ಕನ್ನಡ ಸುದ್ದಿ  /  Astrology  /  Horoscope Today Astrology Prediction 29th November 2023 Sagittarius Capricorn Aquarius Pisces Sts

Horoscope Today: ಚಾಡಿ ಮಾತನ್ನು ನಂಬಿ ಹಣಕಾಸಿನ ವಿಚಾರದಲ್ಲಿ ತೊಂದರೆ ತಂದುಕೊಳ್ಳುವಿರಿ; 29 ನವೆಂಬರ್‌, ಬುಧವಾರದ ರಾಶಿಫಲ

29 ನವೆಂಬರ್‌, ಬುಧವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (29th November 2023 Daily Horoscope).

29 ನವೆಂಬರ್‌, ಬುಧವಾರದ ರಾಶಿ ಭವಿಷ್ಯ
29 ನವೆಂಬರ್‌, ಬುಧವಾರದ ರಾಶಿ ಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ.( 29th November 2023 Daily Horoscope).

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ-ದಕ್ಷಿಣಾಯನ-ಶರದೃತು-ಕಾರ್ತಿಕ ಮಾಸ-ಕೃಷ್ಣಪಕ್ಷ-ಬುಧವಾರ

ತಿಥಿ: ಬಿದಿಗೆ 01.21 ವರೆಗೆ ಇರಲಿದ್ದು ಆನಂತರ ತದಿಗೆ ಆರಂಭವಾಗುತ್ತದೆ.

ನಕ್ಷತ್ರ: ಮೃಗಶಿರ ನಕ್ಷತ್ರ 02.14 ರವರೆಗೂ ಇದ್ದು ನಂತರ ಆರ್ದ್ರಾ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 06.24

ಸೂರ್ಯಾಸ್ತ: ಸಂಜೆ 05.50

ರಾಹುಕಾಲ: ಮಧ್ಯಾಹ್ನ12.00 ರಿಂದ 01.30

ರಾಶಿ ಫಲಗಳು

ಧನಸ್ಸು

ಆತ್ಮೀಯರ ಆಗಮನದಿಂದ ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಉದ್ಯೋಗದಲ್ಲಿ ಸಮಸ್ಯೆಗಳು ಇರದಿದ್ದರೂ ಅಭಿವೃದ್ಧಿ ಕಂಡು ಬರದು. ವಿದ್ಯಾರ್ಥಿಗಳು ಕೇವಲ ವಿದ್ಯಾಭ್ಯಾಸವಲ್ಲದೆ ಇತರ ವಿಚಾರದಲ್ಲಿಯೂ ಹೆಚ್ಚಿನ ಆಸಕ್ತಿ ತೋರುತ್ತಾರೆ. ಹಣಕಾಸಿನ ವಿಚಾರದಲ್ಲಿ ಒತ್ತಡವಿದ್ದರೂ ಯಾವುದೇ ತೊಂದರೆ ಎದುರಾಗದು. ಅನಿರೀಕ್ಷಿತ ಧನ ಲಾಭವಿದೆ. ಆಹಾರದಲ್ಲಿ ಇತಿ ಮಿತಿ ಇರದ ಕಾರಣ ಅಜೀರ್ಣದಿಂದ ಬಳಲುವಿರಿ. ವಿವಾಹದ ವಿಚಾರದಲ್ಲಿ ಆತಂಕದ ಛಾಯೆ ಎದುರಾಗುತ್ತದೆ. ಬುದ್ದಿವಂತಿಕೆಯ ತೀರ್ಮಾನ ತೆಗೆದುಕೊಂಡಲ್ಲಿ ಹಳೆಯ ಸಮಸ್ಯೆಗೊಂದು ಬಗೆಹರಿಯುತ್ತದೆ. ತೆಗೆದುಕೊಳ್ಳುವ ನಿರ್ಧಾರಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯುತ್ತದೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಕೇಸರಿ ಬಣ್ಣದ ಬಟ್ಟೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಬೂದು

ಮಕರ

ಅನಾವಶ್ಯಕ ವಾದ ವಿವಾದಗಳಿಂದ ಕುಟುಂಬದಲ್ಲಿ ಬೇಸರದ ವಾತಾವರಣ ಇರುತ್ತದೆ. ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚುತ್ತದೆ. ಸ್ನೇಹಿತರ ಸಹಾಯದಿಂದ ಹೊಸ ಉದ್ಯೋಗ ದೊರೆಯುತ್ತದೆ. ಕ್ರಮೇಣವಾಗಿ ಹಣದ ಸಮಸ್ಯೆ ದೂರವಾಗುತ್ತದೆ. ಬಂಧು-ಬಳಗದವರ ಜೊತೆಯಲ್ಲಿ ಶಾಂತಿ ಸಹನೆಯಿಂದ ವರ್ತಿಸಿ ವ್ಯಾಪಾರ ವ್ಯವಹಾರಗಳಲ್ಲಿ ಏಕಾಂಗಿಯಾಗಿ ಜವಾಬ್ದಾರಿ ನಿರ್ವಹಿಸುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಬೇಸರದಿಂದ ಹೊರ ಬರಲು ಮಕ್ಕಳೊಂದಿಗೆ ಮನರಂಜನಾ ಸ್ಥಳಕ್ಕೆ ಭೇಟಿ ನೀಡುವಿರಿ. ಚಾಡಿ ಮಾತನ್ನು ನಂಬಿ ಹಣಕಾಸಿನ ವಿಚಾರದಲ್ಲಿ ತೊಂದರೆ ತಂದುಕೊಳ್ಳುವಿರಿ. ಅನಿವಾರ್ಯವಾಗಿ ಬೇರೆಯವರಿಂದ ಹಣ ಪಡೆಯಬೇಕಾಗುತ್ತದೆ

