ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಅವಿವಾಹಿತರಿಗೆ ಸಂಬಂಧದಲ್ಲಿ ಮದುವೆ ನಿಶ್ಚಯ, ಉದ್ಯೋಗದಲ್ಲಿ ಮಹತ್ತರ ಬದಲಾವಣೆ; ಧನಸ್ಸು, ಮಕರ, ಕುಂಭ, ಮೀನ ರಾಶಿ ಭವಿಷ್ಯ

ಅವಿವಾಹಿತರಿಗೆ ಸಂಬಂಧದಲ್ಲಿ ಮದುವೆ ನಿಶ್ಚಯ, ಉದ್ಯೋಗದಲ್ಲಿ ಮಹತ್ತರ ಬದಲಾವಣೆ; ಧನಸ್ಸು, ಮಕರ, ಕುಂಭ, ಮೀನ ರಾಶಿ ಭವಿಷ್ಯ

4 ಜೂನ್‌ 2024ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (4th June 2024 Daily Horoscope).

ಅವಿವಾಹಿತರಿಗೆ ಸಂಬಂಧದಲ್ಲಿ ಮದುವೆ ನಿಶ್ಚಯ, ಉದ್ಯೋಗದಲ್ಲಿ ಮಹತ್ತರ ಬದಲಾವಣೆ; ಧನಸ್ಸು, ಮಕರ, ಕುಂಭ, ಮೀನ ರಾಶಿ ಭವಿಷ್ಯ
ಅವಿವಾಹಿತರಿಗೆ ಸಂಬಂಧದಲ್ಲಿ ಮದುವೆ ನಿಶ್ಚಯ, ಉದ್ಯೋಗದಲ್ಲಿ ಮಹತ್ತರ ಬದಲಾವಣೆ; ಧನಸ್ಸು, ಮಕರ, ಕುಂಭ, ಮೀನ ರಾಶಿ ಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈ ದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ.(4th June 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ವೈಶಾಖ ಮಾಸ-ಕೃಷ್ಣಪಕ್ಷ-ಮಂಗಳವಾರ

ತಿಥಿ: ತ್ರಯೋದಶಿ ರಾತ್ರಿ 09.15 ರವರೆಗೂ ಇರುತ್ತದೆ ನಂತರ ಚತುರ್ದಶಿ ಆರಂಭವಾಗುತ್ತದೆ.

ನಕ್ಷತ್ರ: ಭರಣಿ ನಕ್ಷತ್ರವು ರಾತ್ರಿ 09.58ರವರೆಗೂ ಇದ್ದು ನಂತರ ಕೃತ್ತಿಕ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 05.52

ಸೂರ್ಯಾಸ್ತ: ಸಂಜೆ 06.42

ರಾಹುಕಾಲ: 03.34 ರಿಂದ ಸಂಜೆ 05.10

ರಾಶಿ ಫಲ

ಧನಸ್ಸು

ಮನದಲ್ಲಿ ಸದಾ ಒಳ್ಳೆಯ ವಿಚಾರಗಳು ಇರಲಿವೆ. ಯಾರ ಮನಸ್ಸನ್ನೂ ನೋಯಿಸದೆ ಜೀವನ ನಡೆಸುವಿರಿ. ಕಾನೂನಿನ ಹೋರಾಟವೊಂದರಲ್ಲಿ ಜಯ ಲಭಿಸುತ್ತದೆ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಲಿದೆ. ಹಣಕಾಸಿನ ವ್ಯವಹಾರಗಳು ಮಧ್ಯಮಗತಿಯಲ್ಲಿ ಸಾಗಲಿವೆ. ಕಷ್ಟ ಎನಿಸಿದರೂ ಹಣ ಉಳಿಸುವಲ್ಲಿ ಸಫಲರಾಗುವಿರಿ. ವಂಶಾಧಾರಿತ ವೃತ್ತಿಯನ್ನು ಆರಂಭಿಸುವಿರಿ. ಸಾಲವಾಗಿ ನೀಡಿದ್ದ ಹಣವನ್ನು ಮರಳಿ ಪಡೆಯುವಿರಿ. ಕುಟುಂಬದ ಸಣ್ಣ ಸಣ್ಣ ಬದಲಾವಣೆಗೂ ಹೆಚ್ಚಿನ ಗಮನ ನೀಡುವಿರಿ. ವಿದ್ಯಾರ್ಥಿಗಳು ಸಾಧನೆ ಮಾಡಲಿದ್ದಾರೆ. ಸಮಯ ಸಂದರ್ಭ ಅರಿತು ನಡೆವ ಕಾರಣ ವಾದ ವಿವಾದಗಳಿಂದ ದೂರ ಉಳಿಯುವಿರಿ.

ಪರಿಹಾರ : ಬಡ ರೋಗಿಗಳಿಗೆ ಹಣದ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ನಸುಗೆಂಪು

