ಕನ್ನಡ ಸುದ್ದಿ  /  Astrology  /  Horoscope Today Astrology Prediction 26 February 2024 Sagittarius Capricorn Aquarius Pisces Daily Horoscope Sts

Horoscope Today: ಕಷ್ಟದ ವೇಳೆ ಸ್ನೇಹಿತರೊಬ್ಬರು ಹಣದ ಸಹಾಯ ಮಾಡುವರು, ಮಂಗಳಕಾರ್ಯ ಯಶಸ್ವಿ; ಧನು ರಾಶಿಯಿಂದ ಮೀನದವರೆಗಿನ ದಿನಭವಿಷ್ಯ

ಫೆಬ್ರವರಿ 26, ಸೋಮವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (26 February 2024 Daily Horoscope).

ಫೆಬ್ರವರಿ 26ರ ದಿನಭವಿಷ್ಯ
ಫೆಬ್ರವರಿ 26ರ ದಿನಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ( February 25 2024 Daily Horoscope).

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಕೃಷ್ಣಪಕ್ಷ, ಸೋಮವಾರ

ತಿಥಿ : ಬಿದಿಗೆ ತಿಥಿಯು ರಾ.09.05 ರವರೆಗು ಇದ್ದು ಆನಂತರ ತದಿಗೆ ಆರಂಭವಾಗುತ್ತದೆ.

ನಕ್ಷತ್ರ : ಉತ್ತರ ನಕ್ಷತ್ರವು ರಾ.02.38 ವರೆಗು ಇರುತ್ತದೆ. ಆನಂತರ ಹಸ್ತ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆ.06.35

ಸೂರ್ಯಾಸ್ತ: ಸ.06.26

ರಾಹುಕಾಲ : ಬೆ.07.30 ರಿಂದ ಬೆ.09.00

ರಾಶಿ ಫಲಗಳು

ಧನಸ್ಸು

ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ನಿಮ್ಮ ಮನಸ್ಸು ಸ್ಥಿಮಿತದಲ್ಲಿ ಇರುವುದಿಲ್ಲ. ಅನಾವಶ್ಯಕ ಕೋಪಕ್ಕೆ ಒಳಗಾಗುವಿರಿ. ಅದೃಷ್ಟವಿದೆ ಆದರೆ ಸಮಯವನ್ನು ಅರಿತು ವರ್ತಿಸುವುದಿಲ್ಲ. ಪ್ರೀತಿ ವಿಶ್ವಾಸದಿಂದ ಎಲ್ಲರ ಜೊತೆ ಬೆರೆತಲ್ಲಿ ಮಹದಾಸೆಯೊಂದು ನೆರವೇರುತ್ತದೆ. ಉದ್ಯೋಗದಲ್ಲಿ ತೊಂದರೆ ಬಾರದು. ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಆತ್ಮೀಯರ ಸಹ್ಕಾಯ ಪಡೆಯುತ್ತಾರೆ. ಹಣದ ಆಸೆ ಇರದು. ಆದರೆ ಜೀವನಕ್ಕೆ ಸಾಕಾಗುವಷ್ಟು ಹಣವನ್ನು ಗಳಿಸುವಿರಿ. ವಂಶಾಧಾರಿತ ವೃತ್ತಿಯನ್ನು ಮುಂದುವರಿಸುವಿರಿ. ಧಾರ್ಮಿಕ ಕಾರ್ಯವೊಂದನ್ನು ಯಶಸ್ವಿಯಾಗಿ ನಡೆಸುವಿರಿ. ಮಿತಿ ಇಲ್ಲದ ಆಹಾರ ಸೇವನೆಯಿಂದ ಅಜೀರ್ಣದ ತೊಂದರೆ ಉಂಟಾಗುತ್ತದೆ. ಸೋದರಿಯ ಕುಟುಂಬದಲ್ಲಿ ಅಶಾಂತಿ ಇರುತ್ತದೆ. ಹಿರಿಯರ ಮಾರ್ಗದರ್ಶನ ಇಲ್ಲದೆ ಯಾವುದೇ ಕೆಲಸ ಮಾಡಲಾರಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕೆಂಪು ಬಣ್ಣ

ಮಕರ

ಸಮಯ ಸಂದರ್ಭವನ್ನು ಅರಿತು ವರ್ತಿಸುವ ಕಾರಣ ಸುಖಜೀವನ ನಡೆಸುವಿರಿ. ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ವಾಹನಗಳ ದುರಸ್ಥಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ಉದ್ಯೋಗ ಲಭಿಸುತ್ತದೆ. ಉತ್ತಮ ಅದಾಯವಿರುತ್ತದೆ. ಹಿರಿಯರಿಗೆ ಸಂಬಂಧಿಸಿದ ಆಸ್ತಿಯ ವಿವಾದ ಇರುತ್ತದೆ. ಕೈಕಾಲುಗಳಲ್ಲಿ ನಿಶ್ಯಕ್ತಿ ಉಂಟಾಗುತ್ತದೆ. ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ಉತ್ತಮ ಫಲಿತಾಂಶ ಪಡೆಯುತ್ತಾರೆ. ವಾಸಸ್ಥಳವನ್ನು ಬದಲಾಯಿಸುವಿರಿ. ಕಷ್ಟದ ವೇಳೆ ಸ್ನೇಹಿತರೊಬ್ಬರು ಹಣದ ಸಹಾಯ ಮಾಡುತ್ತಾರೆ. ಎಲ್ಲರನ್ನೂ ಅನುಮಾನದ ದೃಷ್ಠಿಯಲ್ಲಿ ನೋಡುವಿರಿ. ಮನೆಯಲ್ಲಿ ಮಂಗಳಕಾರ್ಯವೊಂದನ್ನು ಯಶಸ್ವಿಯಾಗಿ ನಡೆಸಿಕೊಡುವಿರಿ. ತಾಯಿಯವರ ಜೊತೆಯಲ್ಲಿ ಪಾಲುಗಾರಿಕೆ ವ್ಯಾಪಾರ ಆರಂಭಿಸುವಿರಿ.

