Horoscope Today: ನಿಮ್ಮ ನಡೆಗೆ ಕುಟುಂಬದ ಹಿರಿಯರಿಂದ ವಿರೋಧ, ಆಡುವ ಮಾತಿನ ಮೇಲೆ ಹಿಡಿತ ಇರಲಿ; ಏ. 28ರ ರಾಶಿಫಲ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ನಿಮ್ಮ ನಡೆಗೆ ಕುಟುಂಬದ ಹಿರಿಯರಿಂದ ವಿರೋಧ, ಆಡುವ ಮಾತಿನ ಮೇಲೆ ಹಿಡಿತ ಇರಲಿ; ಏ. 28ರ ರಾಶಿಫಲ

Horoscope Today: ನಿಮ್ಮ ನಡೆಗೆ ಕುಟುಂಬದ ಹಿರಿಯರಿಂದ ವಿರೋಧ, ಆಡುವ ಮಾತಿನ ಮೇಲೆ ಹಿಡಿತ ಇರಲಿ; ಏ. 28ರ ರಾಶಿಫಲ

28 ಏಪ್ರಿಲ್‌ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (28th April 2024 2024 Daily Horoscope).

ಏ. 28ರ ರಾಶಿಫಲ
ಏ. 28ರ ರಾಶಿಫಲ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈ ದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ.(28th April 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ಚೈತ್ರ ಮಾಸ-ಕೃಷ್ಣಪಕ್ಷ-ಭಾನುವಾರ

ತಿಥಿ : ಚೌತಿ ಬೆಳಗ್ಗೆ 06.11 ರವರೆಗೂ ಇದ್ದು ನಂತರ ಉಪರಿ ಪಂಚಮಿ ಇರುತ್ತದೆ.

ನಕ್ಷತ್ರ : ಮೂಲ ನಕ್ಷತ್ರವು ರಾತ್ರಿ 02.35 ರವರೆಗೂ ಇದ್ದು ನಂತರ ಪೂರ್ವಾಷಾಢ ನಕ್ಷತ್ರವು ಆರಂಭವಾಗುತ್ತದೆ.

ಸೂರ್ಯೋದಯ ಬೆಳಗ್ಗೆ 05.58

ಸೂರ್ಯಾಸ್ತ: ಸಂಜೆ 06.32

ರಾಹುಕಾಲ: ಸಂಜೆ 05.03 ರಿಂದ 06.37

ರಾಶಿಫಲ

ಧನಸ್ಸು

ಆಧ್ಯಾತ್ಮಿಕ ಜ್ಞಾನವನ್ನು ಪಡೆಯಲು ಗುರುವಿನ ಅನ್ವೇಷಣೆಯಲ್ಲಿ ಇರುತ್ತೀರಿ. ವೇಗವಾಗಿ ಹಣವನ್ನು ಸಂಪಾದಿಸಲು ಬಯಸುವಿರಿ. ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವಿರಿ. ನಿಮ್ಮಲ್ಲಿರುವ ಧನಾತ್ಮಕ ಮನಸ್ಥಿತಿಯು ಎಲ್ಲರಲ್ಲಿಯೂ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಉದ್ಯೋಗದಲ್ಲಿ ನಿರೀಕ್ಷಿಸಿದ ಫಲಗಳು ದೊರೆಯುವಲ್ಲಿ ತಡವಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಹಿನ್ನಡೆ ಉಂಟಾಗದು. ಆದರೆ ಹಣಕಾಸಿನ ಗಳಿಕೆಯಲ್ಲಿ ತೃಪ್ತಿ ಇರುವುದಿಲ್ಲ. ಗೆಲುವು ಸಣ್ಣಮಟ್ಟದಲ್ಲಿ ಇದ್ದರೂ ಸಮಾಧಾನ ಉಂಟಾಗುತ್ತದೆ. ಸಂಗಾತಿ ಮತ್ತು ಮಕ್ಕಳ ಜೊತೆ ಸಂತೋಷದಿಂದ ದಿನ ಕಳೆಯುವಿರಿ. ಆತ್ಮೀಯರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವಿರಿ. ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಸಾಧ್ಯವಾದಷ್ಟು ಬದಲಿಸದಿರಿ.

ಪರಿಹಾರ : ಜೇನು ಸೇವಿಸಿ ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಕಪ್ಪು ಬಣ್ಣ

ಮಕರ

ನಿಮ್ಮಲ್ಲಿ ಇರುವ ನಿಸ್ವಾರ್ಥ ಭಾವನೆಯನ್ನು ಎಲ್ಲರೂ ಗೌರವಿಸುತ್ತಾರೆ. ಮಕ್ಕಳು ಮನದಲ್ಲಿರುವ ಆಸೆಯನ್ನು ಪೂರೈಸಿಕೊಳ್ಳಲು ಸಹಾಯ ಮಾಡುವಿರಿ. ನಿಮ್ಮ ನಿರೀಕ್ಷೆಯನ್ನು ತಲುಪಲು ಯಾವುದೇ ತ್ಯಾಗಕ್ಕೂ ಸಿದ್ಧರಾಗುವಿರಿ. ಪದೇ ಪದೇ ಹೇಳುವ ಮಾತುಗಳು ಬೇರೆಯವರಲ್ಲಿ ಬೇಸರ ಮೂಡಿಸುತ್ತದೆ. ಆಕರ್ಷಕವಾಗಿ ಕಾಣುವ ಗೃಹಾಲಂಕಾರ ವಸ್ತುಗಳನ್ನು ಕೊಳ್ಳುವಿರಿ. ಅನಾವಶ್ಯಕ ಖರ್ಚು ವೆಚ್ಚಗಳು ಕಂಡು ಬರಲಿವೆ. ಕುಟುಂಬದ ಉನ್ನತಿಗೆ ವಿವಾದಗಳನ್ನೂ ಎದುರಿಸುವಿರಿ. ಉದ್ಯೋಗದಲ್ಲಿ ಬಿಡುವಿಲ್ಲದೆ ಕೆಲಸ ನಿರ್ವಹಿಸಬೇಕಾಗುತ್ತದೆ. ಮಕ್ಕಳ ಆರೋಗ್ಯದಲ್ಲಿ ತೊಂದರೆಯಾಗಬಹುದು. ನಿಮ್ಮ ಕೆಲಸ ಕಾರ್ಯಗಳಿಂದ ಹಿರಿಯ ಅಧಿಕಾರಿಗಳ ಮೆಚ್ಚುಗೆ ವ್ಯಕ್ತವಾಗುತ್ತದೆ.

