ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಜನಾಕರ್ಷಕ ವ್ಯಕ್ತಿತ್ವ ಇರುತ್ತೆ, ಕಷ್ಟ ನಷ್ಟಗಳಿದ್ದರೂ ಗೆಲ್ಲುತ್ತೀರಿ; ಮೇಷ, ವೃಷಭ, ಮಿಥುನ, ಕಟಕ ರಾಶಿ ಫಲ

Horoscope Today: ಜನಾಕರ್ಷಕ ವ್ಯಕ್ತಿತ್ವ ಇರುತ್ತೆ, ಕಷ್ಟ ನಷ್ಟಗಳಿದ್ದರೂ ಗೆಲ್ಲುತ್ತೀರಿ; ಮೇಷ, ವೃಷಭ, ಮಿಥುನ, ಕಟಕ ರಾಶಿ ಫಲ

25 ಜೂನ್ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (25th June 2024 Horoscope).

ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ದಿನ ಭವಿಷ್ಯ ತಿಳಿಯಿರಿ
ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ದಿನ ಭವಿಷ್ಯ ತಿಳಿಯಿರಿ

ಇಂದಿನ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (25th June 2024 Horoscope)

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣಪಕ್ಷ, ಮಂಗಳವಾರ

ತಿಥಿ: ಚತುರ್ಥಿ ರಾತ್ರಿ 12.51ರವರೆಗೂ ಇದ್ದು ಅನಂತರ ಪಂಚಮಿ ಆರಂಭವಾಗುತ್ತದೆ.

ನಕ್ಷತ್ರ: ಶ್ರವಣ ನಕ್ಷತ್ರವು ಸಂಜೆ 4.37 ರವರೆಗೆ ಇದ್ದು ಅನಂತರ ಧನಿಷ್ಠ ನಕ್ಷತ್ರವು ಆರಂಭವಾಗಲಿದೆ.

ಸೂರ್ಯೋದಯ: ಬೆಳಿಗ್ಗೆ 5.54

ಸೂರ್ಯಾಸ್ತ: ಸಂಜೆ 6.48

ರಾಹುಕಾಲ: ಬೆಳಿಗ್ಗೆ 3.37 ರಿಂದ ಸಂಜೆ 5.13

ಇಂದಿನ ವಿಶೇಷ ಅಂಗಾರಕ ಸಂಕಷ್ಠಹರ ಚತುರ್ಥಿ. ಚಂದ್ರೋದಯ ರಾತ್ರಿ: 10.06

ಮೇಷ ರಾಶಿ

ಸಮಾಜದಲ್ಲಿ ಉನ್ನತ ಗೌರವ ಪಡೆಯಲು ಪ್ರಯತ್ನಿಸುವಿರಿ. ನಿಮ್ಮ ದಿನನಿತ್ಯದ ಪ್ರಗತಿಗೆ ಆತ್ಮೀಯರಿಂದಲೇ ತೊಂದರೆ ಉಂಟಾಗುತ್ತದೆ. ನಿಮ್ಮ ನಿರೀಕ್ಷೆಯಂತೆ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವುದಿಲ್ಲ. ಸಂಗಾತಿಯ ಸಹಾಯದಿಂದ ಭಾಗಶಃ ಯಶಸ್ಸು ದೊರೆಯುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಬೇರೆಯವರ ಹಣಕಾಸಿನ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ ತೊಂದರೆಗೆ ಸಿಲುಕುವಿರಿ. ನಿಮ್ಮಲ್ಲಿ ಜನಾಕರ್ಷಕ ವ್ಯಕ್ತಿತ್ವ ಇರುತ್ತದೆ. ವಿಧೇಯ ಜೀವನವನ್ನು ನಡೆಸುವಿರಿ. ಕುಟುಂಬದವರೊಡನೆ ಉತ್ತಮ ಬಾಂಧವ್ಯ ಇರುತ್ತದೆ. ಮಕ್ಕಳ ಮನಸ್ಸಿನ ಆಸೆಗಳನ್ನು ಪೂರೈಸಲು ವಿಫಲರಾಗುವಿರಿ. ಅತಿ ಮುಖ್ಯವಾದ ಕೆಲಸಗಳನ್ನು ಯಶಸ್ವಿಗೊಳಿಸುವಿರಿ. ನಿಮಗಿರುವ ಕಾರ್ಯದಕ್ಷತೆಗೆ ತಕ್ಕನಾದ ಫಲಿತಾಂಶವನ್ನು ಗಳಿಸುವಿರಿ.

