ದಿನ ಭವಿಷ್ಯ: ಹಣಕಾಸಿನ ಪರಿಸ್ಥಿತಿ ಸಾಕಷ್ಟು ಸುಧಾರಿಸುತ್ತೆ, ಉದ್ಯೋಗದಲ್ಲಿ ರಾಜಿ ಮಾಡಿಕೊಳ್ಳಬೇಡಿ; ಮೇಷ, ವೃಷಭ, ಮಿಥುನ, ಕಟಕ ರಾಶಿ ಫಲ-horoscope today astrology prediction 22nd september 2024 aries taurus gemini cancer daily horoscope rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದಿನ ಭವಿಷ್ಯ: ಹಣಕಾಸಿನ ಪರಿಸ್ಥಿತಿ ಸಾಕಷ್ಟು ಸುಧಾರಿಸುತ್ತೆ, ಉದ್ಯೋಗದಲ್ಲಿ ರಾಜಿ ಮಾಡಿಕೊಳ್ಳಬೇಡಿ; ಮೇಷ, ವೃಷಭ, ಮಿಥುನ, ಕಟಕ ರಾಶಿ ಫಲ

ದಿನ ಭವಿಷ್ಯ: ಹಣಕಾಸಿನ ಪರಿಸ್ಥಿತಿ ಸಾಕಷ್ಟು ಸುಧಾರಿಸುತ್ತೆ, ಉದ್ಯೋಗದಲ್ಲಿ ರಾಜಿ ಮಾಡಿಕೊಳ್ಳಬೇಡಿ; ಮೇಷ, ವೃಷಭ, ಮಿಥುನ, ಕಟಕ ರಾಶಿ ಫಲ

2024 ಸೆಪ್ಟೆಂಬರ್ 22ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ, ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ.

ಸೆಪ್ಟೆಂಬರ್ 22ರ ಭಾನುವಾರ ಮೇಷದಿಂದ ಕಟಕದವರಿಗೆ ನಾಲ್ಕು ರಾಶಿಯವರ ದಿನ ಭವಿಷ್ಯ
ಸೆಪ್ಟೆಂಬರ್ 22ರ ಭಾನುವಾರ ಮೇಷದಿಂದ ಕಟಕದವರಿಗೆ ನಾಲ್ಕು ರಾಶಿಯವರ ದಿನ ಭವಿಷ್ಯ

ವೈದಿಕ ಜ್ಯೋತಿಷ್ಯದಲ್ಲಿ ಒಟ್ಟು 12 ರಾಶಿಚಕ್ರ ಚಿಹ್ನೆಗಳನ್ನು ವಿವರಿಸಲಾಗಿದೆ. ಪ್ರತಿಯೊಂದು ರಾಶಿಚಕ್ರ ಚಿಹ್ನೆಯು ಗ್ರಹದಿಂದ ಆಳಲ್ಪಡುತ್ತದೆ. ಜಾತಕವನ್ನು ಗ್ರಹ ಮತ್ತು ನಕ್ಷತ್ರಗಳ ಚಲನೆಯಿಂದ ಲೆಕ್ಕಹಾಕಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ, 2024ರ ಸೆಪ್ಟೆಂಬರ್ 22ರ ಭಾನುವಾರದ ದಿನ ಭವಿಷ್ಯವನ್ನು ತಿಳಿಯೋಣ. ಈ ದಿನ ಸೂರ್ಯದೇವನನ್ನು ಪೂಜಿಸುವ ಪದ್ಧತಿ ಇದೆ. ಭಾನುವಾರದಂದು ಸೂರ್ಯ ದೇವರನ್ನು ಪೂಜಿಸುವುದರಿಂದ ಶಕ್ತಿ, ಆತ್ಮವಿಶ್ವಾಸ ಮತ್ತು ಗೌರವ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, 2024ರ ಸೆಪ್ಟೆಂಬರ್ 22ರ ಭಾನುವಾರ ಕೆಲವು ರಾಶಿಯವರಿಗೆ ಶುಭವಾಗಿರುತ್ತದೆ, ಮತ್ತೊಂದೆಡೆ ಕೆಲವು ರಾಶಿಯವರಿಗೆ ಸಾಮಾನ್ಯವಾಗಿರುತ್ತದೆ. ಇಂದು ಯಾವ ರಾಶಿಯವರು ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ, ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂಬುದನ್ನು ತಿಳಿಯೋಣ. ಮೇಷ ರಾಶಿಯಿಂದ ಕಟಕ ರಾಶಿಯವರಿಗೆ ನಾಲ್ಕು ರಾಶಿಯವರ ದಿನ ಭವಿಷ್ಯ ಇಲ್ಲಿದೆ.

ಮೇಷ ರಾಶಿ

ಹೊಸ ಜನರನ್ನು ಪರಿಚಯ ಮಾಡಿಕೊಳ್ಳುತ್ತೀರಿ. ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ, ಸಾಲದ ಸಮಸ್ಯೆಗಳು ದೂರವಾಗುತ್ತವೆ. ಆಲೋಚನೆಗಳು ಕ್ರಿಯಾ ರೂಪಕ್ಕೆ ಬರುತ್ತವೆ. ಭೂ ವಿವಾದಗಳು ಬಗೆಹರಿಯಲಿವೆ. ವಾಹನ ಖರೀದಿಸುವ ಪ್ಲಾನ್ ಮಾಡುತ್ತೀರಿ. ಕೆಲವು ಸಮಸ್ಯೆಗಳನ್ನು ಕೌಶಲ್ಯದಿಂದ ಬಗೆರಿಸಿಕೊಳ್ಳುತ್ತೀರಿ. ಸ್ನೇಹಿತರ ಸಹಾಯದಿಂದ ಆರ್ಥಿಕ ಲಾಭ ಪಡೆಯಬಹುದು. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ಇಂದು ನಿಮ್ಮನ್ನು ಅಹಂಕಾರದಿಂದ ದೂರವಿಡಿ. ಹೂಡಿಕೆಗೆ ಉತ್ತಮ ಆಯ್ಕೆಗಳನ್ನು ಕಾಣಬಹುದು. ನೀವು ಪೋಷಕರ ಬೆಂಬಲವನ್ನು ಪಡೆಯುತ್ತೀರಿ. ಉದ್ಯಮಿಗಳಿಗೆ ಉತ್ತಮ ದಿನ.

