Horoscope Today: ಉದ್ಯೋಗದಲ್ಲಿ ಯಶಸ್ಸಿನ ಗಡಿ ತಲುಪುವಿರಿ, ಸಂಗಾತಿಯ ಬೇಡಿಕೆಯೊಂದನ್ನು ಈಡೇರಿಸಲಿದ್ದೀರಿ; ಮಾರ್ಚ್ 27ರ ರಾಶಿಫಲ
27 ಮಾರ್ಚ್ 2024 ಬುಧವಾರ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (27th March 2024 Daily Horoscope).
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈ ದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ.( 27th March 2024 Daily Horoscope).
ಇಂದಿನ ಪಂಚಾಂಗ
ಶ್ರೀ ಶೋಭಕೃತುನಾಮ ಸಂವತ್ಸರ-ಉತ್ತರಾಯಣ-ಶಿಶಿರ ಋತು-ಫಾಲ್ಗುಣ ಮಾಸ-ಕೃಷ್ಣಪಕ್ಷ-ಬುಧವಾರ
ತಿಥಿ : ಬಿದಿಗೆ 02.55 ರವರೆಗೂ ಇರುತ್ತದೆ ನಂತರ ತದಿಗೆ ಆರಂಭವಾಗಲಿದೆ.
ನಕ್ಷತ್ರ : ಚಿತ್ತ ನಕ್ಷತ್ರ 02.25 ರವರೆಗೂ ಇದ್ದು ನಂತರ ಸ್ವಾತಿ ನಕ್ಷತ್ರ ಆರಂಭವಾಗಲಿದೆ.
ಸೂರ್ಯೋದಯ: ಬೆಳಗ್ಗೆ 06.19
ಸೂರ್ಯಾಸ್ತ: ಸಂಜೆ 06.30
ರಾಹುಕಾಲ : 12.00 ರಿಂದ 01.30
ರಾಶಿ ಫಲ
ಧನಸ್ಸು
ಕುಟುಂಬದಲ್ಲಿ ನಿಮಗೆ ಅನುಕೂಲಕರ ವಾತಾವರಣ ಇರುತ್ತದೆ. ಉದ್ಯೋಗದಲ್ಲಿ ಯಶಸ್ಸಿನ ಗಡಿ ತಲುಪುವಿರಿ. ವ್ಯಾಪಾರದಲ್ಲಿನ ಲೋಪ ದೋಷವನ್ನು ಸರಿಪಡಿಸುವಿರಿ. ಕಮೀಷನ್ ವ್ಯವಹಾರದಲ್ಲಿ ಉತ್ತಮ ಲಾಭವಿರುತ್ತದೆ. ವಿದ್ಯಾರ್ಥಿಗಳ ಮನಸ್ಸು ಭಯದ ಕಾರಣ ಸ್ಥಿಮಿತದಲ್ಲಿ ಇರುವುದಿಲ್ಲ. ಅನಾವಶ್ಯಕ ಕೋಪಕ್ಕೆ ಒಳಗಾಗುವಿರಿ. ಅದೃಷ್ಟವಿದೆ, ಆದರೆ ದೊರೆವ ಅವಕಾಶವನ್ನು ಸರಿಯಾಗಿ ಉಪಯೋಗಿಸಕೊಳ್ಳಲು ವಿಫಲರಾಗುವಿರಿ. ಪ್ರೀತಿ ವಿಶ್ವಾಸದಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಸಂಗಾತಿಯ ಬೇಡಿಕೆಯನ್ನು ಈಡೇರಿಸುವಿರಿ. ಅತಿಯಾದ ಹಣದ ಆಸೆ ಇರದು. ಆದರೆ ಜೀವನ ನಡೆಸುವಷ್ಟು ಹಣ ಸಂಪಾದಿಸುವಿರಿ.
ಪರಿಹಾರ : ಬಡ ರೋಗಿಗಳಿಗೆ ಹಣದ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 7
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ಗುಲಾಬಿ
ಮಕರ
ನಿಧಾನವಾದ್ದರಿಂದ ಕಾರಣ ಕುಟುಂಬದ ಕೆಲಸ ಕಾರ್ಯಗಳು ಅಪೂರ್ಣಗೊಳ್ಳಲಿದೆ. ಆದರೆ ಹಣಕಾಸಿನ ವ್ಯವಹಾರದಲ್ಲಿ ಯಶಸ್ಸು ದೊರೆಯುತ್ತದೆ. ಶ್ರದ್ಧೆಯಿಂದ ಕಷ್ಟ ಪಟ್ಟು ಕೆಲಸ ಮಾಡುವಲ್ಲಿ ಎಲ್ಲರಿಗೂ ಮಾದರಿಯಾಗುವಿರಿ. ಉದ್ಯೋಗದಲ್ಲಿ ನಿರೀಕ್ಷಿತ ಬದಲಾವಣೆ ದೊರೆಯಲಿದೆ. ಸಮಯಕ್ಕೆ ಸರಿಯಾಗಿ ತೀರ್ಮಾನ ತೆಗೆದುಕೊಂಡಲ್ಲಿ ವಿಪತ್ತಿನಿಂದ ಪಾರಾಗಬಹುದು. ಆಧುನಿಕ ತಂತ್ರಜ್ಞಾನದ ಬಗ್ಗೆ ವಿಶೇಷ ಅಧ್ಯಯನ ಮಾಡುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಜವಾಬ್ದಾರಿ ದೊರೆಯುತ್ತದೆ. ಸಮಾಜದಲ್ಲಿ ಉನ್ನತ ಸ್ಥಾನ ಮಾನ ದೊರೆಯುತ್ತದೆ. ಹಣಕಾಸಿನ ಸಂಸ್ಥೆಯಲ್ಲಿ ಉದ್ಯೋಗಸ್ಥರಾದಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ. ಆದಾಯದ ಕೊರತೆ ನೀಗಲು ಉಪವೃತ್ತಿಯನ್ನು ಆರಂಭಿಸುವಿರಿ.
