Horoscope Today: ಸ್ವಂತ ವ್ಯಾಪಾರದಲ್ಲಿ ಲಾಭ, ನೆರೆಹೊರೆಯವರೊಂದಿಗೆ ಅನವಶ್ಯಕ ವಾದವಿವಾದ; ಸಿಂಹದಿಂದ ವೃಶ್ಚಿಕ ರಾಶಿವರೆಗಿನ ದಿನಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಸ್ವಂತ ವ್ಯಾಪಾರದಲ್ಲಿ ಲಾಭ, ನೆರೆಹೊರೆಯವರೊಂದಿಗೆ ಅನವಶ್ಯಕ ವಾದವಿವಾದ; ಸಿಂಹದಿಂದ ವೃಶ್ಚಿಕ ರಾಶಿವರೆಗಿನ ದಿನಭವಿಷ್ಯ

Horoscope Today: ಸ್ವಂತ ವ್ಯಾಪಾರದಲ್ಲಿ ಲಾಭ, ನೆರೆಹೊರೆಯವರೊಂದಿಗೆ ಅನವಶ್ಯಕ ವಾದವಿವಾದ; ಸಿಂಹದಿಂದ ವೃಶ್ಚಿಕ ರಾಶಿವರೆಗಿನ ದಿನಭವಿಷ್ಯ

ಫೆಬ್ರವರಿ 24, ಶನಿವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (24 February 2024 Daily Horoscope).

 ಫೆಬ್ರವರಿ 24ರ ದಿನಭವಿಷ್ಯ
ಫೆಬ್ರವರಿ 24ರ ದಿನಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ( February 24 2024 Daily Horoscope).

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಶುಕ್ಲಪಕ್ಷ, ಶನಿವಾರ

ತಿಥಿ : ಹುಣ್ಣಿಮೆ ತಿಥಿಯು ಹಗಲು 04.54 ರವರೆಗು ಇದ್ದು ಆನಂತರ ಪಾಡ್ಯ ಆರಂಭವಾಗುತ್ತದೆ.

ನಕ್ಷತ್ರ : ಮಖೆ ನಕ್ಷತ್ರವು ರಾ.09.30 ವರೆಗು ಇರುತ್ತದೆ. ಆನಂತರ ಪುಬ್ಬ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆ.06.39

ಸೂರ್ಯಾಸ್ತ: ಸ.06.26

ರಾಹುಕಾಲ : ಬೆ.09.00 ರಿಂದ ಬೆ.10.30

ರಾಶಿ ಫಲಗಳು

ಸಿಂಹ

ಅವಿರತ ಕೆಲಸ ಕಾರ್ಯಗಳ ಕಾರಣ ವಿಶ್ರಾಂತಿಯನ್ನು ಬಯಸುವಿರಿ. ಅವಶ್ಯಕತೆ ಇರುವಂತಹ ಕೆಲಸಗಳಿಗೆ ಮಾತ್ರ ಗಮನ ನೀಡುವಿರಿ. ಕುಟುಂಬದ ಸದಸ್ಯರ ಸಂಪೂರ್ಣ ಬೆಂಬಲ ದೊರೆಯುತ್ತದೆ. ಸ್ನಾಯುಗಳ ಸೆಳೆತದ ತೊಂದರೆ ಉಂಟಾಗಬಹುದು. ಉದ್ಯೋಗಸ್ಥರು ಅನಿವಾರ್ಯವಾಗಿ ವೃತ್ತಿ ಬದಲಾವಣೆ ಮಾಡುತ್ತಾರೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಗಳಿಕೆ ಸಾಧ್ಯ. ವಿದ್ಯಾರ್ಥಿಗಳು ಎಲ್ಲರೊಂದಿಗೆ ಬೆರೆತು ಕಲಿಕೆಯಲ್ಲಿ ಮುಂದುವರೆಯಬೇಕು. ಆರ್ಥಿಕಾಭಿವೃದ್ಧಿಯಲ್ಲಿ ಆತ್ಮೀಯರ ಸಹಭಾಗಿತ್ವ ಮುಖ್ಯವಾಗುತ್ತದೆ. ಯಾರ ಸಲಹೆಯನ್ನು ಕಡೆಗಣಿಸದಿರಿ. ನಿಮ್ಮ ಪ್ರತಿಸ್ಪರ್ಧಿಗಳು ಸಹ ಸ್ನೇಹಕ್ಕೆ ಹಾತೊರೆಯುತ್ತಾರೆ. ಬೇಸರದಿಂದ ಹೊರಬರಲು ಮನರಂಜನ ಕೇಂದ್ರಕ್ಕೆ ತೆರಳುವಿರಿ. ಮಕ್ಕಳ ಆಟ ಪಾಠಗಳು ಸಂತೋಷ ನೀಡಲಿವೆ.

