ಕೆಲಸ ಮಾಡುತ್ತಿರುವ ಕಂಪನಿ ಮೂಲಕ ವಿದೇಶಕ್ಕೆ ತೆರಳುವ ಅವಕಾಶ, ಕಷ್ಟಗಳೆಲ್ಲಾ ಪರಿಹಾರವಾಗಲಿವೆ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಫಲ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕೆಲಸ ಮಾಡುತ್ತಿರುವ ಕಂಪನಿ ಮೂಲಕ ವಿದೇಶಕ್ಕೆ ತೆರಳುವ ಅವಕಾಶ, ಕಷ್ಟಗಳೆಲ್ಲಾ ಪರಿಹಾರವಾಗಲಿವೆ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಫಲ

ಕೆಲಸ ಮಾಡುತ್ತಿರುವ ಕಂಪನಿ ಮೂಲಕ ವಿದೇಶಕ್ಕೆ ತೆರಳುವ ಅವಕಾಶ, ಕಷ್ಟಗಳೆಲ್ಲಾ ಪರಿಹಾರವಾಗಲಿವೆ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಫಲ

ಜೂನ್‌ 27ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (27th June 2024 Daily Horoscope).

ಕೆಲಸ ಮಾಡುತ್ತಿರುವ ಕಂಪನಿ ಮೂಲಕ ವಿದೇಶಕ್ಕೆ ತೆರಳುವ ಅವಕಾಶ, ಕಷ್ಟಗಳೆಲ್ಲಾ ಪರಿಹಾರವಾಗಲಿವೆ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಫಲ
ಕೆಲಸ ಮಾಡುತ್ತಿರುವ ಕಂಪನಿ ಮೂಲಕ ವಿದೇಶಕ್ಕೆ ತೆರಳುವ ಅವಕಾಶ, ಕಷ್ಟಗಳೆಲ್ಲಾ ಪರಿಹಾರವಾಗಲಿವೆ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಫಲ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (27th June 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಕೃಷ್ಣಪಕ್ಷ-ಗುರುವಾರ

ತಿಥಿ : ಷಷ್ಠಿ ರಾತ್ರಿ 08.25 ರವರೆಗೂ ಇದ್ದು ನಂತರ ಸಪ್ತಮಿ ಆರಂಭವಾಗುತ್ತದೆ.

ನಕ್ಷತ್ರ : ಶತಭಿಷ ನಕ್ಷತ್ರವು 01.54 ರವರೆಗೆ ಇದ್ದು ನಂತರ ಪೂರ್ವಾಭಾದ್ರ ನಕ್ಷತ್ರ ಆರಂಭವಾಗಲಿದೆ.

ಸೂರ್ಯೋದಯ: ಬೆಳಗ್ಗೆ 05.55

ಸೂರ್ಯಾಸ್ತ: ಸಂಜೆ 06.48

ರಾಹುಕಾಲ: 02.02 ರಿಂದ 03.38

ರಾಶಿ ಫಲ

ಸಿಂಹ

ಮಕ್ಕಳ ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ ನೀಡುವಿರಿ. ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಹಿಂಜರಿಯುವುದಿಲ್ಲ. ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ತೋರುವಿರಿ. ನಿಮ್ಮಲ್ಲಿ ಸ್ವಾರ್ಥದ ಗುಣ ಇರುವುದಿಲ್ಲ. ಹಣಕಾಸಿನ ತೊಂದರೆ ಇರುವುದಿಲ್ಲ. ಆದರೆ ನಿಮ್ಮ ತಪ್ಪಿನಿಂದಲೇ ಹಣಕಾಸಿನ ಕೊರತೆ ಉಂಟಾಗುತ್ತದೆ. ಬುದ್ದಿವಂತಿಕೆಯಿಂದ ಮಾತನಾಡುವಿರಿ. ಧಾರ್ಮಿಕ ಕ್ರಿಯೆಗಳಲ್ಲಿ ನಂಬಿಕೆ ಇರುತ್ತದೆ. ಎಂತಹ ಸಂದರ್ಭ ಎದುರಾದರೂ ಶಾಂತಿ ಸಂಯಮದಿಂದ ವರ್ತಿಸುವಿರಿ. ಕುಟುಂಬದ ಸದಸ್ಯರ ಜೊತೆ ತೀರ್ಥಯಾತ್ರೆಗೆ ತೆರಳುವಿರಿ. ವಿರೋಧಿಗಳೊಂದಿಗೆ ಸಹ ಸ್ನೇಹ ಬೆಳಸಲು ಬಯಸುವಿರಿ. ಆತುರದಿಂದ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ.

