ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮನೆಯ ದುರಸ್ತಿ ಕಾರ್ಯ ಆರಂಭಿಸುವಿರಿ, ಉದ್ಯೋಗದಲ್ಲಿ ಸಕಾರಾತ್ಮಕ ಬದಲಾವಣೆಯಿಂದ ಖುಷಿ: ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

ಮನೆಯ ದುರಸ್ತಿ ಕಾರ್ಯ ಆರಂಭಿಸುವಿರಿ, ಉದ್ಯೋಗದಲ್ಲಿ ಸಕಾರಾತ್ಮಕ ಬದಲಾವಣೆಯಿಂದ ಖುಷಿ: ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

ಜುಲೈ 4ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ, ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ).

ಮನೆಯ ದುರಸ್ತಿ ಕಾರ್ಯ ಆರಂಭಿಸುವಿರಿ, ಉದ್ಯೋಗದಲ್ಲಿ ಸಕಾರಾತ್ಮಕ ಬದಲಾವಣೆಯಿಂದ ಖುಷಿ: ಮೇಷ, ವೃಷಭ, ಮಿಥುನ, ಕಟಕ ರಾಶಿಫಲ
ಮನೆಯ ದುರಸ್ತಿ ಕಾರ್ಯ ಆರಂಭಿಸುವಿರಿ, ಉದ್ಯೋಗದಲ್ಲಿ ಸಕಾರಾತ್ಮಕ ಬದಲಾವಣೆಯಿಂದ ಖುಷಿ: ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (4th July 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಕೃಷ್ಣಪಕ್ಷ-ಗುರುವಾರ

ತಿಥಿ : ಚತುರ್ದಶಿ ರಾತ್ರಿ 04.24 ರವರೆಗು ಇರುತ್ತದೆ. ಆನಂತರ ಅಮಾವಾಸ್ಯೆ ಆರಂಭವಾಗುತ್ತದೆ.

ನಕ್ಷತ್ರ : ಮೃಗಶಿರ ನಕ್ಷತ್ರವು ರಾತ್ರಿ 04.07 ರವರೆಗೆ ಇದ್ದು ನಂತರ ಆರ್ದ್ರೆ ನಕ್ಷತ್ರವು ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 05.57

ಸೂರ್ಯಾಸ್ತ: ಸಂಜೆ 06.49

ರಾಹುಕಾಲ: 02.03 ರಿಂದ 03.39

ರಾಶಿಫಲ

ಮೇಷ

ನಿಮಗೆ ಸಂಬಂಧಿಸಿದ ವಿಚಾರಗಳನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳುವಿರಿ. ಸಂತೋಷದಿಂದ ದಿನ ಕಳೆಯುವಿರಿ. ಸಹೋದ್ಯೋಗಿಗಳ ನಡುವೆ ಉತ್ತಮ ಬಾಂಧವ್ಯವಿರುತ್ತದೆ. ಸ್ವತಂತ್ರ ಜೀವನ ಇಷ್ಟಪಡುವಿರಿ. ಬೇರೆಯವರಿಂದ ಸದಾ ಹೊಗಳಿಕೆಯನ್ನು ನಿರೀಕ್ಷಿಸುವಿರಿ. ಸಂಗಾತಿಯೊಂದಿಗೆ ಉತ್ತಮ ಮಿತ್ರರಂತೆ ಬಾಳುವಿರಿ. ಸಣ್ಣಪುಟ್ಟ ಪ್ರವಾಸ ಮಾಡುವಲ್ಲಿ ತೃಪ್ತಿ ಕಾಣುವಿರಿ. ಶಾಂತವಾಗಿದ್ದರೂ ತಪ್ಪನ್ನು ಖಂಡಿಸುವಿರಿ. ಬೇರೆಯವರ ಮನಸ್ಸಿನ ವಿಚಾರವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲಿರಿ. ಮನದಲ್ಲಿರುವ ಆಸೆಗಳಿಗೆ ಎಲ್ಲರ ಬೆಂಬಲ ದೊರೆಯುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ದೊರೆಯಲಿದೆ. ನಿಮ್ಮಲ್ಲಿರುವ ಆತ್ಮಾಭಿಮಾನಕ್ಕೆ ಧಕ್ಕೆಯಾದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಜಾಗರೂಕತೆ ಇರುವುದರಿಂದ ನಿಮಗೆ ಎದುರಾಗುವ ಕಷ್ಟಗಳು ಬೇಗನೆ ಮರೆಯಾಗಲಿವೆ.

