ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಮನಸ್ಸಿಟ್ಟು ಕೆಲಸ ಮಾಡಲ್ಲ, ಹಣಕಾಸಿನ ವಿವಾದ ಎದುರಾಗುತ್ತೆ; ಧನು, ಮಕರ, ಕುಂಭ, ಮೀನ ರಾಶಿಯವರ ದಿನ ಭವಿಷ್ಯ

Horoscope Today: ಮನಸ್ಸಿಟ್ಟು ಕೆಲಸ ಮಾಡಲ್ಲ, ಹಣಕಾಸಿನ ವಿವಾದ ಎದುರಾಗುತ್ತೆ; ಧನು, ಮಕರ, ಕುಂಭ, ಮೀನ ರಾಶಿಯವರ ದಿನ ಭವಿಷ್ಯ

24 ಜೂನ್ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (24th June 2024 Horoscope).

ಧನು, ಮಕರ, ಕುಂಭ, ಮೀನು ರಾಶಿಯವರ ದಿನ ಭವಿಷ್ಯ ತಿಳಿಯಿರಿ
ಧನು, ಮಕರ, ಕುಂಭ, ಮೀನು ರಾಶಿಯವರ ದಿನ ಭವಿಷ್ಯ ತಿಳಿಯಿರಿ

ಇಂದಿನ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (10th June 2024 Horoscope)

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಕೃಷ್ಣಪಕ್ಷ-ಸೋಮವಾರ

ತಿಥಿ: ತದಿಗೆ ರಾತ್ರಿ 02.44ರವರೆಗು ಇದ್ದು, ಆನಂತರ ಚೌತಿ ಆರಂಭವಾಗುತ್ತದೆ.

ನಕ್ಷತ್ರ : ಉತ್ತರಾಷಾಡ ನಕ್ಷತ್ರವು ಸಂಜೆ 05.35 ರವರೆಗೆ ಇದ್ದು, ಆನಂತರ ಶ್ರವಣ ನಕ್ಷತ್ರವು ಆರಂಭವಾಗಲಿದೆ.

ಸೂರ್ಯೋದಯ: ಬೆಳ್ಗೆ 05.54

ಸೂರ್ಯಾಸ್ತ: ಸಂಜೆ 06.48

ರಾಹುಕಾಲ : ಬೆಳಗ್ಗೆ 07.37 ರಿಂದ ಬೆ.09.13

ಧನಸ್ಸು ರಾಶಿ

ಹೊಗಳು ಮಾತುಗಳಿಗೆ ಮರುಳಾಗಿ ತೊಂದರೆಯನ್ನು ಅನುಭವಿಸುವಿರಿ. ಸುಲಭವಾಗಿ ಮನಸ್ಸಿಟ್ಟು ಯಾವುದೇ ಕೆಲಸವನ್ನು ಆರಂಭಿಸುವುದಿಲ್ಲ. ಅಲ್ಪ ಪ್ರಮಾಣದ ಸೋಮಾರಿತನವು ನಿಮ್ಮನ್ನು ಕಾಡುತ್ತದೆ. ತೆಗೆದುಕೊಂಡ ತೀರ್ಮಾನಗಳನ್ನು ಬದಲಾಯಿಸದೆ ಹೋದಲ್ಲಿ ಯಶಸ್ಸು ದೊರೆಯುತ್ತದೆ. ಕುಟುಂಬದಲ್ಲಿ ಉತ್ತಮ ಬಾಂಧವ್ಯ ಇರಲಿದೆ. ಸಂಗಾತಿಯಿಂದ ನಿಮಗೆ ಹಣದ ಸಹಾಯ ದೊರೆಯುತ್ತದೆ. ಕೈ ಕಾಲುಗಳಿಗೆ ಪೆಟ್ಟಾಗುವ ಸಂಭವವಿದೆ ಎಚ್ಚರಿಕೆ ಇರಲಿ. ಭೂ ವಿವಾದ ಒಂದು ಕಾನೂನಿನ ಮುಖಾಂತರ ಬಗೆಹರಿಯುತ್ತದೆ. ಕೋಪ ಬಂದಷ್ಟೇ ವೇಗವಾಗಿ ಮರೆಯಾಗುತ್ತದೆ. ಇದರಿಂದ ಸ್ನೇಹಿತರ ದಂಡು ನಿಮ್ಮೊಂದಿಗೆ ಇರುತ್ತದೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಕಿರು ಪ್ರವಾಸ ಕೈಗೊಳ್ಳುವಿರಿ.

