Horoscope Today: ಸಿಂಹ ರಾಶಿಯವರ ಆತುರ ಕೆಲಸ ಕೆಡಿಸಲಿದೆ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ರಾಶಿಫಲವೇನು- ಇಲ್ಲಿದೆ ವಿವರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಸಿಂಹ ರಾಶಿಯವರ ಆತುರ ಕೆಲಸ ಕೆಡಿಸಲಿದೆ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ರಾಶಿಫಲವೇನು- ಇಲ್ಲಿದೆ ವಿವರ

Horoscope Today: ಸಿಂಹ ರಾಶಿಯವರ ಆತುರ ಕೆಲಸ ಕೆಡಿಸಲಿದೆ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ರಾಶಿಫಲವೇನು- ಇಲ್ಲಿದೆ ವಿವರ

Horoscope Today June 26 (ಜೂನ್ 26ರ ರಾಶಿ ಭವಿಷ್ಯ): ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ ರಾಶಿಯವರ ಆತುರ ಕೆಲಸ ಕೆಡಿಸಲಿದೆ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ರಾಶಿಫಲವೇನು? ಇಂದಿನ ದಿನಭವಿಷ್ಯ ಇಲ್ಲಿದೆ. (26th June 2024 Horoscope).

Horoscope Today: ಸಿಂಹ ರಾಶಿಯವರ ಆತುರ ಕೆಲಸ ಕೆಡಿಸಲಿದೆ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ರಾಶಿಫಲವೇನು- ಇಲ್ಲಿದೆ ವಿವರ
Horoscope Today: ಸಿಂಹ ರಾಶಿಯವರ ಆತುರ ಕೆಲಸ ಕೆಡಿಸಲಿದೆ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ರಾಶಿಫಲವೇನು- ಇಲ್ಲಿದೆ ವಿವರ

ಇಂದಿನ ದಿನ ಭವಿಷ್ಯ (ಜೂನ್ 26ರ ರಾಶಿ ಭವಿಷ್ಯ): 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (26th June 2024 Horoscope)

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯನ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣಪಕ್ಷ, ಬುಧವಾರ

ತಿಥಿ : ಪಂಚಮಿ ರಾ.10.44 ರವರೆಗು ಇದ್ದು ಆನಂತರ ಷಷ್ಥಿ ಆರಂಭವಾಗುತ್ತದೆ.

ನಕ್ಷತ್ರ : ಧನಿಷ್ಠ ನಕ್ಷತ್ರವು ಹ. 03.22 ರವರೆಗೆ ಇದ್ದು ಆನಂತರ ಶತಭಿಷ ನಕ್ಷತ್ರವು ಆರಂಭವಾಗಲಿದೆ.

ಸೂರ್ಯೋದಯ ಬೆ.05.55

ಸೂರ್ಯಾಸ್ತ ಸ.06.48

ರಾಹುಕಾಲ : ಹ. 12.26 ರಿಂದ ಹ. 02.02

ಸಿಂಹ

ಉತ್ತಮ ಆದಾಯವಿದ್ದರೂ ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಪೂರ್ವಯೋಜನೆಯಂತೆ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಹಿರಿಯ ಸೋದವರ ಅಥವಾ ಸೋದರಿಯು ವಿವಾದವೊಂದಕ್ಕೆ ಸಿಲುಕುತ್ತಾರೆ. ನಿಮ್ಮ ನಿಷ್ಠೂರದ ಮಾತುಕತೆಗೆ ಆತ್ಮೀಯರಿಂದಲೇ ವಿರೋಧ ವ್ಯಕ್ತವಾಗುತ್ತದೆ. ವಿದ್ಯಾರ್ಥಿಗಳು ಸಾಧಾರಣ ಮಟ್ಟದ ಯಶಸ್ಸು ಗಳಿಸುತ್ತಾರೆ. ನಿಮಗೆ ವಾಯುದೋಷವಿರುತ್ತದೆ. ಮಕ್ಕಳನ್ನು ಅಜೀರ್ಣತೆ ಕಾಡಲಿದೆ. ಹುಟ್ಟೂರಿನಿಂದ ದೂರದ ಸ್ಥಳದಲ್ಲಿ ಉತ್ತಮ ಆದಾಯ ಗಳಿಸುವಿರಿ. ವಿದೇಶ ಪ್ರಯಾಣ ಯೋಗವಿದೆ. ಬಂಧು-ಬಳಗದವರಿಂದ ದೂರವಿರಲು ನಿರ್ಧರಿಸುವಿರಿ. ಅತಿಯಾದ ಆತುರದಿಂದ ಕೆಲಸ ಕಾರ್ಯಗಳನ್ನು ಆರಂಭಿಸಿದರೆ ಸೋಲುಂಟಾಗುವುದು. ಕುಟುಂಬದಲ್ಲಿನ ಹಿರಿಯರ ಆರೋಗ್ಯದಲ್ಲಿ ನಕಾರಾತ್ಮಕ ಬದಲಾವಣೆಗಳು ಉಂಟಾಗಲಿವೆ.

