ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಹೋದ್ಯೋಗಿಗಳಿಗೆ ನಿಮ್ಮ ಬಗ್ಗೆ ತಪ್ಪು ತಿಳುವಳಿಕೆ ಉಂಟಾಗಲಿದೆ, ದಂಪತಿ ನಡುವಿನ ಮನಸ್ತಾಪಕ್ಕೆ ತೆರೆ; ಧನಸ್ಸು, ಮಕರ, ಕುಂಭ, ಮೀನ ರಾಶಿಫಲ

ಸಹೋದ್ಯೋಗಿಗಳಿಗೆ ನಿಮ್ಮ ಬಗ್ಗೆ ತಪ್ಪು ತಿಳುವಳಿಕೆ ಉಂಟಾಗಲಿದೆ, ದಂಪತಿ ನಡುವಿನ ಮನಸ್ತಾಪಕ್ಕೆ ತೆರೆ; ಧನಸ್ಸು, ಮಕರ, ಕುಂಭ, ಮೀನ ರಾಶಿಫಲ

ಜುಲೈ 4ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (4th July 2024 Daily Horoscope).

ಸಹೋದ್ಯೋಗಿಗಳಿಗೆ ನಿಮ್ಮ ಬಗ್ಗೆ ತಪ್ಪು ತಿಳುವಳಿಕೆ ಉಂಟಾಗಲಿದೆ, ದಂಪತಿ ನಡುವಿನ ಮನಸ್ತಾಪಕ್ಕೆ ತೆರೆ; ಧನಸ್ಸು, ಮಕರ, ಕುಂಭ, ಮೀನ ರಾಶಿಫಲ
ಸಹೋದ್ಯೋಗಿಗಳಿಗೆ ನಿಮ್ಮ ಬಗ್ಗೆ ತಪ್ಪು ತಿಳುವಳಿಕೆ ಉಂಟಾಗಲಿದೆ, ದಂಪತಿ ನಡುವಿನ ಮನಸ್ತಾಪಕ್ಕೆ ತೆರೆ; ಧನಸ್ಸು, ಮಕರ, ಕುಂಭ, ಮೀನ ರಾಶಿಫಲ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈ ದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ.(4th July 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಕೃಷ್ಣಪಕ್ಷ-ಗುರುವಾರ

ತಿಥಿ : ಚತುರ್ದಶಿ ರಾತ್ರಿ 04.24 ರವರೆಗು ಇರುತ್ತದೆ. ಆನಂತರ ಅಮಾವಾಸ್ಯೆ ಆರಂಭವಾಗುತ್ತದೆ.

ನಕ್ಷತ್ರ : ಮೃಗಶಿರ ನಕ್ಷತ್ರವು ರಾತ್ರಿ 04.07 ರವರೆಗೆ ಇದ್ದು ನಂತರ ಆರ್ದ್ರೆ ನಕ್ಷತ್ರವು ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 05.57

ಸೂರ್ಯಾಸ್ತ: ಸಂಜೆ 06.49

ರಾಹುಕಾಲ: 02.03 ರಿಂದ 03.39

ರಾಶಿಫಲ

ಧನಸ್ಸು

ಮನರಂಜನಾ ಕೂಟವೊಂದರಲ್ಲಿ ಭಾಗವಹಿಸುವಿರಿ. ಕ್ರೀಡಾಪಟುಗಳಿಗೆ ಅಪೂರ್ವವಾದ ಅವಕಾಶ ದೊರೆಯಲಿದೆ. ಉತ್ತಮ ಆದಾಯ ಇರುತ್ತದೆ. ಆದರೆ ಅನಿರೀಕ್ಷಿತ ಖರ್ಚು ವೆಚ್ಚಗಳ ಕಾರಣ ಹಣದ ಕೊರತೆ ಕಂಡುಬರುತ್ತದೆ. ಉದ್ಯೋಗದಲ್ಲಿ ನಿಮ್ಮ ಬಗ್ಗೆ ಸಹೋದ್ಯೋಗಿಗಳಿಗೆ ತಪ್ಪು ಭಾವನೆ ಉಂಟಾಗುತ್ತದೆ. ಹಿರಿಯ ಅಧಿಕಾರಿಗಳು ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದಿರುತ್ತಾರೆ. ಆತ್ಮೀಯರಿಂದ ಹಣಕಾಸಿನ ವ್ಯವಹಾರದಲ್ಲಿ ವಿರೋಧ ಎದುರಿಸಬೇಕಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ಗಳಿಸುವಿರಿ. ಕೆಲಸ ಕಾರ್ಯದ ನಡುವೆಯೂ ಸಂಗಾತಿ ಮತ್ತು ಮಕ್ಕಳಿಗೆಂದು ಸ್ವಲ್ಪ ಸಮಯ ಮೀಸಲಿಡುವಿರಿ. ಆತ್ಮೀಯರಿಂದ ಉಡುಗೊರೆಯೊಂದು ದೊರೆಯುತ್ತದೆ. ಹಿರಿಯರಿಗೆ ಸಂಬಂಧಪಟ್ಟ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.