ಪರಿಹಾರ : ಅರಳಿ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು ಈಶಾನ್ಯ

ಅದೃಷ್ಟದ ಬಣ್ಣ: ಕಂದು

ಕುಂಭ

ಕುಟುಂಬದಲ್ಲಿ ಮೌನ ನೆಲೆಸಿರುತ್ತದೆ. ಪರಸ್ಪರ ಸಮಾಲೋಚನೆಯಿಂದ ಕೌಟುಂಬಿಕ ಸಮಸ್ಯೆ ಕೊನೆಗೊಂಡು ವಾತಾವರಣ ತಿಳಿಯಾಗುತ್ತದೆ. ಉದ್ಯೋಗದಲ್ಲಿ ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸುವ ಕಾರಣ ಹೊಸ ಅವಕಾಶಗಳು ದೊರೆಯಬಹುದು. ಆತ್ಮೀಯರ ಸಲಹೆಯಂತೆ ಉದ್ಯೋಗ ಬದಲಿಸಲು ತೀರ್ಮಾನಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ನಷ್ಟವಿರದು. ಚಿಕ್ಕಪುಟ್ಟ ಕೆಲಸ ಕಾರ್ಯಗಳಿಗೂ ಹೆಚ್ಚಿನ ಹಣದ ಅವಶ್ಯಕತೆ ಇದೆ. ವಿದ್ಯಾರ್ಥಿಗಳು ಯಾರೊಂದಿಗೂ ಬೆರೆಯದೆ ಸ್ವತಂತ್ರವಾಗಿ ಕಲಿಕೆಯಲ್ಲಿ ತೊಡಗುತ್ತಾರೆ. ಪ್ರಯೋಜನವಿಲ್ಲದ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಹಿರಿಯರ ಅನುಭವವನ್ನು ಬಳಸಿಕೊಂಡರೆ ಯಾವುದೇ ತೊಂದರೆ ಎದುರಾಗದು.

ಪರಿಹಾರ : ಹಸುವಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯ: 12

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಕಪ್ಪು

ಮೀನ

ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಹಣದ ಸಹಾಯ ಮಾಡುವ ಕಾರಣ ಕುಟುಂಬದಲ್ಲಿ ಬಿಗುವಿನ ವಾತಾವರಣವಿರುತ್ತದೆ. ಅನಾವಶ್ಯಕ ಮಾತನ್ನು ಕಡಿಮೆ ಮಾಡಿ ಕೆಲಸದಲ್ಲಿ ಶ್ರಮ ವಹಿಸಿದರೆ ಗೆಲುವು ಖಚಿತ. ಉದ್ಯೋಗದಲ್ಲಿ ಫಲಿತಾಂಶ ಹೆಚ್ಚು ಕಡಿಮೆ ಆಗಬಹುದು. ದೃಢ ಸಂಕಲ್ಪದಿಂದ ಮಾತ್ರ ಕೆಲಸ ಕಾರ್ಯಗಳಲ್ಲಿ ಜಯಗಳಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ದೊರೆವ ಅವಕಾಶವನ್ನು ಬಳಸಿಕೊಂಡರೆ ಹಣದ ಕೊರತೆ ಕಾಣದು. ವಿದ್ಯಾರ್ಥಿಗಳು ಬುದ್ಧಿವಂತಿಕೆಯಿಂದ ಅಭ್ಯಾಸದಲ್ಲಿ ತೊಡಗುತ್ತಾರೆ. ಪ್ರವಾಸದಿಂದ ಲಾಭವಿದೆ ಉದ್ಯೋಗ ಕ್ಷೇತ್ರದ ಮೂಲಕ ವಿದೇಶಕ್ಕೆ ತೆರಳುವ ಸಾಧ್ಯತೆ ಇದೆ. ಯಾರಿಂದಲೂ ಸಹಾಯ ಸಹಕಾರ ದೊರೆಯುವುದಿಲ್ಲ. ಒಂಟಿಯಾಗಿ ಸಮಸ್ಯೆಗಳ ವಿರುದ್ದ ಹೋರಾಡಿ ಜಯಗಳಿಸುವಿರಿ

ಪರಿಹಾರ : ಕೊರಳಲ್ಲಿ ಜಪಮಾಲೆಯನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕಿತ್ತಳೆ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ವಿಭಾಗ