ಪರಿಹಾರ : ಬೆಳ್ಳಿಯ ಉಂಗುರ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ 9

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಆಕಾಶ ನೀಲಿ

ವೃಷಭ

ಮಕ್ಕಳನ್ನು ಕರುಣೆ ಮಮತೆಯಿಂದ ಕಾಣುವಿರಿ. ಅವರ ಭವಿಷ್ಯದ ಬಗ್ಗೆ ವಿಶೇಷ ಯೋಜನೆಯನ್ನು ರೂಪಿಸುವಿರಿ. ಸಂಗಾತಿ ಮಾಡುವ ತಪ್ಪನ್ನು ಮನ್ನಿಸುವ ಕಾರಣ ನೆಮ್ಮದಿ ಇರುತ್ತದೆ. ನಿಮ್ಮ ಸತತ ಪ್ರಯತ್ನದ ನಡುವೆಯೂ ಅನಾವಶ್ಯಕ ಖರ್ಚು ವೆಚ್ಚಗಳು ಇರಲಿವೆ. ಕುಟುಂಬದ ವಿವಾಹ ಕಾರ್ಯವು ಸರಳ ರೀತಿಯಲ್ಲಿ ನಡೆಯುತ್ತದೆ. ಏಕಾಂತ ಜೀವನವನ್ನು ಇಷ್ಟಪಡುವಿರಿ. ಸ್ಥಿರವಾದ ಬುದ್ದಿಯಿಂದ ಆರಂಭಿಸಿದ ಕಾರ್ಯದಲ್ಲಿ ಯಶಸ್ಸು ಗಳಿಸುವಿರಿ. ನಿಮ್ಮಲ್ಲಿನ ಹಟದ ಗುಣ ಬೇರೆಯವರಿಗೆ ಬೇಸರ ಉಂಟುಮಾಡುತ್ತದೆ. ಎಲ್ಲರೊಂದಿಗೆ ನಂಬಿಕೆ ಉಳಿಸಿಕೊಂಡು ಬಾಳುವಿರಿ. ಆತ್ಮೀಯರು ನೀವು ಮಾಡುವ ತಪ್ಪುಗಳನ್ನು ಮರೆತು ನಿಮ್ಮ ಜೊತೆಗಿನ ಸ್ನೇಹ ಸಂಬಂಧ ಉಳಿಸಿಕೊಳ್ಳುತ್ತಾರೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಕೆಂಪು

ಮಿಥುನ

ಹಣಕಾಸಿನ ವಿಚಾರದಲ್ಲಿ ಅತಿಯಾದ ನಿರೀಕ್ಷೆ ಇರುವುದಿಲ್ಲ. ಆದರೆ ಆರ್ಥಿಕ ಪ್ರಗತಿ ಸಾಧಿಸುವಿರಿ. ಉದ್ಯೋಗದಲ್ಲಿ ಸಕಾರಾತ್ಮಕ ಬದಲಾವಣೆಗಳು ಮನಸ್ಸಿಗೆ ಸಂತಸ ತರುತ್ತದೆ. ನಿಮ್ಮ ಕರ್ತವ್ಯ ನಿಷ್ಠೆಗೆ ದೊಡ್ಡ ಲಾಭ ದೊರೆಯಲಿದೆ. ನಿಮ್ಮ ಮನಸ್ಸು ನಿಮ್ಮ ಹತೋಟಿಯಲ್ಲಿ ಇರುವ ಕಾರಣ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಎದುರಾಗುವುದಿಲ್ಲ. ದಾಂಪತ್ಯ ಜೀವನ ಸುಖ ಸಂತೋಷದಿಂದ ಕೂಡಿರುತ್ತದೆ. ನಿಮ್ಮಲ್ಲಿ ಉತ್ತಮ ಊಹಾಶಕ್ತಿ ಇರುತ್ತದೆ. ಆದ್ದರಿಂದ ಕಷ್ಟಕ್ಕೆ ಸಿಲುಕುವುದಿಲ್ಲ. ಎಂತಹ ಸಂದರ್ಭ ಎದುರಾದರು ಪ್ರೀತಿ ವಿಶ್ವಾಸ ಕಳೆದುಕೊಳ್ಳುವುದಿಲ್ಲ. ಹತ್ತಾರು ಜನರಿಗೆ ಬೇಕಾದ ವ್ಯಕ್ತಿಯಾಗಿ ಜೀವನ ನಡೆಸುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಗಳಿಗೆ ಹಾಲು ಮೊಸರು ನೀಡಿ ದಿನದ ಕೆಲಸ ಆರಂಭಿಸಿರಿ

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಎಲೆ ಹಸಿರು

ಕಟಕ

ಬೇರೆಯವರನ್ನು ಅವಲಂಬಿಸದೆ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ಉತ್ತಮ ಆದಾಯವಿದ್ದರೂ ಅವಶ್ಯಕತೆ ಇರುವ ವಿಚಾರಗಳಿಗೆ ಹೆಚ್ಚಿನ ಹಣ ಖರ್ಚಾಗುತ್ತದೆ. ತಂದೆಯವರಿಂದ ನಿಮಗೆ ಹಣದ ಸಹಾಯ ದೊರೆಯಲಿದೆ. ಕುಟುಂಬದಲ್ಲಿನ ಮನಸ್ತಾಪ ಕೊನೆಗೊಂಡು ಪರಸ್ಪರ ಪ್ರೀತಿ-ವಿಶ್ವಾಸ ಹೆಚ್ಚುತ್ತದೆ. ಮನೆಯವರ ಒಪ್ಪಿಗೆಯಂತೆ ವಿವಾಹ ನಿಶ್ಚಯವಾಗುತ್ತದೆ. ಸೌಂದರ್ಯಕ್ಕೆ ಬೆಲೆ ನೀಡುವಿರಿ. ಇರುವ ಮನೆಗೆ ಹೊಸ ರೂಪ ನೀಡಲು ಪ್ರಯತ್ನಿಸುವಿರಿ. ಆದರ್ಶವಾದಿಗಳು. ನಿಮ್ಮ ವಾದ ವಿವಾದಗಳು ಬೇರೆಯವರನ್ನು ರಂಜಿಸುತ್ತದೆ. ಮಾತನ್ನು ಕಡಿಮೆ ಮಾಡಿ ಕೆಲಸ ಕಾರ್ಯಗಳ ಕಡೆ ಹೆಚ್ಚಿನ ಗಮನ ನೀಡಬೇಕು. ವಿದ್ಯಾರ್ಥಿಗಳು ಹೆಚ್ಚಿನ ನಿರೀಕ್ಷೆಯಲ್ಲಿ ಇರುತ್ತಾರೆ.

ಪರಿಹಾರ : ಗೋಶಾಲೆಗೆ ಧನ ಸಹಾಯ ಮಾಡಿದ ನಂತರ ದಿನದ ಕೆಲಸಗಳನ್ನು ಆರಂಭಿಸಿ

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಕೇಸರಿ ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.