ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಮಿತಿ ಮೀರಿದ ಖರ್ಚಿನಿಂದ ಮನಸ್ಸಿಗೆ ಬೇಸರ, ಉದ್ಯೋಗದಲ್ಲಿ ಉನ್ನತ ಸ್ಥಾನ ದೊರೆಯಲಿದೆ; ಮೇ 3 ರ ದಿನ ಭವಿಷ್ಯ

Horoscope Today: ಮಿತಿ ಮೀರಿದ ಖರ್ಚಿನಿಂದ ಮನಸ್ಸಿಗೆ ಬೇಸರ, ಉದ್ಯೋಗದಲ್ಲಿ ಉನ್ನತ ಸ್ಥಾನ ದೊರೆಯಲಿದೆ; ಮೇ 3 ರ ದಿನ ಭವಿಷ್ಯ

3 ಮೇ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (3rd May 2024 Daily Horoscope).

ಮೇ 2ರ ದಿನ ಭವಿಷ್ಯ
ಮೇ 2ರ ದಿನ ಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (3rd May 2024 Daily Horoscope).

ರಾಶಿಫಲ

ಸಿಂಹ

ಸದಾ ಒಳ್ಳೆಯ ಯೋಚನೆಯಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ. ಕುಟುಂಬದ ಹಣಕಾಸಿನ ವ್ಯವಹಾರದ ಬಗ್ಗೆ ಎಚ್ಚರಿಕೆ ವಹಿಸುವಿರಿ. ಅನಿರೀಕ್ಷಿತ ವಾದ ವಿವಾದಗಳು ಒತ್ತಡಕ್ಕೆ ಕಾರಣವಾಗುತ್ತದೆ. ಕುಟುಂಬದವರ ನೆರವಿನಿಂದ ಕಷ್ಟ ನಷ್ಟದಿಂದ ಪಾರಾಗುವಿರಿ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಸಹಕಾರ ದೊರೆಯಲಿದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಂದಿರುತ್ತಾರೆ. ಸ್ವಂತ ವ್ಯಾಪಾರ ವ್ಯವಹಾರಗಳು ಸುಗಮವಾಗಿ ನಡೆಯುತ್ತವೆ. ಕುಟುಂಬದ ಖರ್ಚುಹೆಚ್ಚುತ್ತದೆ. ಸಾಲದ ವ್ಯವಹಾರದಲ್ಲಿ ವಿರೋಧ ವ್ಯಕ್ತವಾಗಲಿದೆ.

ಪರಿಹಾರ : ಮನೆಯಲ್ಲಿರುವ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹಾಲನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ 9

ಅದೃಷ್ಟದ ದಿಕ್ಕು ಪೂರ್ವ

ಅದೃಷ್ಟದ ಬಣ್ಣ : ಕಪ್ಪು

ಕನ್ಯಾ

ಸೋದರಿಯ ಆಗಮನ ಜೀವನದಲ್ಲಿನ ಹೊಸ ಚೇತರಿಕೆಗೆ ಕಾರಣವಾಗುತ್ತದೆ. ಹಣಕಾಸಿನ ಖರ್ಚು ವೆಚ್ಚಗಳು ಅನಿರೀಕ್ಷಿತವಾಗಿ ಹೆಚ್ಚಾಗಬಹುದು. ಯಾರ ಮನಸ್ಸಿಗೂ ಬೇಸರವಾಗದಂತೆ ನಡೆದುಕೊಳ್ಳುವಿರಿ. ಸಮಯಕ್ಕೆ ತಕ್ಕಂತೆ ವರ್ತಿಸುವಿರಿ. ಉದ್ಯೋಗದಲ್ಲಿ ಉನ್ನತ ಸ್ಥಾನ ಗಳಿಸುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ವ್ಯಾಪಾರ ವ್ಯವಹಾರಗಳಲ್ಲಿ ಯಾವುದೇ ಬದಲಾವಣೆ ಕಾಣದು. ಕುಟುಂಬದ ಧಾರ್ಮಿಕ ಕೆಲಸಗಳು ಸರಾಗವಾಗಿ ನಡೆಯುತ್ತವೆ. ವಿವಾಹದ ಮಾತುಕತೆ ಆರಂಭವಾಗುತ್ತದೆ. ಹೊಸ ವ್ಯಾಪಾರ ಆರಂಭಿಸುವ ಕನಸು ನನಸಾಗುತ್ತದೆ. ಹೊಸ ವಾಹನ ಕೊಳ್ಳುವಿರಿ. ಹಣದ ಕೊರತೆ ಕಾಣುತ್ತದೆ.

