ಅನುಮಾನ ಪಟ್ಟು ಸ್ನೇಹಿತರಿಂದಲೇ ದೂರಾಗುವಿರಿ, ಮದುವೆ ವಿಚಾರದಲ್ಲಿ ದುಡುಕಿನ ನಿರ್ಧಾರ ಬೇಡ; ಜು. 2ರ ದಿನ ಭವಿಷ್ಯ
ಜುಲೈ 2ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (ಬರಹ: ಎಚ್. ಸತೀಶ್, ಜ್ಯೋತಿಷಿ).
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (2nd July 2024 Daily Horoscope).
ಇಂದಿನ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಕೃಷ್ಣಪಕ್ಷ-ಮಂಗಳವಾರ
ತಿಥಿ : ಏಕಾದಶಿ ಬೆಳಗ್ಗೆ 08.40 ರವರೆಗೂ ಇದ್ದು ನಂತರ ದ್ವಾದಶಿ ಆರಂಭವಾಗುತ್ತದೆ.
ನಕ್ಷತ್ರ : ಕೃತಿಕಾ ನಕ್ಷತ್ರವು ಬೆ 05.08 ರವರೆಗೂ ಇದ್ದು ನಂತರ ರೋಹಿಣಿ ನಕ್ಷತ್ರ ಇರುತ್ತದೆ.
ಸೂರ್ಯೋದಯ: ಬೆಳಗ್ಗೆ05.56
ಸೂರ್ಯಾಸ್ತ: ಸಂಜೆ 06.49
ರಾಹುಕಾಲ: 03.39 ರಿಂದ 05.15
ರಾಶಿಫಲ
ಸಿಂಹ
ಸಮಾಜದಲ್ಲಿನ ಸ್ಥಾನ ಮಾನವನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಿರಿ. ಮನದಲ್ಲಿ ನೀವೇ ದೊಡ್ಡವರೆಂಬ ಭಾವನೆ ಇರುತ್ತದೆ. ಗೌರವ ಪ್ರತಿಷ್ಠೆಗಾಗಿ ಯಾವುದೇ ತ್ಯಾಗವನ್ನು ಮಾಡುವಿರಿ. ಸೋಲಿಗೆ ತಲೆಬಾಗದೆ ಹಟದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ಎಲ್ಲರೂ ಆಶ್ಚರ್ಯ ಪಡುವ ರೀತಿಯಲ್ಲಿ ಹಣ ಸಂಪಾದಿಸುವಿರಿ. ಮನಸ್ಸು ಎಷ್ಟೇ ಒಳ್ಳೆಯದಾದರೂ ಆಡುವ ಮಾತು ಒರಟಾಗಿರುತ್ತದೆ. ಒಳ್ಳೆಯ ಸ್ನೇಹಿತರು ಮತ್ತು ಬಂಧು ಬಳಗದವರು ಇರುತ್ತಾರೆ. ಉದ್ಯೋಗ ಕ್ಷೇತ್ರದಲ್ಲಿ ಅಧಿಕಾರಿಗಳ ಮೆಚ್ಚುಗೆ ಮತ್ತು ಸಹಕಾರ ದೊರೆಯಲಿದೆ. ಯಾವುದೇ ಸಂದರ್ಭವಾದರೂ ಆ ಸನ್ನಿವೇಶನವನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಳ್ಳುವಿರಿ.
ಪರಿಹಾರ : ತಾಮ್ರದ ನಾಣ್ಯವನ್ನು ಖಾಕಿದಾರದಲ್ಲಿ ಕತ್ತಿನಲ್ಲಿ ಧರಿಸಿ.
ಅದೃಷ್ಟದ ಸಂಖ್ಯೆ: 1
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ : ಕೆಂಪು
ಕನ್ಯಾ
ಕೋಪವಿದ್ದರೂ ನಂಬಿದವರಿಗೆ ಒಳ್ಳೆಯದನ್ನೇ ಮಾಡುವಿರಿ. ದಂಪತಿಗಳಲ್ಲಿ ಪರಸ್ಪರ ಹೆಚ್ಚಿನ ಪ್ರೀತಿ ವಿಶ್ವಾಸ ಇರುತ್ತದೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಅದರ ಉಪಯೋಗವನ್ನು ನಿಮ್ಮದಾಗಿಸಿಕೊಳ್ಳುವಿರಿ. ವಿವಾಹದ ವಿಚಾರದಲ್ಲಿ ದುಡುಕಿನ ತೀರ್ಮಾನ ತೆಗೆದುಕೊಳ್ಳಬೇಡಿ. ಕುಟುಂಬದ ಸದಸ್ಯರ ಜೊತೆ ಭಾವನಾತ್ಮಕ ಸಂಬಂಧ ಬೆಳೆಯುತ್ತದೆ. ಆದಾಯ ಹೆಚ್ಚಿಸಿಕೊಳ್ಳುವ ಉಪಾಯ ನಿಮಗೆ ತಿಳಿದಿರುತ್ತದೆ. ಆದರೆ ಹಣಕ್ಕೆ ಹೆಚ್ಚಿನ ಪ್ರಾಶಸ್ಥ್ಯ ನೀಡುವುದಿಲ್ಲ. ಆದಾಯ ಮತ್ತು ಖರ್ಚು ವೆಚ್ಚಗಳು ಸಮ ಪ್ರಮಾಣದಲ್ಲಿ ಇರುತ್ತದೆ. ಐಷಾರಾಮಿ ಜೀವನಕ್ಕೆ ಹಣ ಖರ್ಚು ಮಾಡುವಿರಿ. ಒಳ್ಳೆಯ ಸ್ನೇಹಿತರಿರುತ್ತಾರೆ.
