ಕನ್ನಡ ಸುದ್ದಿ  /  Astrology  /  Horoscope Today Astrology Prediction 26 February 2024 Leo Virgo Libra Scorpio Daily Horoscope Sts

Horoscope Today: ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಯಶಸ್ಸು, ವಾಹನ ಚಾಲನೆ ವೇಳೆ ಎಚ್ಚರ; ಸಿಂಹದಿಂದ ವೃಶ್ಚಿಕ ರಾಶಿವರೆಗಿನ ದಿನಭವಿಷ್ಯ

ಫೆಬ್ರವರಿ 26, ಸೋಮವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (26 February 2024 Daily Horoscope).

ಫೆಬ್ರವರಿ 26ರ ದಿನಭವಿಷ್ಯ
ಫೆಬ್ರವರಿ 26ರ ದಿನಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ( February 25 2024 Daily Horoscope).

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಕೃಷ್ಣಪಕ್ಷ, ಸೋಮವಾರ

ತಿಥಿ : ಬಿದಿಗೆ ತಿಥಿಯು ರಾ.09.05 ರವರೆಗು ಇದ್ದು ಆನಂತರ ತದಿಗೆ ಆರಂಭವಾಗುತ್ತದೆ.

ನಕ್ಷತ್ರ : ಉತ್ತರ ನಕ್ಷತ್ರವು ರಾ.02.38 ವರೆಗು ಇರುತ್ತದೆ. ಆನಂತರ ಹಸ್ತ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆ.06.35

ಸೂರ್ಯಾಸ್ತ: ಸ.06.26

ರಾಹುಕಾಲ : ಬೆ.07.30 ರಿಂದ ಬೆ.09.00

ರಾಶಿ ಫಲಗಳು

ಸಿಂಹ

ಬೇಸರದಿಂದ ಹೊರಬರಲು ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಕುಟುಂಬದಲ್ಲಿ ಅನುಕೂಲಕರ ವಾತಾವರಣ ಕಂಡು ಬರುತ್ತದೆ. ವಿಶೇಷವಾಗಿ ಮಾನಸಿಕ ಸ್ಥಿಮಿತವನ್ನು ಗಳಿಸಲು ಧ್ಯಾನದ ಮಾರ್ಗವನ್ನು ಆಯ್ದುಕೊಳ್ಳೂವಿರಿ. ಕುಟುಂಬದವರ ಜೊತೆಯಲ್ಲಿ ಪಾಲುಗಾರಿಕೆಯ ವ್ಯಾಪಾರವನ್ನು ಆರಂಭಿಸುವಿರಿ. ಹಣದ ಕೊರತೆ ಕಂಡುಬರುವುದಿಲ್ಲ. ಹಳ್ಳಿ ಜೀವನದಲ್ಲಿ ಆಸಕ್ತಿ ಮೂಡುತ್ತದೆ. ಸ್ವಂತ ಜಮೀನು ಅಥವಾ ಮನೆಯಲ್ಲಿ ಕೊಳ್ಳಲು ಹಣವನ್ನು ವಿನಿಯೋಗಿಸುವಿರಿ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏಕಾಂಗಿಯಾಗಿ ನಿರ್ವಹಿಸುವಿರಿ. ಅನಿರೀಕ್ಷಿತವಾಗಿ ಆತ್ಮೀಯರ ಸಮಾಗಮವಾಗುತ್ತದೆ. ವಿದ್ಯಾರ್ಥಿಗಳ ಜೀವನದಲ್ಲಿ ಯಾವುದೇ ರೀತಿಯ ಗುರುತರ ಬದಲಾವಣೆಗಳು ಕಾಣುವುದಿಲ್ಲ. ಸಾಲವನ್ನು ಕೊಡಲು ಅಥವಾ ಪಡೆಯಲು ಒಳ್ಳೆಯ ಸಮಯವಲ್ಲ.

ಪರಿಹಾರ : ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ರಕ್ತದ ಬಣ್ಣ

ಕನ್ಯಾ

ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಿರಿ. ನಿರೀಕ್ಷೆಗಿಂತಲೂ ಹೆಚ್ಚಿನ ಹಣದ ಅವಶ್ಯಕತೆ ಉಂಟಾಗಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯವಿರುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯ ಮೇಲೆ ಹೆಚ್ಚಿನ ಗಮನವನ್ನು ಹೊಂದಿರುತ್ತಾರೆ. ಪ್ರಯತ್ನಪಟ್ಟರೆ ಯಾವುದು ಅಸಾಧ್ಯವಲ್ಲ ಎಂದು ಸಾಧಿಸಿ ತೋರಿಸುವಿರಿ. ಸೋದರಿಯ ಜೀವನದಲ್ಲಿ ಪ್ರಮುಖವಾದ ಘಟನೆಯೊಂದು ನಡೆಯಲಿದೆ. ಉದ್ಯೋಗವನ್ನು ಬದಲಾಯಿಸಬಹುದಾದ ಸಾಧ್ಯತೆಗಳಿವೆ. ಆಡುವ ಮಾತಿನ ಮೇಲೆ ಹಿಡಿತವಿರಬೇಕು. ದುಡುಕಿ ಮಾತನಾಡಿದಲ್ಲಿ ಆತ್ಮೀಯರೂ ತಪ್ಪು ಮಾಡಿ ಪಶ್ಚಾತಾಪ ಪಡುವಿರಿ.