ಪರಿಹಾರ: ಹೆಣ್ಣು ಮಕ್ಕಳಿಗೆ ಹೊಸ ಬಟ್ಟೆಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 1

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ಕಂದು ಬಣ್ಣ

ಮಕರ ರಾಶಿ

ದಂಪತಿಗಳ ನಡುವೆ ಉತ್ತಮ ಬಾಂಧವ್ಯ ಇರುತ್ತದೆ. ವಿದ್ಯಾರ್ಥಿಗಳು ವಿನೂತನ ಸಾಧನೆಯನ್ನು ಮಾಡಲಿದ್ದಾರೆ. ಮಕ್ಕಳಿಗೆ ಉದ್ಯೋಗ ಲಭಿಸಲಿದೆ. ಜೀವನದಲ್ಲಿನ ಕಷ್ಟ ನಷ್ಟಗಳು ಮರೆಯಾಗಲಿವೆ. ಕುಟುಂಬದಲ್ಲಿ ಸುಖ ಸಂತೋಷ ಮನೆಮಾಡುತ್ತದೆ. ಸಮಾಜದ ಬಗ್ಗೆ ವಿಶೇಷ ಗೌರವ ಇರುತ್ತದೆ. ಸಾಮಾಜಿಕ ನೀತಿ ನಿಯಮಗಳನ್ನು ಗೌರವಿಸುವಿರಿ. ಸಮಾಜದ ನಾಯಕತ್ವ ನಿಮ್ಮದಾಗುತ್ತದೆ. ಧಾರ್ಮಿಕ ಆಚರಣೆಯಲ್ಲಿ ಆಸಕ್ತಿ ತೋರವಿರಿ. ಯಾರಿಗೂ ಮೋಸ ಮಾಡದೆ ವಿಧೇಯತೆಯಿಂದ ವರ್ತಿಸುವಿರಿ. ನಿಮ್ಮ ಹಿರಿಯ ಅಧಿಕಾರಿಗಳು ಸಹ ನಿಮ್ಮನ್ನು ಗೌರವಿಸುತ್ತಾರೆ. ತಾಳ್ಮೆಯಿಂದ ಪ್ರತಿಯೊಬ್ಬರ ಮಾತನ್ನು ಆಲಿಸುವಿರಿ. ಉತ್ತಮ ಆದಾಯವಿದ್ದರೂ ಆಡಂಬರ ತೋರದೆ ಸರಳ ಜೀವನ ನಡೆಸುವಿರಿ.

ಪರಿಹಾರ: ಮನೆಯಲ್ಲಿರುವ ಸಾಕು ಪ್ರಾಣಿಗಳಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 8

