Horoscope Today: ಯಾರನ್ನೂ ಸುಲಭವಾಗಿ ನಂಬಲ್ಲ, ಕೋಮಲವಾದ ಮನಸ್ಸಿರುತ್ತೆ; ಧನು, ಮಕರ, ಕುಂಭ, ಮೀನ ರಾಶಿಯರ ದಿನ ಭವಿಷ್ಯ
30 ಜೂನ್ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (30th June 2024 Horoscope).

ಇಂದಿನ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (30th June 2024 Horoscope)
ಇಂದಿನ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಕೃಷ್ಣಪಕ್ಷ-ಭಾನುವಾರ
ತಿಥಿ: ನವಮಿ ಹ. 01.04 ರವರೆಗು ಇದ್ದು ಆನಂತರ ದಶಮಿ ಆರಂಭವಾಗುತ್ತದೆ.
ನಕ್ಷತ್ರ: ರೇವತಿ ನಕ್ಷತ್ರವು ಬೆ. 08.58 ರವರೆಗೆ ಇದ್ದು ಆನಂತರ ಅಶ್ವಿನಿ ನಕ್ಷತ್ರವು ಆರಂಭವಾಗಲಿದೆ.
ಸೂರ್ಯೋದಯ: ಬೆಳಗ್ಗೆ 05.56
ಸೂರ್ಯಾಸ್ತ: ಸಂಜೆ 06.49
ರಾಹುಕಾಲ: ಸಂಜೆ 05.15 ರಿಂದ 06.51
ಧನಸ್ಸು ರಾಶಿ
ನಿಮ್ಮಲ್ಲಿರುವ ತರ್ಕದ ಗುಣ ಕೆಲವರಿಗೆ ಬೇಸರ ಮೂಡಿಸುತ್ತದೆ. ನಿಮ್ಮ ಬುದ್ಧಿಶಕ್ತಿಯು ವಿಶೇಷವಾಗಿ ಇರುತ್ತದೆ. ಸೌಂದರ್ಯಕ್ಕೆ ಮರುಳಾಗುವುದಿಲ್ಲ. ಬುದ್ಧಿವಂತರನ್ನು ಮೆಚ್ಚಿ ಅವರಿಗೆ ಸಹಾಯ ಮಾಡುವಿರಿ. ನಿಮ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಸಂಗಾತಿಯು ದೊರೆಯುತ್ತಾರೆ. ಹೆಣ್ಣು ಮಕ್ಕಳನ್ನು ವಿಶೇಷವಾದ ಗೌರವದಿಂದ ಕಾಣುವಿರಿ. ನಿಷ್ಠೆಯಿಂದ ನಿಮ್ಮ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಹಣಕಾಸಿನ ಗಳಿಕೆಯೊಂದೇ ಜೀವನವಲ್ಲ ಎಂದು ಪ್ರತಿಬಿಂಬಿಸುವಿರಿ. ಆದರೂ ಮುಂದಿನ ಉತ್ತಮ ಜೀವನಕ್ಕಾಗಿ ಹಣವನ್ನು ಉಳಿಸುವಿರಿ. ಇಂದಿನ ಸೋಲನ್ನು ಮರೆತು ಮುಂದಿನ ಗೆಲುವಿಗೆ ಸಿದ್ದರಾಗುವಿರಿ.
ಪರಿಹಾರ: ಮನೆಯಲ್ಲಿರುವ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹಾಲನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 3
ಅದೃಷ್ಟದ ದಿಕ್ಕು: ನೈರುತ್ಯ
ಅದೃಷ್ಟದ ಬಣ್ಣ: ಎಲೆಹಸಿರು
ಮಕರ ರಾಶಿ
ಮನದಲ್ಲಿ ಅಂಜಿಕೆಯ ಸ್ವಭಾವ ಇರುವುದಿಲ್ಲ. ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಸೌಮ್ಯವಾಗಿದ್ದರು ಕೋಪ ಬಂದಾಗ ಉದ್ವೇಗದಿಂದ ವರ್ತಿಸುವಿರಿ. ನಿಮ್ಮಲ್ಲಿರುವ ಹಠದ ಗುಣ ಜೊತೆಯಲ್ಲಿರುವವರಿಗೆ ಬೇಸರ ಉಂಟುಮಾಡುತ್ತದೆ. ಪ್ರಾಣಿಗಳ ಬಗ್ಗೆ ಕರುಣೆ ಇರುತ್ತದೆ. ನಿಮ್ಮಲ್ಲಿರುವ ಹಣದ ಅಲ್ಪ ಭಾಗವನ್ನು ದಾನ ಧರ್ಮಕ್ಕೆ ಉಪಯೋಗಿಸುವಿರಿ. ಕಷ್ಟ ನಷ್ಟಗಳಿಗೆ ಬಲಿಯಾಗದೆ ಪಾಲಾಗುವಿರಿ. ಯಾವುದೇ ಕೆಲಸ ಆರಂಭಿಸಲು ತಡ ಮಾಡುವುದಿಲ್ಲ. ನಿಮ್ಮಲ್ಲಿರುವ ಕ್ರಿಯಾಶೀಲತೆ ಅಚ್ಚರಿಯನ್ನು ಉಂಟುಮಾಡುತ್ತದೆ. ನಿಮ್ಮ ಮನದಲ್ಲಿ ಮೂಡುವ ಯೋಜನೆಗಳಿಗೆ ಜೀವ ತುಂಬುವಿರಿ. ಅವಸರಕ್ಕೆ ಒಳಗಾದರೆ ಕೆಲಸ ಕಾಯಗಳಲ್ಲಿ ಹಿನ್ನೆಡೆ ಉಂಟಾಗುತ್ತದೆ.
ಪರಿಹಾರ: ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ಕೇಸರಿ
ಕುಂಭ ರಾಶಿ
ಚಂಚಲವಾದ ಮನಸ್ಸಿರುತ್ತದೆ. ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಅನಾವಶ್ಯಕವಾಗಿ ಬದಲಿಸುವಿರಿ. ಮಿತಿಮೀರಿದ ಆಸೆ ಮನಸ್ಸಿನ ನೆಮ್ಮದಿಯನ್ನು ದೂರ ಮಾಡುತ್ತದೆ. ಕೆಲಸ ಕಾರ್ಯಗಳು ಅಪೂರ್ಣವಾಗುತ್ತವೆ. ಕೋಮಲವಾದ ಮನಸ್ಸಿರುತ್ತದೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಮಟ್ಟವನ್ನು ತಲುಪುವಿರಿ. ಆತ್ಮ ಗೌರವಕ್ಕೆ ತೊಂದರೆ ಎನಿಸುವ ಕೆಲಸವನ್ನು ಮಾಡುವುದಿಲ್ಲ. ಸಂತಾನ ಲಾಭವಿದೆ. ಮನಸ್ಸಿಲ್ಲದೆ ಹೋದರು ಸಂಬಂಧಿಕರಿಗೆ ಹಣದ ಸಹಾಯ ಮಾಡುವಿರಿ. ಹಣಕಾಸಿನ ವಿಚಾರದಲ್ಲಿ ತಪ್ಪಾದ ನಿರ್ಧಾರವನ್ನು ತೆಗೆದುಕೊಳ್ಳುವಿರಿ.
ಪರಿಹಾರ: ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 1
ಅದೃಷ್ಟದ ದಿಕ್ಕು: ಉತ್ತರ
ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ
ಮೀನ ರಾಶಿ
ಸ್ವಂತ ಉದ್ದಿಮೆ ಇದ್ದಲ್ಲಿ ಎಚ್ಚರಿಕೆಯಿಂದ ಇರಬೇಕು. ಮಕ್ಕಳಿಗೆ ಕಫದ ತೊಂದರೆ ಇರುತ್ತದೆ. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುವಿರಿ. ಮನದ ಭಾವನೆಗಳನ್ನು ಹತ್ತಿಕ್ಕಲು ಸಾಧ್ಯವಾಗುವುದಿಲ್ಲ. ಹಳೆಯ ಸೋಲಿಗೆ ಸಮಯ ವ್ಯರ್ಥ ಮಾಡದೆ ಗೆಲುವಿನತ್ತ ಸಾಗುವಿರಿ. ಸಂಗಾತಿಯ ಸುಖ ಸಂತೋಷಕ್ಕಾಗಿ ಯಾವುದೇ ತ್ಯಾಗವನ್ನು ಮಾಡುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ಯಾರಿಗೂ ತಿಳಿಯದಂತೆ ಹಣ ಸಂಗ್ರಹ ಮಾಡುವಿರಿ. ಎಂತಹ ಸಂದರ್ಭ ಬಂದರು ಯಾರಿಂದಲೂ ಹಣವನ್ನು ಪಡೆಯುವುದಿಲ್ಲ. ಸೌಂದರ್ಯಪ್ರಿಯರು. ಮನೆಯ ಮಂದಿಯ ಜೊತೆ ಬೇಸರ ಕಳೆಯಲು ಮನರಂಜನಾ ಸ್ಥಳಕ್ಕೆ ಭೇಟಿ ನೀಡುವಿರಿ. ಸುಲಭವಾಗಿ ಹಣವನ್ನು ಖರ್ಚು ಮಾಡುವುದಿಲ್ಲ.
ಪರಿಹಾರ: ಸಾಧು ಸಂತರ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 4
ಅದೃಷ್ಟದ ದಿಕ್ಕು: ಈಶಾನ್ಯ
ಅದೃಷ್ಟದ ಬಣ್ಣ: ಕೆಂಪು
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ವಿಭಾಗ