ವೃಷಭ ರಾಶಿ

ಇಂದು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ಆರೋಗ್ಯ ಚೆನ್ನಾಗಿರುತ್ತದೆ. ನೀವು ಆರ್ಥಿಕವಾಗಿಯೂ ಸಮೃದ್ಧರಾಗುತ್ತೀರಿ. ಕೆಲವು ಪ್ರಮುಖ ಕೆಲಸಗಳಿಗೆ ಸಂಬಂಧಿಸಿದಂತೆ ನೀವು ಪ್ರಯಾಣ ಮಾಡಬೇಕಾಗಬಹುದು. ಸಂಬಂಧದಲ್ಲಿ ಸ್ವಲ್ಪ ಉದ್ವಿಗ್ನತೆ ಇರಬಹುದು. ಉದ್ಯೋಗದ ನಿರೀಕ್ಷೆಯಲ್ಲಿರುವವರು ಹೊಸ ಅವಕಾಶಗಳನ್ನು ಪಡೆಯಬಹುದು. ಹೊಸ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತೀರಿ. ಆಲೋಚನೆಗಳನ್ನು ಕಾರ್ಯಗತಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಹಣಕಾಸಿನ ವ್ಯವಹಾರಗಳು ತೃಪ್ತಿಕರವಾಗಿರುತ್ತವೆ. ಶತ್ರುಗಳೂ ಮಿತ್ರರಾಗುತ್ತಾರೆ. ಜಮೀನು ಮತ್ತು ವಾಹನಗಳನ್ನು ಖರೀದಿಸುವ ನಿರ್ಧಾರ ಕೈಗೊಳ್ಳುತ್ತೀರಿ. ಗೃಹ ನಿರ್ಮಾಣದಲ್ಲಿ ಇದ್ದ ಅಡೆತಡೆಗಳು ದೂರವಾಗುತ್ತವೆ. ವ್ಯಾಪಾರಗಳು ವೇಗವನ್ನು ಪಡೆಯುತ್ತವೆ. ಉದ್ಯೋಗದಲ್ಲಿ ಏರುಪೇರು ನಿವಾರಣೆಯಾಗಲಿದೆ.

ಮಿಥುನ ರಾಶಿ

ನಿಮಗೆ ನಷ್ಟದ ದಿನವಾಗಲಿದೆ. ಅನಗತ್ಯ ಖರ್ಚುಗಳನ್ನು ತಪ್ಪಿಸಿ, ಇಲ್ಲದಿದ್ದರೆ ನೀವು ನಂತರ ಹಣದ ಕೊರತೆಯನ್ನು ಎದುರಿಸಬಹುದು. ಯಾವುದೇ ವ್ಯಕ್ತಿಗೆ ಸಾಲ ನೀಡುವುದನ್ನು ತಪ್ಪಿಸಿ. ಮೊಂಡುತನದ ಮನೋಭಾವದಿಂದ ತೊಂದರೆ ಎದುರಿಸಬೇಕಾಗಬಹುದು. ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುತ್ತೀರಿ. ಹಣಕಾಸಿನ ವ್ಯವಹಾರಗಳು ಆಶಾದಾಯಕವಾಗಿರುತ್ತವೆ. ಕೆಲಸಗಳು ಯಶಸ್ವಿಯಾಗುತ್ತವೆ. ರಿಯಲ್ ಎಸ್ಟೇಟ್ ವಿವಾದಗಳು ಇತ್ಯರ್ಥ ಹಂತವನ್ನು ತಲುಪುತ್ತವೆ. ವ್ಯವಹಾರಗಳಲ್ಲಿ ಹೂಡಿಕೆಗಳು ಸಿಗುತ್ತವೆ. ಉದ್ಯೋಗಗಳಲ್ಲಿ ಕರ್ತವ್ಯ ನಿರ್ವಹಣೆಯಲ್ಲಿ ರಾಜಿ ಮಾಡಿಕೊಳ್ಳಬೇಡಿ.

ಕಟಕ ರಾಶಿ ಇಂದು ನೀವು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಯಾವುದೇ ಕೆಲಸವನ್ನು ಪೂರ್ಣಗೊಳಿಸುವಲ್ಲಿ ತಂದೆಯ ಸಲಹೆಯನ್ನು ಪಡೆಯುವುದು ಒಳ್ಳೆಯದು. ಹಿರಿಯರಿಂದ ಆಶೀರ್ವಾದ ಪಡೆಯುವಿರಿ. ಮನೆಯಲ್ಲಿ ಸಂಭ್ರಮಾಚರಣೆ ಇರುತ್ತೆ. ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ಹಣಕಾಸಿನ ಪರಿಸ್ಥಿತಿಯು ಸಾಕಷ್ಟು ಸುಧಾರಿಸುತ್ತದೆ. ದೀರ್ಘಕಾಲದ ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಿ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಭೂ ವಿವಾದಗಳು ಕೊನೆಗೊಳ್ಳುತ್ತವೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುತ್ತಾರೆ. ಉದ್ಯೋಗದಲ್ಲಿ ನಿರೀಕ್ಷಿತ ಯಶಸ್ಸು ಕಾಣುತ್ತೀರಿ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.