ಕನ್ನಡ ಸುದ್ದಿ  /  Astrology  /  Horoscope Today Astrology Prediction 28th March 2024 Aries Taurus Gemini Cancer Daily Horoscope Sts

Horoscope Today: ಸಂಗಾತಿಯ ಜೊತೆ ಪ್ರವಾಸಕ್ಕೆ ತೆರಳಲಿದ್ದೀರಿ, ಹಣದ ಕೊರತೆ ಕಾಡಲಿದೆ; ಮೇಷದಿಂದ ಕಟಕ ರಾಶಿವರೆಗಿನ ದಿನಭವಿಷ್ಯ

28 ಮಾರ್ಚ್‌ 2024 ಗುರುವಾರ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ, ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (28th March 2024 Daily Horoscope).

ಮಾರ್ಚ್‌ 28ರ ದಿನಭವಿಷ್ಯ ಮೇಷದಿಂದ ಕಟಕ ರಾಶಿವರೆಗೆ
ಮಾರ್ಚ್‌ 28ರ ದಿನಭವಿಷ್ಯ ಮೇಷದಿಂದ ಕಟಕ ರಾಶಿವರೆಗೆ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (28th March 2024 Daily Horoscope).

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣಪಕ್ಷ, ಗುರುವಾರ,

ತಿಥಿ: ತದಿಗೆ ಬೆಳಿಗ್ಗೆ 4.11 ರವರೆಗೂ ಇರುತ್ತದೆ. ಅನಂತರ ಚೌತಿ ಆರಂಭವಾಗಲಿದೆ.

ನಕ್ಷತ್ರ: ಸ್ವಾತಿ ನಕ್ಷತ್ರವು ಬೆಳಿಗ್ಗೆ 4.14 ರವರೆಗೂ ಇರುತ್ತದೆ. ಅನಂತರ ವಿಶಾಖ ನಕ್ಷತ್ರವು ಆರಂಭವಾಗಲಿದೆ.

ಸೂರ್ಯೋದಯ: ಬೆಳಿಗ್ಗೆ 6.19

ಸೂರ್ಯಾಸ್ತ: ಸಂಜೆ 6.30

ರಾಹುಕಾಲ: ಬೆಳಿಗ್ಗೆ 1.30 ರಿಂದ ಬೆಳಿಗ್ಗೆ 3.00

ಮೇಷ

ದಿನನಿತ್ಯದ ಕೆಲಸ-ಕಾರ್ಯಗಳು ಸುಗಮವಾಗಿ ಸಾಗಲಿವೆ. ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ ಉಂಟಾಗಲಿದೆ. ಸ್ವತಂತ್ರವಾಗಿ ನಡೆಸುವ ವ್ಯಾಪಾರ-ವ್ಯವಹಾರದಲ್ಲಿ ನಷ್ಟವಿರದು. ವಿದ್ಯಾರ್ಥಿಗಳ ಆಶೋತ್ತರಗಳು ಸಫಲವಾಗಲಿವೆ. ವಿದ್ಯಾರ್ಥಿಗಳು ಸಮೂಹ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಖಿನ್ನತೆಯನ್ನು ಹೊಡೆದೋಡಿಸಲು ಯೋಗ ಪ್ರಾಣಾಯಾಮ ಧ್ಯಾನವನ್ನು ಆರಂಭಿಸುವಿರಿ. ಅತಿಯಾದ ಆತ್ಮವಿಶ್ವಾಸ ಪ್ರಗತಿಗೆ ಅಡ್ಡಿಯಾಗುತ್ತದೆ. ಸ್ಟಾಕ್‌ ಮತ್ತು ಷೇರಿನ ವ್ಯವಹಾರದ ಬಗ್ಗೆ ಎಚ್ಚರಿಕೆ ಇರಲಿ. ಕುಟುಂಬದ ಪ್ರಯೋಜನಕಾರಿ ಕೆಲಸವೊಂದನ್ನು ಆರಂಭಿಸುವಿರಿ. ಕುಟುಂಬದ ಹಿರಿ ವ್ಯಕ್ತಿಗಳ ಜವಾಬ್ದಾರಿ ನಿಮ್ಮದಾಗುತ್ತದೆ. ಕುಟುಂಬ ಸದಸ್ಯರ ಜೊತೆ ಪ್ರಯಾಣ ಕೈಗೊಳ್ಳುವಿರಿ.

ಪರಿಹಾರ: ಧಾರ್ಮಿಕ ಕೇಂದ್ರಗಳಿಗೆ ಹಾಲು, ಮೊಸರು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ: 8

ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ

ವೃಷಭ

ಕುಟುಂಬದ ಕೆಲಸದಲ್ಲಿ ಆಸಕ್ತಿ ತೋರುವುದಿಲ್ಲ. ಒಮ್ಮತದ ಕೊರತೆಯ ಕಾರಣ ಆತಂಕದ ವಾತಾವರಣ ಸೃಷ್ಟಿಯಾಗಲಿದೆ. ಉದ್ಯೋಗದಲ್ಲಿ ಬದಲಾದ ಆಡಳಿತ ವರ್ಗದವರ ಸಹಕಾರದಿಂದ ಉದ್ಯೋಗದಲ್ಲಿ ಉನ್ನತ ಸ್ಥಾನ ಗಳಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ನಷ್ಟವಿರದು. ವಿದ್ಯಾರ್ಥಿಗಳಲ್ಲಿನ ವಿಶ್ವಾಸ ಗೆಲುವಿಗೆ ಕಾರಣವಾಗುತ್ತದೆ. ಪ್ರಯೋಜನಕಾರಿ ಕೆಲಸವನ್ನು ಮಾತ್ರ ಆಯ್ಕೆ ಮಾಡುವಿರಿ. ಸಂಗಾತಿಯ ಜೊತೆ ಪ್ರವಾಸಕ್ಕೆ ತೆರಳುವಿರಿ. ನಿಮ್ಮ ಗೈರಿನಲ್ಲಿ ಹೊಸ ವ್ಯಾಪಾರದ ಬಗ್ಗೆ ಮಾತುಕತೆ ನಡೆಯಲಿದೆ. ಮನೆಯ ಪರಿಸ್ಥಿತಿಗೆ ಹೊಂದಿಕೊಂಡು ಸಂತಸದಿಂದ ಬಾಳುವಿರಿ. ತಪ್ಪು ತಿಳುವಳಿಕೆಗಳಿಂದ ಸೋದರನ ಜೊತೆಯಲ್ಲಿ ಮನಸ್ತಾಪ ಉಂಟಾಗಬಹುದು. ಆರೋಗ್ಯದ ಬಗ್ಗೆ ಗಮನ ಇರಲಿ.

ಪರಿಹಾರ: ಗೋಶಾಲೆಗೆ ಧನಸಹಾಯ ಮಾಡಿದ ನಂತರ ದಿನದ ಕೆಲಸಗಳನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ : ಕೆಂಪು ಬಣ್ಣ

ಮಿಥುನ

ನಿಮ್ಮಲ್ಲಿ ಹೊಸ ಚೈತನ್ಯ ಮೂಡುತ್ತದೆ. ಕೆಲಸ ಕಾರ್ಯದಲ್ಲಿ ನಿಧಾನಗತಿಯ ಪ್ರಗತಿ ಲಭಿಸುತ್ತದೆ. ಹಣದ ಸಹಾಯ ದಿನವಿಡೀ ಇರಲಿದೆ. ಹಣ ಉಳಿಸುವಲ್ಲಿ ಯಶಸ್ವಿಯಾಗುವಿರಿ. ನಿಮ್ಮನ್ನು ಸಂತೋಷವಾಗಿಡಲು ಆತ್ಮೀಯರು ಪ್ರಯತ್ನಿಸುತ್ತಾರೆ. ಸಂಗಾತಿಯಿಂದ ಹೊಗಳಿಕೆ ಮತ್ತು ಪ್ರಶಂಸೆ ದೊರೆಯುತ್ತದೆ. ಏಕಾಂಗಿಯಾಗಿ ಇರಲು ಬಯಸುವಿರಿ. ಉದ್ಯೋಗದಲ್ಲಿ ಸಹೋದ್ಯೋಗಿಗಳು ಚಿಂತೆಗೆ ಕಾರಣರಾಗಲಿದ್ದಾರೆ. ನಿಮ್ಮ ವ್ಯಕ್ತಿತ್ವವು ಎಲ್ಲರ ಮನಸೆಳೆಯಲಿದೆ. ಬಿಡುವಿನ ವೇಳೆಯಲ್ಲಿಯೂ ಕಚೇರಿಯ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ಸಂಗಾತಿಯ ಜೊತೆಯಲ್ಲಿ ಅನಾವಶ್ಯಕ ವಾದ ವಿವಾದಗಳಿರುತ್ತವೆ.

ಪರಿಹಾರ: ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ

ಕಟಕ

ಕುಟುಂಬದಲ್ಲಿ ಆಶಾದಾಯಕ ವಾತಾವರಣ ಏರ್ಪಡುತ್ತದೆ. ಉದ್ಯೋಗದಲ್ಲಿನ ಫಲಿತಾಂಶಗಳು ನಿಮ್ಮ ಪರವಾಗಿರುತ್ತವೆ. ಆತ್ಮೀಯರ ಸಹಾಯ ದೊರೆಯುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ ಕಂಡುಬರುತ್ತದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ಸನ್ನಿವೇಶ ಉಂಟಾಗುತ್ತದೆ. ಅತಿ ಕಷ್ಟವೆಂದುಕೊಂಡ ಕೆಲಸವನ್ನು ಪೂರ್ಣಗೊಳಿಸುವಿರಿ. ಹಣದ ಕೊರತೆ ಕಂಡುಬರುತ್ತದೆ. ವಿಶ್ರಾಂತಿ ಇಲ್ಲದೆ ದುಡಿಯಬೇಕಾಗುತ್ತದೆ. ಹಣದ ವ್ಯವಹಾರಗಳಿಂದ ದೂರವಿರಿ. ಸಂಗಾತಿಯಿಂದ ಹಣದ ಸಹಾಯ ದೊರೆಯುತ್ತದೆ. ದೂರದ ಸ್ಥಳದಲ್ಲಿ ದಿನ ಕಳೆಯಲು ನಿರ್ಧರಿಸುವಿರಿ. ಕೈ ಕಾಲುಗಳಲ್ಲಿ ಶಕ್ತಿಯು ಕಡಿಮೆಯಾಗುತ್ತದೆ. ವಿಶ್ರಾಂತಿ ಪಡೆಯುವ ಅವಶ್ಯಕತೆ ಇದೆ.

ಪರಿಹಾರ : ಕೆಂಪು ಹೂವಿನ ಗಿಡಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಹಳದಿ ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ.)