ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಆತುರ ನಿರ್ಧಾರ ಸಂಗಾತಿಯ ಕೋಪಕ್ಕೆ ಕಾರಣವಾಗುತ್ತೆ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯರ ದಿನ ಭವಿಷ್ಯ

Horoscope Today: ಆತುರ ನಿರ್ಧಾರ ಸಂಗಾತಿಯ ಕೋಪಕ್ಕೆ ಕಾರಣವಾಗುತ್ತೆ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯರ ದಿನ ಭವಿಷ್ಯ

28 ಜೂನ್ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (28th June 2024 Horoscope).

ಸಿಂಹ, ಕನ್ಯಾ, ತುಲಾ, ವೃಶ್ಟಿಕ ದಿನ ಭವಿಷ್ಯ ತಿಳಿಯಿರಿ
ಸಿಂಹ, ಕನ್ಯಾ, ತುಲಾ, ವೃಶ್ಟಿಕ ದಿನ ಭವಿಷ್ಯ ತಿಳಿಯಿರಿ

ಇಂದಿನ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (28th June 2024 Horoscope)

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಕೃಷ್ಣಪಕ್ಷ-ಶುಕ್ರವಾರ

ತಿಥಿ: ಸಸ್ತಮಿ ಸಾ. 05.58 ರವರೆಗು ಇದ್ದು ಆನಂತರ ಅಷ್ಟಮಿ ಆರಂಭವಾಗುತ್ತದೆ.

ನಕ್ಷತ್ರ: ಪೂರ್ವಾಭಾದ್ರ ನಕ್ಷತ್ರವು ಹ. 12.17 ರವರೆಗೆ ಇದ್ದು ಆನಂತರ ಉತ್ತರಾಭಾದ್ರ ನಕ್ಷತ್ರವು ಆರಂಭವಾಗಲಿದೆ.

ಸೂರ್ಯೋದಯ: ಬೆಳಗ್ಗೆ 05.55

ಸೂರ್ಯಾಸ್ತ: ಸಂಜೆ 06.48

ರಾಹುಕಾಲ: ಬೆ. 10.50 ರಿಂದ ಹ. 12.26

ಸಿಂಹ ರಾಶಿ

ಕುಟುಂಬದವರೊಂದಿಗೆ ಭಾವನಾತ್ಮಕವಾಗಿ ವರ್ತಿಸುವಿರಿ. ಬೇರೆಯವರ ಜೊತೆ ನಿಮ್ಮ ವರ್ತನೆಯ ಬಗ್ಗೆ ಗಮನವಿರಲಿ. ತಪ್ಪು ಹೆಜ್ಜೆಯಿಂದಾಗಿ ಆರ್ಥಿಕ ತೊಂದರೆಗೆ ಒಳಗಾಗುವಿರಿ. ವಾಸಸ್ಥಳದ ಬದಲಾವಣೆ ಹೆಚ್ಚು ಅನಿವಾರ್ಯವಾಗುತ್ತದೆ. ಪ್ರೀತಿಪಾತ್ರರ ಜೊತೆ ಮನರಂಜನಾಕೇಂದ್ರಕ್ಕೆ ತೆರಳುವಿರಿ. ಸಾಮಾನ್ಯವಾಗಿ ನಿಗದಿತ ವೇಳೆಯಲಿ ನಿರೀಕ್ಷೆಯಂತೆ ಕೆಲಸಗಳನ್ನು ಪೂರ್ಣಗೊಳಿಸುವಿರಿ. ತಪ್ಪನ್ನು ಖಂಡಿಸುವ ಪ್ರವೃತ್ತಿ ಹೊಂದಿರುತ್ತೀರಿ. ಅಪರಿಚಿತ ವ್ಯಕ್ತಿಗಳೊಂದಿಗೆ ಹಣದ ಅವ್ಯವಹಾರ ಸಲ್ಲದು. ಅರ್ಥವಿಲ್ಲದ ವಿಚಾರಗಳಿಗೆ ಅಮೂಲ್ಯವಾದ ಸಮಯವನ್ನು ಹಾಳುಮಾಡುವಿರಿ.

ಪರಿಹಾರ: ಸೋದರರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 6

ಅದೃಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ: ತಿಳಿಹಸಿರು

ಕನ್ಯಾ ರಾಶಿ

ಕ್ರೀಡಾ ಚಟುವಟಿಕೆಗಳಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವಿರಿ. ಕುಟುಂಬದವರ ಜೊತೆ ಆನಂದಿಂದ ದಿನ ಕಳೆಯುವಿರಿ ಸಹೋದರ-ಸಹೋದರಿಯರ ಸಹಾಯದಿಂದ ಆರ್ಥಿಕ ಸ್ಥಿತಿ ಗತಿ ಲಾಭವನ್ನು ಪಡೆಯುವಿರಿ. ನಿಮ್ಮ ಆತ್ಮೀಯರ ಸಲಹೆ ಒಪ್ಪಿ ಸಮಸ್ಯೆಯಿಂದ ಪಾರಾಗುವಿರಿ. ನಿಮ್ಮ ಕುಟುಂಬದ ಜೊತೆ ಆತ್ಮೀಯತೆ ಇರಲಿದೆ. ನಿಮ್ಮ ಸ್ವಭಾವವನ್ನು ಬದಲಾಯಿಸಿಕೊಂಡು ಎಲ್ಲರ ಮನ ಗೆಲ್ಲುವಿರಿ.ಒಂದೇ ರೀತಿಯ ಕೆಲಸವನ್ನು ವಿರೋಧಿಸುವಿರಿ. ತಾವಾಗಿಯೆ ನಿಮಗೆ ಸಹಾಯ ಮಾಡಲು ಬಂದವರನ್ನು ಗೌರವಿಸುವಿರಿ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯುವಿರಿ.