ಪರಿಹಾರ : ಪುಟ್ಟ ಮಕ್ಕಳಿಗೆ ಬೆಣ್ಣೆನೀಡಿ ಇಂದಿನ ಕೆಲಸವನ್ನು ಆರಂಬಿಸಿ.

ಅದೃಷ್ಟದ ಸಂಖ್ಯೆ 2

ಅದೃಷ್ಟದ ದಿಕ್ಕು : ನೈಋತ್ಯ

ಅದೃಷ್ಟದ ಬಣ್ಣ : ಬೂದು ಬಣ್ಣ

ಕನ್ಯಾ

ಕುಟುಂಬದ ಬಗ್ಗೆ ತಾಯಿಯವರಿಗೆ ಚಿಂತೆ ಇರುತ್ತದೆ. ವೃಥಾ ಅಲೆದಾಟದಿಂದ ಬೇಸರಗೊಳ್ಳುವಿರಿ. ಹಣದ ಕೊರತೆ ಇರುತ್ತದೆ. ಕಷ್ಟದಲ್ಲಿರುವ ಬೇರೆಯವರ ಬಗ್ಗೆ ಕನಿಕರವಿರುತ್ತದೆ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ನಿರತರಾಗುವಿರಿ. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನದಿಂದ ಮಾತ್ರ ಗುರಿ ತಲುಪಲು ಸಾಧ್ಯ. ಗಂಗಾ ಸ್ನಾನದ ಯೋಗವಿದೆ. ಯಾರನ್ನು ಅವಲಂಬಿಸದೆ ಸ್ವತಂತ್ರವಾಗಿ ಜೀವನ ನಡೆಸಲು ತೀರ್ಮಾನಿಸುವಿರಿ. ಚಿಕ್ಕ ಮಕ್ಕಳಿಗೆ ತೊಂದರೆ ಇರುತ್ತದೆ. ನಿಮ್ಮ ಮನಸ್ಸಿಗೆ ಒಪ್ಪುವ ಕೆಲಸವನ್ನಷ್ಟೇ ಆಯ್ದು ಮಾಡುವಿರಿ. ಕಲ್ಪನಾ ಜೀವಿಗಳು. ಬೇರೆಯವರ ಕಣ್ಣೀರಿಗೆ ಮನ ಸೋಲುತ್ತಾರೆ. ಬೇರೆಯವರ ಹೊಗಳಿಕೆಗೆ ಸುಲಭವಾಗಿ ಮರುಳಾಗುವಿರಿ.

