ಕನ್ನಡ ಸುದ್ದಿ  /  Astrology  /  Horoscope Today Astrology Prediction 2nd March 2024 Leo Virgo Libra Scorpio Daily Horoscope Sts

Horoscope Today: ಈ ರಾಶಿಯವರು ಸಾಕು ಪ್ರಾಣಿಗಳನ್ನು ಸಾಕುವ ಸಂಸ್ಥೆಯನ್ನು ಆರಂಭಿಸಲಿದ್ದೀರಿ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಫಲ

2 ಮಾರ್ಚ್‌ 2024, ಶುಕ್ರವಾರ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (2nd March 2024 Daily Horoscope).

ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ದಿನ ಭವಿಷ್ಯ
ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ದಿನ ಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (2nd March 2024 Daily Horoscope).

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ-ಉತ್ತರಾಯಣ-ಶಿಶಿರ ಋತು-ಫಾಲ್ಗುಣ ಮಾಸ-ಕೃಷ್ಣಪಕ್ಷ-ಶನಿವಾರ

ತಿಥಿ : ಸಪ್ತಮಿ ರಾತ್ರಿ 03.20 ವರೆಗೂ ಇದ್ದು ನಂತರ ಅಷ್ಟಮಿ ಆರಂಭವಾಗುತ್ತದೆ.

ನಕ್ಷತ್ರ: ವಿಶಾಖ ನಕ್ಷತ್ರವು 10.19 ರವರೆಗೆ ಇರುತ್ತದೆ ನಂತರ ಅನೂರಾಧಾ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 06.34

ಸೂರ್ಯಾಸ್ತ: ಸಂಜೆ 06.27

ರಾಹುಕಾಲ : ಬೆಳಗ್ಗೆ09.00 ರಿಂದ 10.30

ಸಿಂಹ

ಅಂತರ್ಜ್ಞಾನಶಕ್ತಿ ಇರುತ್ತದೆ. ಕೌಟುಂಬಿಕ ಜೀವನ ಸಂತೋಷವಾಗಿರುತ್ತದೆ. ಬಯಸಿ ಬಂದವರಿಗೆ ಉತ್ತಮ ಮಾರ್ಗದರ್ಶನ ನೀಡುವಿರಿ. ಉದ್ಯೋಗ ಕ್ಷೇತ್ರದಲ್ಲಿ ಅಧಿಕಾರಯುತ ಸ್ಥಾನ ಮಾನ ದೊರೆಯುತ್ತದೆ. ಸಮಾಜದ ಗಣ್ಯವ್ಯಕ್ತಿಗಳ ಸಹವಾಸ ದೊರೆಯುತ್ತದೆ. ರಾಜಕೀಯ ಸೇರುವ ಹಂಬಲವಿದ್ದಲ್ಲಿ ಸಾಧ್ಯವಾಗಲಿದೆ. ವಿದ್ಯಾರ್ಥಿಗಳು ಗೌರವಯುತ ಮಟ್ಟ ತಲುಪಲಿದ್ದಾರೆ. ಕುಟುಂಬದ ಹಿರಿಯರೊಬ್ಬರ ಪಾಲುಗಾರಿಕೆಯಲ್ಲಿ ವ್ಯಾಪಾರ ಆರಂಭಿಸುವಿರಿ. ಸೋದರನ ದಾಂಪತ್ಯದ ತೊಂದರೆ ದೂರವಾಗಲು ಕಾರಣರಾಗುವಿರಿ. ವಂಶದಲ್ಲೇ ಪ್ರತಿಷ್ಠಿತ ಸ್ಥಾನ ಮಾನ ದೊರೆಯುತ್ತದೆ. ಸಾಕು ಪ್ರಾಣಿಗಳನ್ನು ಸಾಕುವ ಸಂಸ್ಥೆಯೊಂದನ್ನು ಆರಂಭಿಸಲಿದ್ದೀರಿ. ಆತ್ಮೀಯರಿಂದ ಹಣದ ಸಹಾಯ ದೊರೆಯಲಿದೆ.

