ಕನ್ನಡ ಸುದ್ದಿ  /  Astrology  /  Horoscope Today Astrology Prediction 29th November 2023 Leo Virgo Libra Scorpio Daily Horoscope Sts

ಈ ರಾಶಿಯವರಿಗೆ ಉದ್ಯೋಗದಲ್ಲಿ ಮೇಲಧಿಕಾರಿಗಳ ಜೊತೆ ಅನಾವಶ್ಯಕ ವಾದ ವಿವಾದ; ನವೆಂಬರ್‌ 29, ಬುಧವಾರದ ರಾಶಿಫಲ

29th ನವೆಂಬರ್‌, ಬುಧವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (29th November 2023 Daily Horoscope).

29th ನವೆಂಬರ್‌, ಬುಧವಾರದ ರಾಶಿ ಭವಿಷ್ಯ
29th ನವೆಂಬರ್‌, ಬುಧವಾರದ ರಾಶಿ ಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (29th November 2023 Daily Horoscope).

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ-ದಕ್ಷಿಣಾಯನ-ಶರದೃತು-ಕಾರ್ತಿಕ ಮಾಸ-ಕೃಷ್ಣಪಕ್ಷ-ಬುಧವಾರ

ತಿಥಿ: ಬಿದಿಗೆ 01.21 ವರೆಗೆ ಇರಲಿದ್ದು ಆನಂತರ ತದಿಗೆ ಆರಂಭವಾಗುತ್ತದೆ.

ನಕ್ಷತ್ರ: ಮೃಗಶಿರ ನಕ್ಷತ್ರ 02.14 ರವರೆಗೂ ಇದ್ದು ನಂತರ ಆರ್ದ್ರಾ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 06.24

ಸೂರ್ಯಾಸ್ತ: ಸಂಜೆ 05.50

ರಾಹುಕಾಲ: ಮಧ್ಯಾಹ್ನ12.00 ರಿಂದ 01.30

ರಾಶಿ ಫಲಗಳು

ಸಿಂಹ

ಅನಿರೀಕ್ಷಿತವಾಗಿ ದೊರೆಯುವ ಹಣಕಾಸಿನ ಅನುಕೂಲತೆ ಕುಟುಂಬದಲ್ಲಿ ಸಂತೋಷ ಉಂಟುಮಾಡುತ್ತದೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಜೊತೆ ಅನಾವಶ್ಯಕ ವಾದ ವಿವಾದ ಉಂಟಾಗಲಿವೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯವಿರುತ್ತದೆ. ವಿದ್ಯಾರ್ಥಿಗಳ ವ್ಯಕ್ತಿತ್ವಕ್ಕೆ ಸೋತು ಸ್ನೇಹಿತರು ಸಹಾಯ ಮಾಡುತ್ತಾರೆ. ತೋಟಗಾರಿಕೆಯಲ್ಲಿ ನಿರತರಾಗುವಿರಿ. ಎಲ್ಲರ ಪ್ರಶಂಸೆ ದೊರೆಯುತ್ತದೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ಕುಟುಂಬದ ಸದಸ್ಯರಿಗೆ ಕಿರು ಕಾಣಿಕೆ ನೀಡುವ ಸಲುವಾಗಿ ಹಣ ಖರ್ಚು ಮಾಡುವಿರಿ. ಮಕ್ಕಳು ಉದ್ಯೋಗದ ಸಲುವಾಗಿ ದೂರದ ಊರಿಗೆ ತೆರಳುತ್ತಾರೆ. ಆರೋಗ್ಯದ ಬಗ್ಗೆ ಗಮನವಿರಲಿ.

ಪರಿಹಾರ : ಅರಳಿ ಮರಕ್ಕೆ ನೀರಿರೆದು ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ನೀಲಿ

ಕನ್ಯಾ

ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಜೊತೆಯಲ್ಲಿ ವಿಶ್ವಾಸದಿಂದ ಇರುವ ಕಾರಣ ಯಾವುದೇ ಸಮಸ್ಯೆ ಕಾಣದು. ವ್ಯಾಪಾರ ವ್ಯವಹಾರಗಳಲ್ಲಿ ಆತುರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ವಿದ್ಯಾರ್ಥಿಗಳು ತಾವು ಮಾಡುವ ತಪ್ಪಿಗೆ ಬೇರೆಯವರನ್ನು ಗುರಿ ಮಾಡುತ್ತಾರೆ. ಹಣವನ್ನು ಖರ್ಚು ಮಾಡಬೇಡಿ. ನಿರೀಕ್ಷೆಗೂ ಮೀರಿದ ಆದಾಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆತ್ಮೀಯರ ಜೊತೆ ವಿನಾಕಾರಣ ವಾದ ವಿವಾದ ಉಂಟಾಗಲಿದೆ. ಸಂಗಾತಿ ಮತ್ತು ಮಕ್ಕಳ ಜೊತೆ ಮನರಂಜನಾ ಸ್ಥಳಕ್ಕೆ ಭೇಟಿ ನೀಡುವಿರಿ. ಕಲಾವಿದರಿಗೆ ವಿಶಿಷ್ಟ ಗೌರವಾದರಗಳು ಲಭಿಸಲಿವೆ. ಪಾಲುದಾರಿಕೆಯಲ್ಲಿ ಹೊಸ ಆದಾಯ ಆರಂಭಿಸಲಿದ್ದೀರಿ.