ಪರಿಹಾರ: ಬಡ ರೋಗಿಗಳಿಗೆ ಹಣ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 8

ಅದೃಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿಬಣ್ಣ

ವೃಷಭ ರಾಶಿ

ಕುಟುಂಬದಲ್ಲಿ ಪರಸ್ಪರ ಉತ್ತಮ ಹೊಂದಾಣಿಕೆ ಇರುತ್ತದೆ. ಮಕ್ಕಳಿಗೆ ಮನಸ್ಸಿನಲ್ಲಿ ಭೀತಿ ಆವರಿಸಿರುತ್ತದೆ. ಮಕ್ಕಳಿಗೆ ನಿಜವಾದ ಪ್ರೀತಿ ನೀಡಲು ಪ್ರಯತ್ನಿಸುವಿರಿ. ಬೇರೆಯವರ ಮೇಲೆ ಅವಲಂಬಿತರಾಗದೆ ಸ್ವಂತ ಪ್ರತಿಭೆಯಿಂದ ಜೀವನದಲ್ಲಿ ಮುಂದೆ ಬರುವಿರಿ. ಧಾರ್ಮಿಕ ಗುರುಗಳ ಬೋಧನೆಯನ್ನು ನಿತ್ಯ ಜೀವನಕ್ಕೆ ಅಳವಡಿಸಿಕೊಳ್ಳುವಿರಿ. ಯಾವುದೇ ಕೆಲಸ ಕಾರ್ಯಗಳನ್ನು ನಿಯಮಾನುಸಾರ ಮಾಡುವ ಕಾರಣ ನಿಧಾನಗತಿಯಲ್ಲಿ ಫಲಿತಾಂಶಗಳು ದೊರೆಯುತ್ತವೆ. ಸಂಘ ಸಂಸ್ಥೆಯ ಒಡೆತನ ನಿಮಗೆ ದೊರೆಯುತ್ತದೆ. ಜೀವನದಲ್ಲಿ ಸ್ಥಿರತೆ ಇರದೆ ಏರುಪೇರು ಎದುರಾಗುತ್ತದೆ. ಆತ್ಮೀಯರೊಬ್ಬರು ನಿಮ್ಮ ಪ್ರಗತಿಪರ ಜೀವನಕ್ಕೆ ಧಕ್ಕೆ ಉಂಟು ಮಾಡುತ್ತಾರೆ.

ಪರಿಹಾರ: ಬಲಗೈಯಲ್ಲಿ ಬೆಳ್ಳಿಯ ಕೈಖಡಗ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಹಾಲಿನ ಬಣ್ಣ

ಮಿಥುನ ರಾಶಿ

ನಿಮ್ಮ ತಪ್ಪನ್ನು ತಿದ್ದಿ ಒಪ್ಪ ಮಾಡಲು ಆತ್ಮೀಯರೊಬ್ಬರು ಇರುತ್ತಾರೆ. ಈ ಕಾರಣದಿಂದ ಮಾನಸಿಕ ಒತ್ತಡ ಇರುವುದಿಲ್ಲ. ಇರುವ ವಾಹನವನ್ನು ವಿಲೇವಾರಿ ಮಾಡಿ ಹೊಸ ವಾಹನಕೊಳ್ಳುವಿರಿ. ಜೀವನದಲ್ಲಿ ಕಷ್ಟ ನಷ್ಟಗಳು ಇದ್ದರೂ ಗೆದ್ದು ಸಾಗುವಿರಿ. ಕುಟುಂಬದಲ್ಲಿನ ಹೆಚ್ಚಿನ ಜವಾಬ್ದಾರಿ ನಿಮ್ಮದಾಗುತ್ತದೆ. ಅತಿಯಾದ ಖರ್ಚು ವೆಚ್ಚ ಜೀವನದ ಹಾದಿಯನ್ನು ಬದಲಿಸುತ್ತದೆ. ಕಾನೂನು ಚೌಕಟ್ಟಿನಲ್ಲಿ ಇರುವ ವಿವಾದಗಳನ್ನು ಗೆಲ್ಲುವಿರಿ. ಸ್ಥಿರವಾದ ಮನಸ್ಸಿರುವುದಿಲ್ಲ. ಅನಾವಶ್ಯಕವಾಗಿ ಬದಲಾಯಿಸುವ ನಿಮ್ಮ ನಿರ್ಧಾರಗಳಿಂದಾಗಿ ಕೆಲಸ ಕಾರ್ಯಗಳು ಅಪೂರ್ಣಗೊಳ್ಳುತ್ತವೆ. ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಸೋಲಿನ ವೇಳೆ ಸಹನೆಯನ್ನು ಕಳೆದುಕೊಂಡು ಸಿಡುಕಿನಿಂದ ವರ್ತಿಸುವಿರಿ.

ಪರಿಹಾರ: ಬೆಳ್ಳಿಯ ಉಂಗುರ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 2

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ಹೊಗೆಯ ಬಣ್ಣ

ಕಟಕ ರಾಶಿ

ನಿಮ್ಮಲ್ಲಿ ಯಾವುದೇ ಆಸೆ ಆಕಾಂಕ್ಷಿಗಳು ಇರುವುದಿಲ್ಲ, ನಿಷ್ಕಪಟಿಗಳು. ಯಾವುದೇ ಕೆಲಸ ಕಾರ್ಯಗಳಾದರೂ ಹಿಂಜರಿಯದೆ ಮುಂದಾಳತ್ವ ವಹಿಸುವಿರಿ. ಸಮಾಜದಲ್ಲಿ ವಿಶೇಷ ಕೀರ್ತಿ ಲಭಿಸುತ್ತದೆ. ಹಣಕ್ಕೆ ವಿಶೇಷವಾದ ಮನ್ನಣೆ ಕೊಡುವವರು ನೀವಲ್ಲ. ಅಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲದಿಂದ ಹೊಸ ಅವಕಾಶಗಳನ್ನು ನಿರೀಕ್ಷಿಸುವಿರಿ. ಅಗೋಚರ ಶಕ್ತಿಯ ಬೆಂಬಲ ನಿಮಗಿರುತ್ತದೆ. ಪ್ರವಾಸ ಮಾಡುವುದೆಂದರೆ ಹೆಚ್ಚಿನ ಆಸಕ್ತಿ ತೋರುವಿರಿ. ಗೃಹಿಣಿಯರ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ತಪ್ಪಿಲ್ಲದಿದ್ದರೂ ಅಪವಾದವೊಂದನ್ನು ಎದುರಿಸುವಿರಿ. ಎಂತಹ ಸಂದರ್ಭವೆಂದರೂ ನಂಬಿಕೆ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಸಫಲರಾಗುವಿರಿ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ: 9

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ಆಕಾಶ ನೀಲಿ ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್: 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)