ಪರಿಹಾರ : ಬಲಗೈಯಲ್ಲಿ ಬೆಳ್ಳಿಯ ಕೈಕಡಗ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 2
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಬಿಳಿ ಬಣ್ಣ
ಕುಂಭ
ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ಉದ್ಯೋಗದಲ್ಲಿ ಮಾತಿನ ಬಲದಿಂದ ಕೆಲಸ ಸಾಧಿಸಬಲ್ಲಿರಿ. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿಸಿದ ಮಟ್ಟ ತಲುಪುವಿರಿ. ಹಿರಿಯ ಅಧಿಕಾರಿಗಳ ಅನುಕಂಪ ಪಡೆಯುವಿರಿ. ಹಣದ ವ್ಯಾಮೋಹ ಇರದು. ವಿದ್ಯಾರ್ಥಿಗಳು ಮೌನಕ್ಕೆ ಶರಣಾಗುವರು. ಆತ್ಮೀಯರ ವ್ಯಾಪಾರದಲ್ಲಿ ಪಾಲುಗಾರಿಕೆ ಪಡೆಯುವಿರಿ. ಕಷ್ಟವಿಲ್ಲದ ಸಂಪಾದನೆಯ ದಾರಿಯನ್ನು ಹುಡುಕುವಿರಿ. ಹಣದ ವಿವಾದವೊಂದು ಎದುರಾಗಲಿದೆ. ಮಾರಾಟ ಪ್ರತಿನಿಧಿಗಳು ಉತ್ತಮ ಆದಾಯ ಗಳಿಸುತ್ತಾರೆ. ಜನಸೇವೆ ಮಾಡುವ ಆಸೆ ನನಸಾಗಲಿದೆ. ಸಂಗಾತಿಯ ಸಹಾಯ ನಿಮ್ಮ ಮನಸ್ಸಿನ ಆಸೆಗಳನ್ನು ಈಡೇರಿಸಲಿದೆ. ಸ್ತ್ರೀಯರ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಅನಾರೋಗ್ಯದಿಂದ ಬಳಲುವಿರಿ.
ಪರಿಹಾರ : ಬೆಳ್ಳಿಯ ಉಂಗುರ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 5
ಅದೃಷ್ಟದ ದಿಕ್ಕು ನೈರುತ್ಯ
ಅದೃಷ್ಟದ ಬಣ್ಣ: ಬೂದು ಬಣ್ಣ
ಮೀನ
ಕುಟುಂಬದಲ್ಲಿ ಪ್ರೀತಿ ವಿಶ್ವಾಸ ಮನೆ ಮಾಡಿರುತ್ತದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗದು. ಉದ್ಯೋಗದಲ್ಲಿ ನಿಮ್ಮದೇ ನಿಧಾರಗಳಿಗೆ ಬದ್ದರಾಗುವಿರಿ. ಹಣಕಾಸಿನ ವಿಚಾರದಲ್ಲಿ ಯಾರೊಬ್ಬರ ಸಲಹೆಯನ್ನೂ ಪಾಲಿಸುವುದಿಲ್ಲ. ಸಹೋದ್ಯೋಗಿಗಳ ವರ್ತನೆಗೆ ಬೇಸತ್ತು ಉದ್ಯೋಗ ಬದಲಿಸುವಿರಿ. ಯಾರ ಸಹಾಯವೂ ಇಲ್ಲದೆ ಸ್ವತಂತ್ರವಾಗಿ ಕೆಲಸ ನಿರ್ವಹಿಸಬಲ್ಲಿರಿ. ವಿದ್ಯಾರ್ಥಿಗಳಿಗೆ ಶಿಕ್ಷಕರ ಸಹಾಯ ದೊರೆಯಲಿದೆ. ವಂಶಾಧಾರಿತ ವ್ಯಾಪಾರದಿಂದ ಆದಾಯ ಗಳಿಸುವಿರಿ. ತಂದೆಯವರಿಗೆ ಸಂಬಂಧಿಸಿದ ಭೂವಿವಾದವನ್ನು ಬಗೆಹರಿಸುವಿರಿ. ಗುಟ್ಟಾಗಿ ಕೆಲಸ ನಿರ್ವಹಿಸುವಿರಿ. ಎಲ್ಲರಿಂದಲೂ ಗೌರವ ನಿರೀಕ್ಷಿಸುವಿರಿ. ಶೀತದ ತೊಂದರೆ ಇರುತ್ತದೆ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ.
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ : ಕಂದು ಬಣ್ಣ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ)