ಮಕ್ಕಳು ವಿದೇಶಿ ಭಾಷೆಯಲ್ಲಿ ಪಾಂಡಿತ್ಯ ಗಳಿಸುತ್ತಾರೆ, ಕಲಾವಿದರಿಗೆ ಉತ್ತಮ ಅವಕಾಶ ದೊರೆಯಲಿದೆ: ಮೇಷ, ವೃಷಭ, ಮಿಥುನ, ಕಟಕ ರಾಶಿಫಲ
ಜುಲೈ 5ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ, ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (5th July 2024 Daily Horoscope).
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (5th July 2024 Daily Horoscope).
ಇಂದಿನ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಕೃಷ್ಣಪಕ್ಷ-ಶುಕ್ರವಾರ
ತಿಥಿ : ಅಮಾವಾಸ್ಯೆ ರಾತ್ರಿ 03.49 ರವರೆಗು ಇದ್ದು ನಂತರ ಪಾಡ್ಯ ಆರಂಭವಾಗುತ್ತದೆ.
ನಕ್ಷತ್ರ: ಆರ್ದ್ರೆ ನಕ್ಷತ್ರವು ರಾತ್ರಿ 04.16 ರವರೆಗೆ ಇದ್ದು ನಂತರ ಪುನರ್ವಸು ನಕ್ಷತ್ರ ಆರಂಭವಾಗುತ್ತದೆ.
ಸೂರ್ಯೋದಯ: ಬೆಳಗ್ಗೆ 05.58
ಸೂರ್ಯಾಸ್ತ: ಸಂಜೆ 06.49
ರಾಹುಕಾಲ: 10.51 ರಿಂದ 12.27
ರಾಶಿಫಲ
ಮೇಷ
ನಿಮ್ಮ ತಂದೆಯವರು ಉದ್ಯೋಗಸ್ಥರಾಗಿದ್ದಲ್ಲಿ ದೂರದ ಊರಿಗೆ ವರ್ಗವಾಗುತ್ತದೆ. ಸೋದರನ ಜೊತೆಯಲ್ಲಿ ಅನಾವಶ್ಯಕ ಮನಸ್ತಾಪವಿರುತ್ತದೆ. ನೀವು ಎಲ್ಲರೊಂದಿಗೆ ಕೋಪದಿಂದ ವರ್ತಿಸುವಿರಿ. ಯಾವುದೇ ರೀತಿಯ ಕೆಲಸ ಕಾರ್ಯಗಳಿಗೂ ಹಿಂಜರಿಯುವುದಿಲ್ಲ. ವ್ಯವಸಾಯದಲ್ಲಿ ಆಸಕ್ತಿ ಮೂಡುತ್ತದೆ. ಕಷ್ಟಪಟ್ಟು ದುಡಿಯುವುದಕ್ಕೆ ಹೆದರುವುದಿಲ್ಲ. ರಕ್ತದ ದೋಷ ಇದ್ದವರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಕುಟುಂಬದ ಮಹಿಳೆಯರ ಆರೋಗ್ಯದಲ್ಲಿ ತೊಂದರೆ ಇದೆ. ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಇರುವುದಿಲ್ಲ. ಎದುರಾಗುವ ಸಮಸ್ಯೆಗಳನ್ನು ವಿವೇಚನೆಯಿಂದ ಬಗೆಹರಿಸುವಿರಿ. ಮೃದುವಾದ ಮಾತಿನಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಹೆಚ್ಚಿನ ಪರಿಶ್ರಮ ವಹಿಸದೆ ನಿಮ್ಮ ಕೆಲಸ ಸಾಧಿಸುವಿರಿ.
ಪರಿಹಾರ : ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ಹಸಿರು
ವೃಷಭ
ವ್ಯವಸಾಯದ ಬಗ್ಗೆ ಕುತೂಹಲ ಹೆಚ್ಚುತ್ತದೆ. ನಿಮ್ಮ ತಪ್ಪನ್ನು ಮುಚ್ಚಿಟ್ಟು ಬೇರೆಯವರಿಗೆ ಬುದ್ಧಿವಾದ ಹೇಳುವಿರಿ. ಭೂ ವಿವಾದದಲ್ಲಿ ಅಲ್ಪಮಟ್ಟದ ಹಿನ್ನೆಡೆ ಲಭಿಸುತ್ತದೆ. ಬೇರೆಯವರ ಸಲುವಾಗಿ ನಿಮಗೆ ಕೆಟ್ಟ ಹೆಸರು ಬರಬಹುದು. ಯಾತ್ರಾಸ್ಥಳಕ್ಕೆ ಭೇಟಿ ನೀಡುವಿರಿ. ನಿಮ್ಮ ಮಕ್ಕಳು ವಿದೇಶಿ ಭಾಷೆಯಲ್ಲಿ ಪಾಂಡಿತ್ಯವನ್ನು ಗಳಿಸುತ್ತಾರೆ. ಅವರಿಗೆ ವಿದೇಶದಲ್ಲಿ ನೆಲೆಸುವ ಯೋಗವಿದೆ. ತಂದೆಯವರಿಗೆ ವಂಶದ ಆಸ್ತಿಯ ಮೇಲೆ ಅಧಿಕಾರ ದೊರೆಯುತ್ತದೆ. ಕಲಾವಿದರಿಗೆ ಉತ್ತಮ ಅವಕಾಶ ದೊರೆಯುತ್ತದೆ. ಗುರು ಹಿರಿಯರನ್ನು ಗೌರವದಿಂದ ಕಾಣುವಿರಿ. ನಿಮ್ಮಲ್ಲಿ ಗಂಭೀರವಾದ ನಡೆ ನುಡಿ ಇರುತ್ತದೆ. ಕುಟುಂಬದಲ್ಲಿ ದೇವತಾ ಕಾರ್ಯವೊಂದನ್ನು ನೆರವೇರಿಸುವಿರಿ.
ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 11
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ನೀಲಿ
ಮಿಥುನ
ಶಿಸ್ತು ಮತ್ತು ಗಾಂಭೀರ್ಯತೆಗೆ ಉತ್ತಮ ಉದಾಹರಣೆ ಆಗುವಿರಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರ ವಹಿಸುವಿರಿ. ಕೇವಲ ಕುಟುಂಬ ಮಾತ್ರವಲ್ಲದೆ ನೆರೆಹೊರೆಯ ಜನರ ವಿಶ್ವಾಸ ಗಳಿಸುವಿರಿ. ನಿಮ್ಮ ಮೊಗದಲ್ಲಿ ವಿಶೇಷ ತೇಜಸ್ಸು ಇರುತ್ತದೆ. ಕುಟುಂಬದ ಹಿರಿಯರನ್ನು ಗೌರವದಿಂದ ಕಾಣುವಿರಿ. ಸಮಾಜದ ಗಣ್ಯ ವ್ಯಕ್ತಿಯ ಆಸರೆ ದೊರೆಯಲಿದೆ. ವಿಶೇಷ ಕೀರ್ತಿ ಮತ್ತು ಗೌರವವನ್ನು ಪಡೆದು ಎಲ್ಲರ ಗಮನ ಸೆಳೆಯುವಿರಿ. ಪ್ರಯಾಣ ಮಾಡುದೆಂದರೆ ಬಲು ಇಷ್ಟ. ಸಂಗಾತಿಯ ಒಡನೆ ಉತ್ತಮ ಬಾಂಧವ್ಯ ಇರುತ್ತದೆ. ನೀವು ಮಾಡದ ತಪ್ಪು ನಿಮ್ಮನ್ನು ಕಾಡುತ್ತದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ.
ಪರಿಹಾರ : ಸಾಧು ಸಂತರ ಆಶೀರ್ವಾದ ಪಡೆದು ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 2
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ನೇರಳೆ
ಕಟಕ
ವದಂತಿಯನ್ನು ನಂಬಿ ಕುಟುಂಬದ ನೆಮ್ಮದಿ ಕೆಡುತ್ತದೆ. ದಂಪತಿಗಳ ನಡುವೆ ವಾದ ವಿವಾದಗಳು ಇರಲಿವೆ. ಶೀತದ ತೊಂದರೆಯಿಂದ ಬಳಲುವಿರಿ. ನಿಮ್ಮ ತಂದೆಗೆ ರಕ್ತ ಸಂಬಂಧಿಗಳಿಂದ ಭೂ ವಿವಾದದಲ್ಲಿ ತೊಂದರೆ ಉಂಟಾಗಲಿದೆ. ನಿಮ್ಮ ಸೋದರಿಯವರ ದಾಂಪತ್ಯದಲ್ಲಿದ್ದ ಮನಸ್ತಾಪವು ದೂರವಾಗುತ್ತದೆ. ಮಗಳ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ಮನೆಯ ಸೌಂದರ್ಯವನ್ನು ಹೆಚ್ಚಿಸಲು ಹಣದ ಅವಶ್ಯಕತೆ ಇರುತ್ತದೆ. ತಂದೆಯವರು ಬೇಸರ ಕಳೆಯಲು ಧ್ಯಾನ ಯೋಗದ ಮಾರ್ಗ ಅವಲಂಬಿಸುತ್ತಾರೆ. ಉತ್ತಮ ಸಂಪಾದನೆ ಇದ್ದರೂ ಬೇರೆಯವರ ಸಹಾಯ ಬೇಕಾಗುತ್ತದೆ. ಕೆಲಸದ ಒತ್ತಡವನ್ನು ತಾಳಲಾರದೆ ಉದ್ಯೋಗ ಬದಲಾವಣೆ ಮಾಡುವಿರಿ.
ಪರಿಹಾರ : ಬೇವಿನ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸುವುದು
ಅದೃಷ್ಟದ ಸಂಖ್ಯೆ : 9
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಗುಲಾಬಿ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
