡುವುದಿಲ್ಲ. ಎದುರಾಗುವ ತೊಂದರೆಯಿಂದ ಪಾರಾಗುವಿರಿ. ನೀವು ಮಾಡುವ ಕೆಲಸ ಕಾರ್ಯಗಳಿಂದ ಯಾರಿಗೂ ತೊಂದರೆ ಉಂಟಾಗುವುದಿಲ್ಲ. ನಿರುದ್ಯೋಗಿಗಳಿಗೆ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ಲಭಿಸುತ್ತದೆ. ಕುಟುಂಬದ ಸದಸ್ಯರ ಜೊತೆ ಸಂತೋಷದಿಂದ ದಿನ ಕಳೆಯುವಿರಿ. ನಿಮ್ಮ ಆತ್ಮ ಗೌರವವನ್ನು ಕಾಪಾಡಿಕೊಳ್ಳುವಿರಿ. ದೈಹಿಕವಾಗಿ ಸಬಲರಾಗುವಿರಿ. ಬೇಗನೆ ಸಹನೆ ಕಳೆದುಕೊಂಡು ಉದ್ವೇಗದಿಂದ ನಡೆದುಕೊಳ್ಳುವಿರಿ. ನಿಮ್ಮ ಸುಖ ಸಂತೋಷಕ್ಕೆ ಅಡ್ಡಿಯಾಗುವ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ. ಗಾಯಕರಿಗೆ ಒಳ್ಳೆ ಅವಕಾಶ ದೊರೆಯುತ್ತದೆ.
ಪರಿಹಾರ : ಗೋಶಾಲೆಗೆ ಧನಸಹಾಯ ಮಾಡಿದ ನಂತರ ದಿನದ ಕೆಲಸಗಳನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಬಿಳಿ ಬಣ್ಣ
ಕಟಕ
ಮಾನಸಿಕ ನೆಮ್ಮದಿ ಇರುವುದರಿಂದ ಸುಖ ಜೀವನ ನಡೆಸುವಿರಿ. ನಿಮ್ಮ ಎಣಿಕೆಯಂತೆ ದಿನದ ಕೆಲಸ ಕಾರ್ಯಗಳು ಸಾಗಲಿವೆ. ದಾಂಪತ್ಯ ಜೀವನದಲ್ಲಿ ಧನಾತ್ಮಕ ಬದಲಾವಣೆ ಕಂಡುಬರುತ್ತದೆ. ಉತ್ತಮ ಆದಾಯ ಇರುತ್ತದೆ. ಸಂತಾನ ಲಾಭವಿದೆ. ಮಕ್ಕಳಿಗೆ ಸಾಹಸದ ಗುಣ ಧರ್ಮ ಇರುತ್ತದೆ. ಎದುರಾಗುವ ಅಪಾಯವನ್ನು ಲೆಕ್ಕಿಸದೆ ತಮ್ಮದೇ ಹಾದಿಯಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಸೋಲಿನ ಸಮಯದಲ್ಲಿ ಸಿಡುಕುತನದಿಂದ ವರ್ತಿಸುವಿರಿ. ಬಂದು ಬಳಗದವರಿಂದ ಯಾವುದೇ ರೀತಿಯ ಸಹಾಯ ದೊರೆಯುವುದಿಲ್ಲ. ಸೋದರ ಮಾವನ ಸಲಹೆ ಸೂಚನೆಗಳು ನಿಮ್ಮ ಕಷ್ಟಗಳನ್ನು ಕಡಿಮೆ ಮಾಡುತ್ತವೆ. ಅತಿಯಾದ ಆತುರದಿಂದ ಯಾವುದೇ ತೀರ್ಮಾನ ತೆಗೆದುಕೊಳ್ಳದಿರಿ.
ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಬೂದು
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
