ಗಣ್ಯ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ, ಅನಾವಶ್ಯಕ ವಿಚಾರಗಳಲ್ಲಿ ಮೂಗು ತೂರಿಸಬೇಡಿ; ಮೇಷ, ವೃಷಭ, ಮಿಥುನ, ಕಟಕ ರಾಶಿಫಲ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಗಣ್ಯ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ, ಅನಾವಶ್ಯಕ ವಿಚಾರಗಳಲ್ಲಿ ಮೂಗು ತೂರಿಸಬೇಡಿ; ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

ಗಣ್ಯ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ, ಅನಾವಶ್ಯಕ ವಿಚಾರಗಳಲ್ಲಿ ಮೂಗು ತೂರಿಸಬೇಡಿ; ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

2 ಜೂನ್‌ 2024ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ, ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (2nd June 2024 Daily Horoscope).

ಗಣ್ಯ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ, ಅನಾವಶ್ಯಕ ವಿಚಾರಗಳಲ್ಲಿ ಮೂಗು ತೂರಿಸಬೇಡಿ; ಮೇಷ, ವೃಷಭ, ಮಿಥುನ, ಕಟಕ ರಾಶಿಫಲ
ಗಣ್ಯ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ, ಅನಾವಶ್ಯಕ ವಿಚಾರಗಳಲ್ಲಿ ಮೂಗು ತೂರಿಸಬೇಡಿ; ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಪಂಚಾಂಗಕರ್ತ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮ ಅವರು ಈ ಮಾಹಿತಿ ಒದಗಿಸಿದ್ದಾರೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (2nd June 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ವೈಶಾಖ ಮಾಸ-ಕೃಷ್ಣಪಕ್ಷ-ಭಾನುವಾರ

ತಿಥಿ: ಏಕಾದಶಿ

ನಕ್ಷತ್ರ: ರೇವತಿ

ಸೂರ್ಯೋದಯ: ಬೆಳಗ್ಗೆ 05:23

ಸೂರ್ಯಾಸ್ತ: ಸಂಜೆ 07:15

ರಾಹುಕಾಲ: ಸಂಜೆ 05:31 ರಿಂದ 07:15 ವರೆಗೆ

ರಾಶಿ ಫಲ

ಮೇಷ ರಾಶಿ

ಮೇಷ ರಾಶಿಯವರಿಗೆ ಇಂದು ಅನುಕೂಲಕರವಾಗಿಲ್ಲ. ಅಂದುಕೊಂಡ ಕೆಲಸ ಕಾರ್ಯಗಳು ಸಾಗುವುದಿಲ್ಲ. ಮಾನಸಿಕವಾಗಿ ಪ್ರಲೋಭನೆಗೆ ಒಳಗಾಗಬೇಡಿ. ಸಂಬಂಧಿಕರ ಆಗಮನದಿಂದ ತೊಂದರೆ ಉಂಟಾಗುತ್ತದೆ. ಪ್ರೀತಿಪಾತ್ರರ ಜೊತೆ ಸಂವಹನ ನಡೆಸಿ. ಮಕ್ಕಳಿಂದ ಅದೃಷ್ಟ ಇದೆ. ಆತ್ಮೀಯರು ನಿಮ್ಮ ಹಣಕಾಸಿನ ವಹಿವಾಟುಗಳನ್ನು ನಿಭಾಯಿಸುತ್ತಾರೆ. ಅನುಭವಿಗಳ ಸಲಹೆ ತೆಗೆದುಕೊಳ್ಳಿ. ಆಧ್ಯಾತ್ಮಿಕತೆ ಹೆಚ್ಚುತ್ತದೆ. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಮೇಷ ರಾಶಿಯವರು ಹೆಚ್ಚಿನ ಶುಭ ಫಲಗಳನ್ನು ಪಡೆಯಲು ಆದಿತ್ಯನ ಹೃದಯವನ್ನು ಪಠಿಸಿ. ಸೂರ್ಯ ನಮಸ್ಕಾರ ಮಾಡುವುದರಿಂದ ಶುಭ ಫಲ ಸಿಗುತ್ತದೆ. ದಕ್ಷಿಣಾಮೂರ್ತಿ ಸ್ತೋತ್ರ ಪಠಿಸುವುದು ಒಳ್ಳೆಯದು.

