Horoscope Today: ದಂಪತಿಗಳ ನಡುವೆ ಅನಾವಶ್ಯಕ ವಿರಸ, ರಕ್ತದೊತ್ತಡ ಸಮಸ್ಯೆ ಇದ್ದರೆ ಎಚ್ಚರ ವಹಿಸಿ; ಮೇಷದಿಂದ ಕಟಕರಾಶಿವರೆಗಿನ ದಿನಭವಿಷ್ಯ
22 ಏಪ್ರಿಲ್ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ, ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (22nd April 2024 Daily Horoscope).

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (22nd April 2024 Daily Horoscope).
ಇಂದಿನ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ಸೋಮವಾರ
ತಿಥಿ: ಚತುರ್ದಶಿ ರಾತ್ರಿ 2.24 ರವರೆಗೂ ಇರುತ್ತದೆ. ಅನಂತರ ಹುಣ್ಣಿಮೆ ಆರಂಭವಾಗುತ್ತದೆ.
ನಕ್ಷತ್ರ: ಹಸ್ತ ನಕ್ಷತ್ರವು ಸಂಜೆ 7.19 ರವರೆಗೂ ಇರುತ್ತದೆ. ಅನಂತರ ಚಿತ್ತಾ ನಕ್ಷತ್ರವು ಆರಂಭವಾಗುತ್ತದೆ.
ಸೂರ್ಯೋದಯ: ಬೆಳಿಗ್ಗೆ 6.04
ಸೂರ್ಯಾಸ್ತ: ಸಂಜೆ 6.32
ರಾಹುಕಾಲ: ಬೆಳಿಗ್ಗೆ 7.41 ರಿಂದ ಬೆಳಿಗ್ಗೆ 9.14
ಮೇಷ
ನಿಮ್ಮ ಪ್ರಯತ್ನದಿಂದಾಗಿ ತಾಯಿಯವರ ಕಷ್ಟವೊಂದು ದೂರವಾಗಲಿದೆ. ಸುಲಭವಾಗಿ ಯಾರನ್ನೂ ನಂಬುವುದಿಲ್ಲ. ಸಂದಿಗ್ದದ ಪರಿಸ್ಠಿತಿಯಲ್ಲೂ ಶಾಂತಿಯಿಂದ ವರ್ತಿಸುವಿರಿ. ದಂಪತಿಗಳ ನಡುವೆ ಅನಾವಶ್ಯಕ ವಿರಸವಿರುತ್ತದೆ. ನಿಮ್ಮ ಸೋದರಿಯ ಮಗಳ ವಿವಾಹಕ್ಕೆ ಸಹಾಯ ಮಾಡುವಿರಿ. ಕುಟುಂಬದ ಹಿರಿಯರು ನಡೆಸುವ ವ್ಯಾಪಾರದಲ್ಲಿ ಸಹಪಾಲು ಪಡೆಯುವಿರಿ. ಸರ್ಕಾರದ ಅನುದಾನದಲ್ಲಿ ವ್ಯಾಪಾರವೊಂದನ್ನು ಆರಂಭಿಸುವಿರಿ. ಮಕ್ಕಳಿಗೆ ಸಂಬಂಧಿಸಿದಂತೆ ಸಿಹಿ ಸುದ್ದಿಯೊಂದು ಬರಲಿದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಸ್ತ್ರೀಯರು ವಿವಾದವೊಂದನ್ನು ಎದುರಿಸುವರು. ಬಿಡುವಿಲ್ಲದ ದುಡಿಮೆಯಿಂದ ನೆಮ್ಮದಿ ಕಡಿಮೆ ಆಗಲಿದೆ. ರಾಜಕೀಯದಲ್ಲಿದ್ದಲ್ಲಿ ನಿಮಗೆ ಉನ್ನತ ಸ್ಥಾನ ದೊರೆಯುತ್ತದೆ.
ಪರಿಹಾರ: ಪೂರ್ವಿಕರ ಮನೆಯಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಿ ದಿನದ ಕೆಲಸ ಆರಂಭಿಸಿ.
ಅದೃಷ್ಟದ ಸಂಖ್ಯೆ: 12
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ
ವೃಷಭ
ಆದಾಯಕ್ಕೆ ಮೀರಿದ ಖರ್ಚು ನಿಮ್ಮ ಚಿಂತೆ ಕಾರಣವಾಗಲಿದೆ. ಮಾಡದ ತಪ್ಪಿಗೆ ಉದ್ಯೋಗ ಬದಲಿಸುವ ತೀರ್ಮಾನ ಮಾಡುವಿರಿ. ಕೆಲಸ ಕಾರ್ಯಗಳಲ್ಲಿ ಆಸಕ್ತಿ ಕಳೆದುಕೊಳ್ಳುವಿರಿ. ಅತಿಯಾದ ಆತ್ಮವಿಶ್ವಾಸ ಅಪಜಯಕ್ಕೆ ಕಾರಣವಾಗಲಿದೆ. ಆತ್ಮೀಯರ ಸಲಹೆ ಸೂಚನೆಗಳನ್ನು ಪಾಲಿಸಲು ಪ್ರಯತ್ನಿಸಿ. ನಿಮ್ಮಲ್ಲಿನ ಭಯದ ಗುಣ ಮಾನಸಿಕ ಒತ್ತಡಕ್ಕೆ ಕಾರಣವಾಗಲಿದೆ. ಮನದಲ್ಲಿ ವೈರಾಗ್ಯ ಭಾವನೆ ಮೂಡುತ್ತದೆ. ವಿದ್ಯಾರ್ಥಿಗಳಿಗೆ ಯಾವುದೇ ಆತಂಕ ಇರುವುದಿಲ್ಲ. ಭೂವಿವಾದವೊಂದು ಮಾತುಕತೆಯಿಂದ ಕೊನೆಗೊಳ್ಳಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಕಡಿಮೆ ವರಮಾನ ಇರುತ್ತದೆ. ಜನಸೇವೆಯ ಹಂಬಲ ಈಡೇರುತ್ತದೆ. ಸಾಕು ಪ್ರಾಣಿಗಳಿಗೆ ಆಹಾರದ ವ್ಯವಸ್ಥೆ ಕಲ್ಪಿಸುವಿರಿ.
ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ದೀಪದ ಎಣ್ಣೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ: 3
ಅದೃಷ್ಟದ ದಿಕ್ಕು: ಈಶಾನ್ಯ
ಅದೃಷ್ಟದ ಬಣ್ಣ: ಹಳದಿ ಬಣ್ಣ
ಮಿಥುನ
ನಿಮ್ಮಲ್ಲಿನ ಒಳ್ಳೆಯತನವನ್ನು ದುರ್ಬಳಕೆ ಮಾಡಿಕೊಳ್ಳುವ ಜನರನ್ನು ಗಮನಿಸಿ. ರಕ್ತದ ಒತ್ತಡದಿಂದ ಬಳಲುತ್ತಿರುವವರು ಎಚ್ಚರಿಕೆ ವಹಿಸಬೇಕು. ಹಠದ ಗುಣದಿಂದ ತಪ್ಪಾದ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ವಾದ ವಿವಾದದಿಂದ ಮಾನಸಿಕ ನೆಮ್ಮದಿ ಕೆಡುತ್ತದೆ. ಹಿರಿಯ ಅಧಿಕಾರಿಗಳ ಅನುಗ್ರಹದಿಂದ ವೃತ್ತಿಯಲ್ಲಿನ ತೊಂದರೆಯೊಂದು ನಿವಾರಣೆ ಆಗಲಿದೆ. ಸ್ವಂತ ಉದ್ಧಿಮೆ ನಡೆಸುವವರು ಆದಾಯದ ಜೊತೆ ಕೀರ್ತಿ ಪ್ರತಿಷ್ಠೆಯನ್ನು ಗಳಿಸುತ್ತಾರೆ. ಮನಬಿಚ್ಚಿ ಮಾತನಾಡಿದಲ್ಲಿ ಅನುಕೂಲಗಳ ಮಹಾಪೂರವೇ ನಿಮಗಿದೆ. ಅತಿಯಾದ ಯೋಚನೆ ಮಾಡದಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ಚಾಡಿ ಮಾತನ್ನು ನಂಬದಿರಿ. ಸ್ಟಾಕ್ ಮತ್ತು ಷೇರಿನ ವ್ಯವಹಾರ ಮಧ್ಯಮವಾಗಿರುತ್ತದೆ.
ಪರಿಹಾರ: ತಾಯಿ ಆಶೀರ್ವಾದ ಪಡೆದು ದಿನದ ಕೆಲಸ ಆರಂಭಿಸಿ.
ಅದೃಷ್ಟದ ಸಂಖ್ಯೆ : 6
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಹಸಿರು ಬಣ್ಣ
ಕಟಕ
ದೇವರನ್ನೋ ಅದೃಷ್ಟವನ್ನೋ ನಂಬಿ ಕೆಲಸ ಮಾಡುವುದಿಲ್ಲ. ಸ್ವಂತ ಪ್ರತಿಭೆಯನ್ನು ನಂಬುವಿರಿ. ಸದಾ ಕ್ರಿಯಾಶೀಲರಾದ ಕಾರಣ ಚಿಕ್ಕ ವಿಷಯಕ್ಕೂ ಅಧಿಕ ಪ್ರಾಮುಖ್ಯತೆಯನ್ನು ನೀಡುವಿರಿ. ಆಹಾರಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ. ತಾನಾಗಿಯೇ ಬಂದ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವಿರಿ. ಸಂಚಾರ ಸಾರಿಗೆ ವ್ಯಾಪಾರದಲ್ಲಿ ಉತ್ತಮ ವರಮಾನವಿರುತ್ತದೆ. ದಂಪತಿಗಳ ನಡುವೆ ವೈಮನಸ್ಸು ಇರುತ್ತದೆ. ನಿಮ್ಮಿಂದ ದೂರವಾಗಿದ್ದ ಸಂಬಂಧಿಕರೊಬ್ಬರು ತಪ್ಪನ್ನು ಒಪ್ಪಿಕೊಂಡು ನಿಮ್ಮಲ್ಲಿ ಆಶ್ರಯವನ್ನು ಪಡೆಯುತ್ತಾರೆ. ವಯೋವೃದ್ದರಲ್ಲಿ ಅನುಕಂಪಕ್ಕಿಂತ ಗೌರವ ಹೆಚ್ಚಾಗಿರುತ್ತದೆ. ಆರೋಗ್ಯದ ಬಗ್ಗೆ ಗಮನ ಇರಲಿ.
ಪರಿಹಾರ: ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ನೀಲಿ ಬಿಳಿ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