ಪರಿಹಾರ : ಗೋಸೇವೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 4
ಅದೃಷ್ಟದ ದಿಕ್ಕು: ಈಶಾನ್ಯ
ಅದೃಷ್ಟದ ಬಣ್ಣ : ಎಲೆ ಹಸಿರು
ತುಲಾ
ಹಣದ ತೊಂದರೆ ಕಂಡು ಬರುತ್ತದೆ. ಹೊಸ ಹಣಕಾಸಿನ ಯೋಜನೆಯನ್ನು ಆರಂಭಿಸುವಿರಿ. ಕಷ್ಟಕ್ಕೆ ಸ್ಪಂದಿಸುವ ಸ್ನೇಹಿತರಿರುತ್ತಾರೆ. ಆದರೆ ನಿಮ್ಮ ಆತ್ಮೀಯ ಸ್ನೇಹಿತರನ್ನು ನಂಬುವುದಿಲ್ಲ. ಅನುಮಾನ ಬಂದವರ ಸ್ನೇಹದಿಂದ ದೂರವಾಗುವಿರಿ. ಸಮಾಜದಲ್ಲಿನ ಉನ್ನತ ಗೌರವ ದೊರೆಯುತ್ತದೆ. ಪುಟ್ಟ ಮಕ್ಕಳ ಮೇಲೆ ವಿಶೇಷ ಪ್ರೀತಿ ಇರುತ್ತದೆ. ನಿಮ್ಮ ಮುಖದಲ್ಲಿ ಸದಾ ನಗೆ ತುಂಬಿರುತ್ತದೆ. ಸಭೆ ಸಮಾರಂಭದಿಂದ ದೂರ ಉಳಿಯುವಿರಿ. ಯಾರ ಒತ್ತಡಕ್ಕೂ ಮಣಿಯದೆ ಸಹಜ ಜೀವನ ನಡೆಸುವಿರಿ. ನೀವು ಇರುವ ಕಡೆ ಸಂತೋಷಕ್ಕೆ ಕೊರತೆ ಇರುವುದಿಲ್ಲ. ದೀರ್ಘ ಕಾಲದ ಪ್ರವಾಸ ಮತ್ತು ಕ್ರೀಡೆಗಳಲ್ಲಿ ವಿಶೇಷ ಆಸಕ್ತಿ ತೋರುವಿರಿ.
ಪರಿಹಾರ : ಬೆಲ್ಲದಿಂದ ಮಾಡಿದ ಆಹಾರ ಸೇವಿಸಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 11
ಅದೃಷ್ಟದ ದಿಕ್ಕು: ಪೂರ್ವ
ಅದೃಷ್ಟದ ಬಣ್ಣ: ಕೇಸರಿ ಬಣ್ಣ
ವೃಶ್ಚಿಕ
ಕುಟುಂಬದ ಸದಸ್ಯರ ಜೊತೆ ಹೆಚ್ಚಿನ ಕಾಲ ಕಳೆಯುವಿರಿ. ಪ್ರಾಮಾಣಿಕತೆಯಿಂದ ನಿಮ್ಮ ಕೆಲಸವನ್ನು ಪೂರ್ಣಗೊಳಿಸುವಿರಿ. ಚುರುಕಿನಿಂದ ಯಾವುದಾದರೂ ಒಂದು ಕೆಲಸದಲ್ಲಿ ಮಗ್ನರಾಗುವಿರಿ. ಅಲ್ಪ ಪ್ರಮಾಣದ ಸ್ವಾರ್ಥ ನಿಮ್ಮಲ್ಲಿ ಇರುತ್ತದೆ. ಸದಾಕಾಲ ಒಳ್ಳೆಯ ಫಲಗಳ ನಿರೀಕ್ಷೆಯಲ್ಲಿ ಇರುತ್ತೀರಿ. ಮೈಗಳ್ಳರ ಬಗ್ಗೆ ಬೇಸರವಿರುತ್ತದೆ. ತಪ್ಪು ಮಾಡುವವರನ್ನು ದೂರ ಇಡುವಿರಿ. ಯಾವುದೇ ವಿಚಾರವಾದರೂ ಸೂಕ್ತವಾದ ಉಪದೇಶ ಮಾಡುವಿರಿ. ಕರ್ತವ್ಯದಿಂದ ಎಂದಿಗೂ ಹಿಂದೆ ಉಳಿಯುವುದಿಲ್ಲ. ನಿಮ್ಮಲ್ಲಿನ ಉತ್ಸಾಹ ಎಲ್ಲರಿಗೂ ಸಹಕಾರಿಯಾಗುತ್ತದೆ. ನಿಮ್ಮ ಮನಸ್ಸಿನಲ್ಲಿ ಯಾರ ಬಗ್ಗೆಯೂ ಕೆಟ್ಟ ಭಾವನೆ ಮೂಡುವುದಿಲ್ಲ. ವಿವಾಹದಲ್ಲಿ ಆಸಕ್ತಿ ಇರುವುದಿಲ್ಲ
ಪರಿಹಾರ : ಸೋದರರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 2
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