ಪರಿಹಾರ: ಮಕ್ಕಳಿಗೆ ಗೋಧಿಯಿಂದ ತಯಾರಿಸಿದ ಸಿಹಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 9

ಅಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ನಸುಗೆಂಪು

ತುಲಾ ರಾಶಿ

ನಿಮ್ಮ ನಿರೀಕ್ಷೆಗಳನ್ನು ಸ್ನೇಹಿತರ ಸಹಾಯದಿಂದ ಕಾರ್ಯಗತಗೊಳಿಸುವಿರಿ. ವೈಯಕ್ತಿಕ ಸಂಬಂಧಗಳನ್ನು ಕಾಪಾಡಿಕೊಳ್ಳುವಿರಿ. ನಿಮ್ಮ ಆತುರದ ನಿರ್ಧಾರಗಳಿಂದ ನಿಮ್ಮ ಸಂಗಾತಿಯ ಕೋಪಕ್ಕೆ ಕಾರಣವಾಗಲಿದೆ. ನೀವು ಹಣಕಾಸಿನ ಬಗ್ಗೆ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಮಕ್ಕಳಲ್ಲಿ ಹೋರಾಟದ ಪ್ರವೃತ್ತಿ ಕಂಡುಬರಲಿದೆ. ಉತ್ತಮ ಆದಾಯ ಇರಲಿದೆ. ಉದ್ಯೋಗದಲ್ಲಿ ನಿರಾಸೆಯ ವಾತಾವರಣ ಇರುತ್ತದೆ. ನಿಮ್ಮ ಕನಸು ನನಸಾಗಿಸಲು ಕುಟುಂಬದವರು ಪ್ರಯತ್ನಿಸುತ್ತಾರೆ. ಚುರುಕಿನ ಮನಸ್ಸು ನಿಮ್ಮಲ್ಲಿ ಹೊಸ ಹುಮ್ಮಸ್ಸು ಉಂಟುಮಾಡುತ್ತದೆ. ಸಂಗಾತಿಯ ತಿಳುವಳಿಕೆ ನಿಮ್ಮ ಹಣದ ಕೊರತೆಯನ್ನು ಕಡಿಮೆಮಾಡಲಿದೆ. ಉದ್ಯೋಗ ಬದಲಿಸುವ ತೀರ್ಮಾನಕ್ಕೆ ಬದ್ದರಾಗುವಿರಿ.

ಪರಿಹಾರ: ಇರುವೆಗಳಿಗೆ ಆಹಾರ ಧಾನ್ಯವನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 4

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ

ವೃಶ್ಚಿಕ ರಾಶಿ

ಮಕ್ಕಳ ಬಾಲ್ಯದ ನೆನಪುಗಳು ನಿಮ್ಮಲ್ಲಿ ಸಂತಸವನ್ನು ಉಂಟುಮಾಡುತ್ತದೆ. ನಿಮ್ಮದೇ ತಪ್ಪಿನಿಂದ ತೊಂದರೆಗೆ ಸಿಲುಕುವಿರಿ. ಅನಗತ್ಯ ವಿಚಾರಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಆತಂಕದಿಂದ ಉದ್ಯೋಗದಲ್ಲಿ ಕೆಲವು ತಪ್ಪುಗಳಾಗಬಹುದು ಎಚ್ಚರಿಕೆ ಇರಲಿ. ನಿಮ್ಮ ಮಗುವಿನಂತಿರುವ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ವಿರಳ. ನಿಮ್ಮ ಶಕ್ತಿ ಸಾಮರ್ಥ್ಯಕ್ಕೆ ಸವಾಲಾಗುವ ಕೆಲಸಗಳು ಎದುರಾಗಲಿದೆ. ಕಷ್ಟಪಟ್ಟು ಉಳಿಸಿರುವ ಹಣವನ್ನು ಮಕ್ಕಳಿಗಾಗಿ ಖರ್ಚುಮಾಡುವಿರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ಅನುಕೂಲಕರ ಬದಲಾವಣೆ ಕಂಡುಬರಲಿವೆ. ಅನಿರೀಕ್ಷಿತವಾಗಿ ಬರುವ ಶುಭ ಸುದ್ದಿ ಕುಟುಂಬದಲ್ಲಿ ಸಂತೋಷ ಮತ್ತು ಆನಂದವನ್ನು ಉಂಟುಮಾಡುತ್ತದೆ. ಸಂಗಾತಿಯ ಜೀವನದಲ್ಲಿ ಅಚ್ಚರಿಯ ಫಲಿತಾಂಶ ದೊರೆಯುತ್ತದೆ.

ಪರಿಹಾರ: ತಾಯಿಯವರಿಗೆ ಸಿಹಿತಿಂಡಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 7

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ಹಾಲಿನ ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್: 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.