ಕನ್ನಡ ಸುದ್ದಿ  /  Astrology  /  Horoscope Today Astrology Prediction 24 March 2024 Sagittarius Capricorn Aquarius Pisces Daily Horoscope Sts

Horoscope Today: ಖರ್ಚಿಗೆ ಸಮನಾದ ಆದಾಯ, ಮುಂಗೋಪ ಕಡಿಮೆ ಮಾಡ್ಕೊಂಡ್ರೆ ಜನರ ಸಹಾಯ ಸಿಗತ್ತೆ; ಧನು ರಾಶಿಯಿಂದ ಮೀನದವರೆಗಿನ ದಿನಭವಿಷ್ಯ

ಮಾರ್ಚ್​ 24, ಭಾನುವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (24 March 2024 Daily Horoscope).

ಮಾರ್ಚ್​ 24ರ ದಿನಭವಿಷ್ಯ
ಮಾರ್ಚ್​ 24ರ ದಿನಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (24 March 2024 Daily Horoscope).

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲಪಕ್ಷ, ಭಾನುವಾರ

ತಿಥಿ : ಚತುರ್ದಶಿ ಬೆ. 09.12 ರವರೆಗು ಇರುತ್ತದೆ. ಆನಂತರ ಹುಣ್ಣಿಮೆ ಆರಂಭವಾಗಲಿದೆ.

ನಕ್ಷತ್ರ : ಪುಬ್ಬ ನಕ್ಷತ್ರವು ಬೆ. 07.05 ರವರೆಗು ಇರುತ್ತದೆ. ಆನಂತರ ಉತ್ತರ ನಕ್ಷತ್ರವು ಆರಂಭವಾಗಲಿದೆ.

ಸೂರ್ಯೋದಯ: ಬೆ.06.22

ಸೂರ್ಯಾಸ್ತ: ಸ.06.30

ರಾಹುಕಾಲ : ಬೆ. 04.30 ರಿಂದ ಸ.06.00

ರಾಶಿ ಫಲಗಳು

ಧನಸ್ಸು

ಯಾವುದೇ ಸವಾಲನ್ನು ಧೈರ್ಯದಿಂದ ಎದುರಿಸಿ ಜಯ ಸಾಧಿಸುವಿರಿ. ಕುಟುಂಬಕ್ಕೆ ಹೊಸ ಅತಿಥಿಗಳ ಆಗಮನ ಆಗಲಿದೆ. ವಿದ್ಯಾರ್ಥಿಗಳು ಒತ್ತಡವನ್ನು ಮರೆಮಾಚಿ ಸಂತೋಷವನ್ನು ಹಂಚುತ್ತಾರೆ. ಉದ್ಯೋಗದಲ್ಲಿನ ತೊಂದರೆ ಮರೆಯಾಗುತ್ತದೆ. ಮುಂಗೋಪವನ್ನು ಕಡಿಮೆ ಮಾಡಿಕೊಂಡಲ್ಲಿ ಜನರ ಸಹಾಯ ದೊರೆಯುತ್ತದೆ. ಸ್ಥಿರವಾದ ಮನಸ್ಸನ್ನು ರೂಪಿಸಿಕೊಳ್ಳಿ. ಕುಟುಂಬದ ಹಿರಿಯರಿಂದ ನಿಮಗೆ ಹಣದ ಸಹಾಯ ದೊರೆಯುತ್ತದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವಿರಿ. ಸ್ವಂತ ವಾಹನವನ್ನು ಕೊಳ್ಳುವಿರಿ. ಅನಾವಶ್ಯಕವಾದ ಖರ್ಚುವೆಚ್ಚಗಳನ್ನು ನಿಯಂತ್ರಿಸುವಿರಿ. ಲಾಭವಿಲ್ಲದ ಯಾವುದೆ ಕೆಲಸವನ್ನು ಮಾಡುವುದಿಲ್ಲ. ಗುರುಗಳ ಆಶೀರ್ವಾದ ಪಡೆಯಲು ಯಾತ್ರಾಸ್ಥಳಕ್ಕೆ ತೆರಳುವಿರಿ.

