ಉದ್ಯೋಗದಲ್ಲಿ ಉನ್ನತ ಅಧಿಕಾರ ದೊರೆಯಲಿದೆ, ಕುಟುಂಬದ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಇರುವುದಿಲ್ಲ: ಮೇಷ, ವೃಷಭ, ಮಿಥುನ, ಕಟಕ ರಾಶಿಫಲ
ಜುಲೈ 3ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ, ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (ಬರಹ: ಎಚ್. ಸತೀಶ್, ಜ್ಯೋತಿಷಿ)
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (3rd July 2024 Daily Horoscope).
ಇಂದಿನ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಕೃಷ್ಣಪಕ್ಷ-ಬುಧವಾರ
ತಿಥಿ : ದ್ವಾದಶಿ ಬೆಳಗ್ಗೆ 06.49 ರವರೆಗು ಇದ್ದು ಉಪರಿ ತ್ರಯೋದಶಿ ಇರುತ್ತದೆ.
ನಕ್ಷತ್ರ : ರೋಹಿಣಿ ನಕ್ಷತ್ರವು ರಾತ್ರಿ 04.26 ರವರೆಗೆ ಇದ್ದು ನಂತರ ಮೃಗಶಿರ ನಕ್ಷತ್ರ ಇರುತ್ತದೆ.
ಸೂರ್ಯೋದಯ: ಬೆಳಗ್ಗೆ 05.56
ಸೂರ್ಯಾಸ್ತ: ಸಂಜೆ 06.49
ರಾಹುಕಾಲ: 12.27 ರಿಂದ 02.03
ರಾಶಿಫಲ
ಮೇಷ
ಬೇರೆಯವರು ನಿಮ್ಮ ಮಾತನ್ನು ಒಪ್ಪದೇ ಹೋದಲ್ಲಿ ಸಹನೆ ಕಳೆದುಕೊಳ್ಳುವಿರಿ. ಬೇರೊಬ್ಬರ ಸಹಾಯವಿಲ್ಲದೆ ಸ್ವಂತ ಕೆಲಸಗಳನ್ನು ಸ್ವತಂತ್ರವಾಗಿ ನಿರ್ವಹಿಸುವಿರಿ. ಕುಟುಂಬದ ಸಿರಿತನ ನಿಮ್ಮದಾಗುತ್ತದೆ. ಉದ್ಯೋಗದಲ್ಲಿ ನಿರೀಕ್ಷಿಸಿದಂತೆ ಉನ್ನತ ಅಧಿಕಾರ ವಹಿಸಿಕೊಳ್ಳುವಿರಿ. ಆತಂಕದ ಮನೋಭಾವನೆ ಇರುತ್ತದೆ. ದಂಪತಿಗಳ ನಡುವೆ ಉತ್ತಮ ಬಾಂಧವ್ಯ ಕಂಡು ಬರುತ್ತದೆ. ಸಮಯಕ್ಕೆ ಸರಿಯಾಗಿ ವರ್ತಿಸುವ ಕಾರಣ ಸೋಲಿನ ಭಯವಿರುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ನಿಮ್ಮ ಬಗ್ಗೆ ನಿಮಗೆ ವಿಶೇಷ ಅಭಿಮಾನವಿರುತ್ತದೆ. ಕಷ್ಟ ಎನಿಸಿದರೂ ನಿಮಗಿಷ್ಟವಾದ ಕೆಲಸ ಕಾರ್ಯಗಳಲ್ಲಿ ನಿರತರಾಗುವಿರಿ. ಉದ್ಯಮಿಗಳಿಗೆ ಹೊಸ ಅವಕಾಶಗಳು ದೊರೆತು ಆದಾಯ ಹೆಚ್ಚುತ್ತದೆ.
ಪರಿಹಾರ : ಸಿಹಿಯನ್ನು ತಿಂದು ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ 11
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ನೀಲಿ
ವೃಷಭ
ಕೆಲಸ ಮಾಡಲು ಹಿಂಜರಿಕೆ ಇರುವುದಿಲ್ಲ. ಅವಕಾಶಗಳ ಕೊರತೆ ನಿಮ್ಮನ್ನು ಕಾಡುತ್ತದೆ. ಅನಾರೋಗ್ಯದಿಂದ ಮುಖ್ಯವಾದ ಕೆಲಸ ಕಾರ್ಯಗಳು ಮುಂದೂಡಲ್ಪಡುತ್ತವೆ. ನಿಮ್ಮ ಪಾಲಿಗೆ ಸಂಬಂಧಿಸಿದ ಆಸ್ತಿಯು ದೊರೆಯುತ್ತದೆ. ಹಣದ ತೊಂದರೆ ಕಂಡುಬರುವುದಿಲ್ಲ. ಹೊಂದಾಣಿಕೆಯ ಗುಣವನ್ನು ರೂಢಿಸಿಕೊಂಡಲ್ಲಿ ಸುಖಮಯ ಜೀವನ ನಿಮ್ಮದಾಗುತ್ತದೆ. ಸಮಾಜದ ಪ್ರಭಾವಿ ವ್ಯಕ್ತಿಗಳ ಪರಿಚಯವಾಗುತ್ತದೆ. ಕೋಪ ಬಂದಾಗ ಸುಲಭವಾಗಿ ಶಾಂತರಾಗುವುದಿಲ್ಲ. ಬೇರೆಯವರು ಮಾಡುವ ಸಣ್ಣ ತಪ್ಪನ್ನು ವಿಮರ್ಶೆಗೆ ಒಳಪಡಿಸುವಿರಿ. ಕುಟುಂಬದ ಸದಸ್ಯರ ಜೊತೆ ಉತ್ತಮ ಬಾಂಧವ್ಯ ಇರುವುದಿಲ್ಲ. ಏಕಾಂತಪ್ರಿಯರು. ಎಷ್ಟೇ ಪ್ರಯತ್ನ ಪಟ್ಟರೂ ನಿಮ್ಮ ವಿರೋಧಿಗಳು ಜಯ ಗಳಿಸಲಾರರು.
