Horoscope Today: ಸಮಾಜದಲ್ಲಿ ವಿಶೇಷ ಗೌರವ, ಕುಟುಂಬದಲ್ಲಿ ಶಾಂತಿಯುತ ವಾತಾವರಣ: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ದಿನ ಭವಿಷ್ಯ
5 ಏಪ್ರಿಲ್ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (5th April 2024 Daily Horoscope).
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (5th April 2024 Daily Horoscope).
ಇಂದಿನ ಪಂಚಾಂಗ
ಶ್ರೀ ಶೋಭಕೃತುನಾಮ ಸಂವತ್ಸರ-ಉತ್ತರಾಯಣ-ಶಿಶಿರ ಋತು-ಫಾಲ್ಗುಣ ಮಾಸ-ಕೃಷ್ಣಪಕ್ಷ-ಶುಕ್ರವಾರ
ತಿಥಿ : ಏಕಾದಶಿ ಬೆಳಗ್ಗೆ 09.43 ರವರೆಗೂ ಇರುತ್ತದೆ ನಂತರ ದ್ವಾದಶಿ ಆರಂಭವಾಗಲಿದೆ.
ನಕ್ಷತ್ರ : ಧನಿಷ್ಠ ನಕ್ಷತ್ರವು 02.52 ರವರೆಗೂ ಇದ್ದು ನಂತರ ಶತಭಿಷ ನಕ್ಷತ್ರ ಆರಂಭವಾಗಲಿದೆ.
ಸೂರ್ಯೋದಯ: ಬೆಳಗ್ಗೆ 06.11
ಸೂರ್ಯಾಸ್ತ: ಸಂಜೆ 06.31
ರಾಹುಕಾಲ: 10.30 ರಿಂದ 12.00
ರಾಶಿಫಲ
ಸಿಂಹ
ಬಾಲ್ಯದ ಗೆಳೆಯರನ್ನು ಭೇಟಿ ಮಾಡುವ ಅವಕಾಶ ದೊರೆಯುತ್ತದೆ. ಗೆಲ್ಲುವ ಛಲದಿಂದ ದಿನದ ಕೆಲಸವನ್ನು ಆರಂಭಿಸುವಿರಿ. ಉದ್ಯೋಗದಲ್ಲಿ ಉತ್ತಮ ಆತ್ಮೀಯತೆ ಇರುತ್ತದೆ. ವಿದ್ಯಾರ್ಥಿಗಳು ಹುಮ್ಮಸ್ಸಿನಿಂದ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಮಕ್ಕಳ ಒಳಿತಿಗಾಗಿ ಶ್ರಮ ವಹಿಸಿ ದುಡಿಯುವಿರಿ. ಸಿಡುಕುತನದ ಗುಣ ಕಡಿಮೆ ಆಗಲಿದೆ. ಕೆಲಸ ಕಾರ್ಯಗಳನ್ನು ಏಕಾಂಗಿ ಯಾಗಿಯಾಗಿ ಪೂರ್ಣಗೊಳಿಸುವಿರಿ. ನೀವು ತೋರುವ ಪ್ರೀತಿ ವಿಶ್ವಾಸಕ್ಕೆ ಎಲ್ಲರೂ ಮಾರುಹೋಗುತ್ತಾರೆ. ಉದ್ಯೋಗದಲ್ಲಿ ನಿಮ್ಮ ಯೋಜನೆಗಳು ಒಪ್ಪಿಗೆ ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ತಂದೆಯವರ ಸಲಹೆ ಸೂಚನೆಗಳನ್ನು ಪಾಲಿಸುವುದು ಒಳ್ಳೆಯದು. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ.
ಪರಿಹಾರ : ಗೋ ಸೇವೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 12
ಅದೃಷ್ಟದ ದಿಕ್ಕು ದಕ್ಷಿಣ
ಅದೃಷ್ಟದ ಬಣ್ಣ : ಎಲೆ ಹಸಿರು
ಕನ್ಯಾ
ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುವಿರಿ. ಅನಾವಶ್ಯಕವಾಗಿ ಟೀಕಿಸುವ ಕಾರಣ ಆತ್ಮೀಯರಲ್ಲಿ ಬೇಸರ ಉಂಟಾಗುತ್ತದೆ. ನಿಮ್ಮಲ್ಲಿನ ಆತ್ಮವಿಶ್ವಾಸವು ವಿವಾದಗಳನ್ನು ದೂರ ಮಾಡುತ್ತದೆ. ಕುಟುಂಬದಲ್ಲಿ ಬೇಸರದ ಸನ್ನಿವೇಶ ಎದುರಾಗುತ್ತದೆ. ವ್ಯೆಯುಕ್ತಿಕ ಕೆಲಸ ಕಾರ್ಯದಲ್ಲಿ ಆಸಕ್ತಿ ತೋರುವುದಿಲ್ಲ. ಪಾಲುಗಾರಿಕೆಯ ವ್ಯಾಪಾರ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭವಿರುತ್ತದೆ. ವಿದ್ಯಾರ್ಥಿಗಳು ಉನ್ನತ ಸಾಧನೆಯಿಂದ ಎಲ್ಲರ ಗಮನ ಸೆಳೆಯುತ್ತಾರೆ. ಬೇರೆಯವರ ಪ್ರಭಾವಕ್ಕೆ ಸುಲಭವಾಗಿ ಒಳಗಾಗುವಿರಿ. ಉದ್ಯೋಗದಲ್ಲಿ ಎಲ್ಲರ ನಂಬಿಕೆಯನ್ನು ಉಳಿಸಿಕೊಳ್ಳುವಿರಿ. ಗಂಟಲಿನ ಸೋಂಕಿನಿಂದ ಬಳಲುವಿರಿ. ಕ್ರಮಬದ್ದ ಆಹಾರ ಕ್ರಮ ಇರುವುದು ಒಳ್ಳೆಯದು.
