ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮನೆ ದುರಸ್ತಿ ಕಾರ್ಯ ಆರಂಭಿಸಲಿದ್ದೀರಿ, ಪ್ರೀತಿಪಾತ್ರರ ಆರೋಗ್ಯದಲ್ಲಿ ಏರುಪೇರು; ಧನಸ್ಸು, ಮಕರ, ಕುಂಭ, ಮೀನ ರಾಶಿಫಲ

ಮನೆ ದುರಸ್ತಿ ಕಾರ್ಯ ಆರಂಭಿಸಲಿದ್ದೀರಿ, ಪ್ರೀತಿಪಾತ್ರರ ಆರೋಗ್ಯದಲ್ಲಿ ಏರುಪೇರು; ಧನಸ್ಸು, ಮಕರ, ಕುಂಭ, ಮೀನ ರಾಶಿಫಲ

2 ಜೂನ್‌ 2024ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (2nd June 2024 Daily Horoscope).

ಧನಸ್ಸು, ಮಕರ, ಕುಂಭ, ಮೀನ ರಾಶಿಫಲ
ಧನಸ್ಸು, ಮಕರ, ಕುಂಭ, ಮೀನ ರಾಶಿಫಲ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಪಂಚಾಂಗಕರ್ತ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮ ಅವರು ಈ ಮಾಹಿತಿ ಒದಗಿಸಿದ್ದಾರೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (2nd June 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ವೈಶಾಖ ಮಾಸ-ಕೃಷ್ಣಪಕ್ಷ-ಭಾನುವಾರ

ತಿಥಿ: ಏಕಾದಶಿ

ನಕ್ಷತ್ರ: ರೇವತಿ

ಸೂರ್ಯೋದಯ: ಬೆಳಗ್ಗೆ 05:23

ಸೂರ್ಯಾಸ್ತ: ಸಂಜೆ 07:15

ರಾಹುಕಾಲ: ಸಂಜೆ 05:31 ರಿಂದ 07:15 ವರೆಗೆ

ರಾಶಿ ಫಲ

ಧನು ರಾಶಿ

ಧನು ರಾಶಿಯವರಿಗೆ ಇಂದು ಸಾಧಾರಣ ಫಲಿತಾಂಶಗಳಿವೆ. ದೂರದ ಸಂಬಂಧಗಳು ಗಟ್ಟಿಯಾಗುತ್ತವೆ. ನೆಮ್ಮದಿಯಿಂದ ಬದುಕು ಸಾಗಿಸಲಿದ್ದೀರಿ. ನಿಮ್ಮ ಗುರಿಯನ್ನು ನೀವು ಸಾಧಿಸುವಿರಿ. ನಿಮ್ಮ ಪರಿಶ್ರಮ ಇತರರಿಗೆ ಸ್ಪೂರ್ತಿಯಾಗಲಿದೆ. ಹಣ ಉಳಿತಾಯದ ಬಗ್ಗೆ ಗಮನ ಕೊಡಿ. ವ್ಯವಹಾರಗಳಲ್ಲಿ ಏಕಾಗ್ರತೆ ಸಾಧಿಸಲಿದ್ದೀರಿ. ಪ್ರಮುಖ ಕೆಲಸ ಕಾರ್ಯಗಳನ್ನು ಸೂಕ್ತ ಸಮಯಕ್ಕೆ ಪೂರೈಸಲಿದ್ದೀರಿ. ಅಪರಿಚಿತರೊಂದಿಗೆ ಜಾಗರೂಕರಾಗಿರಬೇಕು. ಮನೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಿದ್ದೀರಿ. ದೀರ್ಘ ಸಮಯದ ಹಿಂದೆ ಕಾಣೆಯಾದ ದಾಖಲೆಗಳು ವಾಪಸ್‌ ದೊರೆಯಲಿದೆ. ಧನು ರಾಶಿಯವರು ಹೆಚ್ಚು ಶುಭ ಫಲಗಳಿಗಾಗಿ ಸೂರ್ಯಾಷ್ಟಕವನ್ನು ಪಠಿಸಬೇಕು. ನವಧಾನ್ಯಗಳನ್ನು ದಾನ ಮಾಡುವುದು ಒಳ್ಳೆಯದು.

