ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಮನಸ್ಸಿಗೆ ಖುಷಿ ನೀಡುವ ಸಂಗತಿ ನಡೆಯಲಿದೆ, ದುಬಾರಿ ಒಡವೆ-ವಸ್ತ್ರ ಖರೀದಿ; ಮೇಷದಿಂದ ಕಟಕದವರೆಗೆ ದಿನಭವಿಷ್ಯ

Horoscope Today: ಮನಸ್ಸಿಗೆ ಖುಷಿ ನೀಡುವ ಸಂಗತಿ ನಡೆಯಲಿದೆ, ದುಬಾರಿ ಒಡವೆ-ವಸ್ತ್ರ ಖರೀದಿ; ಮೇಷದಿಂದ ಕಟಕದವರೆಗೆ ದಿನಭವಿಷ್ಯ

ಜೂನ್ 6, 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (6th June 2024 Daily Horoscope).

 ದುಬಾರಿ ಒಡವೆ-ವಸ್ತ್ರ ಖರೀದಿ; ಮೇಷದಿಂದ ಕಟಕದವರೆಗೆ ದಿನಭವಿಷ್ಯ
ದುಬಾರಿ ಒಡವೆ-ವಸ್ತ್ರ ಖರೀದಿ; ಮೇಷದಿಂದ ಕಟಕದವರೆಗೆ ದಿನಭವಿಷ್ಯ

ಇಂದಿನ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (6th June 2024 Horoscope)

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣಪಕ್ಷ, ಗುರುವಾರ

ತಿಥಿ: ಅಮಾವಾಸ್ಯೆ ಸಂಜೆ 5.44 ರವರೆಗೂ ಇರುತ್ತದೆ. ಅನಂತರ ಪಾಡ್ಯ ಆರಂಭವಾಗುತ್ತದೆ.

ನಕ್ಷತ್ರ: ರೋಹಿಣಿ ನಕ್ಷತ್ರವು ರಾತ್ರಿ 8.22 ರವರೆಗೂ ಇರುತ್ತದೆ. ಅನಂತರ ಮೃಗಶಿರ ನಕ್ಷತ್ರವು ಆರಂಭವಾಗುತ್ತದೆ.

ಸೂರ್ಯೋದಯ: ಬೆಳ್ಳಿಗ್ಗೆ 5.52

ಸೂರ್ಯಾಸ್ತ: ಸಂಜೆ 6.44

ರಾಹುಕಾಲ: ಮಧ್ಯಾಹ್ನ 1.58 ರಿಂದ ಮಧ್ಯಾಹ್ನ 3.34

ಮೇಷ

ನೀವೇ ತೆಗೆದುಕೊಳ್ಳುವ ದಿಟ್ಟ ನಿರ್ಧಾರಗಳಿಂದ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಅನಿರೀಕ್ಷಿತವಾದ ಖರ್ಚು ವೆಚ್ಚಗಳ ಕಾರಣ ಹಣದ ಕೊರತೆ ಕಂಡುಬರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಆತುರ ತೋರದ ಕಾರಣ ತೊಂದರೆಯೊಂದು ದೂರವಾಗಲಿದೆ. ಮನಸ್ಸಿಗೆ ಸಂತಸ ನೀಡುವ ಘಟನೆಗಳು ನಡೆಯಲಿವೆ. ಕುಟುಂಬದಲ್ಲಿ ಸಂತೋಷ ಮನೆ ಮಾಡಿರುತ್ತದೆ. ಧಾರ್ಮಿಕ ಕಾರ್ಯವೊಂದರ ನಿಮಿತ್ತ ಸಂಬಂಧಿಯೊಬ್ಬರ ಮನೆಗೆ ತೆರಳುವಿರಿ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಸಹಾಯ ದೊರೆಯುತ್ತದೆ. ನೆಪ ಹೇಳದೆ ಮಾಡುವ ತಪ್ಪನ್ನು ಸರಿಪಡಿಸಿಕೊಂಡು ಎಲ್ಲರ ಗಮನ ಸೆಳೆಯುವಿರಿ. ನಿಮ್ಮ ಮಕ್ಕಳು ವ್ಯಾಸಂಗದಲ್ಲಿ ಸದಾ ಮುಂದಿರುತ್ತಾರೆ. ಸಂಗಾತಿಯ ಶಾಂತಿ ಸಹನೆ ಕುಟುಂಬದ ಒಗ್ಗಟ್ಟನ್ನು ಕಾಪಾಡುತ್ತದೆ.