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ಕಪ್ಪು ಬಣ್ಣ

ಕುಂಭ ರಾಶಿ

ನಿಮಗೆ ಒಪ್ಪಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ಕಷ್ಟಪಟ್ಟು ಕೆಲಸ ಮಾಡಲು ಹಿಂಜರಿಯುವುದಿಲ್ಲ. ಶಾಂತಿ ಸಂಯಮದಿಂದ ಜೀವನವನ್ನು ನಡೆಸುವಿರಿ. ಚಿಕ್ಕ ಮಕ್ಕಳು ಸಹ ತಂದೆಯೊಡನೆ ಕೆಲಸವನ್ನು ನಿರ್ವಹಿಸಲು ಆರಂಭಿಸುತ್ತಾರೆ .ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಜೊತೆ ಅನಾವಶ್ಯಕ ವಾದ ವಿವಾದ ಇರುತ್ತದೆ. ಸಹನಾಶೀಲತೆಯಿಂದ ಬಾಳುವಿರಿ. ಆತ್ಮೀಯರ ಬಗ್ಗೆ ಅನಾವಶ್ಯಕ ಸಂಶಯ ವ್ಯಕ್ತಪಡಿಸುವಿರಿ. ತಪ್ಪು ತಿಳುವಳಿಕೆಯಿಂದ ಹಣಕಾಸಿನ ವಿವಾದ ಒಂದನ್ನು ಎದುರಿಸಬೇಕಾಗುತ್ತದೆ. ನಿರಾಶೆಯನ್ನು ಒಪ್ಪದೆ ಕೋಪಕ್ಕೆ ಒಳಗಾಗುವಿರಿ. ಸಂಬಂಧಿಕರೊಬ್ಬರ ಸಹಾಯ ಸಹಕಾರದಿಂದ ಎದುರಾಗುವ ಕಷ್ಟದಿಂದ ಪಾರಾಗುವಿರಿ. ದಾಂಪತ್ಯ ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಇರುತ್ತದೆ.

ಪರಿಹಾರ: ನೆರೆ ಹೊರೆಯ ಮಕ್ಕಳಿಗೆ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 11

ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ: ತಿಳಿಹಸಿರು

ಮೀನ ರಾಶಿ

ಯಾವುದೇ ಹಂತದಲ್ಲಿಯೂ ಆರಂಭಿಸಿದ ಕೆಲಸ ಕಾರ್ಯಗಳನ್ನು ನಿಲ್ಲಿಸುವುದಿಲ್ಲ. ಆದರೆ ಅನಾವಶ್ಯಕವಾಗಿ ತೆಗೆದುಕೊಂಡ ತೀರ್ಮಾನಗಳನ್ನು ಬದಲಿಸುವಿರಿ. ನಿಮ್ಮ ಮನಸ್ಸು ತಿಳಿ ನೀರಿನಂತೆ ಶುಭ್ರವಾಗಿರುತ್ತದೆ. ಆದರೆ ಮನಸ್ಸಿಟ್ಟು ಯಾವುದೇ ಕೆಲಸವನ್ನು ಮಾಡುವುದಿಲ್ಲ. ಹಿರಿಯ ಸೋದರಿ ಅಥವಾ ಸೋದರನಿಂದ ಅನುಕೂಲವಿರುತ್ತದೆ. ನಿಮಗೆ ಶೀತದಿಂದ ತಲೆನೋವು ಬರುವ ಸಾಧ್ಯತೆಗಳಿವೆ. ಬಂಧು-ಬಳಗದವರಿಂದ ಯಾವುದೇ ಸಹಾಯ ದೊರೆಯುವುದಿಲ್ಲ. ನಿಮ್ಮಿಂದ ಸಹಾಯ ಪಡೆದವರು ದೂರ ಸರಿಯುತ್ತಾರೆ. ಮನಸ್ಸಿನಲ್ಲಿ ಯಾವುದೋ ಒಂದು ಯೋಚನೆ ನಿಮ್ಮನ್ನು ಕಾಡುತ್ತದೆ. ಸಮಾಜದಲ್ಲಿರುವ ಒಳ್ಳೆಯ ಹೆಸರನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ಸಂಗಾತಿ ಮತ್ತು ಮಕ್ಕಳ ಜೊತೆಯಲ್ಲಿ ಮನರಂಜನ ಸ್ಥಳಕ್ಕೆಸ್ಥಳಕ್ಕೆ ಭೇಟಿ ನೀಡುವಿರಿ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 2

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ನಸುಗೆಂಪು

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್: 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.