ಪರಿಹಾರ : ಕುಟುಂಬದ ಹಿರಿಯರಿಗೆ ಕುಡಿಯಲು ಹಾಲು ನೀಡಿ ದಿನದ ಕೆಲಸ ಆರಂಭಿಸಿರಿ

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ನೇರಳೆ

ತುಲಾ

ಹೊಸ ರೀತಿಯ ಬದಲಾವಣೆಗಳು ಕುಟುಂಬದಲ್ಲಿ ಹೊಸ ಆಸೆಗಳನ್ನು ಉಂಟುಮಾಡುತ್ತದೆ. ಉದ್ಯೋಗದಲ್ಲಿ ನಿರೀಕ್ಷಿಸಿದ ವೇಗದಲ್ಲಿ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಸಹೋದ್ಯೋಗಿಗಳನ್ನು ವಿಶ್ವಾಸದಿಂದ ಕಾಣುವುದು ಬಹಳ ಮುಖ್ಯ. ವ್ಯಾಪಾರ ವ್ಯವಹಾರಗಳಲ್ಲಿ ಜಾಗ್ರತೆಯಿಂದ ಇರಿ. ಅತಿ ಆಸೆ ತೋರದೆ ದೊರೆಯುವ ಲಾಭವನ್ನು ಸ್ವೀಕರಿಸಿ. ಹೆಚ್ಚಿನ ಹಣ ಹೂಡಿಕೆ ಆತಂಕಕ್ಕೆ ಕಾರಣವಾಗಬಹುದು. ವಿದ್ಯಾರ್ಥಿಗಳು ನಿರೀಕ್ಷೆಗಳನ್ನು ಮೀರಿ ನಡೆಯುತ್ತಾರೆ. ಹಣದ ಕೊರತೆ ಕಂಡು ಬರದು. ಸಹಾಯ ಮಾಡಲು ಸುತ್ತಮುತ್ತಲ ಜನ ಕಾಯುತ್ತಿರುತ್ತಾರೆ. ಆತುರದಿಂದ ಯಾವುದೇ ಕೆಲಸವನ್ನು ಮಾಡಲು ಪ್ರಯತ್ನಿಸಬೇಡಿ. ಜವಾಬ್ದಾರಿ ಮರೆತು ಸ್ನೇಹಿತರ ಜೊತೆ ಸಂತೋಷದಿಂದ ಕಾಲ ಕಳೆಯುವಿರಿ.

ಪರಿಹಾರ : ಹಳದಿ ಬಣ್ಣದ ವಸ್ತ್ರವನ್ನು ಧಾರ್ಮಿಕ ಕೇಂದ್ರಕ್ಕೆ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ ಗುಲಾಬಿ

ವೃಶ್ಚಿಕ

ಕುಟುಂಬದಲ್ಲಿನ ಬಹುದಿನಗಳಿಂದ ಅಪೂರ್ಣಗೊಂಡ ಕೆಲಸವೊಂದನ್ನು ಪೂರ್ಣಗೊಳಿಸುವಿರಿ. ಹೆಚ್ಚಿದ ಜವಾಬ್ದಾರಿಯಿಂದ ಮಾನಸಿಕ ಒತ್ತಡ ಹೆಚ್ಚುತ್ತದೆ. ಉದ್ಯೋಗದಲ್ಲಿ ಹೆಚ್ಚಿನ ಪ್ರಯತ್ನದಿಂದ ಮಾತ್ರ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ನಿರಾಸೆ ತಾಳಲಾರದೆ ಕೋಪದಿಂದ ವರ್ತಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಯಾವುದೇ ಬದಲಾವಣೆ ಉಂಟಾಗುವುದಿಲ್ಲ. ಮನಸ್ಸಿನಲ್ಲಿ ಒಳ್ಳೆಯದಿದ್ದರೂ ದುಡುಕುತನದಿಂದ ವಿರೋಧ ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಏಕಾಂಗಿಯಾಗಿ ಕುಳಿತು ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಆಧುನಿಕ ತಂತ್ರಜ್ಞಾನವನ್ನು ಅರಿಯುವ ಅವಕಾಶ ದೊರೆಯುತ್ತದೆ. ವಯಸ್ಸಿನ ಇತಿಮಿತಿ ಇಲ್ಲದೆ ಮನರಂಜನಾ ಕೂಟದಲ್ಲಿ ಭಾಗವಹಿಸುವಿರಿ. ಆತ್ಮೀಯರೊಂದಿಗೆ ಮನದಲ್ಲಿ ಇರುವ ವಿಚಾರವನ್ನು ಹಂಚಿಕೊಂಡಲ್ಲಿ ನೆಮ್ಮದಿ ದೊರೆಯುತ್ತದೆ. ಅನಿರೀಕ್ಷಿತ ಧನ ಲಾಭವಿರುತ್ತದೆ.

ಪರಿಹಾರ : ಮನೆಯ ಮುಂದಿನ ಹಳ್ಳಗಳನ್ನು ಮುಚ್ಚಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು ನೈರುತ್ಯ

ಅದೃಷ್ಟದ ಬಣ್ಣ: ಬಿಳಿ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ವಿಭಾಗ