ಕನ್ನಡ ಸುದ್ದಿ  /  Astrology  /  Horoscope Today Astrology Prediction 30th March 2024 Aries Taurus Gemini Cancer Daily Horoscope Sts

Horoscope Today: ವಿದೇಶಿ ಭಾಷೆ ಕಲಿಕೆಯಲ್ಲಿ ಆಸಕ್ತಿ ಮೂಡಲಿದೆ, ಓಡಾಟಗಳಿಂದ ದೂರವಿದ್ದರೆ ಉತ್ತಮ; ಮೇಷದಿಂದ ಕಟಕ ರಾಶಿವರೆಗಿನ ದಿನಭವಿಷ್ಯ

30 ಮಾರ್ಚ್‌ 2024, ಶನಿವಾರ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ, ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (30th March 2024 Daily Horoscope).

ಮಾರ್ಚ್‌ 30ರ ದಿನಭವಿಷ್ಯ ಮೇಷದಿಂದ ಕಟಕರಾಶಿವರೆಗೆ
ಮಾರ್ಚ್‌ 30ರ ದಿನಭವಿಷ್ಯ ಮೇಷದಿಂದ ಕಟಕರಾಶಿವರೆಗೆ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (30th March 2024 Daily Horoscope).

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣಪಕ್ಷ, ಶನಿವಾರ

ತಿಥಿ: ಪಂಚಮಿ ಸಂಜೆ 5.17 ರವರೆಗೂ ಇರುತ್ತದೆ. ಅನಂತರ ಷಷ್ಠಿ ಆರಂಭವಾಗಲಿದೆ.

ನಕ್ಷತ್ರ: ಅನುರಾದ ನಕ್ಷತ್ರವು ಸಂಜೆ 6.31 ರವರೆಗೂ ಇರುತ್ತದೆ. ಅನಂತರ ಜ್ಯೇಷ್ಠ ನಕ್ಷತ್ರವು ಆರಂಭವಾಗಲಿದೆ.

ಸೂರ್ಯೋದಯ: ಬೆಳಿಗ್ಗೆ 6.16

ಸೂರ್ಯಾಸ್ತ: ಸಂಜೆ 6.30

ರಾಹುಕಾಲ: ಬೆಳಿಗ್ಗೆ 9.00 ರಿಂದ ಬೆಳಿಗ್ಗೆ 10.30

ಮೇಷ

ಸಮಯವನ್ನು ಗೌರವಿಸುವ ನೀವು ಯಾವುದಾದರೂಂದು ಕೆಲಸದಲ್ಲಿ ನಿರತರಾಗುವಿರಿ. ಉದ್ಯೋಗದ ವಿಚಾರದಲ್ಲಿ ತಪ್ಪು ನಿರ್ಧಾರ ತೆಗೆದುಕೊಳ್ಳುವಿರಿ. ಸೇವಾ ವೃತ್ತಿಯಿಂದ ಆದಾಯ ಹೆಚ್ಚುತ್ತದೆ. ಸಮಾಜದಲ್ಲಿ ಹೆಸರು ಪ್ರತಿಷ್ಠೆ ಗಳಿಸುವಿರಿ. ಆದಾಯ ಹೆಚ್ಚುತ್ತದೆ. ಕೌಟುಂಬಿಕ ಜವಾಬ್ದಾರಿ ಹೆಚ್ಚುತ್ತದೆ. ಹಿರಿಯರ ಸಲಹೆ ಸೂಚನೆಯಂತೆ ನಡೆವ ಕಾರಣ ತೊಂದರೆಗಳು ನಿವಾರಣೆ ಆಗಲಿದೆ. ವ್ಯಾಪಾರದಲ್ಲಿ ಯಾವುದೇ ಸಮಸ್ಯೆ ಬರುವುದಿಲ್ಲ. ವಿದ್ಯಾರ್ಥಿಗಳು ಜವಾಬ್ದಾರಿಯನ್ನು ಅರಿತು ಮುಂದುವರೆಯುತ್ತಾರೆ. ವಿದೇಶಿ ಭಾಷಾ ಕಲಿಕೆಯಲ್ಲಿ ಆಸಕ್ತಿ ಮೂಡುತ್ತದೆ. ಗೃಹೋಪಯೋಗಿ ವಸ್ತುಗಳಿಗೆ ಹೆಚ್ಚಿನ ಹಣ ಖರ್ಚಾಗಲಿದೆ. ಮಕ್ಕಳ ಆರೋಗ್ಯದಲ್ಲಿನ ಸಣ್ಣ ಬದಲಾವಣೆಯನ್ನೂ ಗಂಭೀರವಾಗಿ ಪರಿಗಣಿಸುವಿರಿ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ: 4

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ಕಪ್ಪು ಬಣ್ಣ

ವೃಷಭ

ಕುಟುಂಬದಲ್ಲಿ ಪರಸ್ಪರ ಪ್ರೀತಿ ಮತ್ತು ಗೌರವ ಇರಲಿದೆ. ಜೀವನವು ಸುಖ ಸಂತೋಷದಿಂದ ಕೂಡಿರುತ್ತದೆ. ಸಹೋದ್ಯೊಗಿಗಳ ಜೊತೆ ಹೊಂದಾಣಿಕೆಯಿಂದ ಬಾಳುವಿರಿ. ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ಗಳಿಸುವಿರಿ. ಕುಟುಂಬದ ಹಣದ ವ್ಯವಹಾರದ ಜವಾಬ್ದಾರಿಯೂ ನಿಮ್ಮದಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಆಸಕ್ತಿ ಇರುವುದಿಲ್ಲ. ಸಂದಿಗ್ಧತೆಗೆ ಒಳಗಾಗಿ ಸೋದರ ಅಥವ ಸೋದರಿಯ ವ್ಯಾಪಾರ ವಹಿವಾಟಿನಲ್ಲಿ ಪಾಲುದಾರರಾಗುವಿರಿ. ವಿದ್ಯಾರ್ಥಿಗಳಿಗೆ ಹಿರಿಯರಿಂದ ಸಂಪೂರ್ಣ ಸಹಕಾರ ದೊರೆಯುತ್ತದೆ. ಸಾಲದ ವಿಚಾರದಲ್ಲಿ ಭಯ ಆವರಿಸಿರುತ್ತದೆ. ದಂಪತಿಗಳ ನಡುವೆ ವಿರಸವಿರುತ್ತದೆ. ಭೂಮಿಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಆದಾಯವಿದೆ. ಅನಾವಶ್ಯಕವಾಗಿ ಹಣವನ್ನು ಖರ್ಚು ಮಾಡುವಿರಿ.

ಅದೃಷ್ಟದ ಸಂಖ್ಯೆ: 7

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ತಿಳಿ ಹಸಿರು ಬಣ್ಣ

ಮಿಥುನ

ಕುಟುಂಬದಲ್ಲಿನ ವಿವಾದವೊಂದು ಪರಿಹಾರವಾಗಲಿದೆ. ಆಯ್ದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಎಲ್ಲರ ಜೊತೆಯಲ್ಲಿ ಹೊಂದಿಕೊಂಡು ಬಾಳಲು ಪ್ರಯತ್ನಿಸುವಿರಿ. ಆಸ್ತಿಯ ವಿಚಾರದಲ್ಲಿ ಸೋದರಿಯ ಜೊತೆ ಮನಸ್ತಾಪ ಉಂಟಾಗುತ್ತದೆ. ಉದ್ಯೋಗದಲ್ಲಿ ಸಾಧಾರಣ ಪ್ರಗತಿ ಕಂಡುಬರುತ್ತದೆ. ವಿದ್ಯಾರ್ಥಿಗಳು ಮನಸ್ಸನ್ನು ಬದಲಿಸದೆ ಆತ್ಮವಿಶ್ವಾಸದಿಂದ ಮುಂದುವರಿಯುವರು. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಧನಲಾಭವಿರುತ್ತದೆ ಖರ್ಚು ವೆಚ್ಚಗಳನ್ನು ಕಡಿತಗೊಳಿಸಲು ಪ್ರಯತ್ನಿಸಿ. ಹಣ ಸಂಪಾದನೆಯನ್ನು ಗುರಿಯಾಗಿಸಿಕೊಂಡು ವಿದೇಶಕ್ಕೆ ತೆರಳುವಿರಿ. ಆತ್ಮೀಯರೊಂದಿಗೆ ಪಾಲುದಾರಿಕೆ ವ್ಯಾಪಾರವಿರುತ್ತದೆ. ಸಂತಾನಲಾಭವಿದೆ. ಬಡ ದಂಪತಿಗಳಿಗೆ ಹಣದ ಸಹಾಯ ಮಾಡುವಿರಿ.

ಪರಿಹರ: ಧಾರ್ಮಿಕ ಕೇಂದ್ರಗಳಿಗೆ ಹಾಲು, ಮೊಸರು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ: 10

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ನಸುಗೆಂಪು ಬಣ್ಣ

ಕಟಕ

ಕುಟುಂಬದಲ್ಲಿ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಸ್ವಂತ ನಿರ್ಧಾರದಿಂದ ಉದ್ಯೋಗದಲ್ಲಿನ ತೊಂದರೆ ಮರೆಯಾಗುತ್ತದೆ. ಕಾರಣವಿಲ್ಲದೆ ಯಾರೊಂದಿಗೂ ವಾದ ವಿವಾದ ಮಾಡದಿರಿ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭವಿರುತ್ತದೆ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಾರೆ. ಸೋದರಿಗೆ ವಿವಾಹ ನಿಶ್ಚಯವಾಗುತ್ತದೆ. ಪಾಲುದಾರಿಕೆ ವ್ಯಾಪಾರದಲ್ಲಿ ಉತ್ತಮ ಆದಾಯವಿರುತ್ತದೆ. ಅನಿರೀಕ್ಷಿತ ಧನಲಾಭವಿದೆ. ಐಷಾರಾಮಿ ಜೀವನವನ್ನು ಇಷ್ಟಪಡುವಿರಿ. ಒಡವೆಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡುವಿರಿ. ಮನೆ ಕೊಳ್ಳುವ ಬಗ್ಗೆ ವಿಚಾರ ನಡೆಸುವಿರಿ. ಓಡಾಟಗಳಿಂದ ದೂರ ಇರುವುದು ಒಳ್ಳೆಯದು. ಪ್ರಾಣಿ ಮತ್ತು ಪಕ್ಷಿಗಳ ಬಗ್ಗೆ ಕನಿಕರ ತೋರುವಿರಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ನೀಲಿ ಮಿಶ್ರತ ಬಿಳಿ ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).