ಪರಿಹಾರ: ಸಾಧು ಸಂತರ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ: 11

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ

ವೃಷಭ

ಪ್ರತಿಯೊಂದು ವಿಚಾರದಲ್ಲಿಯೂ ಹಿಂಜರಿಯದೆ ನಿಮ್ಮ ನಿಲುವನ್ನು ವ್ಯಕ್ತಪಡಿಸುವಿರಿ. ಛಲದ ಬುದ್ಧಿಯಿಂದ ಕೆಲಸ ಕಾರ್ಯಗಳಲ್ಲಿ ಜಯ ಗಳಿಸುವಿರಿ. ಕುಟುಂಬದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ. ಸದಾಕಾಲ ಹಸನ್ಮುಖಿಯಾದ ನಿಮ್ಮ ಬಗ್ಗೆ ಎಲ್ಲರಿಗೂ ಪ್ರೀತಿ ವಿಶ್ವಾಸ ಇರುತ್ತದೆ. ನೀವು ನಂಬಿದ ಜನರೇ ನಿಮ್ಮ ಪ್ರಗತಿಗೆ ಅಡ್ಡಗಾಲಾಗುತ್ತಾರೆ. ನಿಮ್ಮಲ್ಲಿ ಆತ್ಮವಿಶ್ವಾಸಕ್ಕಿಂತಲೂ ಗೆಲ್ಲಲುಬೇಕಾದ ಬುದ್ಧಿಶಕ್ತಿ ಇರುತ್ತದೆ. ಸಂಗಾತಿಯ ಸಹಾಯದಿಂದ ಕುಟುಂಬದ ಖರ್ಚಿನ ಮೇಲೆ ನಿಯಂತ್ರಣ ಸಾಧಿಸುವಿರಿ. ಅಗತ್ಯವಾದ ವಿಚಾರಗಳಿಗೆ ಹೆಚ್ಚಿನ ಒಲವು ತೋರುವಿರಿ. ವೈಯಕ್ತಿಕ ಆಶೋತ್ತರಗಳಿಗೆ ಹೆಚ್ಚಿನ ಗಮನ ನೀಡುವುದಿಲ್ಲ. ಬಡವರಿಗೆ ಸಹಾಯ ಮಾಡುವ ವಿಚಾರದಲ್ಲಿ ಉದಾರತೆ ತೋರುವಿರಿ. ಯಾರೊಬ್ಬರ ಮನಸ್ಸನ್ನು ನೋಯಿಸದೇ ಮುನ್ನಡೆಯುವಿರಿ.

ಪರಿಹಾರ: ಬೇವಿನ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸುವುದು.

ಅದೃಷ್ಟದ ಸಂಖ್ಯೆ: 2

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ಕೆಂಪು ಬಣ್ಣ

ಮಿಥುನ

ಆತ್ಮಸ್ಥೈರ್ಯದ ಕೊರತೆಯಿಂದ ಕೆಲಸ ಕಾರ್ಯಗಳು ಅಪೂರ್ಣಗೊಳ್ಳಲಿವೆ. ಸರಳವಾದ ಕೆಲಸ ಕಾರ್ಯಗಳನ್ನೂ ಮಾತ್ರ ಆಯ್ದುಕೊಳ್ಳುವಿರಿ. ವಿಶೇಷವಾದ ವಿಷಯಗಳನ್ನು ಅಭ್ಯಾಸ ಮಾಡುವ ಸಲುವಾಗಿ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳುತ್ತಾರೆ. ಸಮಾಜದಲ್ಲಿ ಉನ್ನತ ಗೌರವ ಗಳಿಸುವಿರಿ. ಧಾರ್ಮಿಕ ಕಾರ್ಯ ವಿಧಿಗಳ ಬಗ್ಗೆ ತಿಳಿದವರಿಗೆ ಉತ್ತಮ ಅವಕಾಶಗಳು ದೊರೆಯುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಅದಾಯದ ಜೊತೆಗೆ ಒಳ್ಳೆಯ ಹೆಸರನ್ನು ಗಳಿಸುವಿರಿ. ಆರಭರಣ ತಯಾರಿಕೆ ಮತ್ತು ವ್ಯಾಪಾರದಲ್ಲಿ ಉತ್ತಮ ಲಾಭವಿರುತ್ತದೆ. ಬಿಡುವಿಲ್ಲದ ಕೆಲಸಗಳಿಂದ ಅನಾರೋಗ್ಯ ಉಂಟಾಗುತ್ತದೆ. ಕುಟುಂಬದ ಹಿರಿಯರ ಜೊತೆ ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತದೆ.

ಪರಿಹಾರ: ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 5

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ

ಕಟಕ

ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಉದ್ಯೋಗ ಗಳಿಸುವಿರಿ. ಸಂತಾನ ಲಾಭವಿದೆ. ಸಂಗಾತಿಗಾಗಿ ದುಬಾರಿ ಒಡವೆ ವಸ್ತ್ರಗಳನ್ನು ಖರೀದಿಸುವಿರಿ. ಮಕ್ಕಳಿಗೆ ವಿವಾಹಯೋಗವಿದೆ. ಉತ್ತಮ ಪ್ರಯತ್ನದ ಕಾರಣ ನಿಮ್ಮೆಲ್ಲಾ ಇಚ್ಛೆಗಳು ಪೂರ್ಣಗೊಳ್ಳಲಿವೆ. ತಂದೆಯವರು ಉದ್ಯೋಗಸ್ಥರಾದಲ್ಲಿ ತೊಂದರೆ ಎದುರಾಗುತ್ತದೆ. ಅಹಾರ ಸಂಸ್ಕರಣೆಗೆ ಸಂಬಂಧಿಸಿದ ವ್ಯಾಪಾರದಲ್ಲಿ ಲಾಭವಿದೆ. ಸಮಾಜದಲ್ಲಿ ವಿಶೇಷ ಸ್ಥಾನಮಾನ ದೊರೆಯುತ್ತದೆ. ತಂದೆಯ ಅನಾವಶ್ಯಕವಾದ ವಾದ ವಿವಾದಗಳು ಇರುತ್ತವೆ. ನಿಮ್ಮ ಮಾತಿನಲ್ಲಿ ಗೆಲ್ಲುವ ವಿಶ್ವಾಸ ಇರುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಅಕ್ಕಿ, ಬೇಳೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 12

ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ: ಹಳದಿಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).