ಮಕರ

ನಿಮ್ಮ ಮನಸ್ಸಿಗೆ ಸರಿ ಎನಿಸಿದ ಕೆಲಸವನ್ನು ಒಪ್ಪುವಿರಿ. ಕುಟುಂಬಲ್ಲಿ ಅನೇಕ ಘಟನೆಗಳು ನಡೆಯಲಿವೆ. ನೀವಿದ್ದೆಡೆ ಸಂತೋಷ ಸಂಭ್ರಮಗಳಿಗೆ ಕೊರತೆ ಇರುವುದಿಲ್ಲ. ನಿಮ್ಮ ಮನದ ಆಸೆ ಆಕಾಂಕ್ಷೆಗಳು ಸುಲಭವಾಗಿ ಈಡೇರಲಿವೆ. ಆತುರ ಪಡದೆ ಕೆಲಸ ಕಾರ್ಯಗಳಲ್ಲಿ ಜಯ ಸಾಧಿಸುವಿರಿ. ಸಂಗಾತಿ ಮತ್ತು ಮಕ್ಕಳ ಜೊತೆ ಬಿಡುವಿನ ವೇಳೆ ಕಳೆಯುವಿರಿ. ನೀವು ಇಷ್ಟಪಡುವ ಸ್ಥಳಗಳಿಗೆ ಪ್ರವಾಸಕ್ಕೆ ಹೋಗಲಿದ್ದೀರಿ. ಕಷ್ಟಕ್ಕೆ ತಕ್ಕ ಪ್ರತಿಫಲ ದೊರೆಯಲಿವೆ. ಹಣದ ಕೊರತೆ ಇರುವುದಿಲ್ಲ. ಬಡವರಿಗೆ ಸಹಾಯ ಮಾಡಲಿದ್ದೀರಿ. ಆರೋಗ್ಯದ ಬಗ್ಗೆ ಗಮನ ಕೊಡಿ. ಹೊಸ ವಾಹನವನ್ನು ಕೊಳ್ಳುವಿರಿ.

ಪರಿಹಾರ : ಬಲಗೈಯಲ್ಲಿ ಬೆಳ್ಳಿಯ ಕೈಕಡಗ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ

ಕುಂಭ

ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳನ್ನು ಮುಂದುವರೆಸುವಿರಿ. ನಿಮ್ಮಲ್ಲಿರುವ ಪ್ರತಿಭೆಯನ್ನು ಬಳಸಿಕೊಳ್ಳಲು ಅವಕಾಶವೊಂದು ದೊರೆಯಲಿದೆ. ಒತ್ತಡದ ನಡುವೆಯೂ ನ್ಯಾಯದ ಹಾದಿಯನ್ನು ಬಿಡುವುದಿಲ್ಲ. ಉತ್ತಮ ಆದಾಯ ಇರಲಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡು ನಿಮ್ಮಲ್ಲಿ ಹೊಸ ಚೈತನ್ಯ ಮೂಡುತ್ತದೆ. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ. ಕೂಡಿಟ್ಟ ಹಣ ಈಗ ನಿಮಗೆ ಆಧಾರವಾಗಲಿದೆ. ಸುಖ ಮತ್ತು ದುಃಖವನ್ನು ಸಮಾನ ಮನಸ್ಥಿತಿಯಿಂದ ಸ್ವೀಕರಿಸುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುವಂತೆ ಶ್ರಮಿಸುವಿರಿ. ಕುಟುಂಬದ ಜವಾಬ್ದಾರಿಯಿಂದ ಸಂಗಾತಿಗೆ ಮಾನಸಿಕ ಒತ್ತಡ ಹೆಚ್ಚುತ್ತದೆ. ನೀವು ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಬದಲಾಯಿಸಲು ಇಚ್ಚಿಸುವುದಿಲ್ಲ. ನಿಮ್ಮೊಡನೆ ಎಲ್ಲರನ್ನೂ ಯಶಸ್ಸಿನ ಕಡೆಗೆ ಕರೆದೊಯ್ಯುವಿರಿ.

ಪರಿಹಾರ : ಬೆಳ್ಳಿಯ ಉಂಗುರ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಬೂದು ಬಣ್ಣ

ಮೀನ

ಉದ್ಯೋಗದ ವಿಚಾರದಿಂದ ಮನದಲ್ಲಿ ಆತಂಕ ಮನೆ ಮಾಡಿರುತ್ತದೆ. ಮಕ್ಕಳ ಜೊತೆ ಸಂತೋಷದಿಂದ ಬಾಳುವಿರಿ. ಬೇಸರ ಕಳೆಯಲು ಸ್ನೇಹಿತರೊಂದಿಗೆ ಸಂತೋಷಕೂಟಕ್ಕೆ ಭೇಟಿ ನೀಡುವಿರಿ. ಸಂಗಾತಿಯ ಸಾಂತ್ವನದ ಮಾತು ಹೊಸ ಆಸೆ ಉಂಟು ಮಾಡುತ್ತದೆ. ಸಾಲದ ವ್ಯವಹಾರದಿಂದ ಮನಸ್ಸಿಗೆ ಬೇಸರ ಉಂಟಾಗುತ್ತದೆ. ಸ್ನೇಹಿತರಿಂದ ದೂರ ಉಳಿಯಬೇಕಾದ ಪ್ರಸಂಗ ಉಂಟಾಗುತ್ತದೆ. ಅವಿವಾಹಿತರಿಗೆ ಸಂಬಂಧ ಅಥವಾ ಪ್ರೀತಿಪಾತ್ರರ ಜೊತೆಯಲ್ಲಿ ವಿವಾಹವಾಗುತ್ತದೆ. ಸೋಲನ್ನು ಗೆಲುವಾಗಿಸಬಲ್ಲ ಉಪಾಯ ನಿಮಗೆ ತಿಳಿದಿರುತ್ತದೆ. ಉದ್ಯೋಗದಲ್ಲಿ ನಿಮ್ಮ ಪ್ರಯತ್ನದಿಂದ ಸಾಕಷ್ಟು ಬದಲಾವಣೆ ಕಾಣುತ್ತದೆ. ಸಂಗಾತಿಯ ಆರೋಗ್ಯದಲ್ಲಿ ತೊಂದರೆ ಕಂಡುಬರಲಿದೆ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ 2

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ಹಸಿರು

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).