Horoscope Today: ಕಷ್ಟದ ವೇಳೆ ತಾಯಿಯಿಂದ ಹಣದ ನೆರವು, ಬೇಸಾಯದಲ್ಲಿ ಆಸಕ್ತಿ; ಧನು, ಮಕರ, ಕುಂಭ, ಮೀನ ರಾಶಿಯರ ದಿನ ಭವಿಷ್ಯ
5 ಏಪ್ರಿಲ್ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (5th May 2024 Daily Horoscope).

ಇಂದಿನ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (5th May 2024 Horoscope)
ಇಂದಿನ ಪಂಚಾಂಗ
ಶ್ರೀಕ್ರೋಧಿನಾಮ ಸಂವತ್ಸರ-ಉತ್ತರಾಯನ-ವಸಂತ ಋತು-ಚೈತ್ರ ಮಾಸ-ಕೃಷ್ಣಪಕ್ಷ-ಭಾನುವಾರ
ತಿಥಿ: ದ್ವಾದಶಿ ಹ. 03.25 ರವರೆಗು ಇರುತ್ತದೆ ಆನಂತರ ತ್ರಯೋದಶಿ ಆರಂಭವಾಗುತ್ತದೆ.
ನಕ್ಷತ್ರ: ಉತ್ತರಾಭಾದ್ರ ನಕ್ಷತ್ರವು ಸ. 06.04 ರವರೆಗು ಇರುತ್ತದೆ. ಆನಂತರ ರೇವತಿ ನಕ್ಷತ್ರವು ಆರಂಭವಾಗುತ್ತದೆ.
ಸೂರ್ಯೋದಯ: ಬೆಳಗ್ಗೆ 05.57
ಸೂರ್ಯಾಸ್ತ: ಸಂಜೆ 06.35
ರಾಹುಕಾಲ: ಸಂಜೆ 05.04 ರಿಂದ ಸಂಜೆ 06.38
ಧನಸ್ಸು ರಾಶಿ
ಹಠದ ಬುದ್ಧಿಯಿಂದಾಗಿ ಜನರಲ್ಲಿ ತಪ್ಪು ಅಭಿಪ್ರಾಯ ಉಂಟಾಗುತ್ತದೆ. ಕುಟುಂಬದಲ್ಲಿ ಅಸಹನೆ ಉಂಟಾಗುತ್ತದೆ . ದುಡುಕಿನ ಕಾರಣ ಉದ್ಯೋಗದ ಅವಕಾಶವೊಂದು ದೂರಾಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಒತ್ತಡದ ಸನ್ನಿವೇಶವನ್ನು ಎದುರಿಸುವಿರಿ . ಕುಟುಂಬದ ಹಿರಿಯ ವ್ಯಕ್ತಿಗಳ ಸಹಾಯ ಸಹಕಾರ ಲಭಿಸುತ್ತದೆ . ವ್ಯಾಪಾರ ವ್ಯವಹ್ಕಾರದಲ್ಲಿ ಹೊಸ ಬದಲಾವಣೆಯನ್ನು ಕಾಣುವಿರಿ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಉನ್ನತ ಮಟ್ಟ ತಲುಪುವರು. ಹಳೆಯ ಆಸ್ತಿಯನ್ನು ಮಾರಾಟ ಮಾಡುವಿರಿ.
ಪರಿಹಾರ: ಬಿಳಿ ಹಸುವಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ದಿಕ್ಕು: ನೈರುತ್ಯ ಮತ್ತು ಉತ್ತರ
ಅದೃಷ್ಟದ ಬಣ್ಣ: ಕಂದು ಬಣ್ಣ
ಮಕರ ರಾಶಿ
ಕುಟುಂಬದ ಒತ್ತಡದಿಂದ ಪಾರಾಗಲು ಪ್ರವಾಸಕ್ಕೆ ತೆರಳುವಿರಿ. ಬಂಧು ಬಳಗದವರೊಬ್ಬರ ಮನೆಯ ಜವಾಬ್ದಾರಿಯೊಂದನ್ನು ನಿರ್ವಹಿಸುವಿರಿ. ಉದ್ಯೋಗದ ವಿಚಾರವಾಗಿ ವಿದೇಶಕ್ಕೆ ತೆರಳುವಿರಿ. ವ್ಯಾಪಾರದಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಾಣಲಿವೆ. ಸಮಾಜದ ಗಣ್ಯ ವ್ಯಕ್ತಿಗಳ ಸ್ನೇಹ ಸಹಕಾರ ದೊರೆಯುತ್ತದೆ . ವಿದ್ಯಾರ್ಥಿಗಳು ಹೆಚ್ಚಿನ ವೇಳೆಯನ್ನು ವಿದ್ಯಾಭ್ಯಾಸದಲ್ಲಿ ಕಳೆಯುವರು. ತಂದೆಯವರಿಗೆ ಅನಾರೋಗ್ಯವಿರುತ್ತದೆ . ಬೇಸಾಯದಲ್ಲಿ ಆಸಕ್ತಿ ಉಂಟಾಗುತ್ತದೆ. ಕಷ್ಟ ನಷ್ಟದ ವೇಳೆ ತಾಯಿಯವರಿಂದ ಹಣದ ಸಹಾಯ ದೊರೆಯುತ್ತದೆ .
ಪರಿಹಾರ: ಹಿರಿಯ ಸೋದರ ಅಥವಾ ಸೋದರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 5
ಅದೃಷ್ಟದ ದಿಕ್ಕು: ಈಶಾನ್ಯ ಮತ್ತು ದಕ್ಷಿಣ
ಅದೃಷ್ಟದ ಬಣ್ಣ: ಕಪ್ಪು ಬಣ್ಣ
ಕುಂಭ ರಾಶಿ
ಕುಟುಂಬದ ವಾತಾವರಣದಲ್ಲಿ ಆತಂಕವೊಂದು ನೆಲೆಸಿರುತ್ತದೆ. ಉದ್ಯೋಗದಲ್ಲಿ ಸ್ವಂತ ಸ್ವಂತ ನಿರ್ಣಯಗಳನ್ನು ತೆಗೆದುಕೊಳ್ಳುವಿರಿ. ಸಹೋದ್ಯೋಗಿಗಳ ಅವಕೃಪೆಗೆ ಒಳಗಾಗುವಿರಿ. ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕಂತಹ ಫಲಿತಾಂಶ ದೊರೆಯುತ್ತದೆ . ಧೈರ್ಯಗೆಡದೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯುವಿರಿ. ವಿದೇಶಿ ವಿನಿಮಯದ ವ್ಯವಹಾರದಲ್ಲಿ ಲಾಭವಿರುತ್ತದೆ. ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ . ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ.
ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಬಿಳಿ ಬಣ್ಣದ ಹೂಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 7
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ನಸುಗೆಂಪು ಬಣ್ಣ
ಮೀನ ರಾಶಿ
ಹಣಕಾಸಿನ ವಿಚಾರದಲ್ಲಿ ಕುಟುಂಬದಲ್ಲಿ ಭಿನಾಭಿಪ್ರಾಯ ಉಂಟಾಗಲಿದೆ. ನಿಮ್ಮ ಮುಖ್ಯ ಕೆಲಸವೊಂದು ಪೂರ್ಣವಾಗದು. ಸಾರ್ವಜನಿಕ ಸಂಸ್ಥೆಯ ನಿರ್ವಹಣೆಯ ಜವಾಬ್ದಾರಿ ದೊರೆಯುತ್ತದೆ . ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಆದೇಶದಂತೆ ವಿದೇಶಕ್ಕೆ ತೆರಳುವಿರಿ . ವ್ಯಾಪಾರ ವ್ಯವಹಾರದಲ್ಲಿ ಅತಿಯಾದ ಆಸೆ ಇರದೆ ಸರಳತೆ ಇರುತ್ತದೆ. ವಂಶದ ಆಸ್ತಿಯಲ್ಲಿನ ನಿಮ್ಮ ಪಾಲನ್ನು ಮಾರಾಟ ಮಾಡುವಿರಿ. ವಿದ್ಯಾರ್ಥಿಗಳು ಒತ್ತಡವಿಲ್ಲದೆ ಸುಲಭ ರೀತಿಯಲ್ಲಿ ತಮ್ಮ ಕಾರ್ಯ ಸಾಧಿಸುತ್ತಾರೆ . ಕೃಷಿ ಕಾರ್ಯದಲ್ಲಿ ಆಸಕ್ತಿ ಬೆಳೆಯುತ್ತದೆ. ಕುಟುಂಬದ ಮಂಗಳ ಕಾರ್ಯವೊಂದರ ಜವಾಬ್ದಾರಿ ನಿಮ್ಮದಾಗಲಿದೆ.
ಪರಿಹಾರ: ಕುಟುಂಬದ ಹಿರಿಯರಿಗೆ ಸಹಾಯ ಮಾಡಿ ದಿನದ ಕೆಲಸ ಆರಂಭಿಸಿರಿ
ಅದೃಷ್ಟದ ಸಂಖ್ಯೆ: 11
ಅದೃಷ್ಟದ ದಿಕ್ಕು: ನೈರುತ್ಯ
ಅದೃಷ್ಟದ ಬಣ್ಣ: ಕೆಂಪು ಬಣ್ಣ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ವಿಭಾಗ