ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಆಪ್ತರೊಂದಿಗೆ ಕಲಹ ಸಾಧ್ಯತೆ, ಈ ರಾಶಿಯ ಉದ್ಯೋಗಿಗಳಿಗೆ ಸಂಬಳ ಹೆಚ್ಚಳ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿ ದಿನ ಭವಿಷ್ಯ

ಆಪ್ತರೊಂದಿಗೆ ಕಲಹ ಸಾಧ್ಯತೆ, ಈ ರಾಶಿಯ ಉದ್ಯೋಗಿಗಳಿಗೆ ಸಂಬಳ ಹೆಚ್ಚಳ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿ ದಿನ ಭವಿಷ್ಯ

31 ಮೇ 2024ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (31st May 2024 Daily Horoscope).

ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿ ದಿನ ಭವಿಷ್ಯ
ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿ ದಿನ ಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಪಂಚಾಂಗಕರ್ತ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮ ಅವರು ಈ ಮಾಹಿತಿ ಒದಗಿಸಿದ್ದಾರೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (31st May 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ವೈಶಾಖ ಮಾಸ-ಕೃಷ್ಣಪಕ್ಷ-ಶುಕ್ರವಾರ

ತಿಥಿ: ಬೆಳಗ್ಗೆ 09:38 ವರೆಗೆ ಅಷ್ಟಮಿ ಇದ್ದು ನಂತರ ನವಮಿ ಆರಂಭವಾಗುತ್ತದೆ

ನಕ್ಷತ್ರ : ಬೆಳಗ್ಗೆ 06:14 ವರೆಗೆ ಶತಭಿಷ ನಕ್ಷತ್ರವಿದ್ದು ನಂತರ ಪೂರ್ವ ಭಾದ್ರಪದ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 05:24

ಸೂರ್ಯಾಸ್ತ: ಸಂಜೆ 7:14

ರಾಹುಕಾಲ: ಬೆಳಗ್ಗೆ 10:35 ರಿಂದ 12:19 ವರೆಗೆ

ರಾಶಿ ಫಲ

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಇಂದು ಮಧ್ಯಮ ಫಲಿತಾಂಶ ದೊರೆಯಲಿದೆ. ಪ್ರಮುಖ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ಆಪ್ತರೊಂದಿಗೆ ಜಗಳವಾಗುವ ಸೂಚನೆಗಳಿವೆ. ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ವಾದಗಳನ್ನು ತಪ್ಪಿಸಿ. ಪ್ರಮುಖ ದಾಖಲೆಗಳಿಗೆ ಸಹಿ ಮಾಡುವಾಗ ಜಾಗರೂಕರಾಗಿರಿ. ಸಿಂಹ ರಾಶಿಯವರಿಗೆ ಹೆಚ್ಚು ಮಂಗಳಕರ ಫಲಿತಾಂಶಗಳಿಗಾಗಿ ಅತಿಥಿಗಳಿಗೆ ಸಿಹಿತಿಂಡಿಗಳನ್ನು ವಿತರಿಸಿ. ದೇವಾಲಯಗಳಲ್ಲಿ ಸಿಹಿ ತಿಂಡಿಗಳಂತಹ ಪ್ರಸಾದವನ್ನು ನೀಡಿ. ಜಾನುವಾರುಗಳಿಗೆ ಬೆಲ್ಲ ಮತ್ತು ಸಿಹಿ ತಿನ್ನಿಸುವುದು ಒಳ್ಳೆಯದು.

ಕನ್ಯಾರಾಶಿ

ಕನ್ಯಾ ರಾಶಿಯವರಿಗೆ ಇಂದು ಸಾಧಾರಣ ಫಲಿತಾಂಶಗಳಿವೆ. ಉದ್ಯಮಿಗಳು ಪಾಲುದಾರಿಕೆ ವ್ಯವಹಾರಗಳಿಂದ ದೂರವಿರುವುದು ಉತ್ತಮ. ನಿಮ್ಮ ಪ್ರತಿಭೆಯಿಂದ ಎಲ್ಲರನ್ನೂ ಮೆಚ್ಚಿಸುವಿರಿ. ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳಲು ನೀವು ಕಷ್ಟಪಟ್ಟು ಕೆಲಸ ಮಾಡಬೇಕು. ಉದ್ಯೋಗಿಗಳಿಗೆ ಸಾಧಾರಣ ಸಮಯ. ಆರೋಗ್ಯ ಸಹಜವಾಗಿರುತ್ತದೆ. ಶ್ರೀಕೃಷ್ಣನ ಪೂಜೆ ಮಾಡಬೇಕು. ಕನ್ಯಾ ರಾಶಿಯವರು ಹೆಚ್ಚಿನ ಫಲಿತಾಂಶಗಳಿಗಾಗಿ ಲಲಿತಾ ಸ್ತೋತ್ರವನ್ನು ಪಠಿಸಿ. ಲಕ್ಷಿ ಅಷ್ಟೋತ್ತರ ನಾಮ ಪಠಿಸುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.

