ಕನ್ನಡ ಸುದ್ದಿ  /  Astrology  /  Horoscope Today Astrology Prediction 24 March 2024 Leo Virgo Libra Scorpio Daily Horoscope Sts

Horoscope Today: ಉದ್ಯೋಗದಲ್ಲಿ ಉನ್ನತ ಹಂತ, ಬಹುಕಾಲದಿಂದ ಕಾಡುತ್ತಿದ್ದ ಅನಾರೋಗ್ಯ ನಿವಾರಣೆ; ಸಿಂಹದಿಂದ ವೃಶ್ಚಿಕ ರಾಶಿವರೆಗಿನ ದಿನಭವಿಷ್ಯ

ಮಾರ್ಚ್​ 24, ಭಾನುವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (24 March 2024 Daily Horoscope).

ಮಾರ್ಚ್​ 24ರ ದಿನಭವಿಷ್ಯ
ಮಾರ್ಚ್​ 24ರ ದಿನಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (24 March 2024 Daily Horoscope).

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲಪಕ್ಷ, ಭಾನುವಾರ

ತಿಥಿ : ಚತುರ್ದಶಿ ಬೆ. 09.12 ರವರೆಗು ಇರುತ್ತದೆ. ಆನಂತರ ಹುಣ್ಣಿಮೆ ಆರಂಭವಾಗಲಿದೆ.

ನಕ್ಷತ್ರ : ಪುಬ್ಬ ನಕ್ಷತ್ರವು ಬೆ. 07.05 ರವರೆಗು ಇರುತ್ತದೆ. ಆನಂತರ ಉತ್ತರ ನಕ್ಷತ್ರವು ಆರಂಭವಾಗಲಿದೆ.

ಸೂರ್ಯೋದಯ: ಬೆ.06.22

ಸೂರ್ಯಾಸ್ತ: ಸ.06.30

ರಾಹುಕಾಲ : ಬೆ. 04.30 ರಿಂದ ಸ.06.00

ರಾಶಿ ಫಲಗಳು

ಸಿಂಹ

ಕುಟುಂಬಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲಿವೆ. ಹಣದ ಸದುಪಯೋಗ ಮಾಡಿಕೊಂಡಲ್ಲಿ ತೊಂದರೆ ಬಾರದು. ಕೆಲಸದ ನಡುವೆ ವಿಶ್ರಾಂತಿಯನ್ನೂ ಪಡೆಯುವುದು ಮುಖ್ಯ. ಜನಸೇವೆ ಮಾಡುವಲ್ಲಿ ಸಂತೃಪ್ತಿ ಪಡೆಯುವಿರಿ. ಕುಟುಂಬದ ಆಸ್ತಿಯ ವಿವಾದ ಪರಿಹಾರವಾಗಿ ಪಾಲು ದೊರೆಯುತ್ತದೆ. ಅಧಿಕಾರಿಗಳಿಗೆ ಉದ್ಯೋಗದಲ್ಲಿ ವಿಶೇಷವಾದ ಸ್ಥಾನ ಮಾನ ದೊರೆಯಲಿದೆ. ಅತಿಯಾದ ನಿರೀಕ್ಷೆ ಇರುತ್ತದೆ. ಕುಟುಂಬದಲ್ಲಿ ಪರಸ್ಪರ ಅನಾವಶ್ಯಕವಾದ ವಾದ ವಿವಾದಗಳು ಇರಲಿವೆ. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಊಹಿಸಿದ್ದ ಅನೇಕ ವಿಚಾರಗಳು ಇಂದು ನಿಜವಾಗಲಿವೆ. ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ನಿರ್ಧಾರಕ್ಕೆ ಬರುವಿರಿ. ದಿನಾಂತ್ಯಕ್ಕೆ ಅನಿರೀಕ್ಷಿತ ಧನಲಾಭವಿರುತ್ತದೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಅಕ್ಕಿ ಬೆಳೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ : ಹಾಲಿನ ಬಣ್ಣ

