ಕನ್ನಡ ಸುದ್ದಿ  /  Astrology  /  Horoscope Today Astrology Prediction 2nd April 2024 Aries Taurus Gemini Cancer Daily Horoscope Sts

Horoscope Today: ಸ್ವಗೃಹ ಭೂಲಾಭವಿದೆ, ಆತ್ಮೀಯರ ಸಹಾಯದಿಂದ ಅವಿವಾಹಿತರಿಗೆ ವಿವಾಹ ನಿಶ್ಚಯ: ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

2 ಏಪ್ರಿಲ್‌ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ, ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (2nd April 2024 Daily Horoscope).

ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ದಿನ ಭವಿಷ್ಯ
ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ದಿನ ಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (2nd April 2024 Daily Horoscope).

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ-ಉತ್ತರಾಯಣ-ಶಿಶಿರ ಋತು-ಫಾಲ್ಗುಣ ಮಾಸ-ಕೃಷ್ಣಪಕ್ಷ-ಮಂಗಳವಾರ

ತಿಥಿ: ಅಷ್ಟಮಿ 03.14 ರವರೆಗೂ ಇದ್ದು ನಂತರ ನವಮಿ ಆರಂಭವಾಗಲಿದೆ.

ನಕ್ಷತ್ರ : ಪೂರ್ವಾಷಾಢ ನಕ್ಷತ್ರವು ಸಂಜೆ 06.22 ರವರೆಗೂ ಇದ್ದು ನಂತರ ಉತ್ತರಾಷಾಢ ನಕ್ಷತ್ರವು ಆರಂಭವಾಗಲಿದೆ.

ಸೂರ್ಯೋದಯ: ಬೆಳಗ್ಗೆ 06.16

ಸೂರ್ಯಾಸ್ತ: ಸಂಜೆ 06.31

ರಾಹುಕಾಲ: 03.00 ರಿಂದ 04.30

ರಾಶಿಫಲ

ಮೇಷ

ಆತ್ಮೀಯೊಬ್ಬರು ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಕಾರಣರಾಗುತ್ತಾರೆ. ಉದ್ಯೋಗದಲ್ಲಿನ ಒತ್ತಡದ ಸನ್ನಿವೇಶ ದೂರವಾಗುತ್ತದೆ. ಜೀವನದ ಅಡೆ ತಡೆಗಳನ್ನು ಧೈರ್ಯದಿಂದ ಎದುರಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಸಮಾಧಾನಕರ ವರಮಾನ ಇರಲಿದೆ. ವ್ಯಾಪಾರ ವ್ಯವಹಾರದಲ್ಲಿ ಆತಂಕದ ಛಾಯೆ ಇದ್ದರೂ ತೊಂದರೆ ಆಗದು. ವಿದ್ಯಾರ್ಥಿಗಳಿಗೆ ಸಹಪಾಠಿಗಳ ನೆರವು ದೊರೆಯುತ್ತದೆ. ಮನಸ್ಸಿನಲ್ಲಿ ವೈರಾಗ್ಯದ ಭಾವನೆ ಮೂಡುತ್ತದೆ. ಸ್ವಗೃಹ ಭೂಲಾಭವಿದೆ. ಆತ್ಮೀಯರ ಸಹಾಯದಿಂದ ಅವಿವಾಹಿತರಿಗೆ ವಿವಾಹ ನಿಶ್ಚಯವಾಗುತ್ತದೆ. ಇರುವ ಬುದ್ಧಿ ಶಕ್ತಿಯನ್ನು ಸರಿಯಾದ ಮಾತಲ್ಲಿ ಬಳಸಿದಲ್ಲಿ ಧನಾತ್ಮಕ ಫಲಿತಾಂಶ ದೊರೆಯುತ್ತದೆ. ಹೊಸ ವ್ಯಾಪಾರ ಆರಂಭಿಸಲು ಸಾಧ್ಯವಾಗದು.

ಪರಿಹಾರ: ತಾಯಿಯ ಆಶೀರ್ವಾದ ಪಡೆದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಕೇಸರಿ

ವೃಷಭ

ಮನಸ್ಸಿನ ವಿಚಾರವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಿರಿ. ಖರ್ಚುವೆಚ್ಚಗಳಿಂದ ಆತಂಕ ಮೂಡುತ್ತದೆ. ಕೆಲಸ ಕಾರ್ಯಗಳು ಸುಗಮವಾಗಿ ನಡೆದರೂ ಸಂತೃಪ್ತಿ ಇರುವುದಿಲ್ಲ. ಕುಟುಂಬದಲ್ಲಿ ಹೊಂದಾಣಿಕೆಯ ವಾತಾವರಣ ಮುದ ನೀಡುತ್ತದೆ. ಉದ್ಯೋಗದಲ್ಲಿ ಹೊಸ ಯೋಜನೆಗಳ ಕಾರಣ ಒತ್ತಡ ಇರುತ್ತದೆ. ದೀರ್ಘಕಾಲದ ಪ್ರಯತ್ನದ ನಂತರ ಆಸ್ತಿಯ ಸಮಸ್ಯೆಯೊಂದು ಬಗೆಹರಿಯುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ನಷ್ಟವಿರದು. ವಿದ್ಯಾರ್ಥಿಗಳು ಅನಾರೋಗ್ಯದಿಂದ ಬಳಲುತ್ತಾರೆ. ಮಕ್ಕಳು ಕಲಿಕೆಯಲ್ಲಿ ಉತ್ತತ ಮಟ್ಟ ತಲುಪಲು ಹೆಚ್ಚಿನ ಪ್ರಯತ್ನ ಪಡಬೇಕು. ಆತ್ಮೀಯರೊಂದಿಗೆ ಚರ್ಚಿಸಿದ ನಂತರ ಕೆಲಸ ಕಾರ್ಯಗಳಲ್ಲಿ ಮುಂದುವರೆಯಿರಿ. ತಂದೆಗೆ ಸಂಬಂಧಿಸಿದ ಕೆಲಸವೊಂದು ನಿಧಾನಗತಿಯಲ್ಲಿ ಸಾಗುತ್ತದೆ. ಬೇರೆಯವರ ಹಣಕಾಸಿನ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸದಿರಿ.

