ಕುಟುಂಬದ ಹಿರಿಯರಿಗೆ ಅನಾರೋಗ್ಯ ಕಾಡಲಿದೆ, ಮಕ್ಕಳೊಂದಿಗೆ ಆಸ್ತಿ ವಿಚಾರವಾಗಿ ಮನಸ್ತಾಪ; ಧನಸ್ಸು, ಮಕರ, ಕುಂಭ, ಮೀನ ರಾಶಿಫಲ
ಜುಲೈ 6ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (ಬರಹ: ಎಚ್. ಸತೀಶ್, ಜ್ಯೋತಿಷಿ).
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈ ದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ.(6th July 2024 Daily Horoscope).
ಇಂದಿನ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಆಷಾಢ ಮಾಸ-ಶುಕ್ಲಪಕ್ಷ-ಶನಿವಾರ
ತಿಥಿ : ಪಾಡ್ಯ ರಾತ್ರಿ 03.43 ರವರೆಗೂ ಇದ್ದು ನಂತರ ಬಿದಿಗೆ ಆರಂಭವಾಗುತ್ತದೆ.
ನಕ್ಷತ್ರ: ಪುನರ್ವಸು ನಕ್ಷತ್ರವು ರಾತ್ರಿ 04.55 ರವರೆಗೆ ಇದ್ದು ನಂತರ ಪುಷ್ಯ ನಕ್ಷತ್ರ ಆರಂಭವಾಗುತ್ತದೆ.
ಸೂರ್ಯೋದಯ: ಬೆಳಗ್ಗೆ 05.58
ಸೂರ್ಯಾಸ್ತ: ಸಂಜೆ 06.49
ರಾಹುಕಾಲ: ಬೆಳಗ್ಗೆ 09.16 ರಿಂದ 10.52
ರಾಶಿಫಲ
ಧನಸ್ಸು
ನಿಮ್ಮ ಮಕ್ಕಳಿಗೆ ವಿಶೇಷವಾದ ಅನುಕೂಲತೆಗಳು ಕಂಡುಬರುತ್ತವೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಗುರುಹಿರಿಯರ ಸಹಕಾರ ದೊರೆಯುತ್ತದೆ. ಉದ್ಯೋಗದಲ್ಲಿ ಅಧಿಕಾರಿಗಳಿಗೆ ಸಮನಾದ ಸ್ಥಾನ ಗಳಿಸುವಿರಿ. ವಿವಾಹ ಯೋಗವಿದೆ. ಹೆಣ್ಣು ಮಕ್ಕಳಿಗೆ ತವರು ಮನೆಯಲ್ಲಿ ಮತ್ತು ಗಂಡನ ಮನೆಯಲ್ಲಿ ಗೌರವ ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ಬೇರೊಬ್ಬರ ಮಾತನ್ನು ಕೇಳುವುದಿಲ್ಲ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಯಾರೊಂದಿಗೂ ವಾದ ಮಾಡದ ಕಾರಣ ಮನಸ್ಸಿಗೆ ನೆಮ್ಮದಿ ಇರುತ್ತದೆ. ಅನಿರೀಕ್ಷಿತ ಧನ ಲಾಭವಿದೆ. ಸಮಾಜದಲ್ಲಿ ದೊರೆತ ಗೌರವವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವಿರಿ. ಹಣದ ಬಗ್ಗೆ ಅತಿಯಾದ ಆಸೆ ಇರುವುದಿಲ್ಲ.
ಪರಿಹಾರ : ತಾಯಿಯ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 9
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ಕೇಸರಿ
ಮಕರ
ಅತ್ತೆ ಮಾವನ ಜೊತೆ ಹಣಕಾಸಿನ ವಿವಾದ ಉಂಟಾಗುತ್ತದೆ. ಸಂತಾನ ಲಾಭವಿದೆ. ಗುರು ಹಿರಿಯರಲ್ಲಿ ವಿಶೇಷವಾದ ಭಕ್ತಿ ಇರುತ್ತದೆ. ಗೌರವಾನ್ವಿತ ಜೀವನ ನಡೆಸುವಿರಿ. ನಿಮ್ಮ ಮನಸ್ಸಿಗೆ ಸರಿ ಎನಿಸದ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ. ಧಾರ್ಮಿಕ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸುವಿರಿ. ವಿದ್ಯಾರ್ಥಿಗಳು ಹೆಚ್ಚಿನ ಶ್ರದ್ಧೆಯಿಂದ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಕುಟುಂಬದ ಕೆಲಸ ಕಾರ್ಯಗಳನ್ನು ಪೂರೈಸುವ ಜವಾಬ್ದಾರಿ ನಿಮ್ಮದಾಗುತ್ತದೆ. ಅನಾವಶ್ಯಕ ಸುತ್ತಾಟಗಳಿಂದ ಬೇಸರಗೊಳ್ಳುವಿರಿ. ಸದಾಕಾಲ ಜನರ ಮಧ್ಯೆ ಕೆಲಸ ನಿರ್ವಹಿಸುವಿರಿ. ವಿದೇಶಿ ಸಹಯೋಗದ ಸಂಸ್ಥೆಯೊಂದರ ಆಡಳಿತ ನಿಮಗೆ ದೊರೆಯುತ್ತದೆ. ಉದ್ಯೋಗ ಬದಲಿಸುವ ಸೂಚನೆಗಳಿವೆ.