ಪರಿಹಾರ : ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ : ತಿಳಿ ಹಸಿರು

ತುಲಾ

ಆತ್ಮೀಯತೆಯಿಂದ ವರ್ತಿಸುವ ನಿಮ್ಮ ಕುಟುಂಬದಲ್ಲಿ ಸಂತಸ ನೆಲೆಸಿರುತ್ತದೆ. ಉತ್ತಮ ಭವಿಷ್ಯಕ್ಕಾಗಿ ಹಣವನ್ನು ಉಳಿಸುವ ಯೋಜನೆ ರೂಪಿಸುವಿರಿ. ಆರೋಗ್ಯದ ಬಗ್ಗೆ ಚಿಂತೆ ಉಂಟಾಗುತ್ತದೆ. ಉದ್ಯೋಗದಲ್ಲಿ ಒತ್ತಡದ ಸನ್ನಿವೇಶ ಎದುರಾಗುತ್ತದೆ. ಸಹೋದ್ಯೋಗಿಗಳ ನಡುವೆ ಆತ್ಮೀಯತೆಯಿಂದ ವರ್ತಿಸುವಿರಿ. ಮಕ್ಕಳಿಗೆ ಸಂಬಂಧಿಸಿದ ವಸ್ತ್ರಗಳ ತಯಾರಿಕೆಯಲ್ಲಿ ನಿರತರಾಗುವಿರಿ. ಹೊಸ ಸ್ನೇಹಿತರ ಪರಿಚಯ ಜೀವನದ ಹಾದಿಯನ್ನು ಬದಲಿಸುತ್ತದೆ. ವ್ಯಾಪಾರ ವ್ಯವಹಾರಗಳ ವರಮಾನ ಕಡಿಮೆಯಾಗುತ್ತದೆ. ನಿರೀಕ್ಷೆಯಂತೆ ಕುಟುಂಬದ ಭೂವಿವಾದ ಕೊನೆಗೊಳ್ಳುತ್ತದೆ. ಕುಟುಂಬದಲ್ಲಿನ ಮಂಗಳ ಕಾರ್ಯವೊಂದು ವಿಜೃಂಭಣೆಯಿಂದ ನಡೆಯಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಗಮನ ಇರಲಿ.

ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು ನೈರುತ್ಯ

ಅದೃಷ್ಟದ ಬಣ್ಣ: ನಸು ಗೆಂಪು

ವೃಶ್ಚಿಕ

ಆರೋಗ್ಯದ ಸಮಸ್ಯೆ ನಿವಾರಣೆಯಾಗುತ್ತದೆ. ಮಾಡುವ ಕೆಲಸ ಸರಳವಾಗಿದ್ದರೂ ಹೆಚ್ಚಿನ ಕಾಳಜಿಯನ್ನು ವಹಿಸುವಿರಿ. ನೇರ ನಿಷ್ಠುರದ ಮಾತುಗಳು ವಿವಾದ ಸೃಷ್ಠಿಸುತ್ತದೆ. ನಿಮ್ಮಲ್ಲಿ ತಪ್ಪು ಅಭಿಪ್ರಾಯವು ಆತ್ಮೀಯರನ್ನು ದೂರ ಮಾಡಬಹುದು ಎಚ್ಚರಿಕೆ ಇರಲಿ. ವಿವಿಧ ಮೂಲಗಳಿಂದ ಹಣದ ಸಹಾಯ ದೊರೆಯುತ್ತದೆ. ಉದ್ಯೋಗದಲ್ಲಿ ಒತ್ತಡದ ಸನ್ನಿವೇಶ ಎದುರಾಗುತ್ತದೆ. ಕ್ರೀಡಾ ಮನೋಭಾವನೆಯಿಂದ ಸೋಲು ಗೆಲುವನ್ನು ಸ್ವೀಕರಿಸುವಿರಿ. ಬೇರೆಯವರಿಂದ ತೆಗೆದುಕೊಂಡ ಸಾಲದಿಂದ ಮುಕ್ತರಾಗುವಿರಿ. ಸ್ವಂತ ಮನೆಯ ಕನಸು ಸುಲಭವಾಗಿ ಕೈಗೂಡಲಿದೆ. ಭೂ ವ್ಯವಹಾರದಲ್ಲಿ ಹೆಚ್ಚಿನ ಲಾಭಾಂಶ ಗಳಿಸುವಿರಿ. ಮಕ್ಕಳ ಜೊತೆಯಲ್ಲಿ ಮನದ ದುಗುಡ ನೀಗಲು ಆಟದಲ್ಲಿ ತೊಡಗುವಿರಿ.

ಪರಿಹಾರ : ಸಾಧು ಸಂತರ ಆಶೀರ್ವಾದ ಪಡೆದು ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).