ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕೆಲಸದ ನಿಮಿತ್ತ ದೂರದ ಊರಿಗೆ ಪ್ರಯಾಣ, ಚಾಡಿ ಮಾತು ಸಮಸ್ಯೆ ಉಂಟು ಮಾಡಬಹುದು, ಜಾಗ್ರತೆ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿ ಭವಿಷ್ಯ

ಕೆಲಸದ ನಿಮಿತ್ತ ದೂರದ ಊರಿಗೆ ಪ್ರಯಾಣ, ಚಾಡಿ ಮಾತು ಸಮಸ್ಯೆ ಉಂಟು ಮಾಡಬಹುದು, ಜಾಗ್ರತೆ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿ ಭವಿಷ್ಯ

28 ಮೇ 2024ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (28th May 2024 Daily Horoscope).

ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿ ಭವಿಷ್ಯ
ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿ ಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (28th May 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ವೈಶಾಖ ಮಾಸ-ಕೃಷ್ಣಪಕ್ಷ-ಮಂಗಳವಾರ

ತಿಥಿ: ಪಂಚಮಿ 02.54 ರವರೆಗೂ ಇರುತ್ತದೆ. ಆನಂತರ ಷಷ್ಠಿ ಆರಂಭವಾಗುತ್ತದೆ.

ನಕ್ಷತ್ರ : ಉತ್ತರಾಷಾಢ ನಕ್ಷತ್ರವು ಬೆಳಗ್ಗೆ 09.29 ರವರೆಗು ಇರುತ್ತದೆ. ಆನಂತರ ಶ್ರವಣ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ05.52

ಸೂರ್ಯಾಸ್ತ: ಸಂಜೆ 06.41

ರಾಹುಕಾಲ: 03.32 ರಿಂದ 05.08

ರಾಶಿಫಲ

ಸಿಂಹ

ಮಿತಿ ಇಲ್ಲದ ದುಡಿಮೆಯಿಂದ ಬೇಸರಗೊಳ್ಳುವಿರಿ. ವಿಶ್ರಾಂತಿಗಾಗಿ ದೂರದ ಸ್ಥಳಕ್ಕೆ ತೆರಳುವಿರಿ. ಸ್ವಂತ ಉದ್ಯಮ ಇದ್ದಲ್ಲಿ ಅದರ ವಿಸ್ತರಣೆಗೆ ಪ್ರಯತ್ನಿಸುವಿರಿ. ಹಣವನ್ನು ಷೇರು ಮಾರುಕಟ್ಟೆಯಲ್ಲಿ ವಿನಿಯೋಗಿಸುವಿರಿ. ಕೆಲಸದ ಕಾರಣ ಮನೆಯ ಸದಸ್ಯರಿಂದ ದೂರವಿರಬೇಕಾಗುತ್ತದೆ. ಹಿರಿಯರ ಸಲಹೆಯಂತೆ ಉದ್ಯೋಗ ಬದಲಿಸುವಿರಿ. ಸೋಲಿನ ವೇಳೆ ಕೋಪದಿಂದ ವರ್ತಿಸುವಿರಿ. ಅವಿವಾಹಿತರಿಗೆ ವಿವಾಹ ಕೂಡಿಬರುತ್ತದೆ. ಅನಿರೀಕ್ಷಿತ ಲಾಭ ಹೊಸ ಆಶಾಭಾವನೆ ಮೂಡಿಸುತ್ತದೆ. ಆದಾಯಕ್ಕೆ ಸಮನಾದ ಖರ್ಚು ವೆಚ್ಚಗಳು ಇರಲಿವೆ. ಸಂಗಾತಿಯ ಜೊತೆ ಯಾತ್ರಾಸ್ಥಳಕ್ಕೆ ಭೇಟಿ ನೀಡುವಿರಿ. ಶಾಂತಿ ಸಹನೆಯಿಂದ ವರ್ತಿಸಿ.

ಪರಿಹಾರ : ತಾಯಿಗೆ ಸಿಹಿತಿಂಡಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ : ಬಿಳಿ

ಕನ್ಯಾ

ವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಮುಂದುವರೆಸುವಿರಿ. ಬುದ್ಧಿವಂತಿಕೆಯಿಂದ ಕುಟುಂಬದ ಸಮಸ್ಯೆಯೊಂದನ್ನು ದೂರ ಮಾಡುವಿರಿ ಭೂವ್ಯವಹಾರಲ್ಲಿ ಹೆಚ್ಚಿನ ಹಣವನ್ನು ಖರ್ಚು ಮಾಡುವಿರಿ. ಮನೆಯ ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಅನಿರೀಕ್ಷಿತವಾಗಿ ಉದ್ಯೋಗದ ಸಲುವಾಗಿ ದೂರದ ಸ್ಥಳಕ್ಕೆ ತೆರಳುವಿರಿ. ಪ್ರೀತಿ ವಿಶ್ವಾಸದಿಂದ ಸಹೋದ್ಯೋಗಿಗಳ ಮನಸ್ಸನ್ನು ಗೆಲ್ಲುವಿರಿ. ಜೀವನವನ್ನು ಹಗುರವಾಗಿ ಸ್ವೀಕರಿಸುವಿರಿ. ಚಾಡಿ ಮಾತುಗಳನ್ನು ನಂಬದಿರಿ. ಪ್ರೀತಿಪಾತ್ರರ ಬಗ್ಗೆ ತಪ್ಪು ನಿರ್ಧಾರವನ್ನು ಕೈಗೊಳ್ಳುವಿರಿ. ಹಣಕಾಸಿನ ವ್ಯವಹಾರದ ವಿಚಾರದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಮಕ್ಕಳ ಸಾಧನೆಗಳಿಂದ ಎಲ್ಲರ ಗಮನ ಸೆಳೆಯುತ್ತಾರೆ. ಸಂಗಾತಿಯ ಜೊತೆಯಲ್ಲಿ ಮನಸ್ತಾಪ ಇರುತ್ತದೆ.