ಪರಿಹಾರ : ಜೇನು ಸೇವಿಸಿ ನೀರು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಹಸಿರು

ಮಕರ

ಕರಿದ ತಿಂಡಿ ಪದಾರ್ಥಗಳಿಂದ ದೂರವಿರುವುದು ಒಳ್ಳೆಯದು. ಗಡಿಬಿಡಿಯಿಂದ ಆರಂಭಿಸುವ ಕೆಲಸ ಕಾರ್ಯದಲ್ಲಿ ಹಿನ್ನಡೆ ಉಂಟಾಗುತ್ತದೆ. ನಿಮ್ಮ ಮಾತಿಗೆ ಸ್ನೇಹಿತರ ಗುಂಪಿನಲ್ಲಿ ವಿಶೇಷ ಮನ್ನಣೆ ದೊರೆಯುತ್ತದೆ. ಹಣಕಾಸಿನ ವ್ಯವಹಾರಗಳನ್ನು ಪೂರ್ಣಗೊಳಿಸಲೇಬೇಕಾಗುತ್ತದೆ. ಕುಟುಂಬದವರ ಜೊತೆ ಸಂತೋಷದಿಂದ ಬೆರೆಯುವಿರಿ. ಮಕ್ಕಳ ಜೀವನದಲ್ಲಿ ಯಾವುದೇ ತೊಂದರೆ ಬರದಂತೆ ನೋಡಿಕೊಳ್ಳುವಿರಿ. ಮಹಿಳೆಯರಿಗೆ ವಿಶೇಷವಾದ ಶುಭಫಲಗಳು ದೊರೆಯುತ್ತವೆ. ಅಪೂರ್ಣಗೊಂಡ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಿ. ವಿಶ್ರಾಂತಿ ತೆಗೆದುಕೊಳ್ಳುವ ಸಂದರ್ಭದಲ್ಲಿ ನಿಮ್ಮ ವೈಯಕ್ತಿಕ ಕೆಲಸ ಕಾರ್ಯಗಳ ಬಗ್ಗೆ ಗಮನವನ್ನು ನೀಡುವಿರಿ. ನಿಮ್ಮ ಕೆಲಸ ಕಾರ್ಯಗಳು ಪೂರ್ಣಗೊಳ್ಳುವವರೆಗೂ ಅದರ ಕಾರ್ಯಯೋಜನೆಯ ಬಗ್ಗೆಯೂ ವಿಚಾರವನ್ನು ತಿಳಿಸದಿರಿ.

ಪರಿಹಾರ : ಪುಟ್ಟ ಮಕ್ಕಳಿಗೆ ಬೆಣ್ಣೆನೀಡಿ ಇಂದಿನ ಕೆಲಸವನ್ನು ಆರಂಬಿಸಿ. .

