ಮರ್ಕಟ ಮನಸ್ಸಿನಿಂದ ಕೆಲಸಕ್ಕೆ ತೊಂದರೆ, ಅತಿಯಾದ ಖರ್ಚಿನಿಂದ ಮನಸ್ಸಿಗೆ ಬೇಸರ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಫಲ
ಜುಲೈ 3ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (ಬರಹ: ಎಚ್. ಸತೀಶ್, ಜ್ಯೋತಿಷಿ)
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (3rd July 2024 Daily Horoscope).
ಇಂದಿನ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಕೃಷ್ಣಪಕ್ಷ-ಬುಧವಾರ
ತಿಥಿ : ದ್ವಾದಶಿ ಬೆಳಗ್ಗೆ 06.49 ರವರೆಗು ಇದ್ದು ಉಪರಿ ತ್ರಯೋದಶಿ ಇರುತ್ತದೆ.
ನಕ್ಷತ್ರ : ರೋಹಿಣಿ ನಕ್ಷತ್ರವು ರಾತ್ರಿ 04.26 ರವರೆಗೆ ಇದ್ದು ನಂತರ ಮೃಗಶಿರ ನಕ್ಷತ್ರ ಇರುತ್ತದೆ.
ಸೂರ್ಯೋದಯ: ಬೆಳಗ್ಗೆ 05.56
ಸೂರ್ಯಾಸ್ತ: ಸಂಜೆ 06.49
ರಾಹುಕಾಲ: 12.27 ರಿಂದ 02.03
ರಾಶಿಫಲ
ಸಿಂಹ
ಮಕ್ಕಳ ಆರೋಗ್ಯದಲ್ಲಿ ಎಚ್ಚರಿಕೆ ವಹಿಸಬೇಕು. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಸಂಗಾತಿಗೆ ಉನ್ನತ ಗೌರವ ಲಭಿಸುತ್ತದೆ. ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ನಡೆಯಲಿವೆ. ಕ್ಷಮಾ ಗುಣ ಬೆಳೆಸಿಕೊಂಡಲ್ಲಿ ಜೀವನವು ಸುಖ ಸಂತೋಷದಿಂದ ಕೂಡಿರುತ್ತದೆ. ಅತಿಯಾದ ಖರ್ಚು ವೆಚ್ಚಗಳು ಮನಸ್ಸಿಗೆ ಬೇಸರ ಮೂಡಿಸುತ್ತದೆ. ಆದರೂ ಧೈರ್ಯ ಗೆಡುವುದಿಲ್ಲ. ನೆರೆಹೊರೆಯವರಿಂದ ಒಳ್ಳೆಯ ಮಾತುಗಳನ್ನಷ್ಟೇ ನಿರೀಕ್ಷಿಸುವಿರಿ. ಬೇರೆಯವರು ಮಾಡುವ ತಪ್ಪನ್ನು ಮನ್ನಿಸಿ ಪರಿಹಾರ ಕಂಡು ಹಿಡಿಯುವಿರಿ. ಉದ್ಯೋಗದ ಸಲುವಾಗಿ ದೂರದ ಊರಿಗೆ ತೆರಳುವಿರಿ. ಉದ್ಯೋಗ ಬದಲಿಸುವ ಅವಕಾಶ ದೊರೆತರೂ ಸರಿಯಾಗಿ ಸ್ಪಂದಿಸುವುದಿಲ್ಲ. ಮಿತಿಮೀರಿದ ಆಹಾರ ಸೇವನೆಯಿಂದ ಅನಾರೋಗ್ಯ ಉಂಟಾಗಲಿದೆ.
ಪರಿಹಾರ : ಕುಟುಂಬದ ಹಿರಿಯರಿಗೆ ಸಹಾಯ ಮಾಡಿ ದಿನದ ಕೆಲಸ ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 3
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ : ಬೂದು
ಕನ್ಯಾ
ಒಮ್ಮೆ ಇದ್ದ ಮನಸ್ಸು ಇನ್ನೊಮ್ಮೆ ಇರುವುದಿಲ್ಲ. ಇದರಿಂದಾಗಿ ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ ಉಂಟಾಗುತ್ತದೆ. ಆದರೆ ಸಂಗಾತಿಯ ಸಹಾಯ ಸಹಕಾರದಿಂದ ಶುಭ ಫಲಗಳನ್ನು ಪಡೆಯುವಿರಿ. ಮೃದು ನಡವಳಿಕೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸುತ್ತದೆ. ಕುಟುಂಬದ ಮಂಗಳ ಕಾರ್ಯದ ಜವಾಬ್ದಾರಿ ನಿಮ್ಮದಾಗಲಿದೆ. ಕಲ್ಪನಾ ಜೀವಿಗಳು. ಸೋಲಾಗಲಿ ಗೆಲುವಾಗಲಿ ಭಾವಕತೆಯಿಂದ ಸ್ವೀಕರಿಸುವಿರಿ. ದಾಂಪತ್ಯ ಜೀವನದಲ್ಲಿ ಪ್ರೀತಿ ವಿಶ್ವಾಸ ಹೆಚ್ಚಾಗಿರುತ್ತದೆ. ಕುಟುಂಬದ ಸದಸ್ಯರ ಜೊತೆ ಸಮಯ ಕಳೆಯಲು ಇಚ್ಚಿಸುವಿರಿ. ಆತ್ಮೀಯರ ಒಳಿತಿಗಾಗಿ ಹೆಚ್ಚಿನ ಪರಿಶ್ರಮ ಪಡುವಿರಿ.