ಪರಿಹಾರ : ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು ದಕ್ಷಿಣ

ಅದೃಷ್ಟದ ಬಣ್ಣ : ಮಣ್ಣಿನ ಬಣ್ಣ

ಮಿಥುನ

ಕುಟುಂಬದಲ್ಲಿ ಏಕತೆಯ ಭಾವನೆ ಕಂಡುಬರುತ್ತದೆ ಉದ್ಯೋಗದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಕಾರಣ ಉನ್ನತ ಹುದ್ದೆ ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು ಕಾಣುವಿರಿ. ವಿದ್ಯಾರ್ಥಿಗಳು ಹಟದಿಂದ ನಿರೀಕ್ಷಿತ ಮಟ್ಟವನ್ನು ತಲುಪುತ್ತಾರೆ. ಒತ್ತಡಕ್ಕೆ ಮಣಿದು ಸ್ನೇಹಿತರಿಗೆ ಹಣದ ಸಹಾಯ ಮಾಡುವಿರಿ. ಕೆಲಸ ಕಾರ್ಯಗಳ ನಡುವೆಯೂ ಕುಟುಂಬದ ಸದಸ್ಯರ ಜೊತೆಯಲ್ಲಿ ಐತಿಹಾಸಿಕ ಕ್ಶೇತ್ರಕ್ಕೆ ಭೇಟಿ ನೀಡುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ಸಂಗೀತ ಬಲ್ಲವರಿಗೆ ಅಪೂರ್ವವಾದ ಅವಕಾಶವೊಂದು ದೊರೆಯಲಿದೆ. ಸ್ವಂತ ಬಳಕೆಗಾಗಿ ವಾಹನವೊಂದನ್ನು ಕೊಳ್ಳುವಿರಿ. ದಂಪತಿಗಳಿಗೆ ಕುಟುಂಬದ ಹೆಚ್ಚಿನ ಹೊಣೆಗಾರಿಕೆ ದೊರೆಯುತ್ತದೆ. ದೃಢವಾದ ತೀರ್ಮಾನಗಳನ್ನು ತೆಗೆದುಕೊಳ್ಳಿರಿ.

ಪರಿಹಾರ : ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಕಂದು

ಕಟಕ

ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಸಮಾಜದ ಗಣ್ಯ ವ್ಯಕ್ತಿಯ ಗೆಳೆತನ ಲಭಿಸುತ್ತದೆ. ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳ ಮಾರ್ಗದರ್ಶನ ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಅನಗತ್ಯ ಹೆಚ್ಚಿನ ಬಂಡವಾಳ ಹೂಡದಿರಿ. ದುಡುಕುತನದ ಮಾತಿನಿಂದ ಆತ್ಮೀಯತೆ ಕೆಡುತ್ತದೆ. ವಿದ್ಯಾರ್ಥಿಗಳು ತಪ್ಪು ನಿರ್ಧಾರದಿಂದ ತೊಂದರೆಗೆ ಸಿಲುಕುವರು. ಕುಟುಂಬದ ಆದಾಯ ಹೆಚ್ಚುತ್ತದೆ. ಹಣಕಾಸು ಸಂಸ್ಥೆಯ ನಿರ್ವಹಣೆಯಲ್ಲಿ ಹಿನ್ನೆಡೆ ಕಾಣುವಿರಿ. ಅಧಿಕಾರಿಗಳ ಶಿಸ್ತಿನ ಕಾರ್ಯವೈಖರಿ ಕೆಲಸಗಾರರಿಗೆ ಬೇಸರ ಮೂಡಿಸುತ್ತದೆ. ಸಮಾಜಸೇವೆ ಮಾಡುವ ಹಂಬಲವು ಈಡೇರಲಿದೆ. ಸ್ವಂತ ಕಾರ್ಯಗಳಿಗೆ ಮೊದಲ ಆದ್ಯತೆ ನೀಡುವಿರಿ.

ಪರಿಹಾರ : ತಾಮ್ರದ ನಾಣ್ಯವನ್ನು ಖಾಕಿದಾರದಲ್ಲಿ ಕತ್ತಿನಲ್ಲಿ ಧರಿಸಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಕೆಂಪು

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).