ಪರಿಹಾರ : ತಲೆಗೆ ಹಾಲಲ್ಲಿಟ್ಟು ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಎಲೆಹಸಿರು ಬಣ್ಣ

ತುಲಾ

ಎದುರಾಗುವ ಸಮಸ್ಯೆಗಳನ್ನು ಮೀರಿ ಕುಟುಂಬದ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ಕೆಲಸ ನಿರ್ವಹಿಸುವಿರಿ. ಉದ್ಯೋಗದಲ್ಲಿ ನಿಮ್ಮ ಕಾರ್ಯ ದಕ್ಷತೆಗೆ ಎಲ್ಲರ ಪ್ರಶಂಸೆ ದೊರೆಯುತ್ತದೆ. ಬಹುಶ: ಉದ್ಯೋಗವನ್ನು ಬದಲಾಯಿಸಬಹುದು. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ವಿದ್ಯಾರ್ಥಿಗಳು ಚುರುಕುತನದಿಂದ ಕರ್ತವ್ಯ ಪಾಲನೆ ಮಾಡುತ್ತಾರೆ. ಎಲ್ಲರ ಗಮನಸೆಳೆಯುವ ಕೆಲಸವೊಂದನ್ನು ಮಾಡುವಿರಿ. ವಿವಾಹ ನಿಶ್ಚಯವಾಗುವ ಸಾಧ್ಯತೆಗಳಿವೆ. ಖರ್ಚು ವೆಚ್ಚದ ಮೇಲೆ ಗಮನವಿರಲಿ. ಕಣ್ಣಿನ ತೊಂದರೆ ನಿಮ್ಮನ್ನು ಕಾಡಬಹುದು. ಪೂರ್ವ ನಿಯೋಜಿತ ಪ್ರವಾಸವು ಮೊಟಕುಗೊಳ್ಳುತ್ತದೆ.

ಪರಿಹಾರ : ಹಣೆಯಲ್ಲಿ ತಿಲಕವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಕೇಸರಿ ಬಣ್ಣ

ವೃಶ್ಚಿಕ

ಕೈಹಿಡಿದ ಕೌಟುಂಬಿಕ ಕೆಲಸ ಕಾರ್ಯಗಳು ಯಶಸ್ವಿ ಆಗುತ್ತವೆ. ಪರಿಚಿತರ ಸಹಾಯದಿಂದ ಉದ್ಯೋಗ ಲಭಿಸುತ್ತದೆ. ಮನೆತನದ ವಿವಾದವೊಂದು ಪರಿಹಾರವಾಗಲಿದೆ. ಹೆಚ್ಚಿನ ಪರಿಸ್ರಮದಿಂದ ಮಾತ್ರ ವಿದ್ಯಾರ್ಥಿಗಳು ಗುರಿ ತಲುಪಲು ಸಾಧ್ಯ. ವಾಣಿಜ್ಯ ಸಂಸ್ಥೆಗೆ ಅಗತ್ಯವಾದ ಯಂತ್ರೋಪಕರಣಗಳ ಮಾರಾಟದಲ್ಲಿ ಲಾಭವಿರುತ್ತದೆ. ಅನಾವಶ್ಯಕ ವಾದ ವಿವಾದಗಳನ್ನು ನಂಬದಿರಿ. ಚಾಡಿಮಾತನ್ನು ಕೇಳಿದಲ್ಲಿ ಕುಟುಂಬದ ಸ್ವಾಸ್ಥ್ಯ ಹಾಳಾಗುತ್ತದೆ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸಿ. ಕಲುಷಿತ ನೀರಿನ ಸೇವನೆಯಿಂದ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಕೃಷಿಕಾರ್ಯದಲ್ಲಿ ಸಹಾಯವಾಗುವ ಉಪಕರಣಗಳ ಅನ್ವೇಷಣೆಗೆ ಎಲ್ಲರ ಸಹಕಾರ ದೊರೆಯುತ್ತದೆ

ಪರಿಹಾರ: ತಾಯಿಯವರಿಂದ 5 ರೂ ನಾಣ್ಯ ಪಡೆದು ದಿನದ ಕೆಲಸ ಆರಂಭಿಸಿರಿ

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ

------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).