ಪರಿಹಾರ : ಬೆಳ್ಳಿಯ ಲೋಟದಲ್ಲಿ ಹಾಲು ಅಥವಾ ನೀರನ್ನು ಕುಡಿದು ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 6
ಅದೃಷ್ಟದ ದಿಕ್ಕು: ಪೂರ್ವ
ಅದೃಷ್ಟದ ಬಣ್ಣ : ಕಂದು ಬಣ್ಣ
ತುಲಾ
ತಪ್ಪನ್ನು ಒಪ್ಪದೆ ಕೋಪಕ್ಕೆ ಒಳಗಾಗುವಿರಿ. ತಾಳ್ಮೆಯಿಂದ ವರ್ತಿಸಿದರೆ ದೈನಂದಿನ ಜೀವನದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ಧೈರ್ಯದಿಂದ ಕೆಲಸ ಕಾರ್ಯಗಳಲ್ಲಿ ಮುಂದಾಳತ್ವ ವಹಿಸುವಿರಿ. ಎಲ್ಲರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಸಫಲರಾಗುವಿರಿ. ಸರಿಯಾದ ಮಾರ್ಗದಲ್ಲಿ ಪ್ರಯತ್ನಪಡದೆ ಯಾವುದೇ ಕೆಲಸದಲ್ಲಿಯೂ ಸೋಲನ್ನು ಒಪ್ಪುವುದಿಲ್ಲ. ಉತ್ತಮ ಆರೋಗ್ಯವಿರುತ್ತದೆ. ಕುಟುಂಬದಲ್ಲಿ ಪ್ರೀತಿ ವಿಶ್ವಾಸ ತುಂಬಿರುತ್ತದೆ. ಹೆಚ್ಚಿನ ಆಸಕ್ತಿಯಿಂದ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಉದ್ಯೋಗದಲ್ಲಿ ಎದುರಾಗುವ ಕಠಿಣ ಸವಾಲುಗಳನ್ನು ಗೆಲ್ಲುವಿರಿ. ನಿಮ್ಮಲ್ಲಿರುವ ಕರ್ತವ್ಯ ಶೀಲತೆ ಬೇರೆಯವರಿಗೆ ಸ್ಪೂರ್ತಿಯಾಗುತ್ತದೆ. ಆತ್ಮವಿಶ್ವಾಸದೊಂದಿಗೆ ಆತುರದ ಬುದ್ಧಿಯೂ ಇರುತ್ತದೆ. ಮಾನಸಿಕ ಒತ್ತಡವು ಹೆಚ್ಚಾದಾಗ ಕಣ್ಣೀರಾಗಿ ಹೊರಬರುತ್ತದೆ. ಸಂಗಾತಿಯೊಂದಿಗೆ ಬೇರೆಯವರ ವಿಚಾರವಾಗಿ ಅನಾವಶ್ಯಕ ಘರ್ಷಣೆ ಉಂಟಾಗುತ್ತದೆ. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ.
ಪರಿಹಾರ : ಹೆಣ್ಣು ಮಕ್ಕಳಿಗೆ ಹೊಸ ಬಟ್ಟೆಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ಕಪ್ಪು ಬಣ್ಣ
ವೃಶ್ಚಿಕ
ದೈಹಿಕ ದೌರ್ಬಲ್ಯತೆಯ ಕಾರಣ ಹೆಚ್ಚಿನ ವಿಶ್ರಾಂತಿ ಬಯಸುವಿರಿ. ಮನಸ್ಸಿನಲ್ಲಿ ಹಣಕಾಸಿನ ವಿಚಾರವಾಗಿ ಯೋಚನೆ ಮನೆ ಮಾಡಿರುತ್ತದೆ. ದಾಂಪತ್ಯ ಜೀವನದಲ್ಲಿ ಇದ್ದ ಬೇಸರ ದೂರವಾಗಿ ನೆಮ್ಮದಿ ಉಂಟಾಗುತ್ತದೆ. ಆರಂಭಿಸಿದ ಕೆಲಸ ಕಾರ್ಯಗಳು ಪೂರ್ಣವಾಗಲಿವೆ. ಐಷಾರಾಮಿ ಜೀವನವನ್ನು ಇಷ್ಟಪಡುವಿರಿ. ನಿಮ್ಮಲ್ಲಿನ ಮಹತ್ವಕಾಂಕ್ಷೆಯು ನೆರವೇರುತ್ತದೆ. ತಡವಾದರೂ ವೃತ್ತಿ ಕ್ಷೇತ್ರದಲ್ಲಿ ಅಧಿಕಾರ ಲಭಿಸುತ್ತದೆ. ಎದುರಾಗುವ ಸಮಸ್ಯೆಗಳಿಗೆ ಒಳ್ಳೆಯ ತಂತ್ರಗಾರಿಕೆಯಿಂದ ಪರಿಹಾರ ನೀಡುವಿರಿ. ಬೇರೆಯವರ ಕೆಲಸ ಕಾರ್ಯಗಳ ಬಗ್ಗೆ ವಿಮರ್ಶೆ ಮಾಡುವುದರಿಂದ ವಿರೋಧಿಗಳು ಹೆಚ್ಚುತ್ತಾರೆ. ಅನಾವಶ್ಯವಶಕವಾಗಿ ಎಲ್ಲರೊಂದಿಗೆ ವಾದ ವಿವಾದಗಳಲ್ಲಿ ಮುಳುಗುವಿರಿ.
ಪರಿಹಾರ : ಮನೆಯಲ್ಲಿರುವ ಸಾಕು ಪ್ರಾಣಿಗಳಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 4
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ತಿಳಿ ಹಸಿರು
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).