ವೃಷಭ ರಾಶಿ

ವೃಷಭ ರಾಶಿಯವರಿಗೆ ಇಂದು ಸಾಮಾನ್ಯ ದಿನವಾಗಿದೆ. ನಿಮ್ಮ ಕಠಿಣ ಪರಿಶ್ರಮ ಶೀಘ್ರದಲ್ಲೇ ಫಲ ನೀಡಲಿದೆ. ಉತ್ಸಾಹದಿಂದ ನಿಮ್ಮ ಕೆಲಸಗಳನ್ನು ಮಾಡಿ, ಪ್ರತಿಫಲವನ್ನು ದೇವರಿಗೆ ಬಿಡಿ. ಯಾವುದೇ ಕಾರಣಕ್ಕೂ ಎದೆ ಗುಂದಬೇಡಿ. ಸ್ನೇಹಿತರೊಂದಿಗೆ ಸಮಯ ಕಳೆಯಿರಿ. ವೆಚ್ಚಗಳು ಆದಾಯಕ್ಕೆ ಅನುಗುಣವಾಗಿರುತ್ತವೆ. ಕೆಲಸದಲ್ಲಿ ಹೆಚ್ಚಿನ ಒತ್ತಡವಿರುತ್ತದೆ. ಪ್ರಮುಖ ದಾಖಲೆಗಳ ಬಗ್ಗೆ ಎಚ್ಚರದಿಂದಿರಿ. ಹಳೆಯ ಪರಿಚಯಸ್ಥರನ್ನು ಭೇಟಿ ಮಾಡಿ. ಕೆಲಸ ಬದಲಿಸುವಿರಿ. ಈ ರಾಶಿಯವರು ಹೆಚ್ಚಿನ ಶುಭ ಫಲಿತಾಂಶಗಳನ್ನು ಪಡೆಯಲು ಸೂರ್ಯಾಷ್ಟಕವನ್ನು ಪಠಿಸಿ. ನವಗ್ರಹ ಮಂತ್ರ ಪಠಿಸಿದರೆ ಮತ್ತಷ್ಟು ಒಳ್ಳೆಯದು.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಇಂದು ಸಾಧಾರಣ ಫಲಿತಾಂಶಗಳಿವೆ. ಪ್ರಮುಖ ಅಂಶಗಳ ಬಗ್ಗೆ ಇಂದು ಹೆಚ್ಚು ಗಮನ ನೀಡುವಿರಿ. ಗಣ್ಯವ್ಯಕ್ತಿಗಳನ್ನು ಭೇಟಿ ಮಾಡಲಿದ್ದೀರಿ. ನಿಮಗೆ ಬರಬೇಕಿದ್ದ ಬಾಕಿ ಹಣ ದೊರೆಯುತ್ತದೆ. ಅನಗತ್ಯ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬೇಡಿ. ನಿಮ್ಮ ಘನತೆಗೆ ಧಕ್ಕೆಯಾಗದಂತೆ ವರ್ತಿಸಿ. ಆರೋಗ್ಯದ ಬಗ್ಗೆ ಬಹಳ ಎಚ್ಚರಿಕೆ ಅಗತ್ಯ. ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಬಂಧುಗಳೊಂದಿಗೆ ಔತಣಕೂಟಗಳಲ್ಲಿ ಭಾಗವಹಿಸುವಿರಿ. ಮಿಥುನ ರಾಶಿಯವರು ಹೆಚ್ಚು ಶುಭ ಫಲಗಳಿಗಾಗಿ ಅರುಣಂ ಪಾರಾಯಣ ಮಾಡಿದರೆ ಶುಭ. ಸೂರ್ಯ ಭಗವಂತನಿಗೆ ನೈವೇದ್ಯಗಳನ್ನು ಅರ್ಪಿಸಿ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರಿಗೆ ಇಂದು ಸಾಧಾರವಣವಾಗಿದೆ. ಯೋಜಿತ ಕಾರ್ಯಗಳು ಯೋಜಿತ ರೀತಿಯಲ್ಲಿ ಪೂರ್ಣಗೊಳ್ಳುತ್ತವೆ. ಒಪ್ಪಂದಗಳಿಗೆ ಅನುಕೂಲಕರ ಸಮಯ. ಏಕಪಕ್ಷೀಯ ನಿರ್ಧಾರಗಳು ಅಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಆಪ್ತ ಸ್ನೇಹಿತರ ಸಲಹೆಯನ್ನು ಅನುಸರಿಸಿ. ರಿಯಲ್ ಎಸ್ಟೇಟ್‌ ವ್ಯವಹಾರದಲ್ಲಿ ಸಾಧಾರಣ ಲಾಭವಿದೆ. ವೆಚ್ಚಗಳು ನಿರೀಕ್ಷೆಗಳನ್ನು ಮೀರುತ್ತವೆ. ಹೊಸ ವಿಚಾರಗಳನ್ನು ತಿಳಿದುಕೊಳ್ಳಲಿದ್ದೀರಿ. ಸ್ಥಗಿತಗೊಂಡ ಕೆಲಸ ಪೂರ್ಣಗೊಳ್ಳಲಿದೆ. ಬೆಲೆ ಬಾಳುವ ವಸ್ತುಗಳ ಬಗ್ಗೆ ಎಚ್ಚರದಿಂದಿರಿ. ದೂರದ ಪ್ರಯಾಣ ಸಾಧ್ಯತೆ ಇದೆ. ಕರ್ಕಾಟಕ ರಾಶಿಯವರು ಹೆಚ್ಚಿನ ಫಲಿತಾಂಶಗಳನ್ನು ಪಡೆಯಲು ಸೂರ್ಯ ನಾರಾಯಣ ಮೂರ್ತಿಯ ಆರಾಧನೆ ಮಾಡಿ. ಚಂದ್ರಶೇಖರಾಷ್ಟಕಂ ಪಠಿಸಿ.

ಬರಹ: ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮ

ಮೊಬೈಲ್ : 9494981000

www.chilakamarthi.com

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.