ಪರಿಹಾರ: ನಿತ್ಯ ಬಳಸುವ ವಾಹನವನ್ನು ಶುಚಿಗೊಳಿಸಿ ದಿನದ ಕೆಲಸ ಆರಂಭಿಸಿರಿ

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ

ಕುಂಭ

ಅಪರೂಪದ ಪ್ರತಿಭೆಯ ಅನಾವರಣಕ್ಕೆ ವೇದಿಕೆಯೊಂದು ದೊರೆಯಲಿದೆ. ಕುಟುಂಬದಲ್ಲಿ ಹಣದ ವಿವಾದ ಇರುತ್ತದೆ. ತಾಯಿಗೆ ಭೂಮಿಯೊಂದು ಉಡುಗೊರೆಯಾಗಿ ಬರಲಿದೆ. ಬಟ್ಟೆಯ ತಯಾರಿಕೆಯಲ್ಲಿ ಆದಾಯವಿರುತ್ತದೆ. ಕೇಳುವುದೆಲ್ಲ ನಿಜ ಎಂದು ನಂಬದಿರಿ. ಉದ್ಯೋಗದಲ್ಲಿ ತೊಂದರೆ ಇರದು. ವಿದ್ಯಾರ್ಥಿಗಳು ಹಠದಿಂದ ಕಲಿಯುವಿಕೆಯಲ್ಲಿ ಮುಂದೆ ಇರುತ್ತಾರೆ. ಹಣಕಾಸಿನ ವಿಚಾರದಲ್ಲಿ ಇಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ಅಗತ್ಯತೆ ಪೂರೈಸುವಷ್ಟು ಆದಾಯ ಇರುತ್ತದೆ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಆರೋಗ್ಯದ ಬಗ್ಗೆ ಗಮನವಿರಲಿ. ವಿವಾಹದ ಮಾತುಕತೆ ನಡೆಯಬಹುದು. ತಂದೆಯವರಿಂದ ಹಣದ ಸಹಾಯ ದೊರೆಯಲಿದೆ.

ಪರಿಹಾರ : ಪೂರ್ವಿಕರ ಮನೆಯಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಹಳದಿ ಬಣ್ಣ

ಮೀನ

ಎದುರಾಗುವ ತೊಂದರೆಗಳಿಂದ ಕುಟುಂಬದ ಸದಸ್ಯರನ್ನು ಪಾರು ಮಾಡುವಿರಿ. ಕುಟುಂಬದಲ್ಲಿ ನೆಮ್ಮದಿ ನೆಲೆಸುತ್ತದೆ. ಸಾಮಾಜಿಕ ಕಳಕಳಿಯಿಂದ ಸಂಘ ಸಂಸ್ಥೆಯನ್ನು ಸ್ಥಾಪಿಸುವಿರಿ. ಉತ್ತಮ ಆದಾಯಕ್ಕಾಗಿ ಎರಡು ರೀತಿಯ ಉದ್ಯೋಗವನ್ನು ಮಾಡುವಿರಿ. ವೃತ್ತಿಕ್ಷೇತ್ರದಲ್ಲಿ ಅಧಿಕಾರಿಯಂತಹ ಸ್ಥಾನ ಮಾನ ದೊರೆಯುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಆತ್ಮೀಯರ ಸಹಾಯದಿಂದ ಉತ್ತಮ ಲಾಭವಿರುತ್ತದೆ. ನೀರಾವರಿ ಭೂಮಿ ಇದ್ದಲ್ಲಿ ಹಣ್ಣು ಮತ್ತು ತರಕಾರಿ ಬಿತ್ತನೆಗೆ ಪ್ರಯತ್ನಿಸುವಿರಿ. ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನಕ್ಕೆ ವಿದೇಶಕ್ಕೆ ತೆರಳುವಿರಿ. ಆರೋಗ್ಯದ ಬಗ್ಗೆ ಗಮನ ಇರಲಿ. ಕುಟುಂಬದ ಬಳಕೆಗಾಗಿ ತಂದೆಯ ಸಹಾಯದಿಂದ ಹೊಸ ವಾಹನವನ್ನು ನೀಡಲಿದ್ದಾರೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಎಳನೀರು ಮತ್ತು ದೀಪದ ಎಣ್ಣೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಹಸಿರು ಬಣ್ಣ

------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).