ಕನ್ಯಾ

ಬೇರೆಯವರು ಮಂಡಿಸುವ ವಿಚಾರವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲ. ಅನಾವಶ್ಯಕವಾಗಿ ಬೇರೆಯವರು ಮಾಡಿದ ಕೆಲಸವನ್ನು ಟೀಕಿಸುವಿರಿ. ಸೋದರನ ವೈವಾಹಿಕ ಜೀವನದ ಸಮಸ್ಯೆಯನ್ನು ಪರಿಹರಿಸುವಿರಿ. ಕುಟುಂಬದಲ್ಲಿ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸುವಿರಿ. ಕಲಾವಿದರಾದಲ್ಲಿ ಒಳ್ಳೆಯ ಅವಕಾಶಗಳು ದೊರೆಯಲಿವೆ. ಮಕ್ಕಳಿಗಾಗಿ ವೈಭವದ ಅಲಂಕಾರದ ವಸ್ತುಗಳನ್ನು ಕೊಳ್ಳುವಿರಿ. ಉದ್ಯೋಗದಲ್ಲಿ ಸಂತಸದ ವಾತಾವರಣ ಇರುತ್ತದೆ. ಅಧಿಕಾರಿಗಳಾದಲ್ಲಿ ವಿವಾದವೊಂದನ್ನು ಎದುರಿಸಬೇಕಾಗುತ್ತದೆ. ದುಡುಕಿನಿಂದ ತಪ್ಪು ನಿರ್ಧಾರವೊಂದನ್ನು ತೆಗೆದುಕೊಂಡು ಪತ್ಚಾತಾಪ ಪಡುವಿರಿ. ಹಣಕಾಸಿನ ವಿವಾದವೊಂದು ರಾಜಿಯ ಹಂತವನ್ನು ತಲುಪುತ್ತದೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಪೂಜಾ ದ್ರವ್ಯಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ: ಹೊಗೆಯ ಬಣ್ಣ

ತುಲಾ

ಮನದಲ್ಲಿ ಆತಂಕ ಇದ್ದರೂ ಮಾಡುವ ಕೆಲಸಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಯಾವುದೇ ಸಮಯವನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಿಕೊಳ್ಳುವಿರಿ. ಬುದ್ಧಿವಂತಿಕೆಯ ಮಾತಿನಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಉದ್ಯೋಗದಲ್ಲಿ ಉನ್ನತ ಹಂತವನ್ನು ತಲುಪುವಿರಿ. ವಿದ್ಯಾರ್ಥಿಗಳು ವಿಶಿಷ್ಠ ಸಾಧನೆ ಮಾಡುತ್ತಾರೆ. ಕಷ್ಟ ಎನಿಸಿದರೂ ವೈಭವದ ಜೀವನ ನಡೆಸುವಿರಿ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಕಂತು ವ್ಯಾಪಾರದಿಂದ ಹಣ ಉಳಿಸುವಿರಿ. ಮಧ್ಯಸ್ಥಿಕೆ ವಹಿಸಿ ಆತ್ಮೀಯರ ಹಣಕಾಸಿನ ವಿವಾದವನ್ನು ಬಗೆಹರಿಸುವಿರಿ. ಮಕ್ಕಳೊಂದಿಗೆ ಸಹನೆಯಿಂದ ವರ್ತಿಸಿ. ಹೆಣ್ಣುಮಕ್ಕಳಿಗೆ ಉದ್ಯೋಗ ದೊರೆಯಲಿದೆ. ಅತಿಯಾದ ಆಹಾರ ಸೇವನೆ ಅಜೀರ್ಣತೆಯನ್ನು ಉಂಟುಮಾಡಲಿದೆ.

ಪರಿಹಾರ : ಹಳದಿ ಬಣ್ಣದ ಬಟ್ಟೆಗಳನ್ನು ದಾನ ನೀಡಿ ದಿನದ ಕೆಲಸಗಳನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಆಕಾಶನೀಲಿ ಬಣ್ಣ

ವೃಶ್ಚಿಕ

ಮನಸ್ಸಿಗೆ ಸರಿ ತೋರಿದ ಕೆಲಸವನ್ನು ಮಾತ್ರ ಮಾಡುವಿರಿ. ಹಣಕಾಸಿನ ವಿಚಾರದಲ್ಲಿ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಉದ್ಯೋಗದಲ್ಲಿ ನಿರೀಕ್ಷಿತ ಸ್ಥಾನ ಮಾನ ದೊರೆಯಲಿದೆ. ಕುಟುಂಬದಲ್ಲಿ ಸುಖ ಶಾಂತಿ ನೆಲೆಸಿರುತ್ತದೆ. ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ. ಸಂಗಾತಿಯ ಜೊತೆಗೂಡಿ ಪಾಲುಗಾರಿಕೆ ವ್ಯಾಪಾರವನ್ನು ಆರಂಭಿಸುವಿರಿ. ಬಹುಕಾಲದಿಂದ ಕಾಡುತ್ತಿದ್ದ ಅನಾರೋಗ್ಯ ನಿವಾರಣೆ ಆಗಲಿದೆ. ಒತ್ತಡದಿಂದ ವೃತ್ತಿ ಬದಲಾಯಿಸುವಿರಿ. ಅನಿರೀಕ್ಷಿತ ಧನಾಗಮನವಿದೆ. ಸಾಕುಪ್ರಾಣಿಗಳ ಬಗ್ಗೆ ಕನಿಕರ ತೋರುವಿರಿ.

ಪರಿಹಾರ : ಗೋಸೇವೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ರಕ್ತದ ಬಣ್ಣ

---------------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).