ಪರಿಹಾರ : ಕೈ ಅಥವ ಕಾಲಿನಲ್ಲಿ ಕಪ್ಪು ದಾರವನ್ನು ಧರಿಸುವದರಿಂದ ಶುಭವಿರುತ್ತದೆ

ಅದೃಷ್ಟದ ಸಂಖ್ಯೆ : 5

ಅಷ್ಟದ ದಿಕ್ಕು ಪಶ್ಚಿಮ

ಅದೃಷ್ಟದ ಬಣ್ಣ : ಕಂದು ಬಣ್ಣ

ತುಲಾ

ಬಂಧು-ಬಳಗದವರನ್ನು ಪ್ರೀತಿಯಿಂದ ಕಾಣುವಿರಿ. ಆದರೆ ಹಣಕಾಸಿನ ವಿಚಾರದಲ್ಲಿ ಯಾರನ್ನು ನಂಬುವುದಿಲ್ಲ. ನಿಮ್ಮನ್ನು ಆಕ್ಷೇಪಿಸಿದಲ್ಲಿ ಕ್ರೋಧದಿಂದ ವರ್ತಿಸುವಿರಿ. ವಾದ ವಿವಾದದಲ್ಲಿ ಸೋತಾಗ ಕಣ್ಣೀರಿನ ಮೂಲಕ ನಿರಾಸೆ ತೋರುವಿರಿ. ಕುಟುಂಬದವರ ಕೆಲಸ ಕಾರ್ಯಗಳಿಗೆ ಮೊದಲ ಆದ್ಯತೆ ನೀಡುವಿರಿ. ಗಡಿಬಿಡಿಯಿಂದ ಕೆಲಸವನ್ನು ಆರಂಭಿಸಿದರೆ ತೊಂದರೆ ಉಂಟಾಗೆ ಸಿಲುಕುವಿರಿ. ಭಾವನಾತ್ಮಕ ಜೀವಿಗಳು. ಸೇಡಿನ ಮನೋಭಾವನೆ ಇರುವುದಿಲ್ಲ. ಕೋಪ ತಾಪದ ವೇಳೆ ಮೌನಕ್ಕೆ ಶರಣಾಗುವಿರಿ. ಸಮಾಜದಲ್ಲಿ ಜನಪ್ರಿಯ ವ್ಯಕ್ತಿಯಾಗಿ ಬಾಳುವಿರಿ. ನಿಮ್ಮ ವಿರೋಧಿಗಳನ್ನು ಸ್ನೇಹದಿಂದಲೇ ಕಾಣುವಿರಿ. ಆಕರ್ಷಕ ಒಡವೆ ವಸ್ತ್ರಗಳ ಮೇಲೆ ಹೆಚ್ಚಿನ ಆಸಕ್ತಿ ಮೂಡುತ್ತದೆ. ಸಂಚಾರ ಮಾಡುವಲ್ಲಿ ಸಂತೋಷವನ್ನು ಕಾಣುತ್ತಾರೆ

ಪರಿಹಾರ : ಮನೆಯಲ್ಲಿರುವ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹಾಲನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು ಉತ್ತರ

ಅದೃಷ್ಟದ ಬಣ್ಣ ಕಪ್ಪು ಬಣ್ಣ

ವೃಶ್ಚಿಕ

ಬಂಧು ಬಳಗದವರ ಜೊತೆಯಲ್ಲಿ ಯಾವುದೇ ತಾರತಮ್ಯ ತೋರುವುದಿಲ್ಲ. ಸ್ನೇಹಿತರ ಜೊತೆ ನೀರಿರುವ ಸ್ಥಳಕ್ಕೆ ಪ್ರವಾಸ ಕೈಗೊಳ್ಳುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ವರಮಾನ ದೊರೆಯುತ್ತದೆ. ಆಡುವ ಮಾತಿನಲ್ಲಿ ನಿಜಾಂಶವು ಅಡಗಿರುತ್ತದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೆ ಆಲಸ್ಯಕ್ಕೆ ಒಳಗಾಗುವಿರಿ. ಬಡವರಲ್ಲಿ ಕರುಣೆ ತೋರುವಿರಿ. ನಿಮ್ಮ ಮನದ ಆಸೆ ಆಕಾಂಕ್ಷೆಗಳು ಕೈಗೂಡುವುದಿಲ್ಲ. ದಂಪತಿಗಳ ನಡುವೆ ಮನಸ್ತಾಪವಿರುತ್ತದೆ. ಕಲುಷಿತ ನೀರಿನ ಸೇವನೆಯಿಂದ ಅನಾರೋಗ್ಯ ವಿರುತ್ತದೆ. ಆತ್ಮೀಯರ ಜೊತೆಗೂಡಿ ಪಾರುಗಾರಿಕೆಯ ವ್ಯಾಪಾರವನ್ನು ಆರಂಭಿಸುವಿರಿ. ಪಶು ಸಂಗೋಪನೆಯಲ್ಲಿ ಆಸಕ್ತಿ ಮೂಡುತ್ತದೆ. ವಂಶಕ್ಕೆ ಸಂಬಂಧಿಸಿದ ಹಣಕಾಸಿನಲ್ಲಿ ಸಿಂಹ ಪಾಲು ನಿಮಗೆ ದೊರೆಯುತ್ತದೆ.

ಪರಿಹಾರ : ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ತಿಳಿಹಸಿರು ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್: 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.