ಪರಿಹಾರ : ಬೆಳ್ಳಿಯ ಉಂಗುರ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಹೊಗೆಯ ಬಣ್ಣ

ಕನ್ಯಾ

ಕುಟುಂಬದಲ್ಲಿ ಕೆಲಸದ ಒತ್ತಡವಿದ್ದರೂ ಪರಸ್ಪರ ಒಳ್ಳೆಯ ಸ್ಪಂದನೆ ಕಂಡುಬರುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕು. ಕುಟುಂಬದ ಹಿರಿಯರ ಸಹಾಯದಿಂದ ಎದುರಾದ ಸಮಸ್ಯೆಯೊಂದು ಮರೆಯಾಗುವುದು. ಉದ್ಯೋಗದಲ್ಲಿ ಎದುರಾಗುವ ಬದಲಾವಣೆಗಳು ನಿಮ್ಮ ಪರವಾಗಿರುತ್ತದೆ. ಸಮ ವಯಸ್ಕರ ನಡುವೆ ನಾಯಕರಾಗಿ ಬಾಳುವಿರಿ. ಉತ್ತಮ ಆದಾಯವಿದ್ದರೂ ಖರ್ಚುವೆಚ್ಚದ ಮೇಲೆ ಹಿಡಿತ ಸಾಧಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಗಳಿಸಿದ ವರಮಾನವನ್ನು ಉಳಿತಾಯ ಮಾಡುವಿರಿ. ಸಮಯ ವ್ಯರ್ಥ ಮಾಡದೆ ಸಮಾಜಕ್ಕೆ ಉಪಯೋಗವಾಗುವ ಕೆಲಸಗಳನ್ನು ಆರಂಭಿಸುವಿರಿ. ವಿದ್ಯಾರ್ಥಿಗಳು ಸಹಪಾಠಿಗಳು ಮತ್ತು ಶಿಕ್ಷಕರ ಪ್ರಶಂಸೆಯನ್ನು ಗಳಿಸುತ್ತಾರೆ. ಸಾಧ್ಯವಾದಷ್ಟು ತೆಗೆದುಕೊಂಡ ನಿರ್ಧಾರಗಳನ್ನು ಬದಲಿಸದಿರಿ. ಮನರಂಜನೆಗಾಗಿ ಸಮಯವನ್ನು ಮೀಸಲಿಡುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಆಕಾಶನೀಲಿ ಬಣ್ಣ