ಮಕರ ರಾಶಿ

ಮಕರ ರಾಶಿಯವರಿಗೆ ಇಂದು ಅನುಕೂಲಕರವಾಗಿಲ್ಲ. ಹೊಸ ಕೆಲಸಗಳನ್ನು ಆರಂಭಿಸಲಿದ್ದೀರಿ. ಮರಳು ಮಾಡುವ ಜಾಹೀರಾತುಗಳನ್ನು ನಂಬಿ ಮೋಸ ಹೋಗಬೇಡಿ, ಎಲ್ಲವನ್ನೂ ಕೂಲಂಕಷವಾಗಿ ವಿವರಿಸಿ. ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದೀರಿ. ನಿಮ್ಮ ಸಹಾಯದಿಂದ ಮತ್ತೊಬ್ಬರಿಗೆ ಒಳ್ಳೆಯದಾಗಲಿದೆ. ಆದರೆ ಮತ್ತೊಬ್ಬರಿಂದ ಸಹಾಯ ನಿರೀಕ್ಷಿಸಬೇಡಿ, ಪ್ರಮುಖ ಕೆಲಸ ಕಾರ್ಯಗಳು ಅರ್ಧಕ್ಕೆ ನಿಲ್ಲಲಿವೆ. ಆರೋಗ್ಯದ ಬಗ್ಗೆ ಎಚ್ಚರ ಅಗತ್ಯ. ಮಕರ ರಾಶಿಯವರು ಇನ್ನಷ್ಟು ಶುಭ ಫಲಿತಾಂಶಗಳಿಗಾಗಿ ನವಗ್ರಹಶಾಂತಿ ಮಾಡಿಸಬೇಕು. ಇಂದು ನವಗ್ರಹ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ದಿನದ ಕೆಲಸವನ್ನು ಆರಂಭಿಸಿ, ಜೊತೆಗೆ ಸೂರ್ಯಾಷ್ಟಕ ಪಠಿಸಿ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಇಂದು ಸಾಧಾರಣ ಫಲಿತಾಂಶಗಳಿವೆ. ಕೆಲವೊಂದು ಕೆಲಸಗಳು ನೀವು ಅಂದುಕೊಂಡಂತೆ ನಡೆಯಲಿವೆ. ಹೊಸ ಕೆಲಸಗಳನ್ನು ಆರಂಭಿಸಲಿದ್ದೀರಿ. ಒಳ್ಳೆ ಅವಕಾಶಗಳು ದೊರೆಯಲಿದೆ. ನಿಮ್ಮ ನಂಬಿಕೆಯನ್ನು ಕಳೆದುಕೊಳ್ಳಬೇಡಿ. ಬಹಳ ಹಿಂದೆ ಆರಂಭಿಸಿದ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗಲಿವೆ. ಖರ್ಚು ವೆಚ್ಚಗಳ ಕಡೆ ಗಮನ ಇರಲಿ. ಮಕ್ಕಳಿಗೆ ಒಳ್ಳೆಯದಾಗುತ್ತದೆ. ಪರಿಚಯಸ್ಥರ ಮಾತುಗಳು ಬೇಸರ ಎನಿಸಿದರೂ ನಿಮ್ಮನ್ನು ಟೀಕೆ ಮಾಡುವವರ ಕಡೆ ಗಮನ ಕೊಡಬೇಡಿ. ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳಲಿದ್ದೀರಿ. ಕುಂಭ ರಾಶಿಯವರು ಹೆಚ್ಚಿನ ಫಲಿತಾಂಶಕ್ಕಾಗಿ ನವಗ್ರಹ ಪೀಡಹರ ಸ್ತೋತ್ರವನ್ನು ಆಲಿಸಿ, ಆದಿತ್ಯ ಹೃದಯವನ್ನು ಪಠಿಸಿ.

ಮೀನ ರಾಶಿ

ಮೀನ ರಾಶಿಯವರಿಗೆ ಇಂದು ಅನುಕೂಲಕರವಾಗಿಲ್ಲ. ಕುಟುಂಬದಲ್ಲಿ ನಡೆಯುವ ಪ್ರಮುಖ ಕಾರ್ಯಕ್ರಮಗಳಿಗೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ಸಂಬಂಧಗಳು ಸುಧಾರಿಸಲಿವೆ. ಖರ್ಚು ಹೆಚ್ಚಾಗುವುದು, ಉಳಿತಾಯದ ಕಡೆ ಗಮನ ಹರಿಸಬೇಕು. ಪ್ರೀತಿಪಾತ್ರರ ಆರೋಗ್ಯ ಏರುಪೇರಾಗಬಹುದು. ಮತ್ತೊಬ್ಬರ ಕೆಲಸ ಕಾರ್ಯಗಳ ನಡುವೆ ಹಸ್ತಕ್ಷೇಪ ಬೇಡ. ಹಿರಿಯರನ್ನು ಭೇಟಿ ಮಾಡಲಿದ್ದೀರಿ. ನಿಮ್ಮ ಮಾತುಗಳಿಗೆ ಗೌರವ ದೊರೆಯಲಿದೆ. ಮೀನ ರಾಶಿಯವರಿಗೆ ಹೆಚ್ಚು ಮಂಗಳಕರ ಫಲಿತಾಂಶಗಳಿಗಾಗಿ ನವಗ್ರಹ ಸ್ತೋತ್ರ ಹಾಗೂ ವಿಷ್ಣು ಸಹಸ್ರನಾಮ ಪಠಿಸಿ.

ಬರಹ: ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮ

ಮೊಬೈಲ್ : 9494981000

www.chilakamarthi.com

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.