ಪರಿಹಾರ : ಪಕ್ಷಿಗಳಿಗೆ ಆಹಾರವನ್ನು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು ಈಶಾನ್ಯ

ಅದೃಷ್ಟದ ಬಣ್ಣ : ಬೂದು ಬಣ್ಣ

ತುಲಾ

ಹಿರಿಯರ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ಪಡೆಯಲು ಯಶಸ್ವಿಯಾಗುವಿರಿ. ನಿಮ್ಮಲ್ಲಿನ ಮಾನಸಿಕ ಶಕ್ತಿಯನ್ನು ಜನೋಪಕಾರಿ ವಿಚಾರಗಳಿಗೆ ವಿನಿಯೋಗಿಸುವಿರಿ. ಬೇಡದ ವಿಚಾರಗಳಿಗೆ ಹಣವನ್ನು ಖರ್ಚು ಮಾಡುವಿರಿ. ಸುಲಭವಾಗಿ ಬೇರೆಯವರ ಪ್ರಭಾವಕ್ಕೆ ಒಳಗಾಗುವಿರಿ. ಕಷ್ಟ ಪಟ್ಟು ದುಡಿದ ಹಣವನ್ನು ಮಕ್ಕಳ ಅಭಿವೃದ್ಧಿಗೆ ಖರ್ಚು ಮಾಡುವಿರಿ. ನಿಮ್ಮದೇ ಆದ ತಪ್ಪಿನಿಂದಾಗಿ ಸ್ವಂತ ಹಿತಾಸಕ್ತಿಯನ್ನು ಮರೆ ಮಾಚುವಿರಿ. ಮಕ್ಕಳ ಅನುಕೂಲಕ್ಕಾಗಿ ವಿವಿಧ ಯೋಜನೆಯಲ್ಲಿ ಹಣವನ್ನು ವಿನಿಯೋಗಿಸುವಿರಿ. ತಾಳ್ಮೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸಿದರೆ ಯಶಸ್ಸು ದೊರೆಯುತ್ತದೆ. ಅನಿರೀಕ್ಷಿತವಾಗಿ ದೊರಕುವ ಅವಕಾಶಗಳನ್ನು ಸರಿಯಾದ ಹಾದಿಯಲ್ಲಿ ಉಪಯೋಗಿಸಿಕೊಳ್ಳುವಿರಿ.

ಪರಿಹಾರ : ಸಿಹಿಯನ್ನು ತಿಂದು ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ: ಕಂದು

ವೃಶ್ಚಿಕ

ಕೋಪ ತಾಪಗಳನ್ನು ಮರೆತು ಶಾಂತಿ ಸಂಯಮದಿಂದ ವರ್ತಿಸಿ. ನಿಮ್ಮ ಮನಸ್ಸಿನ ಆಶೋತ್ತರಗಳು ಈಡೇರಲಿವೆ. ನಿಮಗೆ ಇಷ್ಟ ಎನಿಸುವ ಸುಂದರವಾದ ವಾತಾವರಣವಿರುವೆಡೆ ಹೊಸ ಮನೆ ಕೊಳ್ಳುವಿರಿ. ಸಂಬಂಧಿಕರ ಸಹಕಾರದಿಂದ ವ್ಯಾಪಾರ ವ್ಯವಹಾರವನ್ನು ಆರಂಭಿಸುವಿರಿ. ಕುಟುಂಬದ ಆರ್ಥಿಕ ಸ್ಥಿತಿಯು ಉತ್ತಮಗೊಳ್ಳಲಿದೆ. ಲಾಭವಿಲ್ಲದ ಕೆಲಸವನ್ನು ಮಾಡಲಿಚ್ಚಿಸುವುದಿಲ್ಲ. ಸ್ನೇಹಿತರ ಸಹಾಯದಿಂದ ಉದ್ಯೋಗ ಬದಲಿಸುವಿರಿ. ಪಾಲುಗಾರಿಕೆಯ ವ್ಯಾಪಾರದಲ್ಲಿ ಸಹವರ್ತಿಗಳ ಸಹಾಯ ದೊರೆಯುತ್ತದೆ. ಕುಟುಂಬಕ್ಕೆ ಸಂಬಂಧಿಸಿದ ಬಾಕಿಯಿರುವ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಮಕ್ಕಳ ಜೊತೆಯಲ್ಲಿ ಬಿಡುವಿನ ಸಮಯವನ್ನು ಕಳೆಯುವಿರಿ. ಸಂಗಾತಿಯ ಜೊತೆಯಲ್ಲಿ ಉತ್ತಮ ಅನುಬಂಧ ಇರುತ್ತದೆ.

ಪರಿಹಾರ: ಬಿಳಿ ಹಸುವಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಕಪ್ಪು

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).