ಪರಿಹಾರ : ಮನೆಯ ದೇವರ ಗುಡಿಯಲ್ಲಿ ತುಪ್ಪದ ದೀಪವನ್ನು ಹಚ್ಚಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಎಲೆಹಸಿರು ಬಣ್ಣ

ಮಕರ

ಆರೋಗ್ಯದಲ್ಲಿ ಏರಿಳಿತ ಉಂಟಾದರೂ ತೊಂದರೆ ಇರದು. ರಕ್ತಕ್ಕೆ ಸಂಬಂಧಿಸಿದ ತೊಂದರೆ ಇದ್ದಲ್ಲಿ ವೈದ್ಯರ ಸಲಹೆ ಪಡೆಯಿರಿ. ಕುಟುಂಬದಲ್ಲಿ ಪ್ರತಿಯೊಂದು ಕೆಲಸಗಳಿಗೂ ಬೇರೆಯವರನ್ನು ಅವಲಂಬಿಸುವಿರಿ. ಕುಟುಂಬದ ವಿವಾಹವೊಂದು ಕೆಲದಿನಗಳವರೆಗೆ ಮುಂದೂಡಲ್ಪಡುತ್ತದೆ. ಉದ್ಯೋಗದಲ್ಲಿ ಬೇಸರ ಉಂಟಾಗಿ ವಂಶದ ವೃತ್ತಿಯನ್ನು ಆರಂಭಿಸುವಿರಿ. ಭೂವಿವಾದದಲ್ಲಿ ಜಯ ಲಭಿಸುತ್ತದೆ. ವಿದ್ಯಾರ್ಥಿಗಳಿಗೆ ಶುಭಫಲಗಳು ದೊರೆಯಲಿವೆ. ಕಟ್ಟಡ ನಿರ್ಮಾಣಕ್ಕೆ ಅವಶ್ಯಕವಾದ ಕಬ್ಬಿಣ, ಸಿಮೆಂಟ್ ಮುಂತಾದ ವಸ್ತುಗಳ ವ್ಯಾಪಾರದಲ್ಲಿ ಲಾಭವಿರುತ್ತದೆ. ಬೇರೆಯವ ಹಣದ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಿದರೆ ತೊಂದರೆಯಿದೆ. ಮನೆಯಲ್ಲಿರುವ ಮಕ್ಕಳಿಗೆ ಸಂತೋಷದಾಯಕ ವಾತಾವರಣ ನಿರ್ಮಿಸುವಿರಿ.