ಪರಿಹಾರ : ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಬಿಳಿ

ಕನ್ಯಾ

ಕುಟುಂಬದಲ್ಲಿ ಒತ್ತಡದ ವಾತಾವರಣ ಇರುತ್ತದೆ. ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ. ಸಾಕು ಪ್ರಾಣಿಗಳಿಂದ ತೊಂದರೆ ಉಂಟಾಗಬಹುದು. ಉದ್ಯೋಗದ ವಿಚಾರದಲ್ಲಿ ಸಂತೃಪ್ತಿ ಇರುವುದಿಲ್ಲ. ಹಿರಿಯ ಅಧಿಕಾರಿಗಳ ಜೊತೆಯಲ್ಲಿ ಚರ್ಚೆ ಆಗುತ್ತದೆ. ಉದ್ಯೋಗ ಬದಲಿಸುವಿರಿ. ಕೃಷಿಯಾಧಾರಿತ ವೃತ್ತಿಯಲ್ಲಿ ನೆಮ್ಮದಿ ಇರುತ್ತದೆ. ವಿದ್ಯಾರ್ಥಿಗಳು ಏಕಾಂಗಿಯಾಗಿ ಉತ್ತಮ ಸಾಧನೆ ಮಾಡುವರು. ಭೂವ್ಯವಹಾರದಲ್ಲಿ ಅನಾವಶ್ಯಕ ವಿವಾದ ಎದುರಾಗುತ್ತದೆ. ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ಪರಸ್ಥಿತಿ ಎದುರಾಗುತ್ತದೆ. ಹೊಸ ವ್ಯಾಪಾರ ಆರಂಭಿಸದಿರಿ. ಅನಗತ್ಯವಾಗಿ ಬೇರೆಯವರ ಪ್ರಭಾವಕ್ಕೆ ಒಳಗಾಗುವಿರಿ. ಹಣದ ಕೊರತೆ ಇರಲಿದೆ.

ಪರಿಹಾರ : ಹಳದಿ ಬಣ್ಣದ ಬಟ್ಟೆಗಳನ್ನು ದಾನ ನೀಡಿ ದಿನದ ಕೆಲಸಗಳನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಬೂದು ಬಣ್ಣ

ತುಲಾ

ಚುರುಕುತನದಿಂದ ಯಶಸ್ಸಿನ ಜೀವನ ನಿಮ್ಮದಾಗುತ್ತದೆ. ಬಂಧು ಬಳಗದಲ್ಲಿ ವಿಶೇಷ ಗೌರವ ಇರುತ್ತದೆ. ಕೃಷಿ ಭೂಮಿಯನ್ನು ಕೊಂಡು ಬೇಸಾಯ ಆರಂಭಿಸುವಿರಿ. ಹಣ್ಣುಗಳ ರಫ್ತು ವ್ಯಾಪಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ವಿಶೇಷವಾದ ಅನುಕೂಲತೆ ದೊರೆಯುತ್ತದೆ. ಭೂ ವಿವಾದವೊಂದು ಎದುರಾಗುತ್ತದೆ. ಲೇಖಕರಿಗೆ ಸಮಾಜದಲ್ಲಿ ಗೌರವಯುತ ಸ್ಥಾನ ಪಡೆಯಲಿದ್ದಾರೆ. ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ. ಕುಟುಂಬದಲ್ಲಿ ಪರಸ್ಪರ ಅನ್ಯೋನ್ಯತೆ ಇರುತ್ತದೆ. ಮನಶಾಸ್ತ್ರಜ್ಞರಿಗೆ ವಿಶೇಷ ಉದ್ಯೋಗಾವಕಾಶ ದೊರೆಯುತ್ತದೆ. ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ತವಕ ಇರುತ್ತದೆ.

ಪರಿಹಾರ : ಕೆಂಪು ಬೆಲ್ಲದಿಂದ ಮಾಡಿದ ದ್ರವಾಹಾರವನ್ನು ಸೇವಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಆಕಾಶ ನೀಲಿ

ವೃಶ್ಚಿಕ

ಕುಟುಂಬಕ್ಕೆ ಉಪಯೋಗವಾಗುವಂತಹ ಕೆಲಸಗಳನ್ನು ಮಾಡುವಿರಿ. ಸೋದರರಿಗೆ ಸೇರಿದ ಭೂ ವಿವಾದವನ್ನು ಸಂದಾನದ ಮೂಲಕ ಪರಿಹರಿಸುವಿರಿ. ಮಾತುಕತೆಯ ಫಲವಾಗಿ ಉದ್ಯೋಗದ ಸಮಸ್ಯೆಯೊಂದು ಕೊನೆಗೊಳ್ಳುತ್ತದೆ. ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಹಣಕಾಸಿನ ವ್ಯವಹಾರದಲ್ಲಿ ಉನ್ನತಿ ಇರುತ್ತದೆ. ಆದಾಯಕ್ಕೆ ತಕ್ಕಂತೆ ಖರ್ಚು ವೆಚ್ಚಗಳು ಇರುತ್ತವೆ. ಸಂಗೀತ ನಾಟ್ಯ ಬಲ್ಲವರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿದೆ. ರಕ್ತ ಸಂಬಂಧಿಕರ ಜೊತೆ ಉತ್ತಮ ಬಾಂಧವ್ಯ ಇರದು. ಆತ್ಮೀಯರೊಂದಿಗೆ ವಿವಾದ ಉಂಟಾಗಬಹುದು. ವಿದ್ಯಾರ್ಥಿಗಳಿಗೆ ಶುಭವರ್ತಮಾನವೊಂದು ಬರಲಿದೆ. ಸೋದರಿಗೆ ಹಣದ ಸಹಾಯ ಮಾಡುವಿರಿ.

ಪರಿಹಾರ : ಸೋದರರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕೆಂಪು ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).