ತುಲಾ

ಉಪಯೋಗವೆನಿಸುವ ಕೆಲಸ ಕಾರ್ಯಗಳನ್ನು ಆಯ್ಕೆ ಮಾಡುವಿರಿ. ಕುಟುಂಬದ ಕೆಲಸ ಕಾರ್ಯಗಳನ್ನು ಪೂರೈಸಿ ಎಲ್ಲರ ಮನೆಗೆಲ್ಲುವಿರಿ. ದೃಢವಾದ ಮನಸ್ಸು ಮತ್ತು ಧೈರ್ಯ ಜೀವನದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಯಾವುದೇ ವಿಚಾರವನ್ನು ಪರೀಕ್ಷಿಸಿ ಸೂಕ್ತ ತೀರ್ಮಾನಕ್ಕೆ ಬನ್ನಿರಿ. ವ್ಯಾಪಾರ ವ್ಯವಹಾರಗಳಲ್ಲಿ ಮಧ್ಯಮ ಮಟ್ಟದ ವರಮಾನವಿರುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಯೋಚಿಸದೆ ಯಾವುದೇ ಯೋಜನೆಯನ್ನು ಅಂತಿಮಗೊಳಿಸದಿರಿ. ವಿದ್ಯಾರ್ಥಿಗಳು ಉತ್ತಮ ಮಟ್ಟದಲ್ಲಿ ಕಲಿಕೆಯನ್ನು ಮುಂದುವರಿಸುತ್ತಾರೆ. ನೆರೆಹೊರೆಯವರೊಂದಿಗೆ ಅನಾವಶ್ಯಕ ವಾದವಿವಾದಗಳು ಎದುರಾಗಬಹುದು. ದಿಢೀರನೆ ವಿವಾಹ ಕಾರ್ಯ ಒಂದು ನಿಶ್ಚಯವಾಗಬಹುದು. ಸ್ವಂತ ಜಮೀನು ಅಥವಾ ಮನೆಯನ್ನು ಕೊಳ್ಳಲು ತಂದೆಯಿಂದ ಸಹಾಯ ದೊರೆಯುತ್ತದೆ. ನಿಮ್ಮ ತಪ್ಪಿಗೆ ಬೇರೆಯವರನ್ನು ದೂರುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಗಳಿಗೆ ಹಾಲು ಮೊಸರು ನೀಡಿ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ರಕ್ತದ ಬಣ್ಣ

ವೃಶ್ಚಿಕ

ಹಣಕಾಸಿನ ಹೂಡಿಕೆಗಳಿಂದ ಕುಟುಂಬದ ಆದಾಯವು ಹೆಚ್ಚುತ್ತದೆ. ಬಿಡುವಿಲ್ಲದ ಕೆಲಸ ಕಾರ್ಯಗಳು ದೈಹಿಕ ಬಲವನ್ನು ಕುಗ್ಗಿಸುತ್ತದೆ. ಉದ್ಯೋಗದಲ್ಲಿ ನಿಮ್ಮ ಮಾತನ್ನು ಎಲ್ಲರೂ ಒಪ್ಪಬೇಕಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭ ಅಚ್ಚರಿ ಮೂಡಿಸುತ್ತದೆ. ವಿದ್ಯಾರ್ಥಿಗಳು ಆತ್ಮೀಯರ ಸಹಾಯದಿಂದ ಕಲಿಕೆಯಲ್ಲಿ ಉನ್ನತಮಟ್ಟ ತಲುಪುತ್ತಾರೆ. ಕ್ರೀಡಾ ಸ್ಪರ್ಧೆಗಳಲ್ಲಿ ಮೊದಲಿಗರಾಗುತ್ತಾರೆ. ಯಾರ ಮಾತನ್ನು ಗಂಭೀರವಾಗಿ ಪರಿಗಣಿಸದೆ ಮರೆವ ಕಾರಣ ನೆಮ್ಮದಿ ಇರುತ್ತದೆ. ಸ್ವತಂತ್ರವಾಗಿ ಯಾವುದೇ ಕೆಲಸ ಕಾರ್ಯಗಳನ್ನು ನಿರ್ವಹಿಸಬಲ್ಲಿರಿ. ಸಂಗಾತಿಯ ಆಶಯದಂತೆ ಕಿರು ಪ್ರವಾಸ ಕೈಗೊಳ್ಳುವಿರಿ. ಮಕ್ಕಳ ಬಗ್ಗೆ ಹೆಮ್ಮೆ ಮತ್ತು ಪ್ರೀತಿ ಇರುತ್ತದೆ. ಸಾಲದ ವ್ಯವಹಾರದಿಂದ ಸಮಸ್ಯೆ ಉದ್ಭವಿಸಬಹುದು.

ಪರಿಹಾರ : ಗೋಶಾಲೆಗೆ ಧನಸಹಾಯ ಮಾಡಿದ ನಂತರ ದಿನದ ಕೆಲಸಗಳನ್ನು ಆರಂಬಿಸಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಎಲೆಹಸಿರು ಬಣ್ಣ

-------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.