ಪರಿಹಾರ : ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಕೇಸರಿ ಬಣ್ಣ

ಕುಂಭ

ಕುಟುಂಬದಲ್ಲಿ ಅನ್ಯೋನ್ಯತೆ ಮರುಕಳಿಸುತ್ತದೆ. ಉದ್ಯೋಗದಲ್ಲಿ ಸಂತೃಪ್ತಿ ಇರುವುದಿಲ್ಲ. ಸೋದರ ಅಥವಾ ಸೋದರಿಯ ಜೊತೆಯಲ್ಲಿ ಪಾಲುಗಾರಿಕೆಯ ವ್ಯಾಪಾರವೊಂದನ್ನು ಆರಂಭಿಸುವಿರಿ. ಎಲ್ಲರೊಂದಿಗೆ ಸೌಹಾರ್ದತೆಯಿಂದ ಬೆರೆತು ಕೆಲಸ ಕಾರ್ಯಗಳನ್ನು ಸರಿದೂಗಿಸುವಿರಿ. ಆತ್ಮವಿಶ್ವಾಸದ ಕೊರತೆಯಿಂದ ತಪ್ಪುನಿರ್ಧಾರ ತೆಗೆದುಕೊಳ್ಳುವಿರಿ. ವಿಶೇಷವಾದ ಕಲಾಪ್ರೌಢಿಮೆ ಇದ್ದಲ್ಲಿ ಉತ್ತಮ ಅವಕಾಶವೊಂದು ದೊರೆಯಲಿದೆ. ಸಂಗೀತ ಬಲ್ಲವರಿಗೆ ಮಹತ್ತರ ಅವಕಾಶ ದೊರೆಯಲಿದೆ. ವಿಕಲ ಚೇತನರಿಗೆ ವಿಶೇಷವಾದ ಅನುಕೂಲತೆ ಇರುತ್ತದೆ. ಹಳೆಯ ಮನೆಯನ್ನು ನವೀಕರಿಸುವ ಕಾಯಕವನ್ನು ಆರಂಭಿಸುವಿರಿ. ಆತ್ಮೀಯರಿಂದ ಹಣದ ಸಹಾಯವನ್ನು ಪಡೆಯುವಿರಿ. ಕೈಕಾಲುಗಳಿಗೆ ಪೆಟ್ಟಾಗಬಹುದು ಎಚ್ಚರಿಕೆ ಇರಲಿ.

ಪರಿಹಾರ : ತಲೆಗೆ ಹಾಲಲ್ಲಿಟ್ಟು ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿರಿ

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ

ಮೀನ

ನಿಮ್ಮ ಮನಸ್ಸಿನ ಆಸೆ ಆಕಾಂಕ್ಷೆಗಳು ಭವಿಷ್ಯದಲ್ಲಿ ಕೈಗೂಡಲಿವೆ. ಮನಸ್ಸಿಲ್ಲದೆ ಹೋದರು ಕುಟುಂಬದ ಅಧಿಕಾರ ಹಿಡಿಯುವಿರಿ. ಉದ್ಯೋಗದಲ್ಲಿ ಅಧಿಕಾರಿಗಳ ಸಹಾಯ ದೊರೆಯುತ್ತದೆ. ಕಣ್ಣಿನ ದೋಷವಿರುತ್ತದೆ. ಒಮ್ಮೆ ತೆಗೆದುಕೊಳ್ಳುವ ನಿರ್ಧಾರವನ್ನು ಎಂದಿಗೂ ಬದಲಾಯಿಸುವುದಿಲ್ಲ. ಅವಿವಾಹಿತರಿಗೆ ವಿವಾಹಯೋಗವಿದೆ. ಸಂಪ್ರಾದಾಯಿಕ ವೈದ್ಯ ಪದ್ಧತಿಯನ್ನು ಕಲಿಯಲು ಆರಂಭಿಸುವಿರಿ. ಜನಸೇವಾಸಂಸ್ಥೆಯನ್ನು ನಡೆಸುತ್ತಿದ್ದಲ್ಲಿ ಸರ್ಕಾರದಿಂದ ಧನಸಹಾಯ ದೊರೆಯುತ್ತದೆ. ನಿಮ್ಮ ಖರ್ಚಿಗೆ ಸಮನಾದ ಆದಾಯ ನಿಮಗೆ ದೊರೆಯುತ್ತದೆ. ಮಕ್ಕಳಿಗೆ ಉಡುಗೊರೆ ನೀಡುವಿರಿ. ಸಂಗಾತಿ ಮತ್ತು ಮಕ್ಕಳ ಜೊತೆಯಲ್ಲಿ ಕಿರುಪ್ರವಾಸ ಕೈಗೊಳ್ಳುವಿರಿ. ಕಷ್ಟದಲ್ಲಿ ಇದ್ದವರಿಗೆ ಹಣದ ಸಹಾಯ ಮಾಡುವಿರಿ.

ಪರಿಹಾರ : ಹಣೆಯಲ್ಲಿ ತಿಲಕವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ಕಿತ್ತಳೆ ಬಣ್ಣ

---------------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).