ಪರಿಹಾರ : ಮನೆಯ ದೇವರ ಗುಡಿಯಲ್ಲಿ ತುಪ್ಪದ ದೀಪವನ್ನು ಹಚ್ಚಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 4

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ : ಮಣ್ಣಿನ ಬಣ್ಣ

ಕನ್ಯಾ

ದೊಡ್ಡ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಎದುರಾಗುವ ಕಷ್ಟಗಳು ಮರೆಯಾಗುತ್ತದೆ. ತಪ್ಪು ದಾರಿಯಲ್ಲಿ ಇರುವವರನ್ನುಸುಲಭವಾಗಿ ಸರಿದಾರಿಗೆ ತರುವಿರಿ. ಸಾರ್ವಜನಿಕರ ಸೇವೆ ಮಾಡುವಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. ಉದ್ಯೋಗದ ವಿಚಾರದಲ್ಲಿ ನಿಮಗಿರುವ ಕಾರ್ಯಶ್ರದ್ದೆಗೆ ಉತ್ತಮ ಪ್ರಶಂಸೆ ದೊರೆಯುತ್ತದೆ. ಕುಟುಂಬದ ಸದಸ್ಯರ ಜೊತೆ ಪ್ರವಾಸಕ್ಕೆ ತೆರಳುವುದೆಂದರೆ ಬಲು ಪ್ರೀತಿ. ಹಿರಿಯರ ಸೇವೆಯಲ್ಲಿ ಸಂತಸ ಕಾಣುವಿರಿ. ಆಡುವ ಮಾತು ಮತ್ತು ಮಾಡುವ ಕೆಲಸ ಒಂದೇ ಆಗಿರುತ್ತದೆ. ನಿಮಗೆ ಬಹಳ ಪರೋಪಕಾರಿ ಗುಣವಿದೆ. ವಿದ್ಯಾರ್ಥಿಗಳು ಅಂಜಿಕೆಯಿಂದಲೇ ಓದಿನಲ್ಲಿ ತೊಡಗಿಸಿಕೊಳ್ಳುತ್ತಾರೆ. ನಿಮ್ಮಲ್ಲಿರುವ ವಿದ್ಯಾಬುದ್ಧಿಯನ್ನು ಸರಿಯಾಗಿ ಬಳಸಿಕೊಂಡಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸುವಿರಿ.