ಪರಿಹಾರ : ಬಿಳಿ ಹಸುವಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 2
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ನೇರಳೆ
ಮಿಥುನ
ಸ್ನೇಹಿತರ ಬಳಗ ದೊಡ್ಡದಾಗಿರುತ್ತದೆ. ಆದರೆ ನಿಮ್ಮ ಮನಗೆದ್ದವರ ಜೊತೆ ಮಾತ್ರ ಪಾಲುದಾರಿಕೆ ವ್ಯಾಪಾರ ಮಾಡುವಿರಿ. ಹಣದ ತೊಂದರೆ ಕಂಡುಬರುವುದಿಲ್ಲ. ಎಲ್ಲರೊಂದಿಗೆ ಮೃದು ಸ್ವಭಾವದಿಂದ ವರ್ತಿಸುವಿರಿ. ಬುದ್ಧಿವಂತಿಕೆಯ ಮಾತುಕತೆಯಿಂದ ವಿರೋಧಿಗಳನ್ನು ಹಿಮ್ಮೆಟ್ಟಿಸುವಿರಿ. ನಿಮಗೆ ಅನುಕೂಲಕರವಾದ ಕೆಲಸ ಕಾರ್ಯಗಳನ್ನು ಆಯ್ಕೆ ಮಾಡುವಿರಿ. ನಿಮ್ಮ ಹಾಸ್ಯದ ಮನೋಭಾವನೆ ಆತ್ಮೀಯತೆಯನ್ನು ಹೆಚ್ಚಿಸುವುದು. ಸಮಯವನ್ನು ವ್ಯರ್ಥ ಮಾಡದೆ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಎಲ್ಲರೊಂದಿಗೆ ಸ್ನೇಹದಿಂದ ವರ್ತಿಸುವಿರಿ. ಹೊಸ ರೀತಿಯ ಉದ್ಯೋಗವನ್ನು ಎದುರು ನೋಡುವಿರಿ. ನಿಮ್ಮ ಮಕ್ಕಳ ಜೊತೆ ದೀರ್ಘಕಾಲದ ಪ್ರಯಾಣಕ್ಕೆ ತೆರಳುವಿರಿ. ಕುಟುಂಬದವರೊಡನೆ ಶಾಂತಿ ನೆಮ್ಮದಿಯಿಂದ ಬಾಳುವಿರಿ.
ಪರಿಹಾರ : ಹಿರಿಯ ಸೋದರ ಅಥವಾ ಸೋದರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 5
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ಗುಲಾಬಿ ಬಣ್ಣ
ಕಟಕ
ಕೌಟುಂಬಿಕ ವಿಚಾರದಲ್ಲಿ ಗಾಂಭೀರ್ಯದಿಂದ ವರ್ತಿಸುವಿರಿ. ನಿಮ್ಮ ಮನದ ಮಹತ್ವಾಕಾಂಕ್ಷೆಯೊಂದು ಸಂಗಾತಿಯ ಸಹಾಯದಿಂದ ಕಾರ್ಯರೂಪಕ್ಕೆ ಬರಲಿದೆ. ಸಣ್ಣ ಪುಟ್ಟ ಕೆಲಸಗಳನ್ನು ಸಹ ನಿಷ್ಠೆಯಿಂದ ಮಾಡುವಿರಿ. ಮಕ್ಕಳ ಜೀವನದಲ್ಲಿ ಉತ್ತಮ ಬದಲಾವಣೆ ಕಂಡುಬರುತ್ತದೆ. ದಂಪತಿ ನಡುವೆ ಪ್ರೀತಿ ವಿಶ್ವಾಸ ಹೆಚ್ಚುತ್ತದೆ. ಗೃಣಿಯರ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಅನಾವಶ್ಯಕವಾಗಿ ವಿವಾದವೊಂದಕ್ಕೆ ಕಾರಣರಾಗುವಿರಿ. ಸಂಗಾತಿಯನ್ನು ಗೌರವದಿಂದ ಕಾಣುವಿರಿ. ಧಾರ್ಮಿಕ ಕೇಂದ್ರವೊಂದರ ಮೇಲ್ವಿಚಾರಣೆ ನಿಮ್ಮ ಪಾಲಿಗೆ ಬರಲಿದೆ. ಅನಾವಶ್ಯಕ ಖರ್ಚು ವಚ್ಚಗಳಿರುತ್ತವೆ. ಧೈರ್ಯದಿಂದ ದಿನನಿತ್ಯದ ಸವಾಲುಗಳನ್ನು ಎದುರಿಸುವಿರಿ. ನಿಮ್ಮ ಕೆಲಸ ಕಾರ್ಯಗಳಿಗೆ ತಕ್ಕಂತ ಹೊಗಳಿಕೆಯನ್ನು ಎಲ್ಲರಿಂದಲೂ ನಿರೀಕ್ಷಿಸುವಿರಿ. ನಿಮ್ಮ ಕೆಲಸ ಕಾರ್ಯಗಳ ಬಗ್ಗೆ ನೀವೇ ಎಲ್ಲರಿಗೂ ತಿಳಿ ಹೇಳುವಿರಿ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಬಿಳಿ ಬಣ್ಣದ ಹೂಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 12
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ಬಿಳಿ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
