Horoscope Today: ತಾಯಿಯ ಆರೋಗ್ಯದಲ್ಲಿ ಚೇತರಿಕೆ, ದುಡುಕಿನ ಮಾತಿನಿಂದ ಆತ್ಮೀಯರನ್ನು ದೂರ ಮಾಡಿಕೊಳ್ಳಲಿದ್ದೀರಿ; ಮೇ 3ರ ರಾಶಿಫಲ
3 ಮೇ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (3rd May 2024 2024 Daily Horoscope).
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈ ದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ.(3rd May 2024 Daily Horoscope).
ಇಂದಿನ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ಚೈತ್ರ ಮಾಸ-ಕೃಷ್ಣಪಕ್ಷ-ಶುಕ್ರವಾರ
ತಿಥಿ : ದಶಮಿ ರಾತ್ರಿ 08.16 ರವರೆಗೂ ಇದ್ದು ನಂತರ ಏಕಾದಶಿ ಆರಂಭವಾಗುತ್ತದೆ.
ನಕ್ಷತ್ರ : ಶತಭಿಷ ನಕ್ಷತ್ರವು ರಾತ್ರಿ 09.22 ರವರೆಗೂ ಇದ್ದು ನಂತರ ಪೂರ್ವಾಭಾದ್ರ ನಕ್ಷತ್ರ ಆರಂಭವಾಗುತ್ತದೆ.
ಸೂರ್ಯೋದಯ: ಬೆಳಗ್ಗೆ 05.58
ಸೂರ್ಯಾಸ್ತ: ಸಂಜೆ 06.34
ರಾಹುಕಾಲ: 10.45 ರಿಂದ 12.19 ವರೆಗೆ
ರಾಶಿಫಲ
ಧನಸ್ಸು
ಸೋಲನ್ನು ಒಪ್ಪದ ಮನಸ್ಸು. ಗೆಲುವಿನ ಕನಸು. ಇದರಿಂದ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಸಮಯದ ಕೈಗೊಂಬೆಯಂತೆ ದೊರೆವ ಅವಕಾಶಗಳನ್ನು ಸದುಪಯೋಗಪಡಿಸುವಿರಿ. ಯಾವುದೇ ಕೆಲಸ ಕಾರ್ಯಗಳಲ್ಲಿ ನಿರ್ದಿಷ್ಟವಾದ ಹಾದಿಯಲ್ಲಿ ನಡೆಯಲಾಗುವುದಿಲ್ಲ. ನಿಮ್ಮೆಲ್ಲ ಕೆಲಸದಲ್ಲಿಯೂ ಮಕ್ಕಳ ಸಹಾಯ ಸಹಕಾರ ಇರುತ್ತದೆ. ಉದ್ಯೋಗದಲ್ಲಿ ನಿರೀಕ್ಷಿಸಿದ ಫಲಿತಾಂಶಗಳು ದೊರೆಯದು. ಉನ್ನತ ಅಧಿಕಾರಿಗಳಾದಲ್ಲಿ ಯಾವುದೇ ತೊಂದರೆ ಉಂಟಾಗದು. ಉತ್ತಮ ವರಮಾನವನ್ನು ಕೇಂದ್ರವಾಗಿರಿಸಿಕೊಂಡು ಸಣ್ಣ ಪ್ರಮಾಣದ ಉದ್ದಿಮೆ ಆರಂಭಿಸುವಿರಿ. ವಿದ್ಯಾರ್ಥಿಗಳು ಉನ್ನತ ಅಧ್ಯಯನದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳಸಿಕೊಳ್ಳುತ್ತಾರೆ. ಹಣ ಉಳಿತಾಯದ ಯೋಜನೆ ಮಾಡುವಿರಿ.
ಪರಿಹಾರ : ಬೇವಿನ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸುವುದು.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ಬಿಳಿ ಬಣ್ಣ
ಮಕರ
ಕೆಲಸ ಕಾರ್ಯಗಳು ಸರಾಗವಾಗಿ ನಡೆಯಲಿವೆ. ಕುಟುಂಬದವರ ಒಡನಾಟದಲ್ಲಿ ನೆಮ್ಮದಿಯ ಜೀವನ ನಡೆಸುವಿರಿ. ಬಿಡುವಿಲ್ಲದ ದುಡಿಮೆ ಇರುತ್ತದೆ. ಹೊಸ ಸ್ನೇಹ ಸಂಬಂಧಗಳು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಕುಟುಂಬದ ಆಧಾರ ಸ್ತಂಭವಾಗಿ ನಿಲ್ಲುವಿರಿ. ಆದರೆ ದುಡುಕಿನ ಮಾತುಕತೆ ಕೆಲವರನ್ನು ನಿಮ್ಮಿಂದ ದೂರ ಮಾಡುತ್ತದೆ. ವಾದ ವಿವಾದ ಇಚ್ಚಿಸುವುದಿಲ್ಲ. ಅವಿರತ ದುಡಿಯುವ ಕಾರಣ ದೈಹಿಕವಾಗಿ ದುರ್ಬಲರಾಗುವಿರಿ. ಕುಟುಂಬದ ಒಳಿತಿಗಾಗಿ ಧಾರ್ಮಿಕ ಕಾರ್ಯವನ್ನು ನಡೆಸುವಿರಿ. ಉದ್ಯೋಗದಲ್ಲಿನ ಸಮಸ್ಯೆಗಳು ಮರೆಯಾಗಲಿವೆ. ವಿದ್ಯಾರ್ಥಿಗಳು ಮಾತಿನಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ. ಮನೆಯ ಜನರಿಗೆ ಉಡುಗೊರೆಯನ್ನು ನೀಡುವಿರಿ. ಶಾಂತ ಮನಸ್ಸು ನಿಮ್ಮದಾಗಲಿದೆ.
ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಆಕಾಶ ನೀಲಿ
ಕುಂಭ
ಪ್ರಯತ್ನದ ಜೊತೆಗೆ ಬುದ್ಧಿವಂತಿಕೆಯ ಮಾತುಕತೆ ನಿಮಗೆ ಯಶಸ್ಸನ್ನು ನೀಡುತ್ತದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ನಿಮ್ಮ ಮನದಲ್ಲಿದ್ದ ಅನುಮಾನಕ್ಕೆ ಕೊನೆ ಸಿಗಲಿದೆ. ಉದ್ಯೋಗದ ಸತ್ಯಾಸತ್ಯತೆಗಳನ್ನು ಅರಿಯಲು ಪ್ರಯತ್ನಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಆದಾಯಕ್ಕೆ ಕೊರತೆ ಬಾರದು. ಉದ್ಯೋಗದಲ್ಲಿ ಬೇರೆಯವರನ್ನು ಅವಲಂಬಿಸಿರುವಿರಿ. ವಿದ್ಯಾರ್ಥಿಗಳು ವಿಶೇಷ ಸಾಧನೆಯ ಕಡೆ ಗಮನ ನೀಡುತ್ತಾರೆ. ದೊಡ್ಡ ಪ್ರಮಾಣದ ವ್ಯಾಪಾರವೊಂದನ್ನು ಆರಂಭಿಸುವಿರಿ. ತಾಯಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಮಕ್ಕಳ ಸಂಭ್ರಮ ಸಂತಸದಲ್ಲಿ ಪಾಲ್ಗೊಳ್ಳುವಿರಿ. ದಂಪತಿ ನಡುವೆ ಉತ್ತಮ ಬಾಂಧವ್ಯ ಬೆಸೆಯುತ್ತದೆ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಅಕ್ಕಿ ಬೆಳೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 11
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ನೀಲಿ
ಮೀನ
ಬಹುದಿನದಿಂದ ನಿರೀಕ್ಷಿಸುತ್ತಿದ್ದ ಕೆಲಸವೊಂದು ಸುಲಭವಾಗಿ ಕೈಗೂಡಲಿದೆ. ಬಾಳಿನ ರೀತಿಯನ್ನು ಬದಲಾಯಿಸಿಕೊಳ್ಳುವಿರಿ. ಕುಟುಂಬದಲ್ಲಿ ಸಂತೋಷ ಸಂಭ್ರಮಕ್ಕೆ ಕೊರತೆ ಕಾಣದು. ಉದ್ಯೋಗದಲ್ಲಿನ ದೊಡ್ಡ ಪ್ರಮಾದವನ್ನು ಉತ್ತಮ ಪ್ರಯತ್ನದಿಂದ ದೂರ ಮಾಡುವಿರಿ. ಉತ್ತಮ ಅವಕಾಶ ದೊರೆವ ಕಾರಣ ಉದ್ಯೋಗವನ್ನು ಬದಲಾಯಿಸುವಿರಿ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಸ್ಥಿರವಾದ ಆದಾಯ ಇರಲಿದೆ. ವಿದ್ಯಾರ್ಥಿಗಳು ಎಲ್ಲರಿಗೂ ಮಾದರಿಯಾಗಬಲ್ಲ ಕೆಲಸಗಳನ್ನು ಮಾಡಲಿದ್ದಾರೆ. ಎಲ್ಲರ ಜೊತೆ ಶಾಂತಿ ಸಂಯಮದಿಂದ ಮಾತನಾಡುವ ಕಾರಣ ಪ್ರೀತಿ ವಿಶ್ವಾಸ ದೊರೆಯುತ್ತದೆ. ನೀರಿನೊಂದಿಗೆ ಚೆಲ್ಲಾಟ ಆಡದಿರಿ. ಕುಟುಂಬದ ಹಿರಿಯರೊಂದಿಗೆ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡುವಿರಿ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಪೂಜಾ ದ್ರವ್ಯಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 2
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ : ನೇರಳೆ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ವಿಭಾಗ