ಪರಿಹಾರ : ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 7

ಅಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ಕೆಂಪು

ತುಲಾ

ಮಂಗಳ ಕಾರ್ಯಗಳಿಗೆ ಹೆಚ್ಚಿನ ಹಣ ಖರ್ಚು ಮಾಡುವಿರಿ. ಅಜೀರ್ಣದ ತೊಂದರೆ ನಿಮ್ಮನ್ನು ಬಹುವಾಗಿ ಕಾಡುತ್ತದೆ. ವಯಸ್ಸಿನ ಪರಿಮಿತಿ ಇಲ್ಲದೆ ಎಲ್ಲರೂ ಉನ್ನತ ಜ್ಞಾನಕ್ಕಾಗಿ ಪರಿತಪಿಸುವಿರಿ. ಹೊಸ ವಿಚಾರಗಳನ್ನು ಕಲಿತು ಎಲ್ಲರಿಗೂ ಮಾದರಿಯಾಗುವಿರಿ. ಕಷ್ಟಪಟ್ಟು ದುಡಿಯುವವರಿಗೆ ಸಹಾಯ ಮಾಡುವಿರಿ. ಸಾಹಿತ್ಯದಲ್ಲಿ ಉತ್ತಮ ಅಭಿರುಚಿ ಮೂಡಲಿದೆ. ಶಿಕ್ಷಕ ವೃಂದಕ್ಕೆ ವಿಶೇಷವಾದ ಪ್ರಾತಿನಿಧ್ಯ ದೊರಕುತ್ತದೆ. ವಾದದಲ್ಲಿ ನಿಮ್ಮನ್ನು ಮೀರಿಸುವವರು ಯಾರು ಇರುವುದಿಲ್ಲ. ಉದ್ಯೋಗಸ್ಥರಿಗೆ ಹಿರಿಯ ಅಧಿಕಾರಿಗಳ ಕೃಪಾಕಟಾಕ್ಷವಿರುತ್ತದೆ. ಜನಸೇವೆಯನ್ನು ವೃತ್ತಿಯಾಗಿ ಸ್ವೀಕರಿಸುವುದರಲ್ಲಿ ಯಶಸ್ವಿಯಾಗುವಿರಿ. ಸಭೆ ಸಮಾರಂಭಗಳಲ್ಲಿ ಭೋಜನ ಸ್ವೀಕರಿಸಲು ಇಷ್ಟಪಡುವುದಿಲ್ಲ. ಇದರಿಂದ ವಾದ ವಿವಾದ ಉಂಟಾಗಬಹುದು.

ಪರಿಹಾರ : ತಲೆಗೆ ಹಾಲು ಹಚ್ಚಿ ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿರಿ

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ ಕಿತ್ತಳೆ ಬಣ್ಣ

ವೃಶ್ಚಿಕ

ಈ ಕಾಲದ ರೀತಿ ನೀತಿಗಳಿಗೆ ಹೊಂದಿಕೊಳ್ಳುವಿರಿ. ಸಾಮಾನ್ಯರ ಒಳಿತಿಗಾಗಿ ಸಂಘ ಸಂಸ್ಥೆ ಯೊಂದನ್ನು ಆರಂಭಿಸುವಿರಿ. ಉದ್ಯೋಗ ನೀಡಿದ ಸಂಸ್ಥೆಯ ಮೂಲಕ ವಿದೇಶಕ್ಕೆ ತೆರಳುವಿರಿ. ಗುರು ಹಿರಿಯರ ಸೇವೆ ಮಾಡುವಲ್ಲಿ ಸಂತಸ ಕಾಣುವಿರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನಿಮ್ಮಲ್ಲಿಇರುವ ಪ್ರತಿಭೆಯು ಬೇರೆಯವರಿಗೆ ದಾರಿದೀಪವಾಗುತ್ತದೆ. ನೀವು ಕಾರ್ಯ ನಿರ್ವಹಿಸುವ ವಿಧಾನವು ಬೇರೆಯವರಿಗೆ ಸ್ಪೂರ್ತಿಯಾಗುತ್ತದೆ. ಹಣಕಾಸಿನ ತೊಂದರೆ ಇರುವುದಿಲ್ಲ. ಅನಿರೀಕ್ಷಿತ ವರಮಾನವಿರುತ್ತದೆ. ಕಷ್ಟಗಳು ಮರೆಯಾಗಿ ಜೀವನದಲ್ಲಿ ಪ್ರಗತಿ ಕಂಡು ಬರುತ್ತದೆ. ಸಮಯಕ್ಕೆ ತಕ್ಕಂತೆ ಬುದ್ಧಿವಂತಿಕೆಯ ನಡೆ-ನುಡಿಯನ್ನು ತೋರಿಸುವಿರಿ.

ಪರಿಹಾರ : ಹಣೆಗೆ ತಿಲಕ ಹಚ್ಚಿ ದಿನದ ಕೆಲಸ ಆರಂಭಿಸಿ

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಹಳದಿ ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.