ಪರಿಹಾರ : ಪುಟ್ಟ ಮಕ್ಕಳಿಗೆ ಬೆಣ್ಣೆನೀಡಿ ಇಂದಿನ ಕೆಲಸವನ್ನು ಆರಂಬಿಸಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ತಿಳಿ ಹಸಿರು ಬಣ್ಣ

ಕುಂಭ

ನೀವು ಆಡುವ ಮಾತುಗಳಿಗೆ ವಿವಿಧ ರೀತಿಯ ಅರ್ಥ ಬರುತ್ತದೆ. ಆಡುವ ಮಾತಿನ ಮೇಲೆ ಹಿಡಿತವಿರುವುದು ಒಳ್ಳೆಯದು. ಕೌಟುಂಬಿಕ ವಿಚಾರ ಬಂದಲ್ಲಿ ನಿರಾಸೆ ಉಂಟಾಗುತ್ತದೆ. ಹಣಕಾಸಿನ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಹೊಸ ರೀತಿಯ ಅವಕಾಶಗಳು ದೊರೆಯಲಿವೆ. ಯಾರೊಂದಿಗೂ ಸ್ವಂತ ವಿಚಾರಗಳನ್ನು ಹಂಚಿಕೊಳ್ಳುವುದಿಲ್ಲ. ಕುಟುಂಬದ ಹಿರಿಯರು ನಿಮ್ಮ ರೀತಿ ನೀತಿಗಳನ್ನು ವಿರೋಧಿಸುತ್ತಾರೆ. ದೊಡ್ಡ ಭರವಸೆಯಿಂದ ಮುಖ್ಯ ಕೆಲಸವನ್ನು ಆರಂಭಿಸುವಿರಿ. ಮಕ್ಕಳ ಕೋಪದ ಮಾತುಗಳಿಂದ ಅಶಾಂತಿ ಉಂಟಾಗುತ್ತದೆ. ವಿದ್ಯಾರ್ಥಿಗಳು ದೊರೆಯುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುತ್ತಾರೆ. ಅನಿರೀಕ್ಷಿತ ವರಮಾನ ಹೊಸ ನಿರೀಕ್ಷೆಯನ್ನು ಹೆಚ್ಚಿಸುತ್ತದೆ.

ಪರಿಹಾರ : ಕೈ ಅಥವಾ ಕಾಲಿನಲ್ಲಿ ಕಪ್ಪು ದಾರವನ್ನು ಧರಿಸುವುದರಿಂದ ಶುಭವಿರುತ್ತದೆ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ನಸು ಗೆಂಪು ಬಣ್ಣ

ಮೀನ

ಮನದಲ್ಲಿ ಅಬದ್ಧತೆಯ ಭಾವನೆ ಇರುತ್ತದೆ. ತಲೆನೋವು ಅಥವಾ ತಲೆ ತಿರುಗುವ ತೊಂದರೆ ಕಾಡುತ್ತದೆ. ಸಾಧ್ಯವಾದಷ್ಟು ಖರ್ಚು ವೆಚ್ಚಗಳನ್ನು ನಿಯಂತ್ರಿಸಿ. ಸೋಲಿಗೆ ಭಯ ಪಡದ ನಿಮ್ಮ ಗುಣವನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. ಕುಟುಂಬದ ಬಹುತೇಕ ಜವಾಬ್ದಾರಿಯು ನಿಮ್ಮದಾಗಲಿದೆ. ನಗು ಮೊಗದಿಂದ ವಿರೋಧಿಗಳ ಮನಸ್ಸನ್ನು ಗೆಲ್ಲುವಿರಿ. ಪ್ರಯೋಜನಕಾರಿ ಬದಲಾವಣೆಗಳು ಕಂಡು ಬರುತ್ತವೆ. ಕುಟುಂಬದವರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ. ವ್ಯಾಪಾರ ವ್ಯವಹಾರಗಳು ಸುಗಮವಾಗಿ ನಡೆಯಲಿವೆ. ನಿಮ್ಮ ಸಾಮರ್ಥ್ಯಕ್ಕೆ ತಕ್ಕನಾದ ಸವಾಲುಗಳು ಎದುರಾಗಲಿವೆ. ತೆಗೆದುಕೊಂಡ ನಿರ್ಧಾರಗಳನ್ನು ಬದಲಾಯಿಸದೆ ಹೋದಲ್ಲಿ ಯಾವುದೇ ಕೆಲಸವನ್ನು ಸುಲಭವಾಗಿ ಮಾಡಬಲ್ಲಿರಿ.

ಪರಿಹಾರ : ಮನೆಯಲ್ಲಿರುವ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹಾಲನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ : ಹಸಿರು ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.