ಪರಿಹಾರ : ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ :4
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ
ಕುಂಭ
ನಿಮ್ಮದಲ್ಲದ ತಪ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಕುಟುಂಬದಲ್ಲಿ ಪರಸ್ಪರ ಅಪನಂಬಿಕೆ ಇರುತ್ತದೆ. ಆದರೆ ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಮಾಡುವ ಕೆಲಸ ಕಾರ್ಯಗಳಲ್ಲಿ ತಪ್ಪು ಮಾಡುವುದಿಲ್ಲ . ಯೌವ್ವನಾವಸ್ಥೆಯಲ್ಲಿ ಇರುವವರಿಗೆ ಉನ್ನತ ಅಭಿವೃದ್ಧಿ ಕಂಡು ಬರುತ್ತದೆ. ಧರ್ಮಕರ್ಮಗಳಿಗೆ ಹೆದರುವ ಕಾರಣ ತಪ್ಪು ಹೆಜ್ಜೆ ಇಡುವುದಿಲ್ಲ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ವಿಶೇಷ ಪ್ರಗತಿ ಕಂಡು ಬರುತ್ತದೆ. ತಂದೆಯ ಆರೋಗ್ಯದಲ್ಲಿ ಏರಿಳಿತ ಕಂಡು ಬರುತ್ತದೆ. ಇದರಿಂದ ಆತಂಕಕ್ಕೆ ಒಳಗಾಗುವಿರಿ. ಸ್ವಂತ ಹಣಕಾಸಿನ ಸಂಸ್ಥೆಯನ್ನು ಆರಂಭಿಸುವ ಸೂಚನೆ ಇದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.
ಪರಿಹಾರ : ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 7
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ಕೆಂಪು ಬಣ್ಣ
ಮೀನ
ಕುಟುಂಬದ ಮಂಗಳ ಕಾರ್ಯಗಳನ್ನು ಯಶಸ್ವಿಯಾಗಿ ನೆರವೇರಿಸುವಿರಿ. ಮನಸ್ಸು ಒಪ್ಪದೇ ಹೋದರೂ ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ನೆರೆಹೊರೆಯವರ ಕಷ್ಟ ನಷ್ಟಗಳಿಗೆ ಪರಿಹಾರ ಕಂಡುಹಿಡಿಯುವಿರಿ. ಯಾವುದೇ ಕೆಲಸವನ್ನು ಒಂದೇ ಮನಸ್ಸಿನಿಂದ ಮಾಡುವುದಿಲ್ಲ. ಪದೇ ಪದೇ ಮನಸ್ಸನ್ನು ಬದಲಾಯಿಸುವ ಕಾರಣ ಕೆಲಸ ಕಾರ್ಯಗಳಲ್ಲಿ ತೊಂದರೆ ಉಂಟಾಗುತ್ತದೆ. ಮಕ್ಕಳ ಜೊತೆ ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಉಂಟಾಗುತ್ತದೆ. ಉದ್ಯೋಗದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತದೆ. ಆತ್ಮೀಯರಿಂದ ಕುಟುಂಬದ ಸಮಸ್ಯೆಯೊಂದು ಬಗೆಹರಿಯುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮದಿಂದ ವಿದ್ಯಾಭ್ಯಾಸದಲ್ಲಿ ಮುಂದುವರೆಯುತ್ತಾರೆ. ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುತ್ತದೆ.
ಪರಿಹಾರ : ತಾಮ್ರದ ನಾಣ್ಯವನ್ನು ಖಾಕಿ ದಾರದಲ್ಲಿ ಕತ್ತಿನಲ್ಲಿ ಧರಿಸಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ : ಕಿತ್ತಳೆ ಬಣ್ಣ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
ವಿಭಾಗ