ಅದೃಷ್ಟದ ಸಂಖ್ಯೆ :12

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ನೀಲಿ ಬಣ್ಣ

ಕುಂಭ

ಎಲ್ಲರೊಂದಿಗೆ ಸಂತೋಷದಿಂದ ಇರುವಿರಿ. ಮನರಂಜನಾ ಕಾರ್ಯಕ್ರಮ ಒಂದರಲ್ಲಿ ನಿಮ್ಮ ಪಾತ್ರ ಎಲ್ಲರ ಗಮನ ಸೆಳೆಯುತ್ತದೆ. ಸಾಹಸದ ಕ್ರೀಡೆಗಳಲ್ಲಿ ಭಾಗವಹಿಸುವವರು ಉನ್ನತ ಪ್ರಶಸ್ತಿಯನ್ನು ಗಳಿಸುವಿರಿ. ಉದ್ಯೋಗದ ವಿಚಾರದಲ್ಲಿ ನಿಮ್ಮ ನಿರ್ಣಯಗಳನ್ನು ಯಾರೂ ವಿರೋಧಿಸುವುದಿಲ್ಲ. ಗೃಹಿಣಿಯರು ಬೇಸರ ಕಡೆಯಲು ಸಣ್ಣಪುಟ್ಟ ವ್ಯಾಪಾರದಲ್ಲಿ ತೊಡಗುತ್ತಾರೆ. ವಿದೇಶಿ ಸಂಸ್ಥೆಯೊಂದರ ಸಹಕಾರದಿಂದ ಪಾಲುಗಾರಿಕೆಯ ವ್ಯವಹಾರವನ್ನು ಆರಂಭಿಸುವಿರಿ. ಸ್ವಂತ ಕೆಲಸ ಕಾರ್ಯಗಳಿಗೆ ಸಮಯವಿಲ್ಲದೆ ಹೋಗುತ್ತದೆ. ದಾಂಪತ್ಯ ಜೀವನದಲ್ಲಿ ಇದ್ದ ಬೇಸರ ದೂರವಾಗಲಿದೆ. ಹಣಕಾಸಿನ ಬಗ್ಗೆ ಗಮನ ನೀಡುವುದಿಲ್ಲ. ವಿದೇಶದಲ್ಲಿ ಉನ್ನತ ಅಧ್ಯಯನ ನಡೆಸಲು ವಿದ್ಯಾರ್ಥಿಗಳಿಗೆ ಅವಕಾಶ ಲಭಿಸುತ್ತದೆ.

ಪರಿಹಾರ : ಕೈ ಅಥವಾ ಕಾಲಿನಲ್ಲಿ ಕಪ್ಪು ದಾರ ಧರಿಸುವದರಿಂದ ಶುಭವಿರುತ್ತದೆ

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ನೇರಳೆ ಬಣ್ಣ

ಮೀನ

ನಿಮ್ಮ ನಿರ್ಲಕ್ಷ್ಯದಿಂದ ಆರೋಗ್ಯದಲ್ಲಿ ತೊಂದರೆ ಉಂಟಾಗಲಿದೆ. ಮನೆಯಲ್ಲಿ ಸಾಕಿರುವ ಪ್ರಾಣಿಗಳ ಬಗ್ಗೆ ಎಚ್ಚರಿಕೆ ವಹಿಸಿ. ನಿಮ್ಮ ಅಸಹಜ ವರ್ತನೆಯಿಂದ ಹಣದ ಕೊರತೆ ಉಂಟಾಗುತ್ತದೆ. ನಿಮ್ಮ ಕಠಿಣ ನಿರ್ಧಾರಗಳು ಕುಟುಂಬದಲ್ಲಿ ಸಂದಿಗ್ದತೆ ಉಂಟುಮಾಡುತ್ತದೆ. ನಿಮ್ಮ ಉದ್ಯೋಗದಲ್ಲಿ ಉತ್ತಮ ಬದಲಾವಣೆಗಳು ಎದುರಾಗಲಿವೆ. ನಿಮ್ಮ ಮಾತಿನ ಮೇಲೆ ನಿಯಂತ್ರಣ ಸಾಧಿಸಬೇಕು. ನಿಮ್ಮ ಹಾಗೂ ತಾಯಿಯ ನಡುವೆ ಭಾವಪೂರ್ಣ ಸನ್ನಿವೇಶವೊಂದು ಉಂಟಾಗಲಿದೆ. ಜೀವನ ಸಂಗಾತಿಯೊಂದಿಗೆ ಸಂತೋಷ ಸಂತಸ ಇರಲಿದೆ. ಮಕ್ಕಳ ಜೊತೆ ಮನರಂಜನಾ ಸ್ಥಳಕ್ಕೆ ತೆರಳುವಿರಿ. ಅನಾರೋಗ್ಯದ ಕಾರಣ ವಿಶ್ರಾಂತಿಯನ್ನು ಬಯಸುವಿರಿ. ಉತ್ತಮ ಆದಾಯ ಇರುತ್ತದೆ.

ಪರಿಹಾರ : ಮನೆಯಲ್ಲಿರುವ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹಾಲನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ 6

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ : ಗುಲಾಬಿ ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.