ಪರಿಹಾರ : ಮನೆಯ ದೇವರ ಗುಡಿಯಲ್ಲಿ ತುಪ್ಪದ ದೀಪವನ್ನು ಹಚ್ಚಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು: ನೈರುತ್ಯ
ಅದೃಷ್ಟದ ಬಣ್ಣ: ಕೇಸರಿ
ತುಲಾ
ಎಲ್ಲರನ್ನೂ ಒಂದೇ ಭಾವನೆಯಿಂದ ಕಾಣುವಿರಿ. ತಾರತಮ್ಯ ತೋರದೆ ಬೇರೆಯವರ ಯಶಸ್ಸನ್ನು ಆನಂದಿಸುವಿರಿ. ಸಮಾಜದಲ್ಲಿ ವಿಶೇಷ ಗೌರವ ದೊರೆಯುತ್ತದೆ. ಅನಾವಶ್ಯಕ ವಿಚಾರಗಳಲ್ಲಿ ವೇಳೆ ಕಳೆಯಲು ಇಷ್ಟಪಡುವುದಿಲ್ಲ. ಸತ್ಯವನ್ನು ಒಪ್ಪಿ ಸುಳ್ಳನ್ನು ಖಂಡಿಸುವ ಕಾರಣ ವಿರೋಧ ಎದುರಿಸಬೇಕು. ಕುಟುಂಬದಲ್ಲಿ ಶಾಂತಿಯ ವಾತಾವರಣ ಉಂಟಾಗುತ್ತದೆ. ಉದ್ಯೋಗದಲ್ಲಿ ಪ್ರತಿಯೊಂದು ವಿಚಾರವು ನಿಮಗೆ ಅನುಕೂಲಕರಾಗಿರುತ್ತದೆ. ವಿದ್ಯಾರ್ಥಿಗಳು ಜವಾಬ್ದಾರಿಯುತ ನಡಿಗೆ ಅನುಸರಿಸುತ್ತಾರೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ನಷ್ಟವಿರದು. ಪರೋಪಕಾರದ ಗುಣವಿರುತ್ತದೆ. ಸಮಾಜದ ಮುಖ್ಯಸ್ಥರಾಗಿ ಯಶಸ್ಸನ್ನು ಕಾಣುವಿರಿ. ಸಂಗಾತಿಗೆ ಅನಿರೀಕ್ಷಿತ ಧನಾಗಮ ಇರುತ್ತದೆ.
ಪರಿಹಾರ : ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 10
ಅದೃಷ್ಟದ ದಿಕ್ಕು ಪಶ್ಚಿಮ
ಅದೃಷ್ಟದ ಬಣ್ಣ: ಕಂದು ಬಣ್ಣ
ವೃಶ್ಚಿಕ
ಕೋಪದಿಂದ ಆತ್ಮೀಯರನ್ನು ದೂರ ಮಾಡುವಿರಿ. ಕಾರ್ಯದಕ್ಷತೆಯಿಂದ ಎಲ್ಲರ ಮನಸ್ಸನ್ನೂ ಗೆಲ್ಲುವಿರಿ. ಕೆಲಸ ಕಾರ್ಯಗಳಲ್ಲಿನ ಫಲಿತಾಂಶಗಳನ್ನು ಕ್ರೀಡಾ ಸ್ಪೂರ್ತಿಯಿಂದ ತೆಗೆದುಕೊಳ್ಳುವಿರಿ. ಉದ್ಯೋಗದಲ್ಲಿ ಯಾವುದೇ ತೊಂದರೆಯಾಗದು. ಕುಟುಂಬದಲ್ಲಿ ಅನುಕೂಲಕರ ವಾತಾವರಣ ಇರಲಿದೆ. ಗೃಹಿಣಿಯರಿಗೆ ಏಕಾಂಗಿತನ ಕಾಡುತ್ತದೆ. ಕೌಟುಂಬಿಕ ಕೆಲಸ ಕಾರ್ಯಗಳಲ್ಲಿ ಮಕ್ಕಳ ಸಹಾಯ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳು ಸಹಪಾಠಿಗಳಿಂದ ದೂರ ಉಳಿಯುತ್ತಾರೆ. ಸ್ವಂತ ವ್ಯಾಪಾರ ಉದ್ಯಮಗಳಲ್ಲಿ ಹೆಚ್ಚಿನ ಆಸಕ್ತಿ ತೋರುವುದಿಲ್ಲ. ಕುಲಕಸುಬನ್ನು ಆರಂಭಿಸುವಿರಿ. ಹೆಚ್ಚಿನ ಅನುಕೂಲಗಳನ್ನು ನಿರೀಕ್ಷಿಸದೆ ಬಂದದ್ದನ್ನು ಸ್ವೀಕರಿಸಿದಲ್ಲಿ ನೆಮ್ಮದಿ ಇರುವಿರಿ.
ಪರಿಹಾರ : ತಲೆಗೆ ಹಾಲು ಹಚ್ಚಿ ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ಕೆಂಪು
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
============================