ತುಲಾ ರಾಶಿ

ತುಲಾ ರಾಶಿಯವರಿಗೆ ಇಂದು ನಿಮ್ಮ ಪರವಾಗಿದೆ. ಸಮಾಜದಲ್ಲಿ ಗೌರವ ಹೆಚ್ಚುವುದು. ದೀರ್ಘಾವಧಿ ಸಾಲಗಳು ನಿವಾರಣೆಯಾಗುತ್ತವೆ. ಕುಟುಂಬ ಸದಸ್ಯರೊಂದಿಗೆ ಆನಂದಿಸಲಿದ್ದೀರಿ. ವ್ಯಾಪಾರಸ್ಥರಿಗೆ ನಿರೀಕ್ಷಿತ ಲಾಭ ದೊರೆಯಲಿದೆ. ಹಠಾತ್ ಆರ್ಥಿಕ ಲಾಭಗಳಿವೆ. ಸಹೋದರರಿಂದ ಸಹಾಯವೂ ದೊರೆಯುತ್ತದೆ. ದೇವಾಲಯಗಳಿಗೆ ಭೇಟಿ ನೀಡುವಿರಿ. ಸಮಾಜದಲ್ಲಿ ಗೌರವ ದೊರೆಯಲಿದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಲಿವೆ. ಉದ್ಯೋಗಿಗಳು ಸಂಬಳ ಹೆಚ್ಚಳ ಮತ್ತು ಬಡ್ತಿ ಪಡೆಯುತ್ತಾರೆ. ಮಹಿಳೆಗೆ ಕೌಟುಂಬಿಕ ಸಮಸ್ಯೆಗಳಿರುತ್ತವೆ. ತುಲಾ ರಾಶಿಯವರು ಹೆಚ್ಚು ಶುಭ ಫಲಗಳಿಗಾಗಿ ಲಕ್ಷ್ಮಿ ದೇವಿಯನ್ನು ಪೂಜಿಸಬೇಕು. ಲಕ್ಷಿ ಅಷ್ಟಕಂ ಪಠಿಸಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಇಂದು ಅನುಕೂಲಕರವಾಗಿಲ್ಲ. ಸಹೋದರರು ಮತ್ತು ಸಂಬಂಧಿಕರೊಂದಿಗೆ ಕಲಹದ ಸೂಚನೆಗಳಿವೆ. ವ್ಯವಹಾರಗಳ ವಿಸ್ತರಣೆಯಲ್ಲಿ ಅಡೆತಡೆಗಳು ಉಂಟಾಗುತ್ತವೆ. ಉದ್ಯೋಗಿಗಳಿಗೆ ಜವಾಬ್ದಾರಿಗಳು ಹೆಚ್ಚಾಗಲಿವೆ. ಮಹಿಳೆಯರಿಗೆ ಮಾನಸಿಕ ಒತ್ತಡ ಇರುತ್ತದೆ. ಒಂದಿಷ್ಟು ಹಣ ಕಳೆದುಕೊಳ್ಳಬಹುದು. ಸ್ನೇಹಿತರು ಶತ್ರುಗಳಾಗಿ ಬದಲಾಗಬಹುದು. ಆದರೆ ನೀವು ತಾಳ್ಮೆಯಿಂದ ಇದ್ದರೆ ಬಹುತೇಕ ಸಮಸ್ಯೆ ಪರಿಹಾರವಾದಂತೆ. ವೃಶ್ಚಿಕ ರಾಶಿಯವರು ಶುಭ ಫಲಿತಾಂಶಗಳಿಗಾಗಿ ಅತಿಥಿಗಳಿಗೆ ಸಿಹಿ ಹಂಚಿ. ದೇವಸ್ಥಾನಗಳಲ್ಲಿಆಲಯದಲ್ಲಿ ಸಿಹಿತಿಂಡಿಗಳನ್ನು ಪ್ರಸಾದವನ್ನಾಗಿ ನೀಡಿ. ಜಾನುವಾರುಗಳಿಗೆ ಬೆಲ್ಲ ಮತ್ತು ಸಿಹಿ ತಿನ್ನಿಸುವುದು ಒಳ್ಳೆಯದು.

ಬರಹ: ